IND vs BAN ICC World Cup 2023: ಬಾಂಗ್ಲಾದೇಶ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

TV9 Web
| Updated By: ಝಾಹಿರ್ ಯೂಸುಫ್

Updated on:Oct 19, 2023 | 9:57 PM

India vs Bangladesh, ICC world Cup 2023: ಉಭಯ ತಂಡಗಳು ಏಕದಿನ ಕ್ರಿಕೆಟ್​ನಲ್ಲಿ ಇದುವರೆಗೆ 41 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ 32 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಬಾಂಗ್ಲಾದೇಶ್ ತಂಡ 8 ಬಾರಿ ಗೆಲುವು ಕಂಡಿದೆ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿತ್ತು.

IND vs BAN ICC World Cup 2023: ಬಾಂಗ್ಲಾದೇಶ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
India vs Bangladesh

ಏಕದಿನ ವಿಶ್ವಕಪ್​ನ 17ನೇ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಪುಣೆಯ ಎಂಸಿಎ  ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ಹಂಗಾಮಿ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಕಲೆಹಾಕಿತು. ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ (103) ಅಜೇಯ ಶತಕ ಬಾರಿಸಿ ಮಿಂಚಿದ್ದರು. ಈ ಶತಕದ ನೆರವಿನಿಂದ ಟೀಮ್ ಇಂಡಿಯಾ 41.3 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 261 ರನ್​ಗಳಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಬಾಂಗ್ಲಾದೇಶ್ (ಪ್ಲೇಯಿಂಗ್ XI): ಲಿಟ್ಟನ್ ದಾಸ್, ತಂಝಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಮೆಹಿದಿ ಹಸನ್ ಮಿರಾಜ್, ತೌಹಿದ್ ಹೃದೋಯ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ನಸುಮ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ.

ಬಾಂಗ್ಲಾದೇಶ್ ತಂಡ: ಶಾಕಿಬ್ ಅಲ್ ಹಸನ್ (ನಾಯಕ), ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೋ, ತಂಝಿದ್ ಹಸನ್, ತೌಹಿದ್ ಹೃದೋಯ್, ಮಹಮ್ಮದುಲ್ಲಾ ರಿಯಾದ್, ಮುಶ್ಫಿಕರ್ ರಹೀಮ್, ಮೆಹಿದಿ ಹಸನ್ ಮಿರಾಝ್, ಮಹೇದಿ ಹಸನ್, ತಂಝಿಮ್ ಸಾಕಿಬ್, ನಸುಮ್ ಅಹ್ಮದ್, ಶೋರಿಫುಲ್ ಇಸ್ಲಾಂ, ಹಸನ್ ಮಹದೂದ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್.

LIVE Cricket Score & Updates

The liveblog has ended.
  • 19 Oct 2023 09:24 PM (IST)

    IND vs BAN ICC World Cup 2023 Live Score: ಕಿಂಗ್ ಕೊಹ್ಲಿ ಶತಕ: ಭಾರತಕ್ಕೆ ಜಯ

    ನಾಸುಮ್ ಅಹ್ಮದ್ ಎಸೆದ 42ನೇ ಓವರ್​ನ 3ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ವಿರಾಟ್ ಕೊಹ್ಲಿ.

    ಈ ಸಿಕ್ಸ್​ನೊಂದಿಗೆ 97 ಎಸೆತಗಳಲ್ಲಿ ಶತಕ ಪೂರೈಸಿದ ವಿರಾಟ್ ಕೊಹ್ಲಿ.

    ಟೀಮ್ ಇಂಡಿಯಾಗೆ 7 ವಿಕೆಟ್​ಗಳ ಭರ್ಜರಿ ಜಯ.

    ಭಾರತ– 261/3 (41.3)

      

  • 19 Oct 2023 09:17 PM (IST)

    IND vs BAN ICC World Cup 2023 Live Score: ಕಿಂಗ್ ಕೊಹ್ಲಿ ಭರ್ಜರಿ ಬ್ಯಾಟಿಂಗ್

    ನಾಸುಮ್ ಅಹ್ಮದ್ ಎಸೆದ 40ನೇ ಓವರ್​ನ ಮೊದಲ ಎಸೆತದಲ್ಲಿ ಫೋರ್ ಬಾರಿಸಿದ ವಿರಾಟ್ ಕೊಹ್ಲಿ.

    4ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಕಿಂಗ್ ಕೊಹ್ಲಿ.

    92 ರನ್​ಗಳಿಸಿ ಕ್ರೀಸ್​ನಲ್ಲಿರುವ ವಿರಾಟ್ ಕೊಹ್ಲಿ. ಟೀಮ್ ಇಂಡಿಯಾ ಗೆಲುವಿಗೆ 8 ರನ್​ಗಳ ಅವಶ್ಯಕತೆ.

    IND 249/3 (40)

      

  • 19 Oct 2023 09:07 PM (IST)

    IND vs BAN ICC World Cup 2023 Live Score: ರಾಹುಲ್ ಅಬ್ಬರ

    ಶೊರಿಫುಲ್ ಇಸ್ಲಾಂ ಎಸೆದ 37ನೇ ಓವರ್​ನ 4ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕೆಎಲ್ ರಾಹುಲ್.

    5ನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಮತ್ತೊಂದು ಫೋರ್ ಬಾರಿಸಿದ ರಾಹುಲ್.

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.

    IND 223/3 (37)

      

  • 19 Oct 2023 09:00 PM (IST)

    IND vs BAN ICC World Cup 2023 Live Score: 35 ಓವರ್​ಗಳು ಮುಕ್ತಾಯ

    35 ಓವರ್​ಗಳಲ್ಲಿ 206 ರನ್ ಕಲೆಹಾಕಿದ ಟೀಮ್ ಇಂಡಿಯಾ.

    3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಬಾಂಗ್ಲಾದೇಶ್.

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.

    ಭಾರತ ತಂಡದ ಗೆಲುವಿಗೆ ಇನ್ನು ಕೇವಲ 51 ರನ್​ಗಳ ಅವಶ್ಯಕತೆ.

    IND 206/3 (35)

    ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಹಾಗೂ ಶುಭ್​ಮನ್ ಗಿಲ್ ಔಟ್.

      

  • 19 Oct 2023 08:37 PM (IST)

    IND vs BAN ICC World Cup 2023 Live Score: ಟೀಮ್ ಇಂಡಿಯಾದ 3ನೇ ವಿಕೆಟ್ ಪತನ

    ಮೆಹದಿ ಹಸನ್ ಮಿರಾಝ್ ಎಸೆದ 30ನೇ ಓವರ್​ನ ಮೊದಲ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಶ್ರೇಯಸ್ ಅಯ್ಯರ್.

    30 ಓವರ್​ಗಳ ಮುಕ್ತಾಯದ ವೇಳೆಗೆ 184 ರನ್ ಕಲೆಹಾಕಿದ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.

    IND 184/3 (30)

      

      

  • 19 Oct 2023 08:24 PM (IST)

    IND vs BAN ICC World Cup 2023 Live Score: ವೆಲ್ಕಂ ಬೌಂಡರಿ

    ಹಸನ್ ಮಹಮೂದ್ ಎಸೆದ 27ನೇ ಓವರ್​ನ 5ನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ವಿರಾಟ್ ಕೊಹ್ಲಿ,

    ಈ ಫೋರ್​ನೊಂದಿಗೆ 48 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ.

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.

    IND 171/2 (27)

      

  • 19 Oct 2023 08:09 PM (IST)

    IND vs BAN ICC World Cup 2023 Live Score: 150 ರನ್ ಪೂರೈಸಿದ ಟೀಮ್ ಇಂಡಿಯಾ

    23 ಓವರ್​ಗಳಲ್ಲಿ 150 ರನ್ ಪೂರೈಸಿದ ಟೀಮ್ ಇಂಡಿಯಾ.

    ಇನ್ನು ಭಾರತಕ್ಕೆ ಗೆಲ್ಲಲು ಕೇವಲ 107 ರನ್​ಗಳ ಅವಶ್ಯಕತೆ.

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.

    IND 150/2 (23)

    ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಔಟ್.

      

  • 19 Oct 2023 08:00 PM (IST)

    IND vs BAN ICC World Cup 2023 Live Score: ಟೀಮ್ ಇಂಡಿಯಾದ 2ನೇ ವಿಕೆಟ್ ಪತನ

    ಮೆಹದಿ ಹಸನ್ ಮಿರಾಝ್ ಎಸೆದ 20ನೇ ಓವರ್​ನ 2ನೇ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಭರ್ಜರಿ ಶಾಟ್ ಬಾರಿಸಿದ ಶುಭ್​ಮನ್ ಗಿಲ್. ಬೌಂಡರಿ ಲೈನ್​ನಲ್ಲಿ ಅದ್ಭುತ ಕ್ಯಾಚ್ ಹಿಡಿದ ಮಹಮದುಲ್ಲಾ.

    55 ಎಸೆತಗಳಲ್ಲಿ 53 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಶುಭ್​ಮನ್ ಗಿಲ್.

    IND 132/2 (19.2)

      

  • 19 Oct 2023 07:41 PM (IST)

    IND vs BAN ICC World Cup 2023 Live Score: ಟೀಮ್ ಇಂಡಿಯಾ ಉತ್ತಮ ಬ್ಯಾಟಿಂಗ್

    17 ಓವರ್​ಗಳಲ್ಲಿ 122 ರನ್ ಕಲೆಹಾಕಿದ ಟೀಮ್ ಇಂಡಿಯಾ.

    ರೋಹಿತ್ ಶರ್ಮಾ (48) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಬಾಂಗ್ಲಾದೇಶ್.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್.

    IND 122/1 (17)

      

  • 19 Oct 2023 07:33 PM (IST)

    IND vs BAN ICC World Cup 2023 Live Score: 15 ಓವರ್​ಗಳು ಮುಕ್ತಾಯ

    ನಾಸುಮ್ ಅಹ್ಮದ್ ಎಸೆದ 15ನೇ ಓವರ್​ನ ಮೊದಲ ಎಸೆತದಲ್ಲಿ ಲೆಗ್ ಸೈಡ್​ನತ್ತ ಫೋರ್ ಬಾರಿಸಿದ ಶುಭ್​ಮನ್ ಗಿಲ್.

    15 ಓವರ್​ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಸ್ಕೋರ್ 111 ರನ್​ಗಳು.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್.

    IND 111/1 (15)

    ಬಾಂಗ್ಲಾದೇಶ್ ಸ್ಕೋರ್- 256/8 (50)

      

  • 19 Oct 2023 07:24 PM (IST)

    IND vs BAN ICC World Cup 2023 Live Score: ಟೀಮ್ ಇಂಡಿಯಾ ಮೊದಲ ವಿಕೆಟ್ ಪತನ

    ಹಸನ್ ಮಹಮೂದ್ ಎಸೆದ 13ನೇ ಓವರ್​ನ 3ನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ.

    ಮರು ಎಸೆತದಲ್ಲೇ ಲೆಗ್ ಸೈಡ್​ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ರೋಹಿತ್ ಶರ್ಮಾ.

    40 ಎಸೆತಗಳಲ್ಲಿ 48 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಹಿಟ್​ಮ್ಯಾನ್.

    IND 103/1 (13)

      

      

  • 19 Oct 2023 07:10 PM (IST)

    IND vs BAN ICC World Cup 2023 Live Score: 10 ಓವರ್​ಗಳು ಮುಕ್ತಾಯ

    ಮೊದಲ 10 ಓವರ್​ಗಳಲ್ಲಿ 63 ರನ್ ಕಲೆಹಾಕಿದ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ (37) ಹಾಗೂ ಶುಭ್​ಮನ್ ಗಿಲ್ (27) ಬ್ಯಾಟಿಂಗ್.

    ಮೊದಲ ವಿಕೆಟ್​ಗೆ ಅರ್ಧಶತಕದ ಜೊತೆಯಾಟವಾಡಿದ ಆರಂಭಿಕರು.

    IND 63/0 (10)

    ಬಾಂಗ್ಲಾದೇಶ್ ಸ್ಕೋರ್- 256/8 (50)

      

  • 19 Oct 2023 07:01 PM (IST)

    IND vs BAN ICC World Cup 2023 Live Score: ಆಕರ್ಷಕ ಫೋರ್

    ನಾಸುಮ್ ಅಹ್ಮದ್ ಎಸೆದ 8ನೇ ಓವರ್​ನ ಮೊದಲ ಎಸೆತದಲ್ಲಿ ಆಫ್ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ರೋಹಿತ್ ಶರ್ಮಾ.

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್.

    IND 48/0 (8)

      

  • 19 Oct 2023 06:51 PM (IST)

    IND vs BAN ICC World Cup 2023 Live Score: 5 ಓವರ್​ಗಳು ಮುಕ್ತಾಯ

    ಮೊದಲ ಐದು ಓವರ್​ಗಳಲ್ಲಿ 33 ರನ್ ಕಲೆಹಾಕಿದ ಟೀಮ್ ಇಂಡಿಯಾ ಆರಂಭಿಕರು.

    ಭಾರತ ತಂಡದಿಂದ ಉತ್ತಮ ಆರಂಭ.

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್.

    IND 33/0 (5)

    ಬಾಂಗ್ಲಾದೇಶ್ ಸ್ಕೋರ್- 256/8 (50)

      

  • 19 Oct 2023 06:43 PM (IST)

    IND vs BAN ICC World Cup 2023 Live Score: ಹಿಟ್​ಮ್ಯಾನ್ ಭರ್ಜರಿ ಹಿಟ್

    ಶೊರಿಫುಲ್ ಇಸ್ಲಾಂ ಎಸೆದ 3ನೇ ಓವರ್​ನ 5ನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ.

    ಟೀಮ್ ಇಂಡಿಯಾ ಆರಂಭಿಕರ ಭರ್ಜರಿ ಬ್ಯಾಟಿಂಗ್.

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್.

    IND 26/0 (3)

      

  • 19 Oct 2023 06:38 PM (IST)

    IND vs BAN ICC World Cup 2023 Live Score: ಶುಭ್​ಮನ್ ಶುಭಾರಂಭ

    ಮುಸ್ತಫಿಜುರ್ ರೆಹಮಾನ್ ಎಸೆದ 2ನೇ ಓವರ್​ನ ಮೊದಲ ಎಸೆತದಲ್ಲೇ ಲಾಂಗ್ ಆನ್​ನತ್ತ ಫೋರ್ ಬಾರಿಸಿದ ಶುಭ್​ಮನ್ ಗಿಲ್.

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್.

    IND 14/0 (2)

    ಬಾಂಗ್ಲಾದೇಶ್ ಸ್ಕೋರ್- 256/8 (50)

      

  • 19 Oct 2023 06:33 PM (IST)

    IND vs BAN ICC World Cup 2023 Live Score: ಟೀಮ್ ಇಂಡಿಯಾ ಇನಿಂಗ್ಸ್​ ಆರಂಭ

    ಶೊರಿಫುಲ್ ಇಸ್ಲಾಂ ಎಸೆದ ಮೊದಲ ಓವರ್​ನಲ್ಲೇ ಎರಡು ಆಕರ್ಷಕ ಬೌಂಡರಿ ಬಾರಿಸಿದ ರೋಹಿತ್ ಶರ್ಮಾ.

    ಈ ಎರಡು ಫೋರ್​ಗಳೊಂದಿಗೆ ಮೊದಲ ಓವರ್​ನಲ್ಲಿ 8 ರನ್ ಕಲೆಹಾಕಿದ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್.

    IND 8/0 (1)

      

  • 19 Oct 2023 06:00 PM (IST)

    IND vs BAN ICC World Cup 2023 Live Score: ಬಾಂಗ್ಲಾದೇಶ್ ಇನಿಂಗ್ಸ್ ಅಂತ್ಯ

    ಜಸ್​ಪ್ರೀತ್ ಬುಮ್ರಾ ಎಸೆದ ಕೊನೆಯ ಓವರ್​ನ 2ನೇ ಎಸೆತದಲ್ಲಿ ಮಹಮದುಲ್ಲಾ ಕ್ಲೀನ್ ಬೌಲ್ಡ್​.

    ಅಂತಿಮ ಎಸೆತದಲ್ಲಿ ಡೀಪ್ ಎಕ್ಸ್​ಟ್ರಾ ಕವರ್​ನತ್ತ ಸಿಕ್ಸ್ ಸಿಡಿಸಿದ ಮುಸ್ತಫಿಜುರ್ ರೆಹಮಾನ್.

    50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಕಲೆಹಾಕಿದ ಬಾಂಗ್ಲಾದೇಶ್.

    ಬಾಂಗ್ಲಾದೇಶ್– 256/8 (50)

    ಟೀಮ್ ಇಂಡಿಯಾಗೆ 257 ರನ್​ಗಳ ಗುರಿ.

      

  • 19 Oct 2023 05:54 PM (IST)

    IND vs BAN ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಮಹಮದುಲ್ಲಾ

    ಮೊಹಮ್ಮದ್ ಸಿರಾಜ್ ಎಸೆದ 48ನೇ ಓವರ್​ನ ಮೂರನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಮಹಮದುಲ್ಲಾ.

    ಕ್ರೀಸ್​ನಲ್ಲಿ ಮಹಮದುಲ್ಲಾ ಹಾಗೂ ಮುಸ್ತಫಿಜುರ್ ರೆಹಮಾನ್ ಬ್ಯಾಟಿಂಗ್.

    BAN 248/7 (49)

      

  • 19 Oct 2023 05:41 PM (IST)

    IND vs BAN ICC World Cup 2023 Live Score: 7ನೇ ವಿಕೆಟ್ ಪತನ

    ಮೊಹಮ್ಮದ್ ಸಿರಾಜ್ ಎಸೆದ 47ನೇ ಓವರ್​ನ 5ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ನಾಸುಮ್ ಅಹ್ಮದ್.

    18 ಎಸೆತಗಳಲ್ಲಿ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ನಾಸುಮ್ ಅಹ್ಮದ್.

    ಕ್ರೀಸ್​ನಲ್ಲಿ ಮಹಮದುಲ್ಲಾ ಹಾಗೂ ಮುಸ್ತಫಿಜುರ್ ರೆಹಮಾನ್ ಬ್ಯಾಟಿಂಗ್.

    BAN 233/7 (47)

      

  • 19 Oct 2023 05:22 PM (IST)

    IND vs BAN ICC World Cup 2023 Live Score: ದ್ವಿಶತಕ ಪೂರೈಸಿದ ಬಾಂಗ್ಲಾದೇಶ್

    ಜಸ್​ಪ್ರೀತ್ ಬುಮ್ರಾ ಎಸೆದ 43ನೇ ಓವರ್​ನ 3ನೇ ಎಸೆತದಲ್ಲಿ ಕ್ಯಾಚ್ ನೀಡಿದ ಮುಶ್ಪಿಕುರ್ ರಹೀಮ್.

    46 ಎಸೆತಗಳಲ್ಲಿ 38 ರನ್ ಬಾರಿಸಿ ನಿರ್ಗಮಿಸಿದ ಬಾಂಗ್ಲಾ ತಂಡದ ವಿಕೆಟ್ ಕೀಪರ್ ಬ್ಯಾಟರ್.

    ಕ್ರೀಸ್​ನಲ್ಲಿ ಮಹಮದುಲ್ಲಾ ಹಾಗೂ ನಾಸುಮ್ ಅಹ್ಮದ್ ಬ್ಯಾಟಿಂಗ್.

    BAN 202/6 (43)

      

  • 19 Oct 2023 05:10 PM (IST)

    IND vs BAN ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಮಹಮದುಲ್ಲಾ

    ಕುಲ್ದೀಪ್ ಯಾದವ್ ಎಸೆದ 41ನೇ ಓವರ್​ನ ಮೂರನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಬಲಗೈ ದಾಂಡಿಗ ಮಹಮದುಲ್ಲಾ.

    ಕ್ರೀಸ್​ನಲ್ಲಿ ಮಹಮದುಲ್ಲಾ ಹಾಗೂ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್.

    BAN 198/5 (41)

      

  • 19 Oct 2023 05:07 PM (IST)

    IND vs BAN ICC World Cup 2023 Live Score: 40 ಓವರ್​ಗಳು ಮುಕ್ತಾಯ

    40 ಓವರ್​ಗಳ ಮುಕ್ತಾಯದ ವೇಳೆಗೆ 189 ರನ್ ಕಲೆಹಾಕಿದ ಬಾಂಗ್ಲಾದೇಶ್ ತಂಡ.

    ಕೊನೆಯ 10 ಓವರ್​ಗಳಲ್ಲಿ ಸ್ಪರ್ಧಾತ್ಮಕ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿ ಬಾಂಗ್ಲಾ ಪಡೆ.

    ಕ್ರೀಸ್​ನಲ್ಲಿ ಮಹಮದುಲ್ಲಾ ಹಾಗೂ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್.

    BAN 189/5 (40)

      

  • 19 Oct 2023 04:56 PM (IST)

    IND vs BAN ICC World Cup 2023 Live Score: ಬಾಂಗ್ಲಾದೇಶ್ ತಂಡದ 5ನೇ ವಿಕೆಟ್ ಪತನ

    ಶಾರ್ದೂಲ್ ಠಾಕೂರ್ ಎಸೆದ 38ನೇ ಓವರ್​ನ 2ನೇ ಎಸೆತದಲ್ಲಿ ಲಾಂಗ್ ಆನ್​ನಲ್ಲಿದ್ದ ಶುಭ್​ಮನ್ ಗಿಲ್​ಗೆ ಸುಲಭ ಕ್ಯಾಚ್ ನೀಡಿದ ತೌಹಿದ್ ಹೃದೋಯ್.

    35 ಎಸೆತಗಳಲ್ಲಿ 16 ರನ್ ಬಾರಿಸಿ ನಿರ್ಗಮಿಸಿದ ತೌಹಿದ್ ಹೃದೋಯ್.

    BAN 181/5 (38)

      

      

  • 19 Oct 2023 04:46 PM (IST)

    IND vs BAN ICC World Cup 2023 Live Score: ವೆಲ್ಕಂ ಬೌಂಡರಿ

    ಜಸ್​ಪ್ರೀತ್ ಬುಮ್ರಾ ಎಸೆದ 36ನೇ ಓವರ್​ನ 2ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಮುಶ್ಫಿಕುರ್ ರಹೀಮ್.

    ಕ್ರೀಸ್​ನಲ್ಲಿ ತೌಹಿದ್ ಹೃದೋಯ್ ಹಾಗೂ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್.

    BAN 170/4 (36)

      

  • 19 Oct 2023 04:43 PM (IST)

    IND vs BAN ICC World Cup 2023 Live Score: 35 ಓವರ್​ಗಳು ಮುಕ್ತಾಯ

    35 ಓವರ್​ಗಳ ಮುಕ್ತಾಯದ ವೇಳೆಗೆ 165 ರನ್ ಕಲೆಹಾಕಿದ ಬಾಂಗ್ಲಾದೇಶ್ ತಂಡ.

    4 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿರುವ ಟೀಮ್ ಇಂಡಿಯಾ ಬೌಲರ್​ಗಳು.

    ಇನ್ನು 15 ಓವರ್​ಗಳಲ್ಲಿ ಸ್ಪರ್ಧಾತ್ಮಕ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿ ಬಾಂಗ್ಲಾದೇಶ್.

    ಕ್ರೀಸ್​ನಲ್ಲಿ ತೌಹಿದ್ ಹೃದೋಯ್ ಹಾಗೂ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್.

    BAN 165/4 (35)

      

  • 19 Oct 2023 04:30 PM (IST)

    IND vs BAN ICC World Cup 2023 Live Score: ಸ್ವೀಪ್ ಶಾಟ್ ಸಿಕ್ಸ್

    ರವೀಂದ್ರ ಜಡೇಜಾ ಎಸೆದ 32ನೇ ಓವರ್​ನ ಮೊದಲ ಎಸೆತದಲ್ಲಿ ಸ್ವೀಪ್ ಶಾಟ್ ಸಿಕ್ಸ್ ಸಿಡಿಸಿದ ಮುಶ್ಪಿಕುರ್ ರಹೀಮ್.

    ಕ್ರೀಸ್​ನಲ್ಲಿ ತೌಹಿದ್ ಹೃದೋಯ್ ಹಾಗೂ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್.

    BAN 156/4 (32)

      

  • 19 Oct 2023 04:20 PM (IST)

    IND vs BAN ICC World Cup 2023 Live Score: 30 ಓವರ್​ಗಳ ಮುಕ್ತಾಯ

    30 ಓವರ್​ಗಳ ಮುಕ್ತಾಯದ ವೇಳೆಗೆ 143 ರನ್ ಕಲೆಹಾಕಿದ ಬಾಂಗ್ಲಾದೇಶ್ ತಂಡ.

    4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ತೌಹಿದ್ ಹೃದೋಯ್ ಹಾಗೂ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್.

    BAN 143/4 (30)

      

  • 19 Oct 2023 04:12 PM (IST)

    IND vs BAN ICC World Cup 2023 Live Score: ಭಾರತಕ್ಕೆ 4ನೇ ಯಶಸ್ಸು

    ರವೀಂದ್ರ ಜಡೇಜಾ ಎಸೆದ 28ನೇ ಓವರ್​ನ 4ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಲಿಟ್ಟನ್ ದಾಸ್.

    82 ಎಸೆತಗಳಲ್ಲಿ 66 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಲಿಟ್ಟನ್ ಕುಮಾರ್ ದಾಸ್.

    ಕ್ರೀಸ್​ನಲ್ಲಿ ತೌಹಿದ್ ಹೃದೋಯ್ ಹಾಗೂ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್.

    BAN 138/4 (28)

      

  • 19 Oct 2023 04:07 PM (IST)

    IND vs BAN ICC World Cup 2023 Live Score: ಟೀಮ್ ಇಂಡಿಯಾ ಉತ್ತಮ ಬೌಲಿಂಗ್

    ಮೊದಲ 10 ಓವರ್​ಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಬಾಂಗ್ಲಾದೇಶ್ ತಂಡ.

    ಆ ಬಳಿಕ ಉತ್ತಮ ದಾಳಿ ಸಂಘಟಿಸಿ ಮೂರು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ತೌಹಿದ್ ಹೃದೋಯ್ ಹಾಗೂ ಲಿಟ್ಟನ್ ದಾಸ್ ಬ್ಯಾಟಿಂಗ್.

    BAN 136/3 (27)

      

  • 19 Oct 2023 04:00 PM (IST)

    IND vs BAN ICC World Cup 2023 Live Score: ಬಾಂಗ್ಲಾ ತಂಡದ 3ನೇ ವಿಕೆಟ್ ಪತನ

    ಮೊಹಮ್ಮದ್ ಸಿರಾಜ್ ಎಸೆದ 25ನೇ ಓವರ್​ನ ಮೊದಲ ಎಸೆತದಲ್ಲಿ ವಿಕೆಟ್​ ಕೀಪರ್​ಗೆ ಕ್ಯಾಚ್ ನೀಡಿದ ಮೆಹದಿ ಹಸನ್ ಮಿರಾಝ್…ವಿಕೆಟ್ ಕೀಪರ್ ಕೆಎಲ್ ರಾಹುಲ್ ಅದ್ಭುತ ಡೈವಿಂಗ್ ಕ್ಯಾಚ್. ಭಾರತ ತಂಡಕ್ಕೆ ಮೂರನೇ ಯಶಸ್ಸು.

    25 ಓವರ್​ಗಳ ಮುಕ್ತಾಯದ ವೇಳೆಗೆ 131 ರನ್ ಕಲೆಹಾಕಿದ ಬಾಂಗ್ಲಾದೇಶ್.

    ಕ್ರೀಸ್​ನಲ್ಲಿ ತೌಹಿದ್ ಹೃದೋಯ್ ಹಾಗೂ ಲಿಟ್ಟನ್ ದಾಸ್ ಬ್ಯಾಟಿಂಗ್.

    BAN 131/3 (25)

      

  • 19 Oct 2023 03:54 PM (IST)

    IND vs BAN ICC World Cup 2023 Live Score: ಅರ್ಧಶತಕ ಪೂರೈಸಿದ ಲಿಟ್ಟನ್

    ಅರ್ಧಶತಕ ಪೂರೈಸಿ ಅತ್ಯುತ್ತಮ ಇನಿಂಗ್ಸ್ ಆಡುತ್ತಿರುವ ಆರಂಭಿಕ ಆಟಗಾರ ಲಿಟ್ಟನ್ ದಾಸ್.

    24 ಓವರ್​ಗಳ ಮುಕ್ತಾಯದ ವೇಳೆಗೆ 129 ರನ್ ಕಲೆಹಾಕಿದ ಬಾಂಗ್ಲಾದೇಶ್ ತಂಡ.

    ಕ್ರೀಸ್​ನಲ್ಲಿ ಮೆಹದಿ ಹಸನ್ ಮಿರಾಝ್ ಹಾಗೂ ಲಿಟ್ಟನ್ ದಾಸ್ ಬ್ಯಾಟಿಂಗ್.

    BAN 129/2 (24)

      

      

  • 19 Oct 2023 03:31 PM (IST)

    IND vs BAN ICC World Cup 2023 Live Score: ಶತಕ ಪೂರೈಸಿದ ಬಾಂಗ್ಲಾದೇಶ್

    17.2 ಓವರ್​ಗಳಲ್ಲಿ ಶತಕ ಪೂರೈಸಿದ ಬಾಂಗ್ಲಾದೇಶ್ ತಂಡ.

    ಕ್ರೀಸ್​ನಲ್ಲಿ ನಜ್ಮುಲ್ ಹೊಸೈನ್ ಶಾಂಟೊ ಹಾಗೂ ಲಿಟ್ಟನ್ ದಾಸ್ ಬ್ಯಾಟಿಂಗ್.

    BAN 100/1 (17.2)

    ಒಂದು ವಿಕೆಟ್ ಪಡೆದ ಕುಲ್ದೀಪ್ ಯಾದವ್.

      

  • 19 Oct 2023 03:22 PM (IST)

    IND vs BAN ICC World Cup 2023 Live Score: ಬಾಂಗ್ಲಾದೇಶ್ ಮೊದಲ ವಿಕೆಟ್ ಪತನ

    ಕುಲ್ದೀಪ್ ಯಾದವ್ ಎಸೆದ 15ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದ ತಂಝಿದ್ ಹಸನ್.

    43 ಎಸೆತಗಳಲ್ಲಿ 51 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ತಂಝಿದ್.

    15 ಓವರ್​ಗಳ ಮುಕ್ತಾಯದ ವೇಳೆಗೆ 94 ರನ್ ಕಲೆಹಾಕಿದ ಬಾಂಗ್ಲಾದೇಶ್ ತಂಡ.

    BAN 94/1 (15)

      

  • 19 Oct 2023 03:15 PM (IST)

    IND vs BAN ICC World Cup 2023 Live Score: ಬಾಂಗ್ಲಾದೇಶ್ ಭರ್ಜರಿ ಬ್ಯಾಟಿಂಗ್

    ಭರ್ಜರಿ ಬ್ಯಾಟಿಂಗ್ ಮುಂದುವರೆಸಿರುವ ಬಾಂಗ್ಲಾದೇಶ್ ಆರಂಭಿಕ ಬ್ಯಾಟರ್​ಗಳು.

    14 ಓವರ್​ಗಳ ಮುಕ್ತಾಯದ ವೇಳೆಗೆ 90 ರನ್​ ಕಲೆಹಾಕಿದ ಬಾಂಗ್ಲಾದೇಶ್.

    ಕ್ರೀಸ್​ನಲ್ಲಿ ತಂಝಿದ್ ಹಸನ್ ಹಾಗೂ ಲಿಟ್ಟನ್ ದಾಸ್ ಬ್ಯಾಟಿಂಗ್.

    BAN 90/0 (14)

      

  • 19 Oct 2023 02:57 PM (IST)

    IND vs BAN ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ತಂಝಿದ್

    ಶಾರ್ದೂಲ್ ಠಾಕೂರ್ ಎಸೆದ 10ನೇ ಓವರ್​ನ 2ನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ತಂಝಿದ್ ಹಸನ್.

    3ನೇ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ತಂಝಿದ್.

    4ನೇ ಎಸೆತದಲ್ಲಿ ತಂಝಿದ್ ಬ್ಯಾಟ್​ನಿಂದ ಲಾಂಗ್ ಆಫ್​ನತ್ತ ಭರ್ಜರಿ ಸಿಕ್ಸ್​.

    10 ಓವರ್​ಗಳ ಮುಕ್ತಾಯದ ವೇಳೆಗೆ 63 ರನ್ ಕಲೆಹಾಕಿದ ಬಾಂಗ್ಲಾದೇಶ್ ತಂಡ.

    BAN 63/0 (10)

    ಕ್ರೀಸ್​ನಲ್ಲಿ ತಂಝಿದ್ ಹಸನ್ ಹಾಗೂ ಲಿಟ್ಟನ್ ದಾಸ್ ಬ್ಯಾಟಿಂಗ್.

      

  • 19 Oct 2023 02:52 PM (IST)

    IND vs BAN ICC World Cup 2023 Live Score: ಹಾರ್ದಿಕ್ ಪಾಂಡ್ಯಗೆ ಗಾಯ

    9ನೇ ಓವರ್​ನ 3ನೇ ಎಸೆತದ​ ವೇಳೆ ಪಾದದ ಉಳುಕಿಗೆ ಒಳಗಾದ ಹಾರ್ದಿಕ್ ಪಾಂಡ್ಯ.

    ನೋವಿನ ಕಾರಣ ಅರ್ಧದಲ್ಲೇ ಮೈದಾನ ತೊರೆದ ಪಾಂಡ್ಯ.

    ಉಳಿದ 3 ಎಸೆತಗಳನ್ನು ಎಸೆದು 9ನೇ ಓವರ್​ ಅನ್ನು ಪೂರ್ಣಗೊಳಿಸಿದ ವಿರಾಟ್ ಕೊಹ್ಲಿ.

    BAN 47/0 (9)

      

  • 19 Oct 2023 02:41 PM (IST)

    IND vs BAN ICC World Cup 2023 Live Score: ತಂಝಿದ್ ಭರ್ಜರಿ ಬ್ಯಾಟಿಂಗ್

    ಮೊಹಮ್ಮದ್ ಸಿರಾಜ್ ಎಸೆದ 8ನೇ ಓವರ್​ನ 2ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ತಂಝಿದ್ ಹಸನ್.

    5ನೇ ಎಸೆತದಲ್ಲಿ ತಂಝಿದ್ ಬ್ಯಾಟ್​ನಿಂದ ಲೆಗ್ ಸೈಡ್​ನತ್ತ ಮತ್ತೊಂದು ಫೋರ್.

    23 ಎಸೆತಗಳಲ್ಲಿ 23 ರನ್ ಬಾರಿಸಿ ಭರ್ಜರಿ ಬ್ಯಾಟಿಂಗ್ ಮುಂದುವರೆಸಿರುವ ತಂಝಿದ್ ಹಸನ್.

    BAN 37/0 (8)

      

  • 19 Oct 2023 02:35 PM (IST)

    IND vs BAN ICC World Cup 2023 Live Score: ಭರ್ಜರಿ ಸಿಕ್ಸ್​ ಸಿಡಿಸಿದ ಹಸನ್

    ಜಸ್​ಪ್ರೀತ್ ಬುಮ್ರಾ ಎಸೆದ 7ನೇ ಓವರ್​ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ತಂಝಿದ್ ಹಸನ್.

    ಕ್ರೀಸ್​ನಲ್ಲಿ ತಂಝಿದ್ ಹಸನ್ ಹಾಗೂ ಲಿಟ್ಟನ್ ದಾಸ್ ಬ್ಯಾಟಿಂಗ್.

    BAN 27/0 (7)

      

  • 19 Oct 2023 02:29 PM (IST)

    IND vs BAN ICC World Cup 2023 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ

    ಮೊಹಮ್ಮದ್ ಸಿರಾಜ್ ಎಸೆದ 6ನೇ ಓವರ್​ನ 2ನೇ ಎಸೆತದಲ್ಲಿ ಬ್ಯಾಕ್​ವರ್ಡ್​ ಪಾಯಿಂಟ್​ನತ್ತ ಫೋರ್ ಬಾರಿಸಿದ ಲಿಟ್ಟನ್ ದಾಸ್.

    4ನೇ ಎಸೆತದಲ್ಲಿ ಲಿಟ್ಟನ್ ದಾಸ್ ಬ್ಯಾಟ್​ನಿಂದ ಡೀಪ್ ಮಿಡ್ ವಿಕೆಟ್​ನತ್ತ ಮತ್ತೊಂದು ಫೋರ್.

    BAN 19/0 (6)

      

  • 19 Oct 2023 02:26 PM (IST)

    IND vs BAN ICC World Cup 2023 Live Score: 5 ಓವರ್​ಗಳು ಮುಕ್ತಾಯ

    5 ಓವರ್​ಗಳ ಮುಕ್ತಾಯದ ವೇಳೆಗೆ 10 ರನ್ ಕಲೆಹಾಕಿದ ಬಾಂಗ್ಲಾದೇಶ್ ಆರಂಭಿಕರು.

    ಕ್ರೀಸ್​ನಲ್ಲಿ ತಂಝಿದ್ ಹಸನ್ ಹಾಗೂ ಲಿಟ್ಟನ್ ದಾಸ್ ಬ್ಯಾಟಿಂಗ್.

    BAN 10/0 (5)

    ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಬಾಂಗ್ಲಾದೇಶ್.

      

  • 19 Oct 2023 02:10 PM (IST)

    IND vs BAN ICC World Cup 2023 Live Score: ಮೊದಲ ಬೌಂಡರಿ

    ಮೊಹಮ್ಮದ್ ಸಿರಾಜ್ ಎಸೆದ 2ನೇ ಓವರ್​ನ ಮೊದಲ ಎಸೆತದಲ್ಲೇ ಆಕರ್ಷಕ ಫೋರ್ ಬಾರಿಸಿದ ತಂಝಿದ್ ಹಸನ್.

    ಇದು ಬಾಂಗ್ಲಾದೇಶ್ ಇನಿಂಗ್ಸ್​ನ ಮೊದಲ ಬೌಂಡರಿ.

    BAN 5/0 (2)

    ಕ್ರೀಸ್​ನಲ್ಲಿ ತಂಝಿದ್ ಹಸನ್ ಹಾಗೂ ಲಿಟ್ಟನ್ ದಾಸ್ ಬ್ಯಾಟಿಂಗ್.

  • 19 Oct 2023 02:07 PM (IST)

    IND vs BAN ICC World Cup 2023 Live Score: ಬಾಂಗ್ಲಾದೇಶ್ ಇನಿಂಗ್ಸ್ ಆರಂಭ

    ಮೊದಲ ಓವರ್​ನಲ್ಲಿ ಕೇವಲ 1 ರನ್ ನೀಡಿದ ಜಸ್​ಪ್ರೀತ್ ಬುಮ್ರಾ.

    ಕ್ರೀಸ್​ನಲ್ಲಿ ತಂಝಿದ್ ಹಸನ್ ಹಾಗೂ ಲಿಟ್ಟನ್ ದಾಸ್ ಬ್ಯಾಟಿಂಗ್.

    BAN 1/0 (1)

     ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಬಾಂಗ್ಲಾದೇಶ್.

  • 19 Oct 2023 01:42 PM (IST)

    IND vs BAN ICC World Cup 2023 Live Score: ಭಾರತದ ಪರ ಕಣಕ್ಕಿಳಿಯುವ ಕಲಿಗಳು

    ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

  • 19 Oct 2023 01:39 PM (IST)

    IND vs BAN ICC World Cup 2023 Live Score: ಬಾಂಗ್ಲಾದೇಶ್ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಬಾಂಗ್ಲಾದೇಶ್ (ಪ್ಲೇಯಿಂಗ್ XI): ಲಿಟ್ಟನ್ ದಾಸ್, ತಂಝಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಮೆಹಿದಿ ಹಸನ್ ಮಿರಾಜ್, ತೌಹಿದ್ ಹೃದೋಯ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ನಸುಮ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ.

  • 19 Oct 2023 01:37 PM (IST)

    IND vs BAN ICC World Cup 2023 Live Score: ಭಾರತ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

  • 19 Oct 2023 01:34 PM (IST)

    IND vs BAN ICC World Cup 2023 Live Score: ಟಾಸ್ ಗೆದ್ದ ಬಾಂಗ್ಲಾದೇಶ್

    ಪುಣೆಯ ಎಂಸಿಎ ಕ್ರಿಕೆಟ್​ಚ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಟಾಸ್ ಗೆದ್ದಿರುವ ಬಾಂಗ್ಲಾದೇಶ್ ತಂಡದ ಹಂಗಾಮಿ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

  • Published On - Oct 19,2023 1:33 PM

    Follow us