ಭಾರತ ಮತ್ತು ಇಂಗ್ಲೆಂಡ್ (India and England) ನಡುವಿನ ಎಡ್ಜ್‌ಬಾಸ್ಟನ್ ಟೆಸ್ಟ್ ಪ್ರಾರಂಭವಾಗುವುದಕ್ಕೆ ಇನ್ನೇನು ಕೆಲವೇ ಸಮಯ ಉಳಿದಿದೆ. ಇದು ಪಟೌಡಿ ಸರಣಿ (Pataudi Series)ಯ ಅಂತಿಮ ಫಲಿತಾಂಶದ ಟೆಸ್ಟ್ ಆಗಿದೆ. ಇಂಗ್ಲೆಂಡ್ ತಂಡದ ನಾಯಕ, ಕೋಚ್ ಎಲ್ಲರೂ ಬದಲಾಗಿರುವುದರಿಂದ ಇಲ್ಲಿ ಭಾರತದ ಪಾಳೆಯದ ಸ್ಥಿತಿಯೂ ಭಿನ್ನವಾಗಿಲ್ಲ. ಈಗ ಇತರ ನಾಯಕ ಮತ್ತು ಕೋಚ್‌ನಿಂದ ಸ್ಕ್ರಿಪ್ಟ್ ಬರೆಯುತ್ತಿರುವ ಸರಣಿಯು ಅಂತಿಮ ರೂಪವನ್ನು ನೀಡುತ್ತದೆ. ನಿಸ್ಸಂಶಯವಾಗಿ 5 ದಿನಗಳ ಕಾಲ ಎಡ್ಜ್‌ಬಾಸ್ಟನ್‌ನಲ್ಲಿ ಕ್ರಿಕೆಟ್ ಹಬ್ಬವೇ ನಡೆಯಲಿದೆ. ಹೀಗಾಗಿ ಈ ಟೆಸ್ಟ್ ಅನ್ನು ಕಣ್ತುಂಬಿಕೊಳ್ಳಲು ಕಾಯುತ್ತಿರುವ ಅಭಿಮಾನಿಗಳಿಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎಡ್ಜ್‌ಬಾಸ್ಟನ್ ಟೆಸ್ಟ್ ಪಟೌಡಿ ಸರಣಿಯ 5 ನೇ ಟೆಸ್ಟ್ ಆಗಿದೆ. ಕಳೆದ ವರ್ಷವಷ್ಟೇ ಇಂಗ್ಲೆಂಡ್‌ನಲ್ಲಿ ಈ ಸರಣಿ ನಡೆದಿತ್ತು. ಮೊದಲ 4 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡ 2-1 ಮುನ್ನಡೆ ಸಾಧಿಸಿತ್ತು. ಆದರೆ, ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಿದ್ದ 5ನೇ ಟೆಸ್ಟ್‌ನಲ್ಲಿ ಕೊರೊನಾ ಹಾವಳಿ ಕಾಣಿಸಿಕೊಂಡಿದ್ದರಿಂದ ಅಂತಿಮ ಟೆಸ್ಟ್ ಪಂದ್ಯವನ್ನು ಮುಂದೂಡಲಾಗಿತ್ತು. ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಅದೇ ಟೆಸ್ಟ್ ಪಂದ್ಯವನ್ನು ಈಗ ಎಜ್‌ಬಾಸ್ಟನ್‌ನಲ್ಲಿ ನಡೆಸಲಾಗುತ್ತಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ನೇ ಟೆಸ್ಟ್ ಎಲ್ಲಿ ನಡೆಯಲಿದೆ?
ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆಯಲಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ನೇ ಟೆಸ್ಟ್ ಎಷ್ಟು ದಿನ ನಡೆಯಲಿದೆ?
ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯ ಜುಲೈ 1 ರಿಂದ ಆರಂಭವಾಗಲಿದ್ದು, ಜುಲೈ 5 ರವರೆಗೆ ನಡೆಯಲಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ನೇ ಟೆಸ್ಟ್ ಪಂದ್ಯ ಯಾವಾಗ ಆರಂಭವಾಗುತ್ತದೆ?
ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಅಂದರೆ, ಅದರ ಟಾಸ್ ಮಧ್ಯಾಹ್ನ 2:30 ಕ್ಕೆ ಇರುತ್ತದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ನೇ ಟೆಸ್ಟ್ ಪಂದ್ಯವನ್ನು ಲೈವ್ ಆಗಿ ಎಲ್ಲಿ ವೀಕ್ಷಿಸಬಹುದು?
ಸೋನಿ ನೆಟ್‌ವರ್ಕ್‌ನ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ನೇ ಟೆಸ್ಟ್ ಪಂದ್ಯದ ನೇರ ಪ್ರಸಾರವನ್ನು ನೀವು ವೀಕ್ಷಿಸಬಹುದು. ಇದನ್ನು ಸೋನಿ ಸಿಕ್ಸ್‌ನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಮತ್ತು ಸೋನಿ ಟೆನ್ 3 ನಲ್ಲಿ ಹಿಂದಿಯಲ್ಲಿ ನೋಡಬಹುದು.
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ನೇ ಟೆಸ್ಟ್ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಹೇಗೆ ವೀಕ್ಷಿಸುವುದು?
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ನೇ ಟೆಸ್ಟ್ ಪಂದ್ಯದ ನೇರ ಪ್ರಸಾರವನ್ನು ನೀವು ಸೋನಿಲಿವ್‌ನಲ್ಲಿ ವೀಕ್ಷಿಸಬಹುದು. ಅದೇ ಸಮಯದಲ್ಲಿ, ನೀವು tv9kannada.com ನಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಹ ಪಡೆಯಬಹುದು.
Published On - 4:03 pm, Thu, 30 June 22