IND vs ENG: ಭಾರತೀಯರೇ ತೆಗಳುತ್ತಿರುವಾಗ ಕೊಹ್ಲಿ ಬೆನ್ನಿಗೆ ನಿಂತ ಪಾಕ್ ನಾಯಕ ಬಾಬರ್; ಹೇಳಿದ್ದೇನು ಗೊತ್ತಾ?

| Updated By: ಪೃಥ್ವಿಶಂಕರ

Updated on: Jul 15, 2022 | 4:51 PM

IND vs ENG: ಕೆಲವು ಮಾಜಿ ಕ್ರಿಕೆಟಿಗರು ಕೊಹ್ಲಿಗೆ ಸ್ವಲ್ಪ ಸಮಯ ವಿಶ್ರಾಂತಿ ನೀಡಬೇಕು ಎಂದು ಸಲಹೆ ನೀಡುತ್ತಿದ್ದಾರೆ. ಆದರೆ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಈ ಕಷ್ಟದ ಸಮಯದಲ್ಲಿ ಕೊಹ್ಲಿಗೆ ವಿಶೇಷ ಸಂದೇಶವನ್ನು ಕಳುಹಿಸಿ, ಕೊಹ್ಲಿಗೆ ಬೆಂಬಲವಾಗಿ ನಿಂತಿದ್ದಾರೆ.

IND vs ENG: ಭಾರತೀಯರೇ ತೆಗಳುತ್ತಿರುವಾಗ ಕೊಹ್ಲಿ ಬೆನ್ನಿಗೆ ನಿಂತ ಪಾಕ್ ನಾಯಕ ಬಾಬರ್; ಹೇಳಿದ್ದೇನು ಗೊತ್ತಾ?
ಬಾಬರ್ ಆಜಂ, ವಿರಾಟ್ ಕೊಹ್ಲಿ
Follow us on

ಕಳೆದ ಕೆಲವು ವರ್ಷಗಳಿಂದ ವಿರಾಟ್ ಕೊಹ್ಲಿ (Virat Kohli) ಕಳಪೆ ಫಾರ್ಮ್‌ನಿಂದ ನಿರಂತರವಾಗಿ ಹೋರಾಡುತ್ತಿದ್ದಾರೆ. ಗಾಯದ ನಂತರ ಇಂಗ್ಲೆಂಡ್ ವಿರುದ್ಧದ ಎರಡನೇ ODI ನಲ್ಲಿ ಕೊಹ್ಲಿ ಪುನರಾಗಮನ ಮಾಡಿದರು, ಆದರೆ ಎರಡನೇ ODI ನಲ್ಲೂ ಅವರ ಬ್ಯಾಟ್ ಮೌನವಾಗಿತ್ತು. ಕೊಹ್ಲಿ ಕೇವಲ 16 ರನ್ ಗಳಿಸಲಷ್ಟೇ ಶಕ್ತರಾದರು. ವಿರಾಟ್ ತಮ್ಮ ಇನ್ನಿಂಗ್ಸ್‌ನಲ್ಲಿ 3 ಬೌಂಡರಿಗಳನ್ನು ಗಳಿಸಿದರು. ಈ ಹಿಂದೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಅವರು ಕಳಪೆ ಫಾರ್ಮ್‌ನಲ್ಲಿ ಎಡವಿದ್ದರು. ಹೀಗಾಗಿ ಕೆಲವು ಮಾಜಿ ಕ್ರಿಕೆಟಿಗರು ಕೊಹ್ಲಿಗೆ ಸ್ವಲ್ಪ ಸಮಯ ವಿಶ್ರಾಂತಿ ನೀಡಬೇಕು ಎಂದು ಸಲಹೆ ನೀಡುತ್ತಿದ್ದಾರೆ. ಆದರೆ ಪಾಕಿಸ್ತಾನದ ನಾಯಕ ಬಾಬರ್ ಅಜಮ್ (Babar Azam) ಈ ಕಷ್ಟದ ಸಮಯದಲ್ಲಿ ಕೊಹ್ಲಿಗೆ ವಿಶೇಷ ಸಂದೇಶವನ್ನು ಕಳುಹಿಸಿ, ಕೊಹ್ಲಿಗೆ ಬೆಂಬಲವಾಗಿ ನಿಂತಿದ್ದಾರೆ.

ಬಾಬರ್ ಆಜಂ ವಿಶೇಷ ಪೋಸ್ಟ್

ಇದನ್ನೂ ಓದಿ
ನಟಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್​ನಲ್ಲಿರುವ ಲಲಿತ್ ಮೋದಿ ಯಾರು? ಎಷ್ಟು ಸಾವಿರ ಕೋಟಿ ಒಡೆಯ ಗೊತ್ತಾ?
IND vs WI: ರೋಹಿತ್ ಶರ್ಮಾ ಹೊಗಳುವ ಆಟಗಾರರಿಗೆಲ್ಲ ಸಿಗ್ತಿದೆ ತಂಡದಿಂದ ಕೋಕ್! ಏನಿದರ ಮರ್ಮ?

ಲಾರ್ಡ್ಸ್‌ನಲ್ಲಿ ಕೊಹ್ಲಿ 16 ರನ್ ಗಳಿಸಿ ಔಟಾದ ನಂತರ ಬಾಬರ್ ಟ್ವಿಟರ್‌ನಲ್ಲಿ ವಿಶೇಷ ಪೋಸ್ಟ್ ಮಾಡಿದ್ದು, ಇದರಲ್ಲಿ ಕೊಹ್ಲಿ ಹಾಗೂ ಬಾಬರ್ ಇರುವ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಜತೆಗೆ ಇದು ಕೂಡ ಹಾದುಹೋಗುತ್ತದೆ, ಧೈರ್ಯದಿಂದಿರಿ ಎಂದು ಬಾಬರ್ ಬರೆದುಕೊಂಡಿದ್ದಾರೆ.

ಪಂದ್ಯದ ಸಾರಾಂಶ

ಪಂದ್ಯದ ಕುರಿತು ಮಾತನಾಡುವುದಾದರೆ, ಭಾರತ ಟಾಸ್ ಗೆದ್ದು ಆತಿಥೇಯ ಇಂಗ್ಲೆಂಡ್ ಅನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಭಾರತೀಯ ಬೌಲರ್‌ಗಳು ಆತಿಥೇಯರನ್ನು 246 ರನ್‌ಗಳಿಗೆ ಆಲೌಟ್ ಮಾಡಿದರು. ಮೊಯಿನ್ ಅಲಿ ಅತ್ಯಧಿಕ 47 ರನ್ ಗಳಿಸಿದರು. ಡೇವಿಡ್ ವಿಲ್ಲಿ 41 ಮತ್ತು ಜಾನಿ ಬೈರ್‌ಸ್ಟೋವ್ 38 ರನ್ ಗಳಿಸಿದರು. ಯುಜ್ವೇಂದ್ರ ಚಹಲ್ 47 ರನ್ ನೀಡಿ 4 ವಿಕೆಟ್ ಪಡೆದರು. ಇದರೊಂದಿಗೆ ಚಹಲ್ ಲಾರ್ಡ್ಸ್‌ನಲ್ಲಿ ಏಕದಿನದಲ್ಲಿ ನಾಲ್ಕು ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎನಿಸಿಕೊಂಡರು. ಅವರಿಗಿಂತ ಮೊದಲು ಯಾವ ಭಾರತೀಯನೂ ಈ ದಾಖಲೆಯನ್ನು ಮಾಡಿರಲಿಲ್ಲ.

ಭಾರತದ ಬ್ಯಾಟ್ಸ್‌ಮನ್‌ಗಳು ಆಡಲಿಲ್ಲ

ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. 247 ರನ್‌ಗಳ ಗುರಿಗೆ ಉತ್ತರವಾಗಿ ಭಾರತ ತಂಡ 38.5 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಗಿದ್ದು, ಭಾರತ 100 ರನ್‌ಗಳ ಬೃಹತ್ ಅಂತರದಿಂದ ಪಂದ್ಯವನ್ನು ಕಳೆದುಕೊಂಡಿತು. ಟೀಂ ಇಂಡಿಯಾದ ಅಗ್ರ ಕ್ರಮಾಂಕ ದಯನೀಯವಾಗಿ ವಿಫಲವಾಯಿತು. ನಾಯಕ ರೋಹಿತ್ ಶರ್ಮಾ, ಶಿಖರ್ ಧವನ್, ಕೊಹ್ಲಿ, ರಿಷಬ್ ಪಂತ್ ಯಾರೊಬ್ಬರು ಹೆಚ್ಚು ಸಮಯ ಮೈದಾನದಲ್ಲಿ ನಿಲ್ಲಲಿಲ್ಲ. ಭಾರತದ ಪರ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಗರಿಷ್ಠ ತಲಾ 29 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 27 ರನ್ ಗಳಿಸಿದರು. ಮೊಹಮ್ಮದ್ ಶಮಿ ಕೂಡ 23 ರನ್ ಕೊಡುಗೆ ನೀಡಿದರು. ರೀಸ್ ಟೋಪ್ಲಿ 24 ರನ್‌ಗಳಿಗೆ 6 ವಿಕೆಟ್‌ ಕಬಳಿಸಿ ಇಂಗ್ಲೆಂಡ್​ಗೆ ಗೆಲುವು ತಂದುಕೊಟ್ಟರು. ಮೊದಲ ಏಕದಿನ ಪಂದ್ಯವನ್ನು ಭಾರತ 10 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಈ ಮೂಲಕ ಈ ಸರಣಿ ಈಗ ಸಮಬಲಗೊಂಡಿದೆ.