IND vs ENG: ಟಾಸ್ ಗೆದ್ದ ಇಂಗ್ಲೆಂಡ್; ಭಾರತದ ಪರ ಸುದರ್ಶನ್ ಪಾದಾರ್ಪಣೆ, ಕರುಣ್ಗೂ ಅವಕಾಶ
India vs England Test Series: ಲೀಡ್ಸ್‌ನಲ್ಲಿ ಆರಂಭವಾಗಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಶುಭ್ಮನ್ ಗಿಲ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದೆ. ಕಳೆದ ಪ್ರವಾಸದಲ್ಲಿ ಲೀಡ್ಸ್‌ನಲ್ಲಿ ಸೋತಿರುವ ಭಾರತ ತಂಡ ಈ ಬಾರಿ ಗೆಲುವಿನ ನಿರೀಕ್ಷೆಯಲ್ಲಿದೆ. ಟೀಂ ಇಂಡಿಯಾ ಪರ ಸಾಯಿ ಸುದರ್ಶನ್ ಪಾದಾರ್ಪಣೆ ಮಾಡಿದರೆ, ಕರುಣ್ ನಾಯರ್ಗೆ 8 ವರ್ಷಗಳ ನಂತರ ಅವಕಾಶ ದೊರೆತಿದೆ. ಈ ಸರಣಿಯು ಈಗ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಎಂದು ಮರುನಾಮಕರಣಗೊಂಡಿದೆ.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಲೀಡ್ಸ್‌ನಲ್ಲಿ ನಡೆಯುತ್ತಿದೆ. ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ ಅವರಂತಹ ಅನುಭವಿಗಳು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವುದರಿಂದ, ಈಗ ತಂಡದ ನಾಯಕತ್ವ ಶುಭ್ಮನ್ ಗಿಲ್ (Shubman Gill) ಅವರ ಕೈ ಸೇರಿದೆ. ಹೀಗಾಗಿ ಈ ಟೆಸ್ಟ್ ಸರಣಿಯೊಂದಿಗೆ ಟೀಂ ಇಂಡಿಯಾದ ಹೊಸ ಅಧ್ಯಾಯ ಕೂಡ ಪ್ರಾರಂಭವಾಗಲಿದೆ. ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಲೀಡ್ಸ್‌ನಲ್ಲಿ ನಡೆಯುತ್ತಿದ್ದು, ಈ ಮೈದಾನದಲ್ಲಿ ಟೀಂ ಇಂಡಿಯಾದ ಹಿಂದಿನ ಪ್ರದರ್ಶನ ಅಷ್ಟೇನೂ ಉತ್ತಮವಾಗಿಲ್ಲ. ಕಳೆದ ಪ್ರವಾಸದಲ್ಲಿ ಟೀಂ ಇಂಡಿಯಾ ಈ ಮೈದಾನದಲ್ಲಿ ಇನ್ನಿಂಗ್ಸ್ ಮತ್ತು 76 ರನ್‌ಗಳಿಂದ ಸೋತಿತ್ತು. ಹೀಗಾಗಿ ಕಳೆದ ಸೋಲಿನ ಕಹಿಯನ್ನು ಮರೆತು ಗಿಲ್ ಪಡೆ ಕಣಕ್ಕಿಳಿಯಬೇಕಿದೆ.
ಟಾಸ್ ಗೆದ್ದ ಇಂಗ್ಲೆಂಡ್
ಲೀಡ್ಸ್‌ನಲ್ಲಿ ಆರಂಭವಾಗಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ. ಈ ಪಂದ್ಯಕ್ಕೆ ಆತಿಥೇಯ ಇಂಗ್ಲೆಂಡ್ ಈಗಾಗಲೇ ತನ್ನ ಪ್ಲೇಯಿಂಗ್ 11 ಪ್ರಕಟಿಸಿದ್ದು, ತಂಡದಲ್ಲಿ ಯಾರೆಲ್ಲ ಆಡಲಿದ್ದಾರೆ ಎಂಬುದು ಈಗಾಗಲೇ ಖಚಿತವಾಗಿತ್ತು. ಇದೀಗ ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದ್ದು, ತಂಡದ ಪರ ಸಾಯಿ ಸುದರ್ಶನ್ ಚೊಚ್ಚಲ ಪಂದ್ಯವನ್ನಾಡುವ ಅವಕಾಶ ಪಡೆದಿದ್ದಾರೆ. ಕನ್ನಡಿಗ ಕರುಣ್ ನಾಯರ್ಗೂ ತಂಡದಲ್ಲಿ ಸ್ಥಾನ ಸಿಕ್ಕಿದೆ.
🚨 Toss Update 🚨
England win the toss and elect to bowl against #TeamIndia in the 1st Test.
Updates ▶️ https://t.co/CuzAEnBkyu#ENGvIND pic.twitter.com/5aL2yN5K3s
— BCCI (@BCCI) June 20, 2025
ಟ್ರೋಫಿ ಹೆಸರು ಬದಲಾವಣೆ
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಇನ್ನೊಂದು ವಿಶೇಷವೆಂದರೆ, ಈ ಸರಣಿಯ ಹೆಸರನ್ನು ಬದಲಿಸಲಾಗಿದೆ. ಇದುವರೆಗೆ ಈ ಸರಣಿಗೆ ಪಟೌಡಿ ಎಂದು ಕರೆಯಲಾಗುತ್ತಿತ್ತು. ಇದೀಗ ಈ ಟ್ರೋಫಿ ಹೆಸರನ್ನು ಬದಲಿಸಲಾಗಿದ್ದು, ಆಂಡರ್ಸನ್- ತೆಂಡೂಲ್ಕರ್ ಟ್ರೋಫಿ ಎಂದು ಮರು ನಾಮಕರಣ ಮಾಡಲಾಗಿದೆ.
ಲೀಡ್ಸ್‌ನಲ್ಲಿ ಭಾರತದ ದಾಖಲೆ
ಲೀಡ್ಸ್‌ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ನಾಲ್ಕು ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದರೆ, ಟೀಂ ಇಂಡಿಯಾ ಎರಡರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಉಳಿದಂತೆ ಒಂದು ಟೆಸ್ಟ್ ಪಂದ್ಯ ಡ್ರಾ ಆಗಿದೆ. ಇನ್ನು ಕೊನೆಯ ಟೆಸ್ಟ್ ಬಗ್ಗೆ ಹೇಳುವುದಾದರೆ, ಭಾರತ ತಂಡವು ಲೀಡ್ಸ್‌ನಲ್ಲಿ ಕೊನೆಯ ಬಾರಿಗೆ ಪಂದ್ಯವನ್ನು ಆಡಿದಾಗ ಇನ್ನಿಂಗ್ಸ್ ಮತ್ತು 76 ರನ್‌ಗಳಿಂದ ಸೋತಿತ್ತು. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 78 ರನ್‌ಗಳಿಸಲಷ್ಟೇ ಶಕ್ತವಾಗಿತ್ತು.
ಸೆನಾ ದೇಶಗಳಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಐಪಿಎಲ್ ಗೆಲ್ಲುವುದಕ್ಕಿಂತ ದೊಡ್ಡ ಸಾಧನೆ; ಶುಭ್ಮನ್ ಗಿಲ್
ಎರಡೂ ತಂಡಗಳ ಪ್ಲೇಯಿಂಗ್- 11
ಭಾರತ ತಂಡ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭ್ಮನ್ ಗಿಲ್ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಕರುಣ್ ನಾಯರ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
#TeamIndia's Playing XI for the 1st Test 🙌
Sai Sudharsan makes his Test Debut 👏👏
Updates ▶️ https://t.co/CuzAEnBkyu#ENGvIND pic.twitter.com/r4UkgH2pZ4
— BCCI (@BCCI) June 20, 2025
ಇಂಗ್ಲೆಂಡ್: ಜ್ಯಾಕ್ ಕ್ರೌಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಜೋಶ್ ಟಂಗ್, ಶೋಯೆಬ್ ಬಶೀರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:09 pm, Fri, 20 June 25
