WTC ಫೈನಲ್ ಸೋಲಿಗೆ ಮಾರ್ನಸ್ ಲ್ಯಾಬುಶೇನ್ ಕಾರಣ: ಸಂಪೂರ್ಣ ಬದಲಾದ ಆಸ್ಟ್ರೇಲಿಯಾ ಟೆಸ್ಟ್ ತಂಡ
Marnus Labuschagne: ಕಳಪೆ ಪ್ರದರ್ಶನದಿಂದಾಗಿ ಲ್ಯಾಬುಶೇನ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಅವರ ಸರಾಸರಿ ಕೇವಲ 31 ಆಗಿದೆ. ಒಂದು ಕಾಲದಲ್ಲಿ 70 ಸರಾಸರಿ ಹೊಂದಿದ್ದ ಈ ಆಟಗಾರನ ಪ್ರದರ್ಶನ ಈಗ ಸಂಪೂರ್ಣವಾಗಿ ಕುಸಿದು ಹೋಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಇವರನ್ನು ಹೊರಗಿಡಲಾಗಿದೆ.

ಬೆಂಗಳೂರು (ಜೂ. 20): ವೆಸ್ಟ್ ಇಂಡೀಸ್ ಪ್ರವಾಸದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾದ ಆಯ್ಕೆದಾರರು ಮಾರ್ನಸ್ ಲ್ಯಾಬುಶೇನ್ (Marnus Labuschagne) ಅವರನ್ನು ತಂಡದಿಂದ ಕೈಬಿಟ್ಟಿದ್ದಾರೆ. ಈ ಟೆಸ್ಟ್ ಜೂನ್ 25 ರಂದು ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಆರಂಭವಾಗಲಿದೆ. ಕಳಪೆ ಪ್ರದರ್ಶನದಿಂದಾಗಿ ಲ್ಯಾಬುಶೇನ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಅವರ ಸರಾಸರಿ ಕೇವಲ 31 ಆಗಿದೆ. ಒಂದು ಕಾಲದಲ್ಲಿ 70 ಸರಾಸರಿ ಹೊಂದಿದ್ದ ಈ ಆಟಗಾರನ ಪ್ರದರ್ಶನ ಈಗ ಸಂಪೂರ್ಣವಾಗಿ ಕುಸಿದು ಹೋಗಿದೆ.
ಲ್ಯಾಬುಶೇನ್ ತಂಡದಿಂದ ಔಟ್
ಮುಖ್ಯ ಆಯ್ಕೆದಾರ ಜಾರ್ಜ್ ಬೈಲಿ ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡರು. ಅವರ ಸ್ಥಾನದಲ್ಲಿ ಸ್ಯಾಮ್ ಕಾನ್ಸ್ಟಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅದೇ ಸಮಯದಲ್ಲಿ, ಸ್ಟೀವನ್ ಸ್ಮಿತ್ ಕೂಡ ಗಾಯದ ಕಾರಣದಿಂದಾಗಿ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಜೋಶ್ ಇಂಗ್ಲಿಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮಾರ್ನಸ್ ಲ್ಯಾಬುಶೇನ್ ಅವರ ಬ್ಯಾಟ್ ಸ್ವಲ್ಪ ಸಮಯದಿಂದ ಸೌಂಡ್ ಮಾಡುತ್ತಿಲ್ಲ. ಅವರು ಒಟ್ಟು 58 ಟೆಸ್ಟ್ ಪಂದ್ಯಗಳಲ್ಲಿ 46.19 ರ ಸರಾಸರಿಯನ್ನು ಹೊಂದಿದ್ದಾರೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆದ ಕಾರಣ ಅವರಿಂದ ತಂಡವು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿತ್ತು. ಆದರೆ, ಅವರು ನಿರೀಕ್ಷೆಗಳಿಗೆ ತಕ್ಕಂತೆ ಬ್ಯಾಟ್ ಮಾಡಲಿಲ್ಲ. ಈ ಕಾರಣಕ್ಕಾಗಿ, ಆಯ್ಕೆದಾರರು ಅವರನ್ನು ತಂಡದಿಂದ ಕೈಬಿಡಲು ನಿರ್ಧರಿಸಿದರು.
ಜಾರ್ಜ್ ಬೈಲಿ ಹೇಳಿದರು, ‘ಮಾರ್ನಸ್ ತನ್ನ ಅತ್ಯುತ್ತಮ ಫಾರ್ಮ್‌ನಲ್ಲಿರುವಾಗ ತಂಡಕ್ಕೆ ಅವರು ಬಹಳ ಮುಖ್ಯ. ಅವರ ಪ್ರದರ್ಶನ ನಾವು ಅವರಿಂದ ನಿರೀಕ್ಷಿಸುವ ಮಟ್ಟದಲ್ಲಿಲ್ಲ ಎಂದು ಅವರು ಅರ್ಥಮಾಡಿಕೊಂಡಿದ್ದಾರೆ. ಅವರ ಆಟದ ತಂತ್ರವನ್ನು ಸುಧಾರಿಸಲು ನಾವು ಅವರಿಗೆ ಸಹಾಯ ಮಾಡುತ್ತೇವೆ. ಅವರ ಪ್ರತಿಭೆಯಲ್ಲಿ ನಮಗೆ ನಂಬಿಕೆ ಇದೆ ಮತ್ತು ಅವರು ಈ ಸವಾಲನ್ನು ಜಯಿಸುತ್ತಾರೆ ಎಂದು ನಾವು ಭಾವಿಸುತ್ತೇವೆ’ ಎಂದು ಹೇಳಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸೋಲು
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಿಕನಾಗಿ ಆಡುವ ಅವಕಾಶವನ್ನು ಲ್ಯಾಬುಶೇನ್ ಪಡೆದರು. ಆದರೆ, ಅವರು ದಕ್ಷಿಣ ಆಫ್ರಿಕಾದ ಬೌಲರ್‌ಗಳ ಮೇಲೆ ಒತ್ತಡ ಹೇರುವಲ್ಲಿ ವಿಫಲರಾದರು. ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ 17 ಮತ್ತು 22 ರನ್ ಗಳಿಸಿದರು. ಅವರ ವೈಫಲ್ಯದ ನಂತರ, ತಂಡದಲ್ಲಿ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳು ಎದ್ದವು. ಇದೀಗ ಅವರನ್ನು ತಂಡದಿಂದ ಕೈಬಿಡಲಾಗಿದೆ.
IND vs ENG 1st Test: 3ನೇ ಕ್ರಮಾಂಕದ ಮೇಲೆ ಎಲ್ಲರ ಕಣ್ಣು: ಕರುಣ್-ಸುದರ್ಶನ್ ಮಧ್ಯೆ ಯಾರಿಗೆ ಸ್ಥಾನ?
ಶ್ರೀಲಂಕಾ ವಿರುದ್ಧದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ್ದಕ್ಕಾಗಿ ಜೋಶ್ ಇಂಗ್ಲಿಸ್ ಅವರಿಗೆ ವಿಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ ನೀಡಲಾಗಿದೆ. ಅದೇ ಸಮಯದಲ್ಲಿ, ಭಾರತ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಅರ್ಧಶತಕ ಗಳಿಸಿದ ಕಾನ್ಸ್ಟಾಸ್ಗೂ ಅವಕಾಶ ನೀಡಲಾಗಿದೆ. ಸ್ಮಿತ್ ಎರಡನೇ ಟೆಸ್ಟ್‌ಗೆ ಫಿಟ್ ಆಗುವ ನಿರೀಕ್ಷೆಯಿದೆ.
ವೆಸ್ಟ್ ಇಂಡೀಸ್ ಸರಣಿಗೆ ಆಸ್ಟ್ರೇಲಿಯಾ ಟೆಸ್ಟ್ ತಂಡ:
ಪ್ಯಾಟ್ ಕಮ್ಮಿನ್ಸ್ (ನಾಯಕ), ಸೀನ್ ಅಬಾಟ್, ಸ್ಕಾಟ್ ಬೊಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಸ್ಯಾಮ್ ಕಾನ್ಸ್ಟಾಜಾ, ಮ್ಯಾಟ್ ಕುಹ್ನೆಮನ್, ನಾಥನ್ ಲಿಯಾನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಬ್ಯೂ ವೆಬ್‌ಸ್ಟರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




