ಮೊಹಮ್ಮದ್ ಸಿರಾಜ್ ಆಟಕ್ಕೆ ಫಿದಾ ಆದ ಪಾಕಿಸ್ತಾನ ಪತ್ರಕರ್ತೆ: ಹೇಳಿದ್ದೇನು ನೋಡಿ

| Updated By: Vinay Bhat

Updated on: Aug 19, 2021 | 7:49 AM

ಸಿರಾಜ್ ಆಟಕ್ಕೆ ಇಡೀ ದೇಶವೇ ಸೆಲ್ಯೂಟ್ ಹೊಡೆಯುತ್ತಿದೆ. ಹೀಗಿರುವಾಗ ಪಾಕಿಸ್ತಾನದ ಪತ್ರಕರ್ತೆ ಜೈನಬ್ ಅಬ್ಬಾಸ್ ಕೂಡ ಸಿರಾಜ್ ಆಟಕ್ಕೆ ಮನಸೋತಿದ್ದಾರೆ. ಇವರ ಪ್ರದರ್ಶನವನ್ನು ಕಂಡು ಹಾಡಿಹೊಗಳಿದ್ದಾರೆ.

ಮೊಹಮ್ಮದ್ ಸಿರಾಜ್ ಆಟಕ್ಕೆ ಫಿದಾ ಆದ ಪಾಕಿಸ್ತಾನ ಪತ್ರಕರ್ತೆ: ಹೇಳಿದ್ದೇನು ನೋಡಿ
Mohammed siraj and Zainab Abbas
Follow us on

ಮೊಹಮ್ಮದ್ ಸಿರಾಜ್ (Mohammed Siraj) ಭಾರತ ಕ್ರಿಕೆಟ್ ತಂಡದಲ್ಲಿ ಮಿಂಚುತ್ತಿರುವ ಯುವ ವೇಗಿ. ಟೆಸ್ಟ್ ಕ್ರಿಕೆಟ್​ಗೆ ಹೇಳಿಮಾಡಿಸಿದಂತಹ ಬೌಲಿಂಗ್ ಶೈಲಿ ಹೊಂದಿರುವ ಸಿರಾಜ್ ಆಡಿದ ಕೆಲವೇ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯ ತೋರ್ಪಡಿಸಿದ್ದಾರೆ. ಇತ್ತೀಚೆಗಷ್ಟೆ ಲಾರ್ಡ್ಸ್​ನಲ್ಲಿ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳ ಹುಟ್ಟಡಗಿಸಿದ ಸಿರಾಜ್ ಹೊಸ ದಾಖಲೆ ಬರೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಸಿರಾಜ್ ಆಟಕ್ಕೆ ಇಡೀ ದೇಶವೇ ಸೆಲ್ಯೂಟ್ ಹೊಡೆಯುತ್ತಿದೆ. ಹೀಗಿರುವಾಗ ಪಾಕಿಸ್ತಾನದ ಪತ್ರಕರ್ತೆ ಜೈನಬ್ ಅಬ್ಬಾಸ್ ಕೂಡ ಸಿರಾಜ್ ಆಟಕ್ಕೆ ಮನಸೋತಿದ್ದಾರೆ. ಇವರ ಪ್ರದರ್ಶನವನ್ನು ಕಂಡು ಟ್ವೀಟ್ ಮಾಡಿರುವ ಜೈನಬ್, “ಮೊಹಮ್ಮದ್ ಸಿರಾಜ್ ಒಬ್ಬ ವಿಶ್ವ ಶ್ರೇಷ್ಠ ಬೌಲರ್. ಆಸ್ಟ್ರೇಲಿಯಾ ವಿರುದ್ಧದ ಸರಣಿ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳನ್ನು ಇವರು ಪ್ರದರ್ಶನ ಅದ್ಭುತ. ಸಿರಾಜ್ ಅವರಲ್ಲಿ ಒಂದು ಸ್ಪೀಡ್ ಇದೆ, ಬಾಲ್ ಅನ್ನು ಹಿಡಿದಿಟ್ಟುಕೊಳ್ಳುವ ಟ್ರಿಕ್ ಇದೆ. ಇವರ ಲೆಂತ್ ಅತ್ಯುತ್ತಮವಾಗಿದೆ” ಎಂದು ಹೇಳಿದ್ದಾರೆ.

ಇನ್ನೂ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸಲ್ಮಾನ್‌ ಬಟ್‌ ಕೂಡ, “ಮೊಹಮ್ಮದ್ ಸಿರಾಜ್‌ ತಂಡದಲ್ಲಿ ತಮ್ಮದೇ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರ ಮುಖದಲ್ಲಿ ವಿಭಿನ್ನ ಅಭಿವ್ಯಕ್ತಿ ಕಾಣುತ್ತದೆ. ಎದುರಾಳಿ ಬ್ಯಾಟ್ಸ್‌ಮನ್‌ ಸಿರಾಜ್‌ ಕಡೆ ನೋಡಿದಾಗ, ಅದಕ್ಕೆ ತಕ್ಕಂತೆ ಟೀಮ್‌ ಇಂಡಿಯಾ ವೇಗಿ ಪ್ರತ್ಯುತ್ತರ ನೀಡುತ್ತಾರೆ. ನನ್ನ ಪ್ರಕಾರ ಸಿರಾಜ್‌ ಅವರ ಆಕ್ರಮಣಶೀಲತೆ ಟೆಸ್ಟ್‌ ಕ್ರಿಕೆಟ್‌ಗೆ ಸಾಕಷ್ಟು ನೆರವಾಗಲಿದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎರಡನೇ ಟೆಸ್ಟ್ ನಡೆದ ವಿಶ್ವ ಶ್ರೇಷ್ಠ ಲಾರ್ಡ್ಸ್ ಮೈದಾನದಲ್ಲಿ ಮೊಹಮ್ಮದ್ ಸಿರಾಜ್ ಒಟ್ಟು 8 ವಿಕೆಟ್‍ಗಳನ್ನು ಪಡೆದರು. ಹೀಗಾಗಿ ಲಾರ್ಡ್ಸ್ ಅಂಗಳದಲ್ಲಿ ನಡೆದ ಪಂದ್ಯವೊಂದರಲ್ಲಿ 8 ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್ 1982ರಲ್ಲಿ ಕಪಿಲ್ ದೇವ್ ಮಾಡಿದ್ದ ದಾಖಲೆಯನ್ನು ಸರಿದೂಗಿಸಿಕೊಂಡರು. ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ 8 ವಿಕೆಟ್ ಪಡೆದ ಇಬ್ಬರು ಭಾರತೀಯರು ಎಂಬ ದಾಖಲೆ ಕಪಿಲ್ ದೇವ್ ಮತ್ತು ಮೊಹಮ್ಮದ್ ಸಿರಾಜ್ ಹೆಸರಿನಲ್ಲಿದೆ.

ಈ ಹಿಂದೆ ಗಬ್ಬಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಮೊಹಮ್ಮದ್ ಸಿರಾಜ್ ಮೊದಲನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆಯುವುದರ ಮೂಲಕ ಆ ಪಂದ್ಯದಲ್ಲಿ ಒಟ್ಟು 6 ವಿಕೆಟ್ ಪಡೆದು ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

India vs England: 3 ವರ್ಷಗಳ ಬಳಿಕ ತಂಡ ಸೇರಿದ ಸ್ಟಾರ್ ಬ್ಯಾಟ್ಸ್​ಮನ್​: 3ನೇ ಟೆಸ್ಟ್​ಗೆ ಇಂಗ್ಲೆಂಡ್ ಮಾಸ್ಟರ್ ಪ್ಲಾನ್

Junior world wrestling championship: ಬೆಳ್ಳಿಯೊಂದಿಗೆ 6 ಪದಕ ಗೆದ್ದ ಭಾರತದ ಕುಸ್ತಿಪಟುಗಳು! ಫೈನಲ್​ಗೇರಿದ ಬಿಪಾಶಾ

(India vs England You are world class cricketer Pakistan Sports Journalist Zainab Abbas salutes mohammed siraj)