
ಭಾರತ ಮತ್ತು ಜಪಾನ್ ನಡುವೆ ನಡೆದ ಐತಿಹಾಸಿಕ ಕ್ರಿಕೆಟ್ ಪಂದ್ಯವು, ಇದೀಗ ಅಂಪೈರ್ ತೀರ್ಪಿನ ವಿವಾದದಿಂದಾಗಿ ಭಾರಿ ಚರ್ಚೆಯಲ್ಲಿದೆ. ಸಾನೋ ಇಂಟರ್ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ, ಆನ್-ಫೀಲ್ಡ್ ಅಂಪೈರ್ ಮೊದಲು ನೀಡಿದ ತೀರ್ಪನ್ನು ಆ ಬಳಿಕ ಬದಲಾಯಿಸಿದ್ದು ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಕೇವಲ 5 ಓವರ್‌ಗಳಿಗೆ ಸೀಮಿತಗೊಂಡಿದ್ದ ಈ ಮಳೆ ಬಾಧಿತ ಪಂದ್ಯದಲ್ಲಿ ಜಪಾನ್ ತಂಡವು ಭಾರತಕ್ಕೆ ಆಘಾತ ನೀಡುವ ಹಂತಕ್ಕೆ ತಲುಪಿತ್ತು. ಆದರೆ, ಕೊನೆಯ ಓವರ್‌ನಲ್ಲಿ ನಡೆದ ಒಂದು ‘ವೈಡ್’ ವಿವಾದ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿತು.
ಜಪಾನ್ ಗೆಲುವಿಗೆ ಕೊನೆಯ 4 ಎಸೆತಗಳಲ್ಲಿ 6 ರನ್‌ಗಳ ಅಗತ್ಯವಿತ್ತು. ಈ ವೇಳೆ ಭಾರತದ ಸ್ಪಿನ್ನರ್ ಅಕ್ಷರ್ ಪಟೇಲ್ ಬೌಲಿಂಗ್ ಮಾಡುತ್ತಿದ್ದರು. ಜಪಾನ್‌ನ ಎಡಗೈ ಬ್ಯಾಟರ್ ಅಲೆಕ್ಸಾಂಡರ್ ಶಿರಾಯ್-ಪ್ಯಾಟ್‌ಮೋರ್ ರಿವರ್ಸ್ ಸ್ವೀಪ್ ಮಾಡಲು ಯತ್ನಿಸಿದರು. ಚೆಂಡು ಅವರ ಲೆಗ್ ಸೈಡ್‌ಗಿಂತ ಹೊರಗೆ ಹೋದಾಗ ತಕ್ಷಣವೇ ಆನ್-ಫೀಲ್ಡ್ ಅಂಪೈರ್ ಕ್ರಿಸ್ ಥುರ್ಗೇಟ್ ಅದನ್ನು ‘ವೈಡ್’ ಎಂದು ಘೋಷಿಸಿದರು.
ಆದರೆ, ಬ್ಯಾಟರ್ ರಿವರ್ಸ್ ಸ್ವೀಪ್‌ಗೆ ಯತ್ನಿಸಿದ್ದರಿಂದ ಅದು ವೈಡ್ ಅಲ್ಲ ಎಂದು ಅಕ್ಷರ್ ಪಟೇಲ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅಂಪೈರ್ ಬಳಿ ಆಕ್ಷೇಪ ವ್ಯಕ್ತಪಡಿಸಿದರು. ನಂತರ ಇಬ್ಬರೂ ಅಂಪೈರ್‌ಗಳು ಚರ್ಚಿಸಿ, ಆ ವೈಡ್ ತೀರ್ಪನ್ನು ಹಿಂಪಡೆದು, ಅದನ್ನು ‘ಡಾಟ್ ಬಾಲ್’ ಎಂದು ಘೋಷಿಸಿದರು. ಕೊನೆಗೆ ಭಾರತ 2 ರನ್‌ಗಳ ರೋಚಕ ಜಯ ಸಾಧಿಸಿತು.
ಅಂಪೈರ್ ತಮ್ಮ ನಿರ್ಧಾರವನ್ನು ಹಿಂಪಡೆದಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಹಾಗಾದರೆ ಈ ಕುರಿತು ಕ್ರಿಕೆಟ್ ನಿಯಮಗಳು ಮತ್ತು ಮೆರಿಲಿಬೋನ್ ಕ್ರಿಕೆಟ್ ಕ್ಲಬ್ ನಿಯಮಗಳು ಏನು ಹೇಳುತ್ತವೆ? ಅಂಪೈರ್‌ಗೆ ತೀರ್ಪು ಬದಲಿಸುವ ಹಕ್ಕಿದೆಯೇ? ಇಲ್ಲಿದೆ ಸಂಪೂರ್ಣ ವಿವರ…
ಜಪಾನ್ ಬ್ಯಾಟರ್ ರಿವರ್ಸ್ ಸ್ವೀಪ್ ಆಡಲು ತಿರುಗಿದ್ದರಿಂದ, ಲೆಗ್ ಸೈಡ್‌ನಲ್ಲಿ ಬಂದ ಚೆಂಡು ಅವರ ಹೊಡೆಯುವ ವ್ಯಾಪ್ತಿಯೊಳಗೆ ಇತ್ತು. ಹೀಗಾಗಿ ಅಂಪೈರ್‌ಗಳು ವೈಡ್ ತೀರ್ಪನ್ನು ರದ್ದುಗೊಳಿಸಿದ್ದು ನಿಯಮದ ಪ್ರಕಾರ ನೂರಕ್ಕೆ ನೂರು ಸರಿಯಾಗಿದೆ.
ಖಂಡಿತವಾಗಿಯೂ ಹೌದು. ಈ ಪಂದ್ಯದಲ್ಲಿ ಡಿಆರ್‌ಎಸ್ ಅಥವಾ ಟಿವಿ ಅಂಪೈರ್ ತಂತ್ರಜ್ಞಾನ ಲಭ್ಯವಿರಲಿಲ್ಲ. ಆದರೂ ಆನ್-ಫೀಲ್ಡ್ ಅಂಪೈರ್‌ಗಳಿಗೆ ತಮ್ಮ ತಪ್ಪು ನಿರ್ಧಾರವನ್ನು ತಿದ್ದಿಕೊಳ್ಳುವ ಸಂಪೂರ್ಣ ಅಧಿಕಾರವನ್ನು ಕ್ರಿಕೆಟ್ ನಿಯಮಗಳು ನೀಡಿವೆ.
ಇದನ್ನೂ ಓದಿ: ಸಿಎಸ್‌ಕೆ ಪ್ಲೇಯಿಂಗ್ 11 ಸೋರಿಕೆ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪ!
ಭಾರತ ತಂಡದ ಆಟಗಾರರು ಅಂಪೈರ್ ಮೇಲೆ ಒತ್ತಡ ಹೇರಿ ತೀರ್ಪು ಬದಲಾಯಿಸಿಕೊಂಡರು ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಟೀಕಿಸುತ್ತಿದ್ದಾರೆ. ಆದರೆ ಕ್ರಿಕೆಟ್ ತಜ್ಞರ ಪ್ರಕಾರ, ಭಾರತೀಯ ಆಟಗಾರರು ಕೇವಲ ನಿಯಮವನ್ನು ನೆನಪಿಸಿಕೊಟ್ಟರಷ್ಟೇ. ಅಂತಿಮವಾಗಿ ಅಂಪೈರ್‌ಗಳು ತೆಗೆದುಕೊಂಡ ನಿರ್ಧಾರವು ಐಸಿಸಿ ಕ್ರಿಕೆಟ್ ನಿಯಮಾವಳಿಗಳಿಗೆ ಸಂಪೂರ್ಣವಾಗಿ ಬದ್ಧವಾಗಿದೆ. ತಂತ್ರಜ್ಞಾನ ಇಲ್ಲದಿದ್ದರೂ ಮೈದಾನದಲ್ಲಿ ಸರಿಯಾದ ನಿರ್ಧಾರ ಹೊರಬೀಳಲು ಈ ನಿಯಮ ನೆರವಾಗಿದೆ.