IND vs NZ: ಇಬ್ಬರು ಅಲಭ್ಯ… ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11
India vs New Zealand Series: ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯು ಜನವರಿ 11 ರಿಂದ ಪ್ರಾರಂಭವಾಗಲಿದೆ. ಈ ಸರಣಿಯ ಮೊದಲ ಮ್ಯಾಚ್ ವಡೋದರಾದಲ್ಲಿ ನಡೆದರೆ, ಎರಡನೇ ಪಂದ್ಯವು ರಾಜ್ಕೋಟ್ನಲ್ಲಿ ಜರುಗಲಿದೆ. ಇನ್ನು ಮೂರನೇ ಪಂದ್ಯಕ್ಕೆ ಇಂದೋರ್ನ ಹೋಲ್ಕರ್ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಏಕದಿನ ಸರಣಿಯು ನಾಳೆಯಿಂದ (ಜ.11) ಶುರುವಾಗಲಿದೆ. ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ. ಆದರೆ ಈ ಆಡುವ ಬಳಗದಲ್ಲಿ ಇಬ್ಬರು ಆಟಗಾರರು ಕಾಣಿಸಿಕೊಳ್ಳುವುದಿಲ್ಲ. ಅಂದರೆ ಸೌತ್ ಆಫ್ರಿಕಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಇಬ್ಬರು ಆಟಗಾರರು ನ್ಯೂಝಿಲೆಂಡ್ ಸರಣಿಗೆ ಆಯ್ಕೆಯಾಗಿಲ್ಲ. ಹೀಗಾಗಿ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಪ್ಲೇಯಿಂಗ್ ಇಲೆವೆನ್ನಲ್ಲಿ 2 ಬದಲಾವಣೆ ಕಂಡು ಬರಲಿದೆ.
ಈ ಬದಲಾವಣೆಯೊಂದಿಗೆ ನ್ಯೂಝಿಲೆಂಡ್ ವಿರುದ್ಧ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಕಣಕ್ಕಿಳಿಯಲಿದ್ದಾರೆ. ಅತ್ತ ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದ ಗಿಲ್ ಹೊರಗುಳಿದಿದ್ದ ಕಾರಣ ಯಶಸ್ವಿ ಜೈಸ್ವಾಲ್ ಕಣಕ್ಕಿಳಿದಿದ್ದರು. ಇದೀಗ ಶುಭ್ಮನ್ ಅವರ ಆಗಮನದೊಂದಿಗೆ ಜೈಸ್ವಾಲ್ ಮತ್ತೆ ಬೆಂಚ್ ಕಾಯಬೇಕಾಗುತ್ತದೆ.
ಇನ್ನು ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಕಣಕ್ಕಿಳಿಯುವುದು ಖಚಿತ. ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಅಯ್ಯರ್ ಬದಲಿಗೆ ರುತುರಾಜ್ ಗಾಯಕ್ವಾಡ್ ಕಣಕ್ಕಿಳಿದಿದ್ದರು. ಆದರೆ ಅಯ್ಯರ್ ಆಗಮನದೊಂದಿಗೆ ರುತುರಾಜ್ ಗಾಯಕ್ವಾಡ್ ಏಕದಿನ ತಂಡದಿಂದ ಹೊರಬಿದ್ದಿದ್ದಾರೆ.
ಹಾಗೆಯೇ ಐದನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕೆಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಆರನೇ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ. ಏಕೆಂದರೆ ಸೌತ್ ಆಫ್ರಿಕಾ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಿಲಕ್ ವರ್ಮಾ ಕೂಡ ಭಾರತ ಏಕದಿನ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ನ್ಯೂಝಿಲೆಂಡ್ ವಿರುದ್ಧ ವಾಷಿಂಗ್ಟನ್ ಸುಂದರ್ಗೆ ಚಾನ್ಸ್ ಸಿಗಬಹುದು.
ಇನ್ನು ರವೀಂದ್ರ ಜಡೇಜಾ ಏಳನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುವುದು ಖಚಿತ. ಇನ್ನುಳಿದಂತೆ ಬೌಲರ್ಗಳಾಗಿ ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್ ಹಾಗೂ ಹರ್ಷಿತ್ ರಾಣಾ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅದರಂತೆ ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11 ಈ ಕೆಳಗಿನಂತಿದೆ…
- ರೋಹಿತ್ ಶರ್ಮಾ
- ಶುಭ್ಮನ್ ಗಿಲ್ (ನಾಯಕ)
- ವಿರಾಟ್ ಕೊಹ್ಲಿ
- ಶ್ರೇಯಸ್ ಅಯ್ಯರ್ (ಉಪನಾಯಕ)
- ಕೆಎಲ್ ರಾಹುಲ್ (ವಿಕೆಟ್ ಕೀಪರ್)
- ವಾಷಿಂಗ್ಟನ್ ಸುಂದರ್
- ರವೀಂದ್ರ ಜಡೇಜಾ
- ಹರ್ಷಿತ್ ರಾಣಾ
- ಮೊಹಮ್ಮದ್ ಸಿರಾಜ್
- ಅರ್ಷದೀಪ್ ಸಿಂಗ್
- ಕುಲ್ದೀಪ್ ಯಾದವ್
ಇದನ್ನೂ ಓದಿ: ಒಂದೇ ಒಂದು ಎಸೆತದಿಂದ ಭರ್ಜರಿ ದಾಖಲೆ ತಪ್ಪಿಸಿಕೊಂಡ ಲಾರೆನ್ ಬೆಲ್
Published On - 12:56 pm, Sat, 10 January 26
