IND vs NZ: ಪಂತ್- ಚಾಹಲ್ ಔಟ್, ಹೂಡಾ- ಕುಲ್ದೀಪ್ ಇನ್..?; 2ನೇ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ

IND vs NZ 2nd ODI Probable Playing 11: ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಉತ್ತಮ ಪ್ರದರ್ಶನ ನೀಡಿತ್ತಾದರೂ ಬೌಲಿಂಗ್ ವಿಭಾಗ ಅಟ್ಟರ್ ಫ್ಲಾಪ್ ಆಯಿತು. ಹೀಗಾಗಿ ಕಿವೀಸ್ ತಂಡ ನಿಗಧಿತ ಓವರ್​ಗಳಿಗಿಂತ ಮುಂಚೆಯೇ ಗುರಿ ಸಾಧಿಸಿತು.

IND vs NZ: ಪಂತ್- ಚಾಹಲ್ ಔಟ್, ಹೂಡಾ- ಕುಲ್ದೀಪ್ ಇನ್..?; 2ನೇ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ
india vs new zealand 3rd ODI
Follow us
TV9 Web
| Updated By: ಪೃಥ್ವಿಶಂಕರ

Updated on:Nov 26, 2022 | 5:59 PM

ಆಕ್ಲೆಂಡ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸೋತಿರುವ ಧವನ್ (Shikhar Dhawan) ಪಡೆ ಇದೀಗ ಎರಡನೇ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯವು ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ ನಡೆಯಲಿದೆ. ಮೊದಲ ಪಂದ್ಯ ಸೋತಿರುವ ಟೀಂ ಇಂಡಿಯಾಕ್ಕೆ (Team India) ಈ ಮೈದಾನದ ಹಳೆಯ ಟ್ರ್ಯಾಕ್ ರೆಕಾರ್ಡ್​ ಇನ್ನಷ್ಟು ಆತಂಕ ಹೆಚ್ಚಿಸಿದೆ. ಟೀಂ ಇಂಡಿಯಾ ಇಲ್ಲಿ ಆಡಿರುವ 7 ಏಕದಿನ ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿದೆ. ಉಳಿದ 6 ಪಂದ್ಯಗಳಲ್ಲಿ ನ್ಯೂಜಿಲೆಂಡ್ ಜಯ ಸಾಧಿಸಿದೆ. ಇದರಿಂದಾಗಿ ನಾಳೆ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಲಿದೆಯೇ ಎಂಬ ಕುತೂಹಲ ಮೂಡಿದೆ. ಇದೀಗ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ ಸಮಬಲ ಸಾಧಿಸಲು ಬಯಸಿದೆ.

ಈಡನ್ ಪಾರ್ಕ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್​ಮನ್​ಗಳು ಉತ್ತಮ ಆಟ ಪ್ರದರ್ಶಿಸಿದರು. ಭಾರತದ ಆರಂಭಿಕ ಜೋಡಿ ಶುಭಮನ್ ಗಿಲ್ ಮತ್ತು ಶಿಖರ್ ಧವನ್ ನಿಧಾನ ಆರಂಭ ನೀಡಿದರಾದರೂ ಶತಕದ ಜೊತೆಯಾಟ ಆಡುವುದರೊಂದಿಗೆ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಆರಂಭದಲ್ಲೇ ಉತ್ತಮ ಜೊತೆಯಾಟ ನಡೆದಿದ್ದರಿಂದ ಈ ಇಬ್ಬರ ಬಳಿಕ ಬಂದ ಬ್ಯಾಟ್ಸ್‌ಮನ್​ಗಳು ಒತ್ತಡ ರಹಿತವಾಗಿ ಆಡಿದ್ದರಿಂದ ಟೀಂ ಇಂಡಿಯಾ 300ರ ಗಡಿಯನ್ನು ಸುಲಭವಾಗಿ ದಾಟಿತ್ತು. ಈ ಬೃಹತ್ ಟಾರ್ಗೆಟ್ ನೀಡುವಲ್ಲಿ ಗಿಲ್ ಹಾಗೂ ಧವನ್ ಜೊತೆಗೆ ಶ್ರೇಯಸ್ ಕೂಡ ಪ್ರಮುಖ ಕೊಡುಗೆ ನೀಡಿದ್ದರು. ಈ ಪಂದ್ಯದಲ್ಲಿ 80 ರನ್​ಗಳ ಇನಿಂಗ್ಸ್ ಆಡಿದ ಶ್ರೇಯಸ್ ಅಯ್ಯರ್ ಏಕದಿನ ಕ್ರಿಕೆಟ್​ನಲ್ಲಿ ತಮ್ಮ ಅದ್ಭುತ ಫಾರ್ಮ್​ ಮುಂದುವರೆಸಿದರು. ಹೀಗಾಗಿ ನಾಳಿನ ಪಂದ್ಯದಲ್ಲೂ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ತನ್ನ ಎಂದಿನ ಪ್ರದರ್ಶನವನ್ನು ಮುಂದುವರಿಸಬೇಕಿದೆ.

ತಂಡದಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ?

ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಉತ್ತಮ ಪ್ರದರ್ಶನ ನೀಡಿತ್ತಾದರೂ ಬೌಲಿಂಗ್ ವಿಭಾಗ ಅಟ್ಟರ್ ಫ್ಲಾಪ್ ಆಯಿತು. ಹೀಗಾಗಿ ಕಿವೀಸ್ ತಂಡ ನಿಗಧಿತ ಓವರ್​ಗಳಿಗಿಂತ ಮುಂಚೆಯೇ ಗುರಿ ಸಾಧಿಸಿತು. ಅದರಲ್ಲೂ ಪ್ರಮುಖ 3 ವಿಕೆಟ್​ಗಳನ್ನು ಬೇಗನೇ ಉರುಳಿಸದ ಭಾರತ ತಂಡಕ್ಕೆ ನಂತರ ಬಂದ ಕೇನ್ ವಿಲಿಯಮ್ಸನ್ ಹಾಗೂ ಲೇಥಮ್ ಸೋಲಿನ ಶಾಕ್ ನೀಡಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ಈ ಜೋಡಿ ದಾಖಲೆಯ ದ್ವಿಶತಕದ ಜೊತೆಯಾಟ ಆಡಿತ್ತು.

ಇದರಲ್ಲಿ ಭಾರತದ ಬೌಲಿಂಗ್ ದಾಳಿಯಲ್ಲಿ ಆರನೇ ಬೌಲರ್ ಕೊರತೆ ಸ್ಪಷ್ಟವಾಗಿ ಕಂಡುಬಂದಿದೆ. ಎರಡನೇ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ಈ ಕೊರತೆಯನ್ನು ನೀಗಿಸುವ ಸಾಧ್ಯತೆಗಳಿದ್ದು, ಹೀಗಾಗಿ ತಂಡದಲ್ಲಿ ಬದಲಾವಣೆಯಾಗಲಿವೆ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ. ಪಂತ್ ಮತ್ತು ಸ್ಯಾಮ್ಸನ್ ಈ ಇಬ್ಬರು ವಿಕೆಟ್‌ಕೀಪರ್‌ಗಳೊಂದಿಗೆ ಟೀಮ್ ಇಂಡಿಯಾ ಮೊದಲ ಏಕದಿನ ಪಂದ್ಯವನ್ನು ಆಡಿತ್ತು. ಆದರೆ ಎರಡನೇ ಏಕದಿನ ಪಂದ್ಯದಲ್ಲಿ 6ನೇ ಬೌಲಿಂಗ್ ಆಯ್ಕೆಯನ್ನು ಟೀಂ ಇಂಡಿಯಾ ಪರಿಗಣಿಸಿದರೆ​ ಈ ಇಬ್ಬರಲ್ಲಿ ಒಬ್ಬರು ಬೆಂಚ್ ಕಾಯುವುದು ಖಚಿತ.

ಈ ಇಬ್ಬರಲ್ಲಿ ಒಬ್ಬರು ತಂಡದಿಂದ ಹೊರನಡೆದರೆ ಅವರ ಜಾಗದಲ್ಲಿ ದೀಪಕ್ ಹೂಡಾ ಆಯ್ಕೆಯಾಗುವ ಸಾಧ್ಯತೆಗಳವು ಹೆಚ್ಚಿವೆ. ಏಕೆಂದರೆ ಹೂಡಾ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಕೊಡುಗೆ ನೀಡಬಲ್ಲ ಆಟಗಾರ. ಅವರ ಆಫ್-ಸ್ಪಿನ್ ತಂಡಕ್ಕೆ ಉಪಯುಕ್ತವಾದರೆ, ಅವರು ಬ್ಯಾಟಿಂಗ್​ನಲ್ಲೂ ನಿರ್ಣಾಯಕ ಹಂತದಲ್ಲಿ ಸಹಕಾರಿಯಾಗಬಲ್ಲರು.

ಸ್ಪಿನ್ ವಿಭಾಗದಲ್ಲಿ ಬದಲಾವಣೆ?

ಸ್ಪಿನ್ ವಿಭಾಗದ ಜವಬ್ದಾರಿ ಹೊತ್ತಿದ್ದ ಯುಜುವೇಂದ್ರ ಚಹಾಲ್ ಮೊದಲ ಏಕದಿನ ಪಂದ್ಯದಲ್ಲಿ ಅತ್ಯಂತ ದುಬಾರಿಯಾಗಿದ್ದರು. ತಮ್ಮ 10 ಓವರ್‌ ಕೋಟಾದಲ್ಲಿ ಬರೋಬ್ಬರಿ 67 ರನ್ ನೀಡಿದ ಚಾಹಲ್​ಗೆ ಒಂದೇ ಒಂದು ವಿಕೆಟ್ ಸಹ ಬಿದ್ದಿರಲಿಲ್ಲ. ಹೀಗಾಗಿ ಅವರ ಜಾಗದಲ್ಲಿ ಕುಲದೀಪ್ ಯಾದವ್‌ಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.

ನ್ಯೂಜಿಲೆಂಡ್ ಬದಲಾವಣೆ ಮಾಡುವುದೇ?

ಆತಿಥೇಯರು ಮೊದಲ ಏಕದಿನ ಪಂದ್ಯದಲ್ಲಿ ಜೇಮ್ಸ್ ನೀಶಮ್ ಅವರನ್ನು ಗಾಯದ ಸಮಸ್ಯೆಯಿಂದ ಹೊರಗಿಟ್ಟಿದ್ದರು. ಈಗ ಅವರು ಗಾಯದಿಂದ ಚೇತರಿಸಿಕೊಂಡಿದ್ದು, ಅವರು ತಂಡದಲ್ಲಿ ಆಡುವ ಸಾಧ್ಯತೆಗಳು ಕಡಿಮೆ ಇದೆ. ಏಕೆಂದರೆ ಯಾವ ತಂಡವು ತನ್ನ ಗೆಲುವಿನ ಸಂಯೋಜನೆಯನ್ನು ಬದಲಾಯಿಸುವ ಗೋಜಿಗೆ ಹೋಗುವುದು ತೀರ ಕಡಿಮೆ.

ಎರಡೂ ತಂಡಗಳ ಸಂಭಾವ್ಯ ಆಡುವ ಇಲೆವೆನ್

ಭಾರತ ತಂಡ- ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್/ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್/ಕುಲದೀಪ್ ಯಾದವ್

ನ್ಯೂಜಿಲೆಂಡ್ ತಂಡ- ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಡೆವೊನ್ ಕಾನ್ವೇ, ಟಾಮ್ ಲೇಥಮ್, ಡಾರೆಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್.

Published On - 5:55 pm, Sat, 26 November 22

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ