
ಮುಂಬೈನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ (India vs New zealand 2nd Test) ನಡುವಣ 2ನೇ ಟೆಸ್ಟ್ ಪಂದ್ಯವು ಕುತೂಹಲಘಟ್ಟದತ್ತ ಸಾಗುತ್ತಿದೆ. ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾವನ್ನು (Team India) 325 ರನ್ಗೆ ಆಲೌಟ್ ಮಾಡಿದ ನ್ಯೂಜಿಲೆಂಡ್ ಇದೀಗ 2ನೇ ದಿನದಾಟವೇ ಆಲೌಟ್ ಆಗಿರುವುದು ವಿಶೇಷ. ಅಂದರೆ ಮೊದಲ ಇನಿಂಗ್ಸ್ನಲ್ಲಿ ಎಜಾಝ್ ಪಟೇಲ್ 10 ವಿಕೆಟ್ ಪಡೆದು ಟೀಮ್ ಇಂಡಿಯಾಗೆ ಶಾಕ್ ನೀಡಿದ್ದರು. ಅದರಂತೆ 325 ರನ್ಗಳ ಗುರಿ ಪಡೆದು ಮೊದಲ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ಗೆ ಮೊಹಮ್ಮದ್ ಸಿರಾಜ್ (Mohammed Siraj) ತ್ರಿಬಲ್ ಶಾಕ್ ನೀಡಿದ್ದಾರೆ. ಬ್ಯಾಟ್ ಟು ಬ್ಯಾಕ್ ಮೂರು ವಿಕೆಟ್ ಉರುಳಿಸಿದ ಸಿರಾಜ್ ನ್ಯೂಜಿಲೆಂಡ್ಗೆ ಆರಂಭ ಆಘಾತ ನೀಡಿದರು. ಬಳಿಕ ಬೌಲಿಂಗ್ ಆರಂಭಿಸಿದ ಅಕ್ಷರ್ ಪಟೇಲ್ (Axar Patel) ಹಾಗು ಅಶ್ವಿನ್ (R Ashwin) ಸ್ಪಿನ್ ಮೋಡಿ ಆರಂಭಿಸಿದರು. ಅದರಂತೆ ನ್ಯೂಜಿಲೆಂಡ್ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 62 ರನ್ಗಳಿಗೆ ಆಲೌಟ್ ಆಗಿದೆ.
ಟೀಮ್ ಇಂಡಿಯಾ ಪರ ಸಿರಾಜ್ 3 ವಿಕೆಟ್ ಪಡೆದರೆ, ಅಶ್ವಿನ್ 4 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ ಅಕ್ಷರ್ ಪಟೇಲ್ 2 ಹಾಗೂ ಜಯಂತ್ ಯಾದವ್ 1 ವಿಕೆಟ್ ಕಬಳಿಸಿದ್ದಾರೆ. ಕೇವಲ 62 ರನ್ಗಳಿಗೆ ಆಲೌಟ್ ಆಗುವ ಮೂಲಕ ನ್ಯೂಜಿಲೆಂಡ್ ಟೀಮ್ ಇಂಡಿಯಾ ವಿರುದ್ದ ಟೆಸ್ಟ್ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡ ಎನಿಸಿಕೊಂಡಿದೆ.
– ಈ ಹಿಂದೆ ಈ ಕಳಪೆ ದಾಖಲೆ ಸೌತ್ ಆಫ್ರಿಕಾ ತಂಡದ ಹೆಸರಿನಲ್ಲಿತ್ತು. ದಕ್ಷಿಣ ಆಫ್ರಿಕಾ ತಂಡವು 2015 ರಲ್ಲಿ ಭಾರತದ ವಿರುದ್ದ 79 ರನ್ಗಳಿಗೆ ಆಲೌಟ್ ಆಗಿದ್ದು ದಾಖಲೆಯಾಗಿತ್ತು. ಇದೀಗ 62 ರನ್ಗಳಿಗೆ ಆಲೌಟ್ ಆಗಿ ಹೀನಾಯ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.
– ಇನ್ನು ಭಾರತದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕಳಪೆ ದಾಖಲೆ ಕೂಡ ನ್ಯೂಜಿಲೆಂಡ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಟೀಮ್ ಇಂಡಿಯಾದ ಹೆಸರಿನಲ್ಲಿತ್ತು. 1987 ರಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ದ 75 ರನ್ಗೆ ಆಲೌಟ್ ಆಗಿದ್ದು ಇದುವರೆಗೆ ಅತ್ಯಂತ ಕಳಪೆ ದಾಖಲೆಯಾಗಿತ್ತು. ಇದೀಗ 62 ರನ್ಗೆ ಆಲೌಟ್ ಆಗಿ ನ್ಯೂಜಿಲೆಂಡ್ ಭಾರತದ ಹೆಸರಿನಲ್ಲಿದ್ದ ಕಳಪೆ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
– ಅದೇ ರೀತಿ ಭಾರತದ ವಿರುದ್ದದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಅತೀ ಕಡಿಮೆ ಮೊತ್ತದ ಎಂಬ ಹೀನಾಯ ದಾಖಲೆ ಕೂಡ ಈ ಇನಿಂಗ್ಸ್ ಪಾಲಾಗಿದೆ. ಈ ಹಿಂದೆ 2002 ರಲ್ಲಿ ನ್ಯೂಜಿಲೆಂಡ್ ಭಾರತದ ವಿರುದ್ದ 94 ರನ್ಗೆ ಆಲೌಟ್ ಆಗಿದ್ದು ದಾಖಲೆಯಾಗಿತ್ತು. ಇದೀಗ 62 ರನ್ಗೆ ಆಲೌಟ್ ತನ್ನದೇ ಹೀನಾಯ ದಾಖಲೆಯನ್ನು ಮತ್ತಷ್ಟು ಕಳಪೆ ಮಟ್ಟಕ್ಕೆ ಕೊಂಡೊಯ್ದಿದೆ ನ್ಯೂಜಿಲೆಂಡ್.
– ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಟೆಸ್ಟ್ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡವೆಂಬ ಅಪಕೀರ್ತಿ ಕೂಡ ನ್ಯೂಜಿಲೆಂಡ್ ಪಾಲಾಗಿದೆ. 2004 ರಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ತಂಡವು 93 ರನ್ಗಳಿಗೆ ಆಲೌಟ್ ಆಗಿದ್ದು ಅತ್ಯಂತ ಕಳಪೆ ದಾಖಲೆಯಾಗಿತ್ತು. ಇದೀಗ 62 ರನ್ಗೆ ನ್ಯೂಜಿಲೆಂಡ್ ಮೊದಲ ಇನಿಂಗ್ಸ್ನಲ್ಲಿ ಸರ್ವಪತನ ಕಾಣುವ ಮೂಲಕ ಹೀನಾಯ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಇದನ್ನೂ ಓದಿ: IPL 2022: ದುಡ್ಡಿಗಿಂತ RCB ತಂಡವೇ ಮುಖ್ಯ: ವಿರಾಟ್ ಕೊಹ್ಲಿಗೆ ಅಭಿಮಾನಿಗಳಿಂದ ಬಹುಪರಾಕ್
ಇದನ್ನೂ ಓದಿ: 8 ಫ್ರಾಂಚೈಸಿ ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ
ಇದನ್ನೂ ಓದಿ: 27 ಆಟಗಾರರು ರಿಟೈನ್: ಬಿಡುಗಡೆಯಾದ ಆಟಗಾರರ ಪಟ್ಟಿ ಇಲ್ಲಿದೆ
(India vs New zealand 2nd Test: Lowest Test totals Records)