BCCI AGM festival match: ಸೌರವ್ ಗಂಗೂಲಿ ತಂಡಕ್ಕೆ ಸೋಲುಣಿಸಿ ಮಿಂಚಿದ ಜಯ್ ಶಾ
ಪ್ರೆಸಿಡೆಂಟ್ ಇಲೆವೆನ್ ಉತ್ತಮ ಆರಂಭ ಪಡೆಯಿತು. ಆದರೆ ಕಂಬ್ಯಾಕ್ ಮಾಡಿದ ಸೆಕ್ರೆಟರಿ ಇಲೆವೆನ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದರು. ಈ ಹಂತದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಸೌರವ್ ಗಂಗೂಲಿ, 20 ಎಸೆತಗಳಲ್ಲಿ 35 ರನ್ ಬಾರಿಸಿದರು.

ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಭಾರತೀಯ ಕ್ರಿಕೆಟ್ ಮಂಡಳಿ ಎಜಿಎಂ ಫೆಸ್ಟಿವಲ್ ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಬಿಸಿಸಿಐ ಪ್ರೆಸಿಡೆಂಟ್ ಇಲೆವೆನ್ ಹಾಗೂ ಬಿಸಿಸಿಐ ಸೆಕ್ರೆಟರಿ ಇಲೆವೆನ್ ನಡುವಣ ಪಂದ್ಯದಲ್ಲಿ ಸೌರವ್ ಗಂಗೂಲಿ ಹಾಗೂ ಜಯ್ ಶಾ ನೇತೃತ್ವದ ತಂಡಗಳು ಮುಖಾಮುಖಿಯಾಗಿತ್ತು. 15 ಓವರ್ಗಳ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಯ್ ಶಾ ನಾಯಕತ್ವದ ಸೆಕ್ರೆಟರಿ ಇಲೆವೆನ್ ಜಯದೇವ್ ಶಾ (40) ಹಾಗೂ ಅರುಣ್ ಧುಮಾಲ್ (36) ಅವರ ಉತ್ತಮ ಬ್ಯಾಟಿಂಗ್ನಿಂದಾಗಿ 3 ವಿಕೆಟ್ ನಷ್ಟಕ್ಕೆ 128 ರನ್ ಕಲೆಹಾಕಿತ್ತು.
ಈ ಗುರಿಯನ್ನು ಬೆನ್ನತ್ತಿದ ಪ್ರೆಸಿಡೆಂಟ್ ಇಲೆವೆನ್ ಉತ್ತಮ ಆರಂಭ ಪಡೆಯಿತು. ಆದರೆ ಕಂಬ್ಯಾಕ್ ಮಾಡಿದ ಸೆಕ್ರೆಟರಿ ಇಲೆವೆನ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದರು. ಈ ಹಂತದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಸೌರವ್ ಗಂಗೂಲಿ, 20 ಎಸೆತಗಳಲ್ಲಿ 35 ರನ್ ಬಾರಿಸಿದರು. ಈ ಇನಿಂಗ್ಸ್ನಲ್ಲಿ ಗಂಗೂಲಿ ಬ್ಯಾಟ್ನಿಂದ ಎರಡು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳು ಮೂಡಿಬಂದಿತು. 35 ರನ್ಗಳಿಸಿ ರಿಟ್ಲೆರ್ಡ್ ಆಗಿ ಗಂಗೂಲಿ ಹೊರನಡೆದರು.
ಆ ಬಳಿಕ ಪಂದ್ಯದ ಮೇಲೆ ಸೆಕ್ರೆಟರಿ ಇಲೆವೆನ್ ಹಿಡಿತ ಸಾಧಿಸಿದರು. ಅದರಲ್ಲೂ ನಾಯಕ ಜಯ್ ಶಾ 3 ಪ್ರಮುಖ ವಿಕೆಟ್ ಪಡೆದರು. ಟೀಮ್ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್, ಸೂರಜ್ ಲೊಟ್ಲಿಕರ್ ಅವರನ್ನು ಔಟ್ ಮಾಡಿದ ಶಾ ಅಂತಿಮವಾಗಿ 7 ಓವರ್ಗಳಲ್ಲಿ 58 ರನ್ ನೀಡಿ 3 ವಿಕೆಟ್ ಪಡೆದರು.
ಇನ್ನು 128 ರನ್ ಟಾರ್ಗೆಟ್ ಬೆನ್ನತ್ತಿದ ಪ್ರೆಸಿಡೆಂಟ್ ಇಲೆವೆನ್ ಅಂತಿಮವಾಗಿ 15 ಓವರ್ನಲ್ಲಿ 127 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಜಯ್ ಶಾ ನೇತೃತ್ವದ ಸೆಕ್ರೆಟರಿ ಇಲೆವೆನ್ 1 ರನ್ಗಳ ರೋಚಕ ಜಯ ಸಾಧಿಸಿತು.
ಇದನ್ನೂ ಓದಿ: IPL 2022: ದುಡ್ಡಿಗಿಂತ RCB ತಂಡವೇ ಮುಖ್ಯ: ವಿರಾಟ್ ಕೊಹ್ಲಿಗೆ ಅಭಿಮಾನಿಗಳಿಂದ ಬಹುಪರಾಕ್
ಇದನ್ನೂ ಓದಿ: 8 ಫ್ರಾಂಚೈಸಿ ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ
ಇದನ್ನೂ ಓದಿ: IPL 20222: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ
(BCCI AGM festival match: Jay Shah wrecker-in-chief, Team Ganguly falls short by one run)
