AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shreyas Iyer: ವಾಟ್ ಎ ಕ್ಯಾಚ್: ಶ್ರೇಯಸ್ ಅಯ್ಯರ್ ಹಿಡಿದ ಅದ್ಭುತ ಕ್ಯಾಚ್ ವಿಡಿಯೋ ವೈರಲ್

Shreyas Iyer’s Catch: ಶ್ರೇಯಸ್ ಅಯ್ಯರ್ ಅವರ ಫೆಂಟಾಸ್ಟಿಕ್ ಕ್ಯಾಚ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಅದ್ಭುತ ಡೈವಿಂಗ್ ಕ್ಯಾಚ್ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

Shreyas Iyer: ವಾಟ್ ಎ ಕ್ಯಾಚ್: ಶ್ರೇಯಸ್ ಅಯ್ಯರ್ ಹಿಡಿದ ಅದ್ಭುತ ಕ್ಯಾಚ್ ವಿಡಿಯೋ ವೈರಲ್
ಕ್ಯಾಚ್
TV9 Web
| Edited By: |

Updated on: Dec 04, 2021 | 5:37 PM

Share

ಭಾರತ-ನ್ಯೂಜಿಲೆಂಡ್ (India vs New Zealand) ನಡುವಣ 2ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಬೌಲಿಂಗ್​ ಪ್ರದರ್ಶಿಸಿದೆ. ಮೊದಲ ಇನಿಂಗ್ಸ್​ನಲ್ಲಿ 325 ರನ್​ಗಳಿಗೆ ಆಲೌಟ್ ಆಗಿದ್ದ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು ಕೇವಲ 62 ರನ್​ಗಳಿಗೆ ಕಟ್ಟಿಹಾಕಿರುವುದು ವಿಶೇಷ. ಟೀಮ್ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್ 4 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 3 ವಿಕೆಟ್ ಉರುಳಿಸಿದ್ದರು. ಇನ್ನು ಅಕ್ಷರ್ ಪಟೇಲ್ 2 ಹಾಗೂ ಜಯಂತ್ ಯಾದವ್ 1 ವಿಕೆಟ್ ಪಡೆದರು. ಈ ಮೂಲಕ ಭಾರತದ ಬೌಲರುಗಳು ನ್ಯೂಜಿಲೆಂಡ್ ತಂಡವನ್ನು ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಕಡಿಮೆಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಈ ಇನಿಂಗ್ಸ್​ನಲ್ಲಿ ಮೊದಲ ವಿಕೆಟ್​ ಮೊಹಮ್ಮದ್ ಸಿರಾಜ್ ಉರುಳಿಸಿದರೆ, ಕೊನೆಯ ವಿಕೆಟ್ ಅಕ್ಷರ್ ಪಟೇಲ್ ಪಡೆದಿದ್ದರು. ಅದರಲ್ಲೂ ಅಂತಿಮ ವಿಕೆಟ್​ ಪಡೆದಿರುವುದು ಅದ್ಭುತವಾಗಿ ಎಂಬುದು ವಿಶೇಷ. ನ್ಯೂಜಿಲೆಂಡ್ ತಂಡವು 62 ರನ್​ಗಳಿಗೆ 9 ವಿಕೆಟ್ ಕಳೆದುಕೊಂಡಿದ್ದ ವೇಳೆ ಕೈಲ್ ಜೇಮಿಸನ್ ಹಾಗೂ ಎಜಾಝ್ ಪಟೇಲ್ ಕ್ರೀಸ್​ನಲ್ಲಿದ್ದರು.

ಈ ವೇಳೆ ದಾಳಿಗಿಳಿದ ಅಕ್ಷರ್ ಪಟೇಲ್ ಎಸೆತದಲ್ಲಿ ಕೈಲ್ ಜೇಮಿಸನ್ ಭರ್ಜರಿ ಹೊಡೆತಕ್ಕೆ ಮುಂದಾದರು. ಆದರೆ ಬ್ಯಾಟ್​ ಬದಿಗೆ ತಗುಲಿದ ಚೆಂಡು ವಿಕೆಟ್ ಕೀಪರ್​ನತ್ತ ಮುನ್ನುಗ್ಗಿತು. ಆದರೆ ವಿಕೆಟ್ ಕೀಪರ್ ಸಾಹ ಚೆಂಡನ್ನು ಗುರುತಿಸುವಲ್ಲಿ ಎಡವಿದರು. ಚೆಂಡು ಸಾಹ ಕಾಲಿಗೆ ತಗುಲಿ ಚಿಮ್ಮಿತು. ಅತ್ತ ಸಿಲ್ಲಿ ಪಾಯಿಂಟ್​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಶ್ರೇಯಸ್ ಅಯ್ಯರ್ ಕ್ಷಣಾರ್ಧದಲ್ಲೇ ಚೆಂಡನ್ನು ಗುರುತಿಸಿ ಅದ್ಭುತವಾಗಿ ಡೈವ್ ಹೊಡೆದರು. ಅಷ್ಟೇ ಅಲ್ಲದೆ ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿಯುವ ಮೂಲಕ ಜೇಮಿಸನ್ ಔಟ್ ಆಗಲು ಪ್ರಮುಖ ಕಾರಣರಾದರು. ಅದರಂತೆ ನ್ಯೂಜಿಲೆಂಡ್ ತಂಡವು ಕೇವಲ 62 ರನ್​ಗಳಿಗೆ ಇನಿಂಗ್ಸ್​ ಅಂತ್ಯಗೊಳಿಸುವಂತಾಯಿತು.

ಶ್ರೇಯಸ್ ಅಯ್ಯರ್ ಅವರ ಫೆಂಟಾಸ್ಟಿಕ್ ಕ್ಯಾಚ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಅದ್ಭುತ ಡೈವಿಂಗ್ ಕ್ಯಾಚ್ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: IPL 2022: ದುಡ್ಡಿಗಿಂತ RCB ತಂಡವೇ ಮುಖ್ಯ: ವಿರಾಟ್ ಕೊಹ್ಲಿಗೆ ಅಭಿಮಾನಿಗಳಿಂದ ಬಹುಪರಾಕ್

ಇದನ್ನೂ ಓದಿ: 8 ಫ್ರಾಂಚೈಸಿ ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ

ಇದನ್ನೂ ಓದಿ: IPL 20222: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

Follow Us
ಮೈತ್ರಿ ಕುಸ್ತಿ? ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು
ಮೈತ್ರಿ ಕುಸ್ತಿ? ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು
ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್
ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್​​ ಮಾಡಿ ಪ್ರತಿಭಟನೆ
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್​​ ಮಾಡಿ ಪ್ರತಿಭಟನೆ
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ