India vs New Zealand Highlights: ಕಿವೀಸ್ ವಿರುದ್ಧ ಗೆದ್ದು ಬೀಗಿದ ಭಾರತ
India vs New Zealand Champions Trophy 2025 Highlights in Kannada: ಸ್ಪಿನ್ನರ್ ವರುಣ್ ಚಕ್ರವರ್ತಿ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಭಾರತ ತಂಡವು 44 ರನ್‌ಗಳಿಂದ ಗೆದ್ದುಕೊಂಡಿತು. ಈ ಮೂಲಕ ಗುಂಪು ಹಂತದಲ್ಲಿ ಭಾರತದ ಅಜೇಯ ಓಟ ಮುಂದುವರೆದಿದ್ದು, ತಂಡವು ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಗುಂಪು ಎ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂದು, ಗ್ರೂಪ್-ಎ ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಕೊನೆಯ ಲೀಗ್ ಪಂದ್ಯ ನಡೆಯಿತು. ಈ ಪಂದ್ಯವನ್ನು ಸ್ಪಿನ್ನರ್ ವರುಣ್ ಚಕ್ರವರ್ತಿ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಭಾರತ ತಂಡವು 44 ರನ್‌ಗಳಿಂದ ಗೆದ್ದುಕೊಂಡಿತು. ಈ ಮೂಲಕ ಗುಂಪು ಹಂತದಲ್ಲಿ ಭಾರತದ ಅಜೇಯ ಓಟ ಮುಂದುವರೆದಿದ್ದು, ತಂಡವು ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಗುಂಪು ಎ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಇದೀಗ ಭಾರತ ತಂಡವು ಮಾರ್ಚ್ 4 ರಂದು ದುಬೈನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ತಂಡ ಬಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ.
LIVE NEWS & UPDATES
-
Ind vs NZ Live Score: ಭಾರತಕ್ಕೆ ಸುಲಭ ಜಯ
2025 ರ ಚಾಂಪಿಯನ್ಸ್ ಟ್ರೋಫಿಯ 12 ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು 44 ರನ್‌ಗಳಿಂದ ಸೋಲಿಸಿತು. ಭಾರತ ನೀಡಿದ 250 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು 205 ರನ್‌ಗಳಿಗೆ ಆಲೌಟ್ ಆಯಿತು.
-
Ind vs NZ Live Score: 9ನೇ ವಿಕೆಟ್
ವರುಣ್ ಚಕ್ರವರ್ತಿ ತಮ್ಮ 5 ನೇ ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್‌ನ ಸೋಲನ್ನು ಖಚಿತಪಡಿಸಿದ್ದಾರೆ. ಇದರೊಂದಿಗೆ ಕಿವೀಸ್ ತಂಡ ಈಗ 9 ವಿಕೆಟ್‌ಗಳನ್ನು ಕಳೆದುಕೊಂಡಿದೆ.
-
-
Ind vs NZ Live Score: 42 ಓವರ್ ಪೂರ್ಣ
42 ಓವರ್‌ಗಳ ಅಂತ್ಯಕ್ಕೆ ನ್ಯೂಜಿಲೆಂಡ್ ತಂಡ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿದೆ. ಈಗ ಗೆಲ್ಲಲು 48 ಎಸೆತಗಳಲ್ಲಿ 74 ರನ್‌ಗಳು ಬೇಕಾಗಿವೆ.
-
Ind vs NZ Live Score: 7ನೇ ವಿಕೆಟ್
ಕೇನ್ ವಿಲಿಯಮ್ಸನ್ 81 ರನ್ ಗಳಿಸಿ ಔಟಾದರು. ಅಕ್ಷರ್ ಪಟೇಲ್ ಅವರನ್ನು ಬೇಟೆಯಾಡಿದರು. ಇದರೊಂದಿಗೆ ನ್ಯೂಜಿಲೆಂಡ್ ತಂಡ 7 ವಿಕೆಟ್‌ಗಳನ್ನು ಕಳೆದುಕೊಂಡಿದೆ.
-
Ind vs NZ Live Score: 150 ರನ್ ದಾಟಿದ ನ್ಯೂಜಿಲೆಂಡ್
ನ್ಯೂಜಿಲೆಂಡ್ ತಂಡ 150 ರನ್‌ಗಳ ಗಡಿ ದಾಟಿದೆ. 36 ಓವರ್‌ಗಳ ಅಂತ್ಯಕ್ಕೆ ಕಿವೀಸ್ ತಂಡ 5 ವಿಕೆಟ್‌ಗಳ ನಷ್ಟಕ್ಕೆ 152 ರನ್ ಗಳಿಸಿದೆ.
-
-
Ind vs NZ Live Score: 33 ಓವರ್‌ಗಳ ನಂತರ 137/4
33 ಓವರ್‌ಗಳ ಆಟ ಮುಗಿದಿದೆ. ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿದೆ.
-
Ind vs NZ Live Score: ನ್ಯೂಜಿಲೆಂಡ್‌ಗೆ ನಾಲ್ಕನೇ ಹೊಡೆತ
ನ್ಯೂಜಿಲೆಂಡ್ ತನ್ನ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ. ಟಾಮ್ ಲ್ಯಾಥಮ್ 14 ರನ್ ಗಳಿಸಿ ಔಟಾದರು. ರವೀಂದ್ರ ಜಡೇಜಾ ಅವರ ವಿಕೆಟ್ ಪಡೆದರು.
-
Ind vs NZ Live Score: ಮಿಚೆಲ್ ಔಟ್
ಕುಲ್ದೀಪ್ ಯಾದವ್ ನ್ಯೂಜಿಲೆಂಡ್‌ಗೆ ಮೂರನೇ ಹೊಡೆತ ನೀಡಿದರು. ಡ್ಯಾರಿಲ್ ಮಿಚೆಲ್ 17 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಟಾಮ್ ಲ್ಯಾಥಮ್ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದಾರೆ. ಅವರಿಗೆ ಬೆಂಬಲವಾಗಿ ಕೇನ್ ವಿಲಿಯಮ್ಸನ್ ಕ್ರೀಸ್‌ನಲ್ಲಿದ್ದಾರೆ.
-
Ind vs NZ Live Score: 22 ಓವರ್‌ಗಳ ನಂತರ 85/2
22 ಓವರ್‌ಗಳ ಆಟ ಮುಗಿದಿದೆ. ನ್ಯೂಜಿಲೆಂಡ್ 2 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿದೆ. ಕೇನ್ ವಿಲಿಯಮ್ಸನ್ 40 ರನ್ ಮತ್ತು ಡ್ಯಾರಿಲ್ ಮಿಚೆಲ್ 15 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
-
Ind vs NZ Live Score: 50 ರನ್ ದಾಟಿದ ನ್ಯೂಜಿಲೆಂಡ್
ನ್ಯೂಜಿಲೆಂಡ್ ತಂಡ 14 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿದ್ದು, 50 ರನ್‌ಗಳ ಗಡಿ ದಾಟಿದೆ.
-
Ind vs NZ Live Score: ಎರಡನೇ ವಿಕೆಟ್
ನ್ಯೂಜಿಲೆಂಡ್ ತನ್ನ ಎರಡನೇ ವಿಕೆಟ್ ಕಳೆದುಕೊಂಡಿದೆ. ವಿಲ್ ಯಂಗ್ 22 ರನ್ ಗಳಿಸಿ ಔಟಾದರು. ವರುಣ್ ಚಕ್ರವರ್ತಿ ಅವರ ವಿಕೆಟ್ ಪಡೆದು ಕೇನ್ ವಿಲಿಯಮ್ಸನ್ ಜೊತೆಗಿನ 32 ರನ್‌ಗಳ ಪಾಲುದಾರಿಕೆಯನ್ನು ಮುರಿದರು.
-
Ind vs NZ Live Score: ಪವರ್‌ಪ್ಲೇ ಅಂತ್ಯ
10 ಓವರ್‌ಗಳ ಮೊದಲ ಪವರ್‌ಪ್ಲೇ ಮುಗಿದಿದೆ. ನ್ಯೂಜಿಲೆಂಡ್ ಸ್ಥಿರ ಆರಂಭವನ್ನು ನೀಡಿದ್ದು, 1 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿದೆ. ಕೇನ್ ವಿಲಿಯಮ್ಸನ್ 16 ರನ್ ಮತ್ತು ವಿಲ್ ಯಂಗ್ 20 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
-
Ind vs NZ Live Score: ರಚಿನ್ ಔಟ್
ರಚಿನ್ ರವೀಂದ್ರ ಅವರನ್ನು ಔಟ್ ಮಾಡುವ ಮೂಲಕ ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್‌ಗೆ ಮೊದಲ ಹೊಡೆತ ನೀಡಿದರು. ರಚಿನ್ 12 ಎಸೆತಗಳಲ್ಲಿ ಆರು ರನ್ ಗಳಿಸಿ ಔಟಾದರು. ನಾಲ್ಕು ಓವರ್‌ಗಳು ಮುಗಿಯುವ ವೇಳೆಗೆ ನ್ಯೂಜಿಲೆಂಡ್ ಒಂದು ವಿಕೆಟ್ ಕಳೆದುಕೊಂಡು 17 ರನ್ ಗಳಿಸಿದೆ.
-
Ind vs NZ Live Score: 250 ರನ್‌ಗಳ ಗುರಿ
ಮೊದಲ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಮೊಹಮ್ಮದ್ ಶಮಿ ಕೂಡ ಔಟಾದರು. ಮ್ಯಾಟ್ ಹೆನ್ರಿ ಅದ್ಭುತ ಬೌಲಿಂಗ್ ಮಾಡಿ 42 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದರು. ಇದರೊಂದಿಗೆ ಟೀಮ್ ಇಂಡಿಯಾದ ಇನ್ನಿಂಗ್ಸ್ 249 ರನ್‌ಗಳಿಗೆ ಅಂತ್ಯಗೊಂಡಿತು. ಇದರರ್ಥ ಕಿವೀಸ್ ತಂಡ ಗೆಲ್ಲಲು 250 ರನ್ ಗಳಿಸಬೇಕಾಗುತ್ತದೆ.
-
Ind vs NZ Live Score: ಪಾಂಡ್ಯ ಔಟ್
ಟೀಮ್ ಇಂಡಿಯಾದ 8ನೇ ವಿಕೆಟ್ ಪತನವಾಗಿದೆ. ಹಾರ್ದಿಕ್ ಪಾಂಡ್ಯ 49 ನೇ ಓವರ್‌ನಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸುವ ಮೂಲಕ ಈ ಓವರ್‌ನಲ್ಲಿ 15 ರನ್ ಗಳಿಸಿದರು. ಆದರೆ 50ನೇ ಓವರ್‌ನಲ್ಲಿ ಬಿಗ್ ಶಾಟ್ ಆಡುವ ಯತ್ನದಲ್ಲಿ ಹಾರ್ದಿಕ್ ಕ್ಯಾಚಿತ್ತು ಔಟಾದರು.
-
Ind vs NZ Live Score: 7ನೇ ವಿಕೆಟ್ ಪತನ
ಟೀಮ್ ಇಂಡಿಯಾ ತನ್ನ 7ನೇ ವಿಕೆಟ್ ಕಳೆದುಕೊಂಡಿದೆ. ರವೀಂದ್ರ ಜಡೇಜಾ 16 ರನ್ ಗಳಿಸಿ ಔಟಾದರು. ಮ್ಯಾಟ್ ಹೆನ್ರಿ ಬೌಲಿಂಗ್‌ನಲ್ಲಿ ಕೇನ್ ವಿಲಿಯಮ್ಸನ್ ಅದ್ಭುತ ಕ್ಯಾಚ್ ಪಡೆದರು.
-
Ind vs NZ Live Score: 200 ರನ್ ಪೂರ್ಣ
43 ಓವರ್‌ಗಳಲ್ಲಿ ಟೀಮ್ ಇಂಡಿಯಾ 6 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿದೆ.
-
Ind vs NZ Live Score: 42 ಓವರ್ ಪೂರ್ಣ
42 ಓವರ್‌ಗಳ ಆಟ ಮುಗಿದಿದೆ. ಭಾರತ ತಂಡ 6 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿದೆ.
-
Ind vs NZ Live Score: ಆರನೇ ವಿಕೆಟ್
ಟೀಮ್ ಇಂಡಿಯಾ ಆರನೇ ವಿಕೆಟ್ ಕಳೆದುಕೊಂಡಿದೆ. ಶ್ರೇಯಸ್ ಅಯ್ಯರ್ ನಂತರ, ಕೆಎಲ್ ರಾಹುಲ್ ಕೂಡ ಪೆವಿಲಿಯನ್‌ಗೆ ಮರಳಿದ್ದಾರೆ. ಅವರು 29 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರು.
-
Ind vs NZ Live Score: 5ನೇ ವಿಕೆಟ್
ಭಾರತ ತನ್ನ 5ನೇ ವಿಕೆಟ್ ಕಳೆದುಕೊಂಡಿದೆ. ಇದರೊಂದಿಗೆ ಟೀಮ್ ಇಂಡಿಯಾದ ಅರ್ಧದಷ್ಟು ಜನರು ಪೆವಿಲಿಯನ್‌ಗೆ ಮರಳಿದ್ದಾರೆ. ಶ್ರೇಯಸ್ ಅಯ್ಯರ್ 98 ಎಸೆತಗಳಲ್ಲಿ 79 ರನ್ ಗಳಿಸಿ ಔಟಾದರು.
-
Ind vs NZ Live Score: 150 ರನ್ ದಾಟಿದ ಭಾರತ
ಟೀಮ್ ಇಂಡಿಯಾ 150 ರನ್‌ಗಳ ಗಡಿ ದಾಟಿದೆ. ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಕ್ರೀಸ್‌ನಲ್ಲಿದ್ದಾರೆ.
-
Ind vs NZ Live Score: ಅಕ್ಷರ್ ಔಟ್
ಟೀಮ್ ಇಂಡಿಯಾ ತನ್ನ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ. ಅಕ್ಷರ್ ಪಟೇಲ್ 42 ರನ್ ಗಳಿಸಿ ಔಟಾದರು. ರಚಿನ್ ರವೀಂದ್ರ ಭಾರತಕ್ಕೆ ಈ ಆಘಾತ ನೀಡಿದ್ದಾರೆ. ಇದರೊಂದಿಗೆ ಅಯ್ಯರ್ ಮತ್ತು ಅಕ್ಷರ್ ನಡುವಿನ 98 ರನ್‌ಗಳ ಪಾಲುದಾರಿಕೆ ಮುರಿದು ಬಿದ್ದಿದೆ.
-
Ind vs NZ Live Score: ಶ್ರೇಯಸ್ ಅಯ್ಯರ್ ಅರ್ಧಶತಕ
ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ಧ ಅರ್ಧಶತಕ ಗಳಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೇಯಸ್ ಅವರ ಸತತ ಎರಡನೇ ಅರ್ಧಶತಕ ಇದು. ಇದಕ್ಕೂ ಮುನ್ನ ಅವರು ಪಾಕಿಸ್ತಾನ ವಿರುದ್ಧ ಅರ್ಧಶತಕ ಗಳಿಸಿದ್ದರು. ಶ್ರೇಯಸ್ ಮತ್ತು ಅಕ್ಷರ್ ಪಟೇಲ್ ನಾಲ್ಕನೇ ವಿಕೆಟ್‌ಗೆ 50+ ರನ್‌ಗಳ ಪಾಲುದಾರಿಕೆಯನ್ನು ಪೂರ್ಣಗೊಳಿಸಿದ್ದಾರೆ.
-
Ind vs NZ Live Score: 20 ಓವರ್‌ಗಳು ಅಂತ್ಯ
ಆರಂಭಿಕ ಹಿನ್ನಡೆಗಳ ನಂತರ, ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ಭಾರತದ ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು 80 ರನ್‌ಗಳ ಗಡಿ ದಾಟಿಸಿದ್ದಾರೆ.
-
Ind vs NZ Live Score: 15 ಓವರ್‌ಗಳ ನಂತರ ಸ್ಕೋರ್ 46/3
30 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡಿರುವ ಭಾರತ ತಂಡಕ್ಕೆ ಈಗ ಉತ್ತಮ ಜೊತೆಯಾಟದ ಅಗತ್ಯವಿದೆ. ಪ್ರಸ್ತುತ ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ಕ್ರೀಸ್‌ನಲ್ಲಿದ್ದಾರೆ. 15 ಓವರ್‌ಗಳು ಮುಗಿದಿವೆ, ಭಾರತ ತಂಡದ ಸ್ಕೋರ್ 46/3 ಆಗಿದೆ.
-
Ind vs NZ Live Score: 10 ಓವರ್ ಅಂತ್ಯ
ಮೊದಲ 10 ಓವರ್‌ಗಳಲ್ಲಿ ಟೀಮ್ ಇಂಡಿಯಾ 3 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಕಿವೀಸ್ ತಂಡ ಭಾರತದ ಅಗ್ರ ಕ್ರಮಾಂಕವನ್ನು ನಾಶಪಡಿಸಿದೆ. ಶುಭಮನ್ ಗಿಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪೆವಿಲಿಯನ್‌ಗೆ ಮರಳಿದ್ದಾರೆ. ಇದರೊಂದಿಗೆ, 7 ಓವರ್‌ಗಳ ಅಂತ್ಯಕ್ಕೆ ಭಾರತ 3 ವಿಕೆಟ್‌ಗಳ ನಷ್ಟಕ್ಕೆ 37 ರನ್‌ಗಳನ್ನು ಗಳಿಸಿದೆ.
-
Ind vs NZ Live Score: ಕೊಹ್ಲಿಯೂ ಔಟ್
300ನೇ ಏಕದಿನ ಪಂದ್ಯದಲ್ಲಿ ವಿಫಲರಾದ ವಿರಾಟ್ ಕೊಹ್ಲಿ. ಇದಕ್ಕೆ ಕಾರಣ ಗ್ಲೆನ್ ಫಿಲಿಪ್ಸ್ , ಅವರು ಪಾಯಿಂಟ್‌ನಲ್ಲಿ ಅಚ್ಚರಿಯ ಕ್ಯಾಚ್ ಹಿಡಿದು ಕೊಹ್ಲಿಯನ್ನು ಪೆವಿಲಿಯನ್ಗಟ್ಟಿದರು. ಇದರಿಂದಾಗಿ ಕೊಹ್ಲಿ ಕೇವಲ 11 ರನ್ ಗಳಿಸಿ ಪೆವಿಲಿಯನ್‌ಗೆ ಮರಳಬೇಕಾಯಿತು.
-
Ind vs NZ Live Score: ರೋಹಿತ್ ಔಟ್
ಶುಭಮನ್ ಗಿಲ್ ನಂತರ, ಈಗ ಭಾರತದ ನಾಯಕ ರೋಹಿತ್ ಶರ್ಮಾ ಕೂಡ ಔಟ್ ಆಗಿದ್ದಾರೆ. ಇದರೊಂದಿಗೆ, ಟೀಮ್ ಇಂಡಿಯಾ ಪವರ್‌ಪ್ಲೇನಲ್ಲಿ ತನ್ನ ಎರಡನೇ ವಿಕೆಟ್ ಕಳೆದುಕೊಂಡಿದೆ. ಕೇವಲ 5.1 ಓವರ್‌ಗಳಲ್ಲಿ 2 ವಿಕೆಟ್‌ಗಳನ್ನು ಕಳೆದುಕೊಂಡಿರುವ ಭಾರತ ತಂಡ ಸಂಕಷ್ಟದಲ್ಲಿ ಸಿಲುಕಿರುವಂತೆ ತೋರುತ್ತಿದೆ.
-
Ind vs NZ Live Score: ಕೊಹ್ಲಿಗೆ 300ನೇ ಏಕದಿನ ಪಂದ್ಯ
ವಿರಾಟ್ ಕೊಹ್ಲಿ ತಮ್ಮ 300ನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದಾರೆ. ಈ ಐತಿಹಾಸಿಕ ಪಂದ್ಯವನ್ನು ಕೊಹ್ಲಿ ಬೌಂಡರಿಯೊಂದಿಗೆ ಆರಂಭಿಸಿದ್ದಾರೆ.
-
Ind vs NZ Live Score: ಗಿಲ್ ಔಟ್
ಮೂರನೇ ಓವರ್‌ನಲ್ಲೇ ಭಾರತ ತಂಡ ಮೊದಲ ವಿಕೆಟ್ ಕಳೆದುಕೊಂಡಿದೆ. ಉತ್ತಮ ಫಾರ್ಮ್‌ನಲ್ಲಿದ್ದ ಶುಭಮನ್ ಗಿಲ್ ಅವರನ್ನು ಮ್ಯಾಟ್ ಹೆನ್ರಿ ಎರಡು ರನ್‌ಗಳಿಗೆ ಔಟ್ ಮಾಡಿದರು. ಪ್ರಸ್ತುತ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿದ್ದಾರೆ.
-
Ind vs NZ Live Score:ರೋಹಿತ್ ಬೌಂಡರಿ
ರೋಹಿತ್ ಶರ್ಮಾ ಮೊದಲ ಓವರ್‌ನಲ್ಲಿಯೇ ಬೌಂಡರಿ ಬಾರಿಸಿದ್ದಾರೆ. ಮ್ಯಾಟ್ ಹೆನ್ರಿಯ ಕೊನೆಯ ಎಸೆತದಲ್ಲಿ ತಮ್ಮ ನೆಚ್ಚಿನ ಪುಲ್ ಶಾಟ್ ಮೂಲಕ ಬೌಂಡರಿ ಬಾರಿಸುವ ಮೂಲಕ ಆ ಓವರ್‌ನಲ್ಲಿ 6 ರನ್ ಗಳಿಸಿದರು.
-
Ind vs NZ Live Score: ನ್ಯೂಜಿಲೆಂಡ್ ತಂಡ
ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಡ್ಯಾರಿಲ್ ಮಿಚೆಲ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ವಿಲ್ ಒ’ರೂರ್ಕ್, ಗ್ಲೆನ್ ಫಿಲಿಪ್ಸ್, ರಾಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ವಿಲ್ ಯಂಗ್, ಕೈಲ್ ಜೇಮಿಸನ್.
-
Ind vs NZ Live Score: ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ.
-
Ind vs NZ Live Score: ಮೂರನೇ ಪಂದ್ಯದಲ್ಲೂ ಟಾಸ್ ಸೋತ ಭಾರತ
ಮೂರನೇ ಪಂದ್ಯದಲ್ಲೂ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಲಿದೆ. ವಾಸ್ತವವಾಗಿ ಕಳೆದೆರಡು ಪಂದ್ಯಗಳಲ್ಲಿ ಟಾಸ್ ಸೋತಿದ್ದ ಭಾರತ ಮೊದಲು ಬೌಲಿಂಗ್ ಮಾಡಿತ್ತು. ಆದರೀಗ ರೋಹಿತ್ ಬಯಸಿದಂತೆ ಮೊದಲು ಬ್ಯಾಟಿಂಗ್ ಮಾಡಲಿದ್ದಾರೆ.
Published On - Mar 02,2025 2:03 PM
