India vs Pakistan: ಸೋಲಿಗೆ ಕಾರಣವೇನು? ಕೂತು ಚರ್ಚಿಸುತ್ತೇವೆ ಎಂದ ಬಾಬರ್ ಆಝಂ

India vs Pakistan ICC T20 World Cup 2024: ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಬಾಬರ್ ಆಝಂ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಧಿಸುವಂತೆ ದಾಳಿ ಸಂಘಟಿಸಿದ ಪಾಕ್ ಬೌಲರ್​ಗಳು ಟೀಮ್ ಇಂಡಿಯಾವನ್ನು 119 ರನ್​ಗಳಿಗೆ ಆಲೌಟ್ ಮಾಡಿದರು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡ 7 ವಿಕೆಟ್ ಕಳೆದುಕೊಂಡು 20 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 113 ರನ್​ಗಳು ಮಾತ್ರ.

India vs Pakistan: ಸೋಲಿಗೆ ಕಾರಣವೇನು? ಕೂತು ಚರ್ಚಿಸುತ್ತೇವೆ ಎಂದ ಬಾಬರ್ ಆಝಂ
Babar Azam
Follow us
|

Updated on: Jun 10, 2024 | 9:53 AM

T20 World Cup 2024: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡ 7ನೇ ಬಾರಿ ಜಯ ಸಾಧಿಸಿದೆ. ನ್ಯೂಯಾರ್ಕ್​ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಬಾರಿಯ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 119 ರನ್​ ಕಲೆಹಾಕಿದರೆ, ಪಾಕಿಸ್ತಾನ್ ತಂಡ 20 ಓವರ್​ಗಳಲ್ಲಿ 113 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ ತಂಡವು 6 ರನ್​ಗಳ ರೋಚಕ ಜಯ ಸಾಧಿಸಿತು.

ಈ ಸೋಲಿನ ಬಳಿಕ ಮಾತನಾಡಿದ ಪಾಕ್ ತಂಡದ ನಾಯಕ ಬಾಬರ್ ಆಝಂ, ನಾವು ಚೆನ್ನಾಗಿ ಬೌಲಿಂಗ್ ಮಾಡಿದ್ದೇವೆ. ಬ್ಯಾಟಿಂಗ್‌ನಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್‌ಗಳನ್ನು ಕಳೆದುಕೊಂಡಿತು. ಅಲ್ಲದೆ ಹೆಚ್ಚು ಡಾಟ್ ಬಾಲ್‌ಗಳನ್ನು ಆಡಿದ್ದೆವು. ಇದು ನಮ್ಮ ರನ್​ ಗತಿ ಮೇಲೆ ಪರಿಣಾಮ ಬೀರಿತು ಎಂದಿದ್ದಾರೆ.

ನಾವು ಪವರ್​ಪ್ಲೇನಲ್ಲೇ ಉತ್ತಮ ಬ್ಯಾಟಿಂಗ್ ಮಾಡಬಹುದಾಗಿತ್ತು. ಪ್ರಮುಖ ಬ್ಯಾಟರ್​ಗಳು ಹೆಚ್ಚು ಡಾಟ್ ಬಾಲ್ ಆಡಿದರೆ, ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿಯುವವರಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ.

ಪಿಚ್​ ಕೂಡ ಬ್ಯಾಟಿಂಗ್​ಗೆ ಸಹಕಾರಿಯಾಗಿತ್ತು. ನಿಧಾನವಾಗಿದ್ದರೂ ಚೆಂಡು ಬ್ಯಾಟ್​ಗೆ ಬರುತ್ತಿದ್ದವು. ಆದರೆ ನಾವದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾದೆವು ಎಂದು ಬಾಬರ್ ಆಝಂ ಹೇಳಿದರು.

ನಾವು ಎರಡು ಪಂದ್ಯಗಳಲ್ಲಿ ಸೋತಿದ್ದೇವೆ. ಇನ್ನೆರಡು ಪಂದ್ಯಗಳಲ್ಲಿ ಗೆಲ್ಲಲೇಬೇಕು. ಯುಎಸ್​ಎ ಮತ್ತು ಭಾರತದ ವಿರುದ್ಧ ಬ್ಯಾಕ್ ಟು ಬ್ಯಾಕ್ ಸೋಲಲು ಕಾರಣವೇನು ಎಂಬುದನ್ನು ಕೂತು ಚರ್ಚಿಸುತ್ತೇವೆ ಎಂದು ಇದೇ ವೇಳೆ ಬಾಬರ್ ಆಝಂ ಹೇಳಿದರು.

ಇದೀಗ ಬಾಬರ್ ಆಝಂ ಅವರ ಹೇಳಿಕೆಯನ್ನು ಟ್ರೋಲ್ ಮಾಡಲಾಗುತ್ತಿದೆ. ಉಳಿದಿರುವುದು ಕೇವಲ 2 ಮ್ಯಾಚ್​ಗಳು ಮಾತ್ರ. ಅತ್ತ ಟೀಮ್ ಇಂಡಿಯಾ ಹಾಗೂ ಯುಎಸ್​ಎ ತಂಡಗಳು ಸೂಪರ್-8 ಹಂತಕ್ಕೇರುವ ಸಾಧ್ಯತೆಯಿದೆ. ಇದಾದ ಬಳಿಕ ಕೂತು ಚರ್ಚಿಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಪಾಕ್ ಕ್ರಿಕೆಟ್ ಪ್ರೇಮಿಗಳು ಆಕ್ರೋಶ ಹೊರಹಾಕಿದ್ದಾರೆ.

ಅಗ್ರಸ್ಥಾನಕ್ಕೇರಿದ ಭಾರತ:

ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಬಾಬರ್ ಆಝಂ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಧಿಸುವಂತೆ ದಾಳಿ ಸಂಘಟಿಸಿದ ಪಾಕ್ ಬೌಲರ್​ಗಳು ಟೀಮ್ ಇಂಡಿಯಾವನ್ನು 119 ರನ್​ಗಳಿಗೆ ಆಲೌಟ್ ಮಾಡಿದರು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡ 7 ವಿಕೆಟ್ ಕಳೆದುಕೊಂಡು 20 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 113 ರನ್​ಗಳು ಮಾತ್ರ. ಈ ಮೂಲಕ ಟೀಮ್ ಇಂಡಿಯಾ 6 ರನ್​ಗಳ ರೋಚಕ ಜಯ ಸಾಧಿಸಿದೆ.

ಇದನ್ನೂ ಓದಿ: India vs Pakistan: ಟೀಮ್ ಇಂಡಿಯಾ ಗೆಲುವಿಗೆ ಸಿರಾಜ್ ಕಾರಣ… ಹೇಗೆ ಗೊತ್ತಾ?

ಈ ಗೆಲುವಿನೊಂದಿಗೆ 4 ಅಂಕಗಳನ್ನು ಪಡೆದಿರುವ ಭಾರತ ತಂಡವು ಗ್ರೂಪ್-ಎ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇನ್ನು ಯುಎಸ್​ಎ ತಂಡ ದ್ವಿತೀಯ ಸ್ಥಾನದಲ್ಲಿದ್ದು, ಪಾಕಿಸ್ತಾನ್ ತಂಡ 4ನೇ ಸ್ಥಾನಕ್ಕೆ ಕುಸಿದಿದೆ.

ತಾಜಾ ಸುದ್ದಿ
ಮೇಕೆದಾಟು ಬಗ್ಗೆ ಕೇಂದ್ರ ಜಲಶಕ್ತಿ ಮಂತ್ರಿ ವಿ ಸೋಮಣ್ಣ ಹೇಳಿದ್ದೇನು?
ಮೇಕೆದಾಟು ಬಗ್ಗೆ ಕೇಂದ್ರ ಜಲಶಕ್ತಿ ಮಂತ್ರಿ ವಿ ಸೋಮಣ್ಣ ಹೇಳಿದ್ದೇನು?
ಕೊಲೆಗಡುಕರಿಗೆ ಶಿಕ್ಷೆ ಆಗಲಿ; MLA ಮುಂದೆ ಮೃತ ರೇಣುಕಾ ಸ್ವಾಮಿ ತಾಯಿ ಗೋಳಾಟ
ಕೊಲೆಗಡುಕರಿಗೆ ಶಿಕ್ಷೆ ಆಗಲಿ; MLA ಮುಂದೆ ಮೃತ ರೇಣುಕಾ ಸ್ವಾಮಿ ತಾಯಿ ಗೋಳಾಟ
ಲಕ್ಷ ವೃಕ್ಷ ಯೋಜನೆಗೆ ಸಿದ್ದರಾಮಯ್ಯ ಚಾಲನೆ: 5ಕೋಟಿ ಗಿಡ ಬೆಳೆಸುವ ಗುರಿ
ಲಕ್ಷ ವೃಕ್ಷ ಯೋಜನೆಗೆ ಸಿದ್ದರಾಮಯ್ಯ ಚಾಲನೆ: 5ಕೋಟಿ ಗಿಡ ಬೆಳೆಸುವ ಗುರಿ
ದರ್ಶನ್-ಪವಿತ್ರಾ ಗೌಡ ಸಂಬಂಧದ ಬಗ್ಗೆ ವಕೀಲರ ಸ್ಪಷ್ಟನೆ
ದರ್ಶನ್-ಪವಿತ್ರಾ ಗೌಡ ಸಂಬಂಧದ ಬಗ್ಗೆ ವಕೀಲರ ಸ್ಪಷ್ಟನೆ
ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್​ಡಿ ಕುಮಾರಸ್ವಾಮಿ
ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್​ಡಿ ಕುಮಾರಸ್ವಾಮಿ
ಲೋಫರ್ ಫ್ರೆಂಡ್ಸ್​ನಿಂದ ದರ್ಶನ್ ಹಾಳಾದ, ಶಿಕ್ಷಣದ ಕೊರತೆ ಇದೆ; ಅಡ್ಡಂಡ
ಲೋಫರ್ ಫ್ರೆಂಡ್ಸ್​ನಿಂದ ದರ್ಶನ್ ಹಾಳಾದ, ಶಿಕ್ಷಣದ ಕೊರತೆ ಇದೆ; ಅಡ್ಡಂಡ
‘ನಟ ದರ್ಶನ್​​​ ಗ್ರಹಗತಿ ಸರಿಯಾಗಿಲ್ಲ, ಅಪಾಯಗಳು ಬರುತ್ತಿವೆ’ ಅರ್ಚಕರ ಹೇಳಿಕ
‘ನಟ ದರ್ಶನ್​​​ ಗ್ರಹಗತಿ ಸರಿಯಾಗಿಲ್ಲ, ಅಪಾಯಗಳು ಬರುತ್ತಿವೆ’ ಅರ್ಚಕರ ಹೇಳಿಕ
ಇಟಲಿ ಶೃಂಗಸಭೆಯಲ್ಲಿ ಭಾರತದ ದೃಷ್ಟಿಕೋನ ಪ್ರಸ್ತುತಪಡಿಸಿದ ಮೋದಿ
ಇಟಲಿ ಶೃಂಗಸಭೆಯಲ್ಲಿ ಭಾರತದ ದೃಷ್ಟಿಕೋನ ಪ್ರಸ್ತುತಪಡಿಸಿದ ಮೋದಿ
‘ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡ್ತಾರೆ’; ಪೂಜೆ ಸಲ್ಲಿಸಿ ಬಾವನ ಮಾತು
‘ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡ್ತಾರೆ’; ಪೂಜೆ ಸಲ್ಲಿಸಿ ಬಾವನ ಮಾತು
ಮತ್ತೊಂದು ಸಾವಿಗೆ ಕಾರಣವಾದ ದರ್ಶನ್; ಕುಟುಂಬದವರ ಆಕ್ರೋಶ
ಮತ್ತೊಂದು ಸಾವಿಗೆ ಕಾರಣವಾದ ದರ್ಶನ್; ಕುಟುಂಬದವರ ಆಕ್ರೋಶ