India vs Pakistan: ನಾನು ಟ್ರೋಫಿ-ಪದಕಗಳನ್ನು ಹಿಂದಿರುಗಿಸುತ್ತೇನೆ, ಆದರೆ..: ಭಾರತಕ್ಕೆ ಷರತ್ತು ಹಾಕಿದ ಮೊಹ್ಸಿನ್
Mohsin Naqvi Asia Cup Trophy: 2025 ರ ಏಷ್ಯಾ ಕಪ್ ಮುಗಿದ ನಂತರವೂ ವಿವಾದ ಮುಂದುವರೆದಿದೆ. ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಭಾರತ ತಂಡ ನಿರಾಕರಿಸಿತು. ಟೂರ್ನಮೆಂಟ್‌ನಾದ್ಯಂತ ನಖ್ವಿ ಪದೇ ಪದೇ ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ್ದರು.

ಬೆಂಗಳೂರು (ಸೆ. 30): 2025 ರ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ (Indian Cricket Team) ಅದ್ಭುತ ಜಯ ಸಾಧಿಸಿದ ನಂತರ, ಟ್ರೋಫಿಯ ಬಗ್ಗೆ ದೊಡ್ಡ ವಿವಾದ ಭುಗಿಲೆದ್ದಿದೆ. ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಭಾರತ ತಂಡವು ನಿರಾಕರಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮುಖ್ಯಸ್ಥರೂ ಆಗಿರುವ ನಖ್ವಿ, ಪಂದ್ಯಾವಳಿಯ ಉದ್ದಕ್ಕೂ ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದರು. ಪರಿಣಾಮವಾಗಿ, ಭಾರತ ತಂಡವು ಇನ್ನೂ ಟ್ರೋಫಿಯನ್ನು ಸ್ವೀಕರಿಸಿಲ್ಲ. ನಖ್ವಿ ಟ್ರೋಫಿಯೊಂದಿಗೆ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಿಂದ ನಿರ್ಗಮಿಸಿದರು. ಎರಡೂ ಕಡೆಯವರು ಹಿಂದೆ ಸರಿಯಲು ಸಿದ್ಧರಿಲ್ಲದ ಕಾರಣ ಈ ವಿವಾದ ಇನ್ನೂ ಮುಂದುವರೆದಿದೆ.
ಭಾರತ ಕ್ರಿಕೆಟ್ ತಂಡವು ಫೈನಲ್‌ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಪಂದ್ಯ ಮುಗಿದ ನಂತರ, ತೆರೆಮರೆಯಲ್ಲಿ ಮತ್ತೊಂದು ಮ್ಯಾಚ್ ಪ್ರಾರಂಭವಾಯಿತು. ಟ್ರೋಫಿ ಪ್ರದಾನ ಸಮಾರಂಭವು 45 ನಿಮಿಷಗಳಷ್ಟು ವಿಳಂಬವಾಯಿತು. ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಭಾರತ ತಂಡ ನಿರಾಕರಿಸಿತು. ಟೂರ್ನಮೆಂಟ್‌ನಾದ್ಯಂತ ನಖ್ವಿ ಪದೇ ಪದೇ ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ್ದರು. ಅವರು ಆಕ್ರಮಣಕಾರಿ ಮತ್ತು ಪ್ರಚೋದನಕಾರಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಭಾರತವನ್ನು ಅಣಕಿಸಿದರು.
ಟ್ರೋಫಿ ಬೇಕೆಂದರೆ ಒಂದು ಷರತ್ತು ಹಾಕಿದ ನಖ್ವಿ
ಕ್ರಿಕ್‌ಬಜ್ ವರದಿಯ ಪ್ರಕಾರ, ಔಪಚಾರಿಕ ಸಮಾರಂಭ ನಡೆದರೆ ಮಾತ್ರ ಭಾರತೀಯ ತಂಡವು ಪದಕಗಳನ್ನು ಪಡೆಯಬಹುದು ಎಂದು ನಖ್ವಿ ಹೇಳಿದ್ದಾರೆ. ಈ ಸಮಾರಂಭದಲ್ಲಿ ಅವರು ವೈಯಕ್ತಿಕವಾಗಿ ಪ್ರಶಸ್ತಿಗಳನ್ನು ಪ್ರದಾನ ಮಾಡಲು ಬಯಸುತ್ತಾರೆ. ಆದಾಗ್ಯೂ, ಅವರ ಬೇಡಿಕೆ ಈಡೇರುವ ಸಾಧ್ಯತೆ ಕಡಿಮೆ. ಅಂತಹ ಯಾವುದೇ ಸಮಾರಂಭಕ್ಕೆ ಬಿಸಿಸಿಐ ಒಪ್ಪುವುದಿಲ್ಲ.
ಟೀಂ ಇಂಡಿಯಾ ಪ್ರತಿಭಟನೆ
ಭಾರತೀಯ ತಂಡ ಮುಂಬೈನಲ್ಲಿ ಬಿಸಿಸಿಐ ಅಧಿಕಾರಿಗಳನ್ನು ಸಂಪರ್ಕಿಸಿತು. ತರುವಾಯ, ಅವರು ನಖ್ವಿ ಅವರೊಂದಿಗೆ ಯಾವುದೇ ಸಂಪರ್ಕವನ್ನು ಇಟ್ಟುಕೊಳ್ಳದಿರಲು ನಿರ್ಧರಿಸಿದರು. ಏಷ್ಯಾ ಕಪ್ ಫೈನಲ್ ಪ್ರಾರಂಭವಾಗುವ ಮೊದಲೇ, ಭಾರತವು ನಖ್ವಿಯಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸುತ್ತದೆ ಎಂದು ಜಗತ್ತಿಗೆ ತಿಳಿದಿತ್ತು. ಏಷ್ಯಾ ಕಪ್‌ನಾದ್ಯಂತ ಭಾರತ ತಂಡವು ಪಾಕಿಸ್ತಾನಿ ಶಿಬಿರದ ಯಾರೊಂದಿಗೂ ಕೈಕುಲುಕಲಿಲ್ಲ.
ಟೀಮ್ ಇಂಡಿಯಾಗೆ ಬಿಗ್ ಶಾಕ್: ಸ್ಟಾರ್ ಆಟಗಾರ 4 ವಾರ ಕಣಕ್ಕಿಳಿಯುವಂತಿಲ್ಲ..!
ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಮತ್ತು ಕುಲದೀಪ್ ಯಾದವ್ ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರು. ಪಾಕಿಸ್ತಾನಿ ಆಟಗಾರರಿಗೆ ರನ್ನರ್-ಅಪ್ ಚೆಕ್‌ಗಳು ಮತ್ತು ಪದಕಗಳನ್ನು ಸಹ ನೀಡಲಾಯಿತು. ಆದಾಗ್ಯೂ, ಭಾರತೀಯ ತಂಡಕ್ಕೆ ಯಾವುದೇ ಟ್ರೋಫಿ ಪ್ರದಾನ ಇರಲಿಲ್ಲ. ನಖ್ವಿ ಸ್ವತಃ ಟ್ರೋಫಿಯನ್ನು ಪ್ರದಾನ ಮಾಡಲು ಬಯಸಿದ್ದರು. ಭಾರತ ಇದನ್ನು ನಿರಾಕರಿಸಿದ್ದಕ್ಕೆ, ನಂತರ ನಖ್ವಿ ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸದೆ ಕ್ರೀಡಾಂಗಣದಿಂದ ಹೊರಟಿದ್ದರು.
“ನಾನು ಕ್ರಿಕೆಟ್ ಆಡಲು ಆಡಲು ಮತ್ತು ಅದನ್ನು ಅನುಸರಿಸಲು ಪ್ರಾರಂಭಿಸಿದಾಗಿನಿಂದ, ಚಾಂಪಿಯನ್ ತಂಡಕ್ಕೆ ಟ್ರೋಫಿ ನಿರಾಕರಿಸಲ್ಪಟ್ಟದ್ದನ್ನು ನಾನು ಎಂದಿಗೂ ನೋಡಿಲ್ಲ, ಅದು ಕೂಡ ಕಷ್ಟಪಟ್ಟು ಸಂಪಾದಿಸಿದ ಟ್ರೋಫಿ. ಇದು ಸುಲಭವಾಗಿ ನಮಗೆ ಬಂದಿಲ್ಲ. ಈ ಟೂರ್ನಮೆಂಟ್ ಗೆಲುವು ಕಷ್ಟಪಟ್ಟು ಗಳಿಸಿದ್ದು,” ಎಂದು ಕಾಂಟಿನೆಂಟಲ್ ಸ್ಪರ್ಧೆಯಲ್ಲಿ ಸತತ ಏಳು ಪಂದ್ಯಗಳನ್ನು ಗೆದ್ದಿದ್ದರೂ ಅತಿದೊಡ್ಡ ಬಹುಮಾನ ನಿರಾಕರಿಸಲ್ಪಟ್ಟ ನಂತರ ಸೂರ್ಯಕುಮಾರ್ ಹೇಳಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




