India vs Pakistan: ಭಾರತ-ಪಾಕಿಸ್ತಾನ್ ಮತ್ತೆ ಮುಖಾಮುಖಿ ಯಾವಾಗ ಗೊತ್ತಾ?
India vs Pakistan Next Match: ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಇದರ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ.

Asia Cup 2022: ಈ ಬಾರಿಯ ಏಷ್ಯಾಕಪ್ನಲ್ಲಿ ಭಾರತ-ಪಾಕಿಸ್ತಾನ್ (India vs Pakistan) ತಂಡಗಳು 2 ಬಾರಿ ಮುಖಾಮುಖಿಯಾಗಿದೆ. ವಿಶೇಷ ಎಂದರೆ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್ಗಳಿಂದ ಜಯ ಸಾಧಿಸಿದರೆ, 2ನೇ ಪಂದ್ಯದಲ್ಲಿ ಪಾಕಿಸ್ತಾನ್ 5 ವಿಕೆಟ್ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ಜಯದ ವಿಷಯದಲ್ಲಿ ಸಮಬಲ ಸಾಧಿಸಿದೆ. ಹೀಗಾಗಿಯೇ ಮುಂದಿನ ಮುಖಾಮುಖಿ ಯಾವಾಗ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಸದ್ಯ ಉತ್ತರ ಏಷ್ಯಾಕಪ್ ಫೈನಲ್.
ಹೌದು, ಏಷ್ಯಾಕಪ್ ಫೈನಲ್ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗುವ ಸಾಧ್ಯತೆಯಿದೆ. ಆದರೆ ಅದಕ್ಕೂ ಮುನ್ನ ಟೀಮ್ ಇಂಡಿಯಾ ಮುಂದಿನ 2 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಬೇಕು. ಹಾಗೆಯೇ ಪಾಕಿಸ್ತಾನ್ ತಂಡ ಕೂಡ ಮುಂದಿನ ಮ್ಯಾಚ್ನಲ್ಲಿ ಜಯಭೇರಿ ಬಾರಿಸಬೇಕು. ಅಂದರೆ ಈ ಬಾರಿ ರೌಂಡ್ ರಾಬಿನ್ ಮಾದರಿಯಲ್ಲಿ ಏಷ್ಯಾಕಪ್ ಪಂದ್ಯಾವಳಿ ನಡೆಯುತ್ತಿದೆ. ಒಂದು ವೇಳೆ ಎರಡೂ ತಂಡಗಳು ಪಾಯಿಂಟ್ ಟೇಬಲ್ನಲ್ಲಿ ಮೊದಲೆರಡು ಸ್ಥಾನ ಪಡೆದರೆ ಫೈನಲ್ ಆಡಬಹುದು.
ಅಂದರೆ ಪಾಕಿಸ್ತಾನ್ ತಂಡವು ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನ ಅಥವಾ 2ನೇ ಸ್ಥಾನ ಪಡೆದರೆ ಫೈನಲ್ ಆಡಲಿದೆ. ಹಾಗೆಯೇ ಟೀಮ್ ಇಂಡಿಯಾ ಮುಂದಿನ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಯಿಂಟ್ ಟೇಬಲ್ನಲ್ಲಿ 2ನೇ ಸ್ಥಾನಕ್ಕೇರಲು ಪ್ರಯತ್ನಿಸಬೇಕು. ಹೀಗಾದರೆ ಭಾರತ-ಪಾಕ್ ಮತ್ತೆ ಫೈನಲ್ನಲ್ಲಿ ಮುಖಾಮುಖಿಯಾಗಬಹುದು.
ಇಲ್ಲದಿದ್ದರೆ ಉಭಯ ತಂಡಗಳ ಮುಖಾಮುಖಿಗೆ ಅಕ್ಟೋಬರ್ ತನಕ ಕಾಯಲೇಬೇಕು. ಏಕೆಂದರೆ ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಇದರ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ. ವಿಶೇಷ ಎಂದರೆ ಅಕ್ಟೋಬರ್ 23 ರಂದು ನಡೆಯಲಿರುವ ಪಂದ್ಯದ ಮೂಲಕ ಭಾರತ-ಪಾಕಿಸ್ತಾನ್ ತಂಡಗಳು ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಹೀಗಾಗಿ ಏಷ್ಯಾಕಪ್ ಫೈನಲ್ನಲ್ಲಿ ಮುಖಾಮುಖಿಯಾಗದಿದ್ದರೂ, ಟಿ20 ವಿಶ್ವಕಪ್ನಲ್ಲಿ ಉಭಯ ತಂಡಗಳ ಕದನಕ್ಕೆ ಡೇಟ್ ಫಿಕ್ಸ್ ಆಗಿದೆ. ಅದರಂತೆ ಸಾಂಪ್ರದಾಯಿಕ ಎದುರಾಳಿಗಳು ಸೆಪ್ಟೆಂಬರ್ 11 ರಂದು ನಡೆಯಲಿರುವ ಏಷ್ಯಾಕಪ್ ಫೈನಲ್ನಲ್ಲಿ ಮುಖಾಮುಖಿಯಾಗಲಿದೆಯಾ? ಅಥವಾ ಭಾರತ – ಪಾಕ್ ಕ್ರಿಕೆಟ್ ಕದನಕ್ಕೆ ಅಕ್ಟೋಬರ್ 23 ರವರೆಗೆ ಅಭಿಮಾನಿಗಳು ಕಾಯಬೇಕಾ ಎಂಬುದು ಈ ವಾರದೊಳಗೆ ನಿರ್ಧಾರವಾಗಲಿದೆ.




