India vs South Africa: ಭಾರತ-ಸೌತ್ ಆಫ್ರಿಕಾ ಪಂದ್ಯದಲ್ಲಿ ಹೊಸ ಕ್ರಿಕೆಟ್ ನಿಯಮ ಜಾರಿ

| Updated By: ಝಾಹಿರ್ ಯೂಸುಫ್

Updated on: Oct 01, 2022 | 2:10 PM

India vs South Africa 2nd T20: ಈ ಎಂಟು ನಿಯಮಗಳಲ್ಲಿ ಈಗಾಗಲೇ ಎಂಜಲು ನಿಷೇಧ ಹಾಗೂ ಸ್ಲೋ ಓವರ್​ ರೇಟ್ ನಿಯಮಗಳು ಜಾರಿಯಲ್ಲಿವೆ. ಇದೀಗ ಉಳಿದ 6 ನಿಯಮಗಳೊಂದಿಗೆ ಭಾರತ - ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ.

India vs South Africa: ಭಾರತ-ಸೌತ್ ಆಫ್ರಿಕಾ ಪಂದ್ಯದಲ್ಲಿ ಹೊಸ ಕ್ರಿಕೆಟ್ ನಿಯಮ ಜಾರಿ
India vs South Africa
Follow us on

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಅಕ್ಟೋಬರ್ 1 ರಿಂದ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಅದರಂತೆ ಇಂದಿನಿಂದ ನಡೆಯಲಿರುವ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಈ ನಿಯಮಗಳು ಅನ್ವಯವಾಗಲಿದೆ. ವಿಶೇಷ ಎಂದರೆ ಟೀಮ್ ಇಂಡಿಯಾ ಅಕ್ಟೋಬರ್ 2 ರಂದು ಸೌತ್ ಆಫ್ರಿಕಾ ವಿರುದ್ಧ ಸೆಣಸಲಿದ್ದು, ಈ ಪಂದ್ಯದಲ್ಲಿ ಹಲವು ಬದಲಾವಣೆ ಕಂಡು ಬರಲಿದೆ. ಹೀಗಾಗಿ ಆಟಗಾರರು ಹೊಸ ನಿಯಾವಳಿಯೊಂದಿಗೆ ಕಣಕ್ಕಿಳಿಯಬೇಕಾಗುತ್ತದೆ. ಹಾಗಿದ್ರೆ ಭಾರತ-ಸೌತ್ ಆಫ್ರಿಕಾ ನಡುವಣ ಪಂದ್ಯದ ವೇಳೆ ಜಾರಿಯಾಗುವ ಐಸಿಸಿಯ ಹೊಸ ನಿಯಮಗಳೇನು ಎಂದು ನೋಡೋಣ…

  1. ಸ್ಟ್ರೈಕರ್ ನಿಯಮ: ಐಸಿಸಿಯ ಹೊಸ ನಿಯಮಗಳ ಪ್ರಕಾರ ಕ್ಯಾಚ್ ಔಟ್ ಆದಾಗ ಹೊಸ ಬ್ಯಾಟ್ಸ್​ಮನ್ ಸ್ಟ್ರೈಕ್ ತೆಗೆದುಕೊಳ್ಳಬೇಕಾಗುತ್ತದೆ. ಈ ಹಿಂದೆ ಬ್ಯಾಟ್ಸ್‌ಮನ್‌ ಕ್ಯಾಚ್‌ ಔಟಾಗುವಾಗ ನಾನ್‌ಸ್ಟ್ರೈಕರ್‌ ಬ್ಯಾಟ್ಸ್‌ಮನ್‌ ಅರ್ಧ ಪಿಚ್​ ಅನ್ನು ದಾಟಿದ್ದರೆ, ಆತನಿಗೆ ಸ್ಟ್ರೈಕ್ ತೆಗೆದುಕೊಳ್ಳುವ ಅವಕಾಶವಿತ್ತು. ಆದರೀಗ ಕ್ಯಾಚ್ ಔಟ್ ಆದರೆ ಹೊಸ ಬ್ಯಾಟ್ಸ್​ಮನ್​ ಬಂದು ಚೆಂಡನ್ನು ಎದುರಿಸಬೇಕಾಗುತ್ತದೆ. ಅಂದರೆ ಹೊಸ ಬ್ಯಾಟ್ಸ್​ಮನ್​​ ನೇರವಾಗಿ ಬಂದು ಸ್ಟ್ರೈಕ್ ತೆಗೆದುಕೊಳ್ಳಬೇಕು.
  2. ಎಂಜಲು ಬಳಕೆ ನಿಷೇಧ: ಕೊರೋನಾ ಹಿನ್ನೆಲೆಯಲ್ಲಿ ಐಸಿಸಿ ಕಳೆದ ಎರಡು ವರ್ಷಗಳಿಂದ ಚೆಂಡಿನ ಮೇಲೆ ಎಂಜಲನ್ನು ಬಳಸುವುದನ್ನು ನಿಷೇಧಿಸಿತ್ತು. ಇದೀಗ ಶಾಶ್ವತವಾಗಿ ಚೆಂಡಿನ ಮೇಲೆ ಎಂಜಲು ಬಳಕೆಯನ್ನು ನಿಷೇಧಿಸಲಾಗಿದೆ. ಅಂದರೆ ಮುಂದಿನ ನಿಯಮ ಜಾರಿಯವರೆಗೆ ಯಾವುದೇ ಬೌಲರ್ ಚೆಂಡಿನ ಮೇಲೆ ಎಂಜಲನ್ನು ಅಥವಾ ಬಾಯಿಯ ಲಾಲಾರಸವನ್ನು ಬಳಸುವಂತಿಲ್ಲ.
  3. ಕೇವಲ 2 ನಿಮಿಷ ಸಮಯವಕಾಶ: ಒಬ್ಬರು ಔಟಾದರೆ, ಅಥವಾ ಬ್ಯಾಟಿಂಗ್​ಗೆ ಸಿದ್ಧವಾಗಬೇಕಿದ್ದರೆ ಇನ್ನು ಕೇವಲ 2 ನಿಮಿಷಗಳ ಅವಕಾಶ ಮಾತ್ರ ನೀಡಲಾಗುತ್ತದೆ. ಅಂದರೆ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್​​ಗಳು ಚೆಂಡನ್ನು ಎದುರಿಸಲು ಅಥವಾ ಮೈದಾನಕ್ಕಿಳಿಯಲು ಹೆಚ್ಚುವರಿ ಸಮಯ ತೆಗೆದುಕೊಳ್ಳುತ್ತಿದ್ದರು. ಇದೀಗ ಇದಕ್ಕೂ ಸಮಯವಕಾಶ ನಿಗದಿ ಮಾಡಲಾಗಿದೆ. ಅದರಂತೆ ಬ್ಯಾಟ್ಸ್​ಮನ್​ಗಳು ಕೇವಲ 2 ನಿಮಿಷಗಳಲ್ಲಿ ಬ್ಯಾಟ್ ಮಾಡಲು ಸಿದ್ಧರಾಗಿರಬೇಕು. ಇನ್ನು ಟಿ20 ಕ್ರಿಕೆಟ್​ನಲ್ಲಿ ಈ ಸಮಯವಕಾಶ ಕೇವಲ 90 ಸೆಕೆಂಡ್​ಗಳು ಮಾತ್ರ. ಅಂದರೆ 90 ಸೆಕೆಂಡ್​ಗಳಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧರಾಗಿರಬೇಕಾಗುತ್ತದೆ. ಒಂದು ವೇಳೆ ಈ ಸಮಯವಕಾಶದಲ್ಲಿ ಚೆಂಡನ್ನು ಎದುರಿಸಲು ಸಿದ್ಧವಾಗಿರದಿದ್ದರೆ, ಬ್ಯಾಟ್ಸ್​ಮನ್​ನನ್ನು ಔಟ್ ಎಂದು ಪರಿಗಣಿಸಬಹುದು.
  4. ಫೀಲ್ಡರ್​ ಚಲನಾ ನಿಮಯ: ಬೌಲರ್ ರನ್-ಅಪ್ ಸಮಯದಲ್ಲಿ ಯಾವುದೇ ಫೀಲ್ಡರ್​ ಉದ್ದೇಶಪೂರ್ವಕವಾಗಿ ತನ್ನ ಸ್ಥಳದಿಂದ ಚಲಿಸಿದರೆ, ಅಂಪೈರ್ ಆ ತಂಡಕ್ಕೆ ಐದು ರನ್​ ದಂಡವನ್ನು ವಿಧಿಸಲಿದ್ದಾರೆ. ಅಂದರೆ ಬೌಲರ್ ರನ್​ ಅಪ್ ವೇಳೆ ಫೀಲ್ಡರ್ ಉದ್ದೇಶಪೂರ್ವಕವಾಗಿ ಅತ್ತಿತ್ತ ಚಲಿಸಿದರೆ ಎದುರಾಳಿ ತಂಡಕ್ಕೆ 5 ರನ್​ಗಳು ಸಿಗಲಿದೆ. ಇದಕ್ಕೂ ಮುನ್ನ ಈ ರೀತಿಯಾದರೆ ಡೆಡ್ ಬಾಲ್ ಎಂದು ಕರೆಯಲಾಗುತ್ತಿತ್ತು. ಇದೀಗ ಈ ನಿಮಯವನ್ನು ಬದಲಿಸಿ ದಂಡ ವಿಧಿಸಲು ನಿರ್ಧರಿಸಲಾಗಿದೆ.
  5. ಬ್ಯಾಟ್ಸ್​ಮನ್​ ಪಿಚ್​ನಲ್ಲಿಯೇ ಇರಬೇಕು: ಐಸಿಸಿಯ ಹೊಸ ನಿಯಮದ ಪ್ರಕಾರ ಬ್ಯಾಟ್ಸ್‌ಮನ್‌ ಪಿಚ್‌ನ ಒಳಗೆ ಇರುವಾಗಲೇ ಶಾಟ್‌ ಬಾರಿಸಬೇಕು. ಅಂದರೆ ಬ್ಯಾಟಿಂಗ್ ಮಾಡುವಾಗ ದೇಹವು ಪಿಚ್‌ನಿಂದ ಹೊರಗೆ ಹೋದರೆ, ಅದನ್ನು ರನ್ ಎಂದು ಪರಿಗಣಿಸಲಾಗುವುದಿಲ್ಲ. ಆ ಚೆಂಡನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತದೆ. ಅಂದರೆ ಪಿಚ್​ನಿಂದ ಹೊರಹೋದ ಬಾಲ್​ ಅನ್ನು ಹೋಗಿ ಬಾರಿಸಲು ಇನ್ನು ಅವಕಾಶ ಇರುವುದಿಲ್ಲ. ಈ ಹಿಂದೆ ಬೌಲರ್​ ಕೈಯಿಂದ ಜಾರಿದ ಚೆಂಡನ್ನು ಓಡಿ ಹೋಗಿ ಬಾರಿಸಲು ಅವಕಾಶವಿತ್ತು. ಹೀಗೆ ಪಿಚ್​ ಹೊರಗೆ ಹೋದ ಚೆಂಡುಗಳಿಗೆ ಸಿಕ್ಸ್​-ಫೋರ್​ಗಳನ್ನು ಬಾರಿಸುತ್ತಿದ್ದರು. ಆದರೆ ಇನ್ಮುಂದೆ ಅಂತಹ ಶಾಟ್​ಗಳಿಗೆ ಅವಕಾಶವಿಲ್ಲ.
  6. ಮಂಕಡ್ ರನೌಟ್ ನಿಯಮ: ಐಸಿಸಿಯ ನೂತನ ನಿಯಮದ ಪ್ರಕಾರ, ಇನ್ಮುಂದೆ ಮಂಕಡ್ ರನೌಟ್ ಇರುವುದಿಲ್ಲ. ಬದಲಾಗಿ ಆ ಔಟ್ ಅನ್ನು ಕೂಡ ರನೌಟ್ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಚೆಂಡೆಸೆಯುವ ಮುನ್ನ ಇನ್ಮುಂದೆ ಬ್ಯಾಟ್ಸ್​ಮನ್ ಕ್ರೀಸ್​ ಬಿಟ್ಟರೆ ಬೌಲರ್​ಗೆ ರನೌಟ್ ಮಾಡಬಹುದು.
  7. ಸ್ಟ್ರೈಕರ್ ರನೌಟ್ ನಿಯಮ: ಬೌಲರ್​ ಚೆಂಡೆಸೆಯುವ ಮುನ್ನ ಸ್ಟ್ರೈಕರ್​ ಕ್ರೀಸ್ ಬಿಟ್ಟು ಮುನ್ನುಗ್ಗಿ ಬಂದಿದ್ದರೆ ಆತನನ್ನು ನೇರವಾಗಿ ರನೌಟ್ ಮಾಡುವ ಅವಕಾಶ ಬೌಲರ್​ಗೆ ಇರುವುದಿಲ್ಲ. ಅಂದರೆ ಬೌಲಿಂಗ್ ಮಾಡುವ ಮೊದಲು ಬ್ಯಾಟ್ಸ್​ಮನ್ ಕ್ರೀಸ್ ಬಿಟ್ಟು ಬಂದು ಮುಂದೆ ನಿಂತು ಚೆಂಡನ್ನು ಎದುರಿಸಲು ಸಿದ್ಧನಾಗಿದ್ದರೆ, ಬೌಲಿಂಗ್ ಮಾಡದೇ ನೇರವಾಗಿ ಚೆಂಡನ್ನು ವಿಕೆಟ್​ಗೆ ಎಸೆದು ಅಥವಾ ಕೀಪರ್​ಗೆ ಎಸೆದು ರನೌಟ್ ಮಾಡುವ ಅವಕಾಶ ಇರುವುದಿಲ್ಲ. ಬದಲಾಗಿ ಅಂತಹ ಸಮಯದಲ್ಲಿ ಚೆಂಡನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತದೆ.
  8. ಸ್ಲೋ ಓವರ್​ ರೇಟ್ ನಿಯಮ: ಐಸಿಸಿಯ ಹೊಸ ನಿಯಮದ ಪ್ರಕಾರ ಒಂದು ತಂಡವು ನಿಗದಿತ ಸಮಯದಲ್ಲಿ ಓವರ್ ಮುಗಿಸಬೇಕು. ಒಂದು ವೇಳೆ ತಡವಾದರೆ ಉಳಿದ ಓವರ್​ಗಳ ವೇಳೆ ಫೀಲ್ಡಿಂಗ್ ತಂಡವು ಬೌಂಡರಿ ಲೈನ್​ನಿಂದ ಒಬ್ಬ ​ಆಟಗಾರನನ್ನು 30 ಯಾರ್ಡ್​ ಸರ್ಕಲ್​ನಲ್ಲಿ ನಿಲ್ಲಿಸಬೇಕಾಗುತ್ತದೆ.

ಈ ಎಂಟು ನಿಯಮಗಳಲ್ಲಿ ಈಗಾಗಲೇ ಎಂಜಲು ನಿಷೇಧ ಹಾಗೂ ಸ್ಲೋ ಓವರ್​ ರೇಟ್ ನಿಯಮಗಳು ಜಾರಿಯಲ್ಲಿವೆ. ಇದೀಗ ಉಳಿದ 6 ನಿಯಮಗಳೊಂದಿಗೆ ಭಾರತ – ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಈ ಹೊಸ ನಿಯಮಗಳನ್ನು ಉಭಯ ತಂಡಗಳು ಹೇಗೆ ಬಳಸಿಕೊಳ್ಳಲಿದ್ದಾರೆ ಕಾದು ನೋಡಬೇಕಿದೆ.

 

ಇದನ್ನೂ ಓದಿ
2007ರ ಟಿ20 ವಿಶ್ವಕಪ್ ಫೈನಲ್‌ ಪಂದ್ಯದ ಹೀರೋಗಳು ಈಗ ಏನ್ಮಾಡ್ತಿದ್ದಾರೆ ಗೊತ್ತಾ?
Team India New Jersey: 25 ಕ್ಕೂ ಹೆಚ್ಚು ಬಾರಿ ಜೆರ್ಸಿ ಬದಲಿಸಿದ ಟೀಮ್ ಇಂಡಿಯಾ: ಇಲ್ಲಿದೆ ಫೋಟೋಸ್
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್