IND vs SA 2nd T20 Highlights: ರಣರೋಚಕ ಪಂದ್ಯದಲ್ಲಿ ಸೋತ ಟೀಂ ಇಂಡಿಯಾ

ಪೃಥ್ವಿಶಂಕರ
|

Updated on:Nov 10, 2024 | 11:21 PM

India vs South Africa 2nd T20I Highlights in kannada: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಟಿ20 ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ 3 ವಿಕೆಟ್​ಗಳ ಗೆಲುವು ಸಾಧಿಸಿದೆ. ಆಫ್ರಿಕಾ ಪರ ಅದ್ಭುತ ಇನ್ನಿಂಗ್ಸ್ ಆಡಿದ ಸ್ಟಬ್ಸ್ ಗೆಲುವಿನ ರೂವಾರಿ ಎನಿಸಿಕೊಂಡರು. ಇದರೊಂದಿಗೆ ಉಭಯ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಟಿ20 ಸರಣಿ 1-1ರಿಂದ ಸಮಬಲಗೊಂಡಿದೆ.

IND vs SA 2nd T20 Highlights: ರಣರೋಚಕ ಪಂದ್ಯದಲ್ಲಿ ಸೋತ ಟೀಂ ಇಂಡಿಯಾ
ಭಾರತ- ದಕ್ಷಿಣ ಆಫ್ರಿಕಾ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಟಿ20 ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ 3 ವಿಕೆಟ್​ಗಳ ಗೆಲುವು ಸಾಧಿಸಿದೆ. ಆಫ್ರಿಕಾ ಪರ ಅದ್ಭುತ ಇನ್ನಿಂಗ್ಸ್ ಆಡಿದ ಸ್ಟಬ್ಸ್ ಗೆಲುವಿನ ರೂವಾರಿ ಎನಿಸಿಕೊಂಡರು. ಇದರೊಂದಿಗೆ ಉಭಯ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಟಿ20 ಸರಣಿ 1-1ರಿಂದ ಸಮಬಲಗೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ ಆರು ವಿಕೆಟ್‌ಗೆ 124 ರನ್ ಗಳಿಸಿತು. ಪ್ರತ್ಯುತ್ತರವಾಗಿ ಗುರಿ ಬೆನ್ನಟ್ಟಿದ ಆಫ್ರಿಕಾ ಪರ ಸ್ಟಬ್ಸ್ 41 ಎಸೆತಗಳಲ್ಲಿ ಏಳು ಬೌಂಡರಿಗಳ ನೆರವಿನಿಂದ 47 ರನ್​ಗಳ ಅಜೇಯ ಇನ್ನಿಂಗ್ಸ್‌ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಭಾರತದ ಪರ ಸ್ಪಿನ್ನರ್ ವರುಣ್ ಚಕ್ರವರ್ತಿ ನಾಲ್ಕು ಓವರ್‌ಗಳಲ್ಲಿ 17 ರನ್ ನೀಡಿ ಐದು ವಿಕೆಟ್ ಕಬಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸಿದರಾದರೂ ಸ್ಟಬ್ಸ್ ಅವರ ಇನ್ನಿಂಗ್ಸ್ ಭಾರತಕ್ಕೆ ಗೆಲುವು ದಕ್ಕಲು ಅವಕಾಶ ಮಾಡಿಕೊಡಲಿಲ್ಲ.

LIVE NEWS & UPDATES

The liveblog has ended.
  • 10 Nov 2024 11:16 PM (IST)

    IND vs SA 2nd T20 Live Score: ಗೆದ್ದ ಆಫ್ರಿಕಾ

    ಟ್ರಿಸ್ಟಾನ್ ಸ್ಟಬ್ಸ್ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ ನೆರವಾದರು. ಇದರೊಂದಿಗೆ ಉಭಯ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಟಿ20 ಸರಣಿ 1-1ರ ಸಮಬಲಕ್ಕೆ ತಲುಪಿದೆ.

  • 10 Nov 2024 11:14 PM (IST)

    IND vs SA 2nd T20 Live Score: 2 ಓವರ್‌ಗಳ ಆಟ ಬಾಕಿ

    ದಕ್ಷಿಣ ಆಫ್ರಿಕಾ 18 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿದೆ. ಈಗ ದಕ್ಷಿಣ ಆಫ್ರಿಕಾಕ್ಕೆ 12 ಎಸೆತಗಳಲ್ಲಿ 13 ರನ್ ಅಗತ್ಯವಿದೆ.

  • 10 Nov 2024 11:07 PM (IST)

    IND vs SA 2nd T20 Live Score: 7ನೇ ವಿಕೆಟ್

    86 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾಕ್ಕೆ ಟೀಂ ಇಂಡಿಯಾ 7ನೇ ಹೊಡೆತ ನೀಡಿದೆ. ಈ ಬಾರಿ ರವಿ ಬಿಷ್ಣೋಯ್ ಅವರು ಅಂಡಿಲೆ ಸಿಮೆಲೆನ್ ಅವರನ್ನು ವಜಾ ಮಾಡಿದ್ದಾರೆ.

  • 10 Nov 2024 11:06 PM (IST)

    IND vs SA 2nd T20 Live Score: 15 ಓವರ್‌ಗಳ ಆಟ ಪೂರ್ಣ

    ದಕ್ಷಿಣ ಆಫ್ರಿಕಾ 15 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 84 ರನ್ ಗಳಿಸಿದೆ. ಟ್ರಿಸ್ಟಾನ್ ಸ್ಟಬ್ಸ್ ಮತ್ತು ಆಂಡಿಲ್ ಸಿಮೆಲನ್ ಸದ್ಯ ಕ್ರೀಸ್‌ನಲ್ಲಿದ್ದಾರೆ.

  • 10 Nov 2024 10:34 PM (IST)

    IND vs SA 2nd T20 Live Score: ವರುಣ್​ಗೆ 4 ವಿಕೆಟ್​

    ವರುಣ್ ಚಕ್ರವರ್ತಿ ನಾಲ್ಕನೇ ವಿಕೆಟ್ ಪಡೆದಿದ್ದಾರೆ. ಅವರು ಹೆನ್ರಿಚ್ ಕ್ಲಾಸೆನ್ ಅವರನ್ನು ಔಟ್ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ಸ್ಕೋರ್ 5 ವಿಕೆಟ್ ಕಳೆದುಕೊಂಡು 55 ರನ್ ಗಳಿಸಿದೆ.

  • 10 Nov 2024 10:32 PM (IST)

    IND vs SA 2nd T20 Live Score: ಯಾನ್ಸೆನ್ ಪೆವಿಲಿಯನ್‌ಗೆ

    ಸ್ಪಿನ್ನರ್ ವರುಣ್ ಚಕ್ರವರ್ತಿ ತಮ್ಮ ಅದ್ಭುತ ಬೌಲಿಂಗ್ ಅನ್ನು ಮುಂದುವರೆಸಿದ್ದು, ಮಾರ್ಕೊ ಯಾನ್ಸನ್ ಅವರನ್ನು ಔಟ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾಕ್ಕೆ ನಾಲ್ಕನೇ ಹೊಡೆತವನ್ನು ನೀಡಿದರು.

  • 10 Nov 2024 10:15 PM (IST)

    IND vs SA 2nd T20 Live Score: ವರುಣ್​ಗೆ 2ನೇ ವಿಕೆಟ್

    ಸ್ಪಿನ್ನರ್ ವರುಣ್ ಚಕ್ರವರ್ತಿ ರೀಜಾ ಹೆಂಡ್ರಿಕ್ಸ್ ಅವರನ್ನು ಔಟ್ ಮಾಡುವ ಮೂಲಕ ಆಫ್ರಿಕಾದ ಮೂರನೇ ವಿಕೆಟ್ ಉರುಳಿಸಿದ್ದಾರೆ.

  • 10 Nov 2024 10:13 PM (IST)

    IND vs SA 2nd T20 Live Score: ಆಫ್ರಿಕಾ 2 ನೇ ವಿಕೆಟ್ ಪತನ

    33 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾಕ್ಕೆ ಟೀಂ ಇಂಡಿಯಾ ಎರಡನೇ ಹೊಡೆತ ನೀಡಿದೆ. ವರುಣ್ ಚಕ್ರವರ್ತಿ ನಾಯಕ ಏಡನ್ ಮಾರ್ಕ್ರಾಮ್ ಅವರನ್ನು ವಜಾಗೊಳಿಸಿದ್ದಾರೆ.

  • 10 Nov 2024 09:52 PM (IST)

    IND vs SA 2nd T20 Live Score: ರಿಕಲ್ಟನ್ ಔಟ್

    ದಕ್ಷಿಣ ಆಫ್ರಿಕಾ ಮೊದಲ ವಿಕೆಟ್ ಕಳೆದುಕೊಂಡಿದ್ದು, ಆರಂಭಿಕ ಆಟಗಾರ ರಿಯಾನ್ ರಿಕಲ್ಟನ್ (13) ಔಟಾಗಿದ್ದಾರೆ.

  • 10 Nov 2024 09:44 PM (IST)

    IND vs SA 2nd T20 Live Score: ಆಫ್ರಿಕಾದ ಇನ್ನಿಂಗ್ಸ್ ಆರಂಭ

    ದಕ್ಷಿಣ ಆಫ್ರಿಕಾ 125 ರನ್‌ಗಳ ಗುರಿಯನ್ನು ಬೆನ್ನಟ್ಟಲು ಆರಂಭಿಸಿದೆ. ಆರಂಭಿಕರಾದ ರಿಯಾನ್ ರಿಕಲ್ಟನ್ ಮತ್ತು ರೀಜಾ ಹೆಂಡ್ರಿಕ್ಸ್ ಜೋಡಿ ಕ್ರೀಸ್‌ನಲ್ಲಿದ್ದು, ಮೊದಲ ಓವರ್‌ನಲ್ಲಿಯೇ 7 ರನ್ ಗಳಿಸಿದರು.

  • 10 Nov 2024 09:23 PM (IST)

    IND vs SA 2nd T20 Live Score: 125 ರನ್ ಟಾರ್ಗೆಟ್

    ಭಾರತ ತಂಡದ ಇನ್ನಿಂಗ್ಸ್ ಪೂರ್ಣಗೊಂಡಿದೆ. 20 ಓವರ್‌ಗಳಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿದೆ. ತಂಡದ ಪರ ಹಾರ್ದಿಕ್ ಪಾಂಡ್ಯ 45 ಎಸೆತಗಳಲ್ಲಿ 39 ರನ್ ಗಳಿಸಿ ಅಜೇಯರಾಗಿ ಉಳಿದರೆ ಅಕ್ಷರ್ ಪಟೇಲ್ 27 ರನ್ ಗಳಿಸಿ ಇನ್ನಿಂಗ್ಸ್ ಆಡಿದರು. ತಿಲಕ್ ವರ್ಮಾ ಕೂಡ 20 ರನ್ ಕೊಡುಗೆ ನೀಡಿದರು. ಉಳಿದ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮುಟ್ಟಲು ಸಾಧ್ಯವಾಗಲಿಲ್ಲ. ದಕ್ಷಿಣ ಆಫ್ರಿಕಾ ಪರ ಮಾರ್ಕೊ ಯಾನ್ಸನ್, ಆಂಡಿಲ್ ಸಿಮೆಲೆನ್, ಜೆರಾಲ್ಡ್ ಕೊಯೆಟ್ಜಿ, ಏಡೆನ್ ಮಾರ್ಕ್ರಾಮ್ ಮತ್ತು ನ್ಕಬಯೋಮ್ಜಿ ಪೀಟರ್ ತಲಾ 1 ವಿಕೆಟ್ ಪಡೆದರು.

  • 10 Nov 2024 09:11 PM (IST)

    IND vs SA 2nd T20 Live Score: 19 ಓವರ್‌ ಪೂರ್ಣ

    ಭಾರತ ತಂಡದ ಇನಿಂಗ್ಸ್‌ನ 19 ಓವರ್‌ಗಳು ಪೂರ್ಣಗೊಂಡಿದ್ದು, ಈ ವೇಳೆ ಭಾರತ ತಂಡ 6 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದೆ. ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಸಿಂಗ್ ಕ್ರೀಸ್‌ನಲ್ಲಿ ಉಳಿದಿದ್ದಾರೆ.

  • 10 Nov 2024 09:04 PM (IST)

    IND vs SA 2nd T20 Live Score: 100 ರನ್ ಗಡಿ ದಾಟಿದ ಭಾರತ

    17 ಓವರ್‌ಗಳಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ. ಪಾಂಡ್ಯ 29 ಎಸೆತಗಳಲ್ಲಿ 19 ರನ್ ಮತ್ತು ಅರ್ಷದೀಪ್ 6 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 10 Nov 2024 08:58 PM (IST)

    IND vs SA 2nd T20 Live Score: ರಿಂಕು ಸಿಂಗ್ ಕೂಡ ಔಟ್

    ಟೀಂ ಇಂಡಿಯಾ 87 ರನ್ ಗಳಿಗೆ ಆರನೇ ವಿಕೆಟ್ ಕಳೆದುಕೊಂಡಿದೆ. ರಿಂಕು ಸಿಂಗ್ 11 ಎಸೆತಗಳಲ್ಲಿ 9 ರನ್ ಗಳಿಸಿ ನಕಬಯೋಮ್ಜಿ ಪೀಟರ್‌ಗೆ ಬಲಿಯಾದರು.

  • 10 Nov 2024 08:57 PM (IST)

    IND vs SA 2nd T20 Live Score: 14 ಓವರ್‌ಗಳ ಆಟ ಪೂರ್ಣ

    ಟೀಂ ಇಂಡಿಯಾ ಇನ್ನಿಂಗ್ಸ್‌ನ 14 ಓವರ್‌ಗಳು ಪೂರ್ಣಗೊಂಡಿವೆ. ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿದೆ. ಹಾರ್ದಿಕ್ ಪಾಂಡ್ಯ 10 ರನ್ ಹಾಗೂ ರಿಂಕು ಸಿಂಗ್ 7 ರನ್ ಗಳಿಸಿ ಆಡುತ್ತಿದ್ದಾರೆ.

  • 10 Nov 2024 08:37 PM (IST)

    IND vs SA 2nd T20 Live Score: 5ನೇ ವಿಕೆಟ್ ಪತನ

    ಟೀಂ ಇಂಡಿಯಾ 5ನೇ ವಿಕೆಟ್ ಕೂಡ ಕಳೆದುಕೊಂಡಿದೆ. ಈ ವೇಳೆ ಅಕ್ಷರ್ ಪಟೇಲ್ 21 ಎಸೆತಗಳಲ್ಲಿ 27 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದ್ದಾರೆ.

  • 10 Nov 2024 08:14 PM (IST)

    IND vs SA 2nd T20 Live Score: ಭಾರತದ 4ನೇ ವಿಕೆಟ್ ಪತನ

    ಭಾರತದ 4ನೇ ವಿಕೆಟ್ ಪತನವಾಗಿದೆ. ತಿಲಕ್ ವರ್ಮಾ ಕೂಡ 20 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದ್ದಾರೆ.

    ಭಾರತ 45/4

  • 10 Nov 2024 08:13 PM (IST)

    IND vs SA 2nd T20 Live Score: 7 ಓವರ್‌ ಪೂರ್ಣ

    7 ಓವರ್‌ಗಳಲ್ಲಿ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿದೆ. ತಿಲಕ್ ವರ್ಮಾ 18 ರನ್ ಹಾಗೂ ಅಕ್ಷರ್ ಪಟೇಲ್ 12 ರನ್ ಗಳಿಸಿ ಆಡುತ್ತಿದ್ದಾರೆ.

  • 10 Nov 2024 07:58 PM (IST)

    IND vs SA 2nd T20 Live Score: ನಾಯಕನೂ ಔಟ್

    ಆಫ್ರಿಕಾ ವಿರುದ್ಧ ಭಾರತದ ಬ್ಯಾಟ್ಸ್​ಮನ್​ಗಳು ಎರಡನೇ ಪಂದ್ಯದಲ್ಲಿ ಪೆವಿಲಿಯನ್ ಪರೇಡ್ ಆರಂಭಿಸಿದ್ದಾರೆ. ನಾಯಕ ಸೂರ್ಯ ಕೂಡ ಔಟಾಗಿದ್ದು, 4ನೇ ಓವರ್​ನಲ್ಲೇ ವಿಕೆಟ್ ಒಪ್ಪಿಸಿದ್ದಾರೆ.

    ಭಾರತ 15/3

  • 10 Nov 2024 07:42 PM (IST)

    IND vs SA 2nd T20 Live Score: ಅಭಿ ಮತ್ತೆ ಫೇಲ್

    ಅಭಿಷೇಕ್ ಶರ್ಮಾ ಮತ್ತೊಮ್ಮೆ ವೈಫಲ್ಯ ಅನುಭವಿಸಿದ್ದಾರೆ. ಬಿಗ್ ಶಾಟ್ ಆಡುವ ಯತ್ನದಲ್ಲಿ ಅಭಿ, ಕೇವಲ 4 ರನ್​ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ.

    ಭಾರತ 5/2

  • 10 Nov 2024 07:34 PM (IST)

    IND vs SA 2nd T20 Live Score: ಶೂನ್ಯಕ್ಕೆ ಸಂಜು ಔಟ್

    ಮೊದಲ ಓವರ್​ನಲ್ಲೇ ಟೀಂ ಇಂಡಿಯಾದ ಮೊದಲ ವಿಕೆಟ್ ಪತನವಾಗಿದೆ. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸಂಜು, ಈ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

  • 10 Nov 2024 07:15 PM (IST)

    IND vs SA 2nd T20 Live Score: ದಕ್ಷಿಣ ಆಫ್ರಿಕಾ ತಂಡ

    ಏಡೆನ್ ಮಾರ್ಕ್ರಾಮ್ (ನಾಯಕ), ರಿಯಾನ್ ರಿಕಲ್ಟನ್, ರೀಜಾ ಹೆಂಡ್ರಿಕ್ಸ್, ಟ್ರಿಸ್ಟಾನ್ ಸ್ಟಬ್ಸ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸನ್, ಆಂಡಿಲ್ ಸಿಮೆಲೇನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಪೀಟರ್.

  • 10 Nov 2024 07:15 PM (IST)

    IND vs SA 2nd T20 Live Score: ಭಾರತ ತಂಡ

    ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಅವೇಶ್ ಖಾನ್.

  • 10 Nov 2024 07:03 PM (IST)

    IND vs SA 2nd T20 Live Score: ಟಾಸ್ ಗೆದ್ದ ಆಫ್ರಿಕಾ

    ಟಾಸ್ ಗೆದ್ದ ಆಫ್ರಿಕಾ ಮತ್ತೊಮ್ಮೆ ಬೌಲಿಂಗ್ ಆಯ್ದುಕೊಂಡಿದೆ. ಹೀಗಾಗಿ ಮೊದಲ ಟಿ20 ಪಂದ್ಯದಂತೆ ಈ ಪಂದ್ಯದಲ್ಲೂ ಭಾರತ ಮೊದಲು ಬ್ಯಾಟಿಂಗ್ ಮಾಡಲಿದೆ.

  • 10 Nov 2024 06:40 PM (IST)

    IND vs SA 2nd T20 Live Score: ಗ್ಕೆಬರ್ಹಾದಲ್ಲಿ 2ನೇ ಪಂದ್ಯ

    ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಇಂದು ಗ್ಕೆಬರ್ಹಾದಲ್ಲಿ ನಡೆಯುತ್ತಿದೆ.

  • Published On - Nov 10,2024 6:39 PM

    Follow us