India vs South Africa, 3rd T20: ಸೌತ್ ಆಫ್ರಿಕಾ ವಿರುದ್ದ ಟೀಮ್ ಇಂಡಿಯಾಗೆ ಭರ್ಜರಿ ಜಯ
IND vs SA 2022, 3rd T20: 3ನೇ ಟಿ20 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ಸರಣಿ ಗೆಲ್ಲುವ ಆಸೆಯನ್ನು ಜೀವಂತವಿರಿಸಿಕೊಂಡಿದೆ.
ವಿಶಾಖಪಟ್ಟಣದ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ದದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸರಣಿಯನ್ನು ಜೀವಂತವಿರಿಸಿಕೊಂಡಿದೆ. ಅದರಂತೆ ಇದೀಗ ಐದು ಪಂದ್ಯಗಳ ಸರಣಿಯು 2-1 ಅಂತರದಲ್ಲಿದ್ದು, ಮುಂದಿನ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯಕವಾಗಿದೆ. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ನಾಯಕ ಬವುಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ರುತುರಾಜ್ ಗಾಯಕ್ವಾಡ್ (54) ಹಾಗೂ ಇಶಾನ್ ಕಿಶನ್ (54) ಅವರ ಅರ್ಧಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿತು.
ಈ ಸ್ಪರ್ಧಾತ್ಮಕ ಸವಾಲನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಟೀಮ್ ಇಂಡಿಯಾ ಬೌಲರ್ಗಳ ಮುಂದೆ ರನ್ಗಳಿಸಲು ಪರದಾಡಿದ ಆಫ್ರಿಕನ್ನರು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ 100 ರನ್ಗಳಿಸುವಷ್ಟರಲ್ಲಿ ಪ್ರಮುಖ 6 ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ 19.1 ಓವರ್ನಲ್ಲಿ ಸೌತ್ ಆಫ್ರಿಕಾ ತಂಡವು 131 ರನ್ಗಳಿಗೆ ಸರ್ವಪತನ ಕಾಣುವ ಮೂಲಕ 48 ರನ್ಗಳಿಂದ ಸೋಲೊಪ್ಪಿಕೊಂಡಿತು.
ಟೀಮ್ ಇಂಡಿಯಾ ಪರ 4 ಓವರ್ಗಳಲ್ಲಿ 20 ರನ್ ನೀಡಿ ಯುಜ್ವೇಂದ್ರ ಚಹಾಲ್ 3 ವಿಕೆಟ್ ಪಡೆದರೆ, ಹರ್ಷಲ್ ಪಟೇಲ್ 3.1 ಓವರ್ನಲ್ಲಿ 25 ರನ್ ನೀಡಿ 4 ವಿಕೆಟ್ ಕಬಳಿಸಿದರು. ಈ ಜಯದೊಂದಿಗೆ ಟೀಮ್ ಇಂಡಿಯಾ ಗೆಲುವಿನ ಲಯಕ್ಕೆ ಮರಳಿದೆ.
ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ XI): ತೆಂಬಾ ಬವುಮಾ (ನಾಯಕ), ರೀಜಾ ಹೆಂಡ್ರಿಕ್ಸ್, ಡ್ವೈನ್ ಪ್ರಿಟೋರಿಯಸ್, ರಾಸಿ ವಾನ್ ಡೆರ್ ಡಸ್ಸೆನ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ತಬ್ರೇಝ್ ಶಮ್ಸಿ, ಅನ್ರಿಕ್ ನೋಕಿಯಾ
ಭಾರತ (ಪ್ಲೇಯಿಂಗ್ XI): ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ನಾಯಕ), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್
LIVE NEWS & UPDATES
-
ಸೌತ್ ಆಫ್ರಿಕಾ ವಿರುದ್ದ ಗೆದ್ದು ಬೀಗಿದ ಟೀಮ್ ಇಂಡಿಯಾ
Raise your hand if you just picked up a wicket ?♂️?♂️
Live – https://t.co/mcqjkCj3Jg #INDvSA @Paytm pic.twitter.com/L0mfCxwxdk
— BCCI (@BCCI) June 14, 2022
-
ಟೀಮ್ ಇಂಡಿಯಾಗೆ 48 ರನ್ಗಳ ಭರ್ಜರಿ ಜಯ
IND 179/5 (20)
RSA 131 (19.1)
-
ಟೀಮ್ ಇಂಡಿಯಾಗೆ ಭರ್ಜರಿ ಜಯ
IND 179/5 (20)
RSA 131 (19.1)
ಶಂಸಿ ಔಟ್
ಕೊನೆಯ ಓವರ್ನ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ ಶಂಸಿ..ಸೌತ್ ಆಫ್ರಿಕಾ ಆಲೌಟ್
ಟೀಮ್ ಇಂಡಿಯಾಗೆ ಭರ್ಜರಿ ಜಯ
ಕೊನೆಯ ಓವರ್
49 ರನ್ಗಳ ಅವಶ್ಯಕತೆ
IND 179/5 (20)
RSA 131/9 (19)
ರನೌಟ್
ಅನ್ರಿಕ್ ನೋಕಿಯಾ ರನೌಟ್…ಸೌತ್ ಆಫ್ರಿಕಾ 9ನೇ ವಿಕೆಟ್ ಪತನ
RSA 131/9 (18.5)
ಪಾರ್ನೆಲ್ ಪವರ್
ಭುವಿ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಪಾರ್ನೆಲ್
RSA 130/8 (18.3)
ಮಹಾರಾಜ್ ಔಟ್
ಭುವನೇಶ್ವರ್ ಕುಮಾರ್ ಎಸೆತದಲ್ಲಿ ಡಿಕೆಗೆ ಕ್ಯಾಚ್ ನೀಡಿ ಔಟಾದ ಕೇಶವ್ ಮಹಾರಾಜ್ (11)
RSA 126/8 (18.2)
18 ಓವರ್ ಮುಕ್ತಾಯ
IND 179/5 (20)
RSA 126/7 (18.1)
ರಬಾಡ ಔಟ್
ಹರ್ಷಲ್ ಪಟೇಲ್ ಎಸೆತದಲ್ಲಿ ಚಹಾಲ್ ಅದ್ಭುತ ಕ್ಯಾಚ್…ಕಗಿಸೊ ರಬಾಡ ಔಟ್
RSA 113/7 (16.4)
16 ಓವರ್ ಮುಕ್ತಾಯ
RSA 110/6 (16)
ಕ್ಲಾಸೆನ್ ಔಟ್
ಚಹಾಲ್ ಎಸೆತದಲ್ಲಿ ಬಿಗ್ ಹಿಟ್ಗೆ ಯತ್ನ…ಅಕ್ಷರ್ ಪಟೇಲ್ಗೆ ಕ್ಯಾಚ್ ನೀಡಿ ಹೊರನಡೆದ ಕ್ಲಾಸೆನ್ (29)
RSA 100/6 (14.5)
ವೆಲ್ಕಂ ಬೌಂಡರಿ
ಭುವನೇಶ್ವರ್ ಕುಮಾರ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಕ್ಲಾಸೆನ್
RSA 95/5 (14)
ಕ್ಲಾಸೆನ್ ಕ್ಲಾಸ್
ಅಕ್ಷರ್ ಪಟೇಲ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಕ್ಲಾಸೆನ್
RSA 77/5 (11.3)
ಕಿಲ್ಲರ್ ಮಿಲ್ಲರ್ ಔಟ್
ಹರ್ಷಲ್ ಪಟೇಲ್ ಎಸೆತದಲ್ಲಿ ಫ್ರಂಟ್ ಫೀಲ್ಡಿಂಗ್ನಲ್ಲಿದ್ದ ರುತುರಾಜ್ ಗಾಯಕ್ವಾಡ್ ಉತ್ತಮ ಕ್ಯಾಚ್…ಡೇಂಜರಸ್ ಡೇವಿಡ್ ಮಿಲ್ಲರ್ (3) ಔಟ್
RSA 71/5 (11)
10 ಓವರ್ ಮುಕ್ತಾಯ
RSA 63/4 (10)
ಕ್ರೀಸ್ನಲ್ಲಿ ಡೇವಿಡ್ ಮಿಲ್ಲರ್-ಕ್ಲಾಸೆನ್ ಬ್ಯಾಟಿಂಗ್
4ನೇ ವಿಕೆಟ್ ಪತನ
ಚಹಾಲ್ ಎಸೆತದಲ್ಲಿ ಕೀಪರ್ಗೆ ಕ್ಯಾಚ್ಗೆ ನೀಡಿದ ಡ್ವೇನ್ (20)
ವಿಕೆಟ್ ಹಿಂದೆ ಅದ್ಭುತ ಕ್ಯಾಚ್ ಹಿಡಿದ ರಿಷಭ್ ಪಂತ್
RSA 57/4 (9)
ಡೇಂಜರಸ್ ಡ್ವೇನ್
ಚಹಾಲ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಡ್ವೇನ್
RSA 57/3 (8.5)
ಭರ್ಜರಿ ಸಿಕ್ಸ್
ಅಕ್ಷರ್ ಪಟೇಲ್ ಎಸೆತಕ್ಕೆ ಲೆಗ್ ಸೈಡ್ನಲ್ಲಿ ಭರ್ಜರಿ ಸಿಕ್ಸ್ ಬಾರಿಸಿದ ಡ್ವೇನ್
RSA 48/3 (7.3)
ಡೇಂಜರಸ್ ಡುಸ್ಸೆನ್ ಔಟ್
ಚಹಾಲ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದ ಡುಸ್ಸೆನ್ (1)
RSA 40/3 (6.5)
ಹೆಂಡ್ರಿಕ್ಸ್ ಔಟ್
ಹರ್ಷಲ್ ಪಟೇಲ್ ಎಸೆತದಲ್ಲಿ ಚಹಾಲ್ಗೆ ಕ್ಯಾಚ್ ನೀಡಿ ಹೊರನಡೆದ ಹೆಂಡ್ರಿಕ್ಸ್ (23)
RSA 38/2 (6)
ಹೆಂಡ್ರಿಕ್ಸ್-ಸಿಕ್ಸ್
ಹರ್ಷಲ್ ಪಟೇಲ್ ಎಸೆತಕ್ಕೆ ಲೆಗ್ಸೈಡ್ನತ್ತ ಸಿಕ್ಸ್ ಸಿಡಿಸಿದ ಹೆಂಡ್ರಿಕ್ಸ್
RSA 38/1 (5.5)
ವೆಲ್ಕಂ ಬೌಂಡರಿ
ಹರ್ಷಲ್ ಪಟೇಲ್ ಎಸೆತದಲ್ಲಿ ಬೌಂಡರಿ ಬಾರಿಸಿದ ಡ್ವೇನ್
RSA 30/1 (5.2)
ಟೀಮ್ ಇಂಡಿಯಾಗೆ ಮೊದಲ ಯಶಸ್ಸು
ಅಕ್ಷರ್ ಪಟೇಲ್ ಎಸೆತದಲ್ಲಿ ಅವೇಶ್ ಖಾನ್ ಹಿಡಿದ ಉತ್ತಮ ಕ್ಯಾಚ್ಗೆ ಬಲಿಯಾದ ತೆಂಬಾ ಬವುಮಾ (8)
RSA 23/1 (4)
3 ಓವರ್ ಮುಕ್ತಾಯ
RSA 15/0 (3)
ಕ್ರೀಸ್ನಲ್ಲಿ ಬವುಮಾ-ಹೆಂಡ್ರಿಕ್ಸ್ ಬ್ಯಾಟಿಂಗ್
ಮತ್ತೊಂದು ಬೌಂಡರಿ
ಅವೇಶ್ ಖಾನ್ ಎಸೆತದಲ್ಲಿ ಆಫ್ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಹೆಂಡ್ರಿಕ್ಸ್
RSA 10/0 (1.4)
ಮೊದಲ ಬೌಂಡರಿ
ಅವೇಶ್ ಖಾನ್ ಎಸೆತದಲ್ಲಿ ಮೊದಲ ಬೌಂಡರಿ ಬಾರಿಸಿದ ಹೆಂಡ್ರಿಕ್ಸ್
RSA 6/0 (1.1)
ಭುವಿ ಬೆಂಕಿ ಬೌಲಿಂಗ್
ಮೊದಲ ಓವರ್ನಲ್ಲಿ ಭುವನೇಶ್ವರ್ ಕುಮಾರ್ ಭರ್ಜರಿ ಬೌಲಿಂಗ್
ಕೇವಲ 2 ರನ್ ನೀಡಿದ ಭುವಿ
RSA 2/0 (1)
ಟೀಮ್ ಇಂಡಿಯಾ ಇನಿಂಗ್ಸ್ ಅಂತ್ಯ
IND 179/5 (20)
ಪವರ್ಫುಲ್ ಶಾಟ್
ಪಾರ್ನೆಲ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಪಾಂಡ್ಯ
IND 177/5 (19.4)
ಪಾಂಡ್ಯ ಪವರ್
ಪಾರ್ನೆಲ್ ಎಸೆತದಲ್ಲಿ ಭರ್ಜರಿ ಹಿಟ್…ಪಾಂಡ್ಯ ಬ್ಯಾಟ್ನಿಂದ ಫೋರ್
IND 171/5 (19.1)
ಕೊನೆಯ ಓವರ್ ಬಾಕಿ
ರಬಾಡ ಎಸೆತದ 19ನೇ ಓವರ್ನಲ್ಲಿ 11 ರನ್ ಕಲೆಹಾಕಿದ ಪಾಂಡ್ಯ-ಅಕ್ಷರ್ ಪಟೇಲ್
IND 167/5 (19)
ಡಿಕೆ ಔಟ್
ರಬಾಡ ಎಸೆತದಲ್ಲಿ ಪಾರ್ನೆಲ್ಗೆ ಕ್ಯಾಚ್ ನೀಡಿ ಔಟಾದ ದಿನೇಶ್ ಕಾರ್ತಿಕ್ (6)
IND 158/5 (18.3)
ವೆಲ್ಕಂ ಬೌಂಡರಿ
ಪಾರ್ನೆಲ್ ಎಸೆತದಲ್ಲಿ ಕವರ್ಸ್ನತ್ತ ರಾಕೆಟ್ ಶಾಟ್ ಬೌಂಡರಿ ಬಾರಿಸಿದ ಪಾಂಡ್ಯ
IND 154/4 (17.4)
17 ಓವರ್ ಮುಕ್ತಾಯ
IND 148/4 (17)
ಕ್ರೀಸ್ನಲ್ಲಿ ಹಾರ್ದಿಕ್ ಪಾಂಡ್ಯ-ದಿನೇಶ್ ಕಾರ್ತಿಕ್ ಬ್ಯಾಟಿಂಗ್
ಪಂತ್ ಔಟ್
ಡ್ವೇನ್ ಎಸೆತದಲ್ಲಿ ಬವುಮಾಗೆ ಕ್ಯಾಚ್ ನೀಡಿ ಹೊರನಡೆದ ರಿಷಭ್ ಪಂತ್ (6)
IND 143/4 (15.5)
15 ಓವರ್ ಮುಕ್ತಾಯ
IND 138/3 (15)
ಕ್ರೀಸ್ನಲ್ಲಿ ರಿಷಭ್ ಪಂತ್-ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್
ಇಶಾನ್ ಕಿಶನ್ ಔಟ್
ಡ್ವೇನ್ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದ ಇಶಾನ್ ಕಿಶನ್
35 ಎಸೆತಗಳಲ್ಲಿ 54 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಕಿಶನ್
IND 131/3 (13.4)
ಅಯ್ಯರ್ ಔಟ್
ಶಂಸಿ ಎಸೆತದಲ್ಲಿ ನೋಕಿಯಾಗೆ ಕ್ಯಾಚ್ ನೀಡಿ ಹೊರ ನಡೆದ ಶ್ರೇಯಸ್ ಅಯ್ಯರ್ (14)
IND 128/2 (13)
ಅಯ್ಯರ್ ಅಬ್ಬರ
ಶಂಸಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಶ್ರೇಯಸ್ ಅಯ್ಯರ್
IND 127/1 (12.2)
ಸಿಕ್ಸ್-ಫೋರ್
ಕೇಶವ್ ಮಹಾರಾಜ್ ಎಸೆತಗಳಲ್ಲಿ ಸಿಕ್ಸ್, ಫೋರ್ ಬಾರಿಸುವ ಮೂಲಕ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಇಶಾನ್ ಕಿಶನ್
IND 120/1 (12)
ಶ್ರೇಯಸ್ ಸಿಕ್ಸ್
ಅನ್ರಿಕ್ ನೋಕಿಯಾ ಬೌನ್ಸರ್ ಎಸೆತಕ್ಕೆ ಭರ್ಜರಿ ಸಿಕ್ಸ್ ಉತ್ತರ ನೀಡಿದ ಶ್ರೇಯಸ್ ಅಯ್ಯರ್
IND 104/1 (10.5)
ರುತುರಾಜ್ ಔಟ್
ಕೇಶವ್ ಮಹಾರಾಜ್ ಎಸೆತದಲ್ಲಿ ನೇರವಾಗಿ ಕ್ಯಾಚ್ ನೀಡಿದ ರುತುರಾಜ್ (57)
ಅದ್ಭುತ ಡೈವಿಂಗ್ ಮೂಲಕ ಕ್ಯಾಚ್ ಹಿಡಿದ ಮಹಾರಾಜ್
IND 97/1 (10)
ರಾಕಿಂಗ್ ರುತುರಾಜ್
ಕೇಶವ್ ಮಹರಾಜ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ರುತುರಾಜ್ ಗಾಯಕ್ವಾಡ್
IND 93/0 (9.1)
9 ಓವರ್ ಮುಕ್ತಾಯ
IND 89/0 (9)
ಇಶಾನ್ ಕಿಶನ್- ರುತುರಾಜ್ ಭರ್ಜರಿ ಬ್ಯಾಟಿಂಗ್
ಡೈನಾಮೊ ಹಿಟ್
ಶಂಸಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಇಶಾನ್ ಕಿಶನ್
IND 85/0 (8.4)
ರುತುರಾಜ್ ಹಾಫ್ ಸೆಂಚುರಿ
30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರುತುರಾಜ್ ಗಾಯಕ್ವಾಡ್
IND 85/0 (8.4)
ಟಾಪ್ ಎಡ್ಜ್
ಡ್ವೇನ್ ಎಸೆತದಲ್ಲಿ ರುತುರಾಜ್ ಬ್ಯಾಟ್ ಟಾಪ್ ಎಡ್ಜ್…ಹಿಂಬದಿಯತ್ತ ಫೋರ್
IND 76/0 (8)
ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್
ಶಂಸಿ ಎಸೆತದಲ್ಲಿ ಇಶಾನ್ ಕಿಶನ್ ರಿವರ್ಸ್ ಸ್ವೀಪ್…ಫೋರ್
IND 67/0 (7)
ಪವರ್ಪ್ಲೇ ಮುಕ್ತಾಯ: ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್
IND 57/0 (6)
ಭರ್ಜರಿ ಸಿಕ್ಸ್
ಅನ್ರಿಕ್ ನೋಕಿಯಾ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಸಿಕ್ಸ್ ಸಿಡಿಸಿದ ರುತುರಾಜ್
IND 57/0 (5.5)
20 ರನ್
ಅನ್ರಿಕ್ ನೋಕಿಯಾ ಒಂದೇ ಓವರ್ನಲ್ಲಿ 5 ಫೋರ್ ಬಾರಿಸಿದ ರುತುರಾಜ್ ಗಾಯಕ್ವಾಡ್
5 ಎಸೆತಗಳಲ್ಲಿ 5 ಫೋರ್, ಕೊನೆಯ ಎಸೆತದಲ್ಲಿ ಯಾವುದೇ ರನ್ ಇಲ್ಲ
IND 48/0 (5)
ಬ್ಯಾಕ್ ಟು ಬ್ಯಾಕ್ ಬೌಂಡರಿ
ನೋಕಿಯಾ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರುತುರಾಜ್
IND 36/0 (4.2)
4 ಓವರ್ ಮುಕ್ತಾಯ
IND 28/0 (4)
ಕ್ರೀಸ್ನಲ್ಲಿಇಶಾನ್ ಕಿಶನ್-ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್
ಭರ್ಜರಿ ಸಿಕ್ಸ್
ರಬಾಡ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರುತುರಾಜ್
IND 20/0 (2.4)
ರುತುರಾಜ್-ಫೋರ್
ರಬಾಡ ಎಸೆತದಲ್ಲಿ ರುತುರಾಜ್ ಬ್ಯಾಟ್ನಿಂದ ಆಕರ್ಷಕ ಬೌಂಡರಿ…ಫೋರ್
IND 14/0 (2.2)
ಮೊದಲ ಬೌಂಡರಿ
ಪಾರ್ನೆಲ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿ ಇಶಾನ್ ಕಿಶನ್
IND 8/0 (1.2)
ಸೌತ್ ಆಫ್ರಿಕಾ ಉತ್ತಮ ಆರಂಭ
ಮೊದಲ ಓವರ್ನಲ್ಲಿ ಕೇವಲ 4 ರನ್ ನೀಡಿದ ರಬಾಡ
IND 4/0 (1)
ಮೊದಲ ಓವರ್
ಮೊದಲ ಓವರ್: ಕಗಿಸೊ ರಬಾಡ
ಆರಂಭಿಕರು:
ಇಶಾನ್ ಕಿಶನ್
ರುತುರಾಜ್ ಗಾಯಕ್ವಾಡ್
ಟೀಮ್ ಇಂಡಿಯಾ: ಕಣಕ್ಕಿಳಿಯುವ ಕಲಿಗಳು
ಸೌತ್ ಆಫ್ರಿಕಾ: ಕಣಕ್ಕಿಳಿಯುವ ಕಲಿಗಳು
ಟೀಮ್ ಇಂಡಿಯಾ ಪ್ಲೇಯಿಂಗ್ 11
ಭಾರತ (ಪ್ಲೇಯಿಂಗ್ XI): ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ನಾಯಕ), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್
ಸೌತ್ ಆಫ್ರಿಕಾ ಪ್ಲೇಯಿಂಗ್ 11
ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ XI): ಟೆಂಬಾ ಬವುಮಾ (ನಾಯಕ), ರೀಜಾ ಹೆಂಡ್ರಿಕ್ಸ್, ಡ್ವೈನ್ ಪ್ರಿಟೋರಿಯಸ್, ರಾಸಿ ವಾನ್ ಡೆರ್ ಡಸ್ಸೆನ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ತಬ್ರೇಝ್ ಶಮ್ಸಿ, ಅನ್ರಿಕ್ ನೋಕಿಯಾ
ಟಾಸ್ ಗೆದ್ದ ಸೌತ್ ಆಫ್ರಿಕಾ
ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ನಾಯಕ ತೆಂಬಾ ಬವುಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ.
ಕಟಕ್ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ 4 ವಿಕೆಟ್ಗಳಿಂದ ಸೋತಿದ್ದ ಭಾರತ
South Africa win the 2nd T20I by 4 wickets and are now 2-0 up in the five match series.
Scorecard – https://t.co/pkuUUB966c #INDvSA @Paytm pic.twitter.com/fwlCeXouOM
— BCCI (@BCCI) June 12, 2022
ಟೀಮ್ ಇಂಡಿಯಾ ಗೆದ್ದರೆ ಸರಣಿ ಜೀವಂತ
Hello and welcome to Visakhapatnam for the 3rd #INDvSA T20I.#TeamIndia will look to register their first win of the series.@Paytm pic.twitter.com/QpBXLJO3NE
— BCCI (@BCCI) June 14, 2022
ಈ ಪಂದ್ಯವು ಟೀಮ್ ಇಂಡಿಯಾ (Team India) ಪಾಲಿಗೆ ನಿರ್ಣಾಯಕವಾಗಿದ್ದು, ಇದರಲ್ಲಿ ಗೆಲ್ಲುವ ಮೂಲಕ ಸರಣಿಯನ್ನು ಜೀವಂತವಿರಿಸಿಕೊಳ್ಳಬಹುದು. ಒಂದು ವೇಳೆ ಸೋತರೆ 3-0 ಅಂತರದಿಂದ ಸರಣಿ ಸೌತ್ ಆಫ್ರಿಕಾ ವಶವಾಗಲಿದೆ. ಹೀಗಾಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕಾದ ಅನಿವಾರ್ಯತೆ. ಹೀಗಾಗಿ ಇದು ಟೀಮ್ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಏಕೆಂದರೆ ಈಗಾಗಲೇ ಐದು ಪಂದ್ಯಗಳ ಸರಣಿಯಲ್ಲಿ ಸೌತ್ ಆಫ್ರಿಕಾ 2-0 ಮುನ್ನಡೆ ಹೊಂದಿದ್ದು, ಮೂರನೇ ಪಂದ್ಯದಲ್ಲಿ ಗೆದ್ದರೆ ಸರಣಿ ವಶಪಡಿಸಿಕೊಳ್ಳಬಹುದು.
Published On - Jun 14,2022 6:21 PM