India vs Sri Lanka 2nd ODI: ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ 1 ಬದಲಾವಣೆ ಸಾಧ್ಯತೆ

India vs Sri Lanka 2nd ODI, Playing XI: 2ನೇ ಏಕದಿನ ಪಂದ್ಯದಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆ ತುಂಬಾ ಕಡಿಮೆ. ಅದರಲ್ಲೂ ಕೋಚ್ ರಾಹುಲ್ ದ್ರಾವಿಡ್ ಗೆಲುವಿನ ಲಯದಲ್ಲಿರುವ ತಂಡದಲ್ಲಿ ಬದಲಾವಣೆ ತರಲು ಹಿಂದೇಟು ಹಾಕಬಹುದು.

India vs Sri Lanka 2nd ODI: ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ 1 ಬದಲಾವಣೆ ಸಾಧ್ಯತೆ
Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jan 11, 2023 | 6:30 PM

ಭಾರತ-ಶ್ರೀಲಂಕಾ ನಡುವಣ 2ನೇ ಏಕದಿನ ಪಂದ್ಯವು ನಾಳೆ (ಜ.12) ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 67 ರನ್​ಗಳಿಂದ ಭರ್ಜರಿ ಜಯ ಸಾಧಿಸಿದೆ. ಹೀಗಾಗಿ 2ನೇ ಪಂದ್ಯದಲ್ಲಿ ಮಹತ್ವದ ಬದಲಾವಣೆ ಕಂಡು ಬರುವುದಿಲ್ಲ ಎಂದೇ ಹೇಳಬಹುದು. ಇದಾಗ್ಯೂ ಬದಲಾವಣೆ ಮಾಡಲು ಮುಂದಾದರೆ ಶ್ರೇಯಸ್ ಅಯ್ಯರ್ ಅವರನ್ನು ಪ್ಲೇಯಿಂಗ್ ಇಲೆವೆನ್​ನಿಂದ ಕೈ ಬಿಡಬಹುದು. ಏಕೆಂದರೆ ಮೊದಲ ಏಕದಿನ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಶ್ರೇಯಸ್ ಅಯ್ಯರ್ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. 24 ಎಸೆತಗಳಲ್ಲಿ 28 ರನ್​ಗಳಿಸಿ ಔಟಾಗಿದ್ದರು. ಇತ್ತ ಅಯ್ಯರ್​ಗೆ ಅವಕಾಶ ನೀಡಿದ ಕಾರಣ ಇನ್​ ಫಾರ್ಮ್ ಆಟಗಾರ ಸೂರ್ಯಕುಮಾರ್ ಯಾದವ್ ಬೆಂಚ್ ಕಾಯಬೇಕಾಯಿತು. ಹೀಗಾಗಿ 2ನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಹೊರಗುಳಿದರೆ ಸೂರ್ಯಕುಮಾರ್​ಗೆ ಚಾನ್ಸ್ ಸಿಗಬಹುದು.

ಇದರ ಹೊರತಾಗಿ 2ನೇ ಏಕದಿನ ಪಂದ್ಯದಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆ ತುಂಬಾ ಕಡಿಮೆ. ಅದರಲ್ಲೂ ಕೋಚ್ ರಾಹುಲ್ ದ್ರಾವಿಡ್ ಗೆಲುವಿನ ಲಯದಲ್ಲಿರುವ ತಂಡದಲ್ಲಿ ಬದಲಾವಣೆ ತರಲು ಹಿಂದೇಟು ಹಾಕಬಹುದು. ಹೀಗಾಗಿ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದ ಬಳಗವೇ 2ನೇ ಪಂದ್ಯದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆಯನ್ನೂ ಕೂಡ ತಳ್ಳಿ ಹಾಕುವಂತಿಲ್ಲ.

ಅದರಂತೆ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿರುವ ಟೀಮ್ ಇಂಡಿಯಾ ಇದೀಗ 2ನೇ ಪಂದ್ಯಕ್ಕೆ ಸಜ್ಜಾಗಿದ್ದು, ಈ ಮೂಲಕ ಈಡನ್ ಗಾರ್ಡನ್ಸ್ ಮೈದಾನದಲ್ಲೂ ಗೆದ್ದು  ಸರಣಿ ಜಯಿಸುವ ಇರಾದೆಯಲ್ಲಿದೆ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ ಇಲೆವೆನ್​ ಹೀಗಿರಲಿದೆ.

ಇದನ್ನೂ ಓದಿ
Image
IPL 2023: ಐಪಿಎಲ್​ನಿಂದ ಹೊರಬಿದ್ದ ರಿಷಭ್ ಪಂತ್​ಗೆ ಸಿಗಲಿದೆ 21 ಕೋಟಿ ರೂ.
Image
Suryakumar Yadav: ರಾಹುಲ್ ದಾಖಲೆ ಉಡೀಸ್: ಹೊಸ ವಿಶ್ವ ದಾಖಲೆ ನಿರ್ಮಿಸಿದ ಸೂರ್ಯ
Image
Suryakumar Yadav: ತೂಫಾನ್ ಸೆಂಚುರಿ ಸಿಡಿಸಿ ಹೊಸ ದಾಖಲೆ ಬರೆದ ಸೂರ್ಯಕುಮಾರ್ ಯಾದವ್
Image
Virat Kohli – Rohit Sharma: ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲೂ ಕೊಹ್ಲಿ-ರೋಹಿತ್​ಗಿಲ್ಲ ಚಾನ್ಸ್​?
  • ರೋಹಿತ್ ಶರ್ಮಾ
  • ಶುಭ್​ಮನ್​ ಗಿಲ್
  • ವಿರಾಟ್ ಕೊಹ್ಲಿ
  • ಶ್ರೇಯಸ್ ಅಯ್ಯರ್/ಸೂರ್ಯಕುಮಾರ್ ಯಾದವ್
  • ಕೆಎಲ್ ರಾಹುಲ್
  • ಹಾರ್ದಿಕ್ ಪಾಂಡ್ಯ
  • ಯುಜ್ವೇಂದ್ರ ಚಹಾಲ್
  • ಅಕ್ಷರ್ ಪಟೇಲ್
  • ಮೊಹಮ್ಮದ್ ಶಮಿ
  • ಉಮ್ರಾನ್ ಮಲಿಕ್
  • ಮೊಹಮ್ಮದ್ ಸಿರಾಜ್

ಟೀಮ್ ಇಂಡಿಯಾ ಏಕದಿನ ತಂಡ:

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.