ಭಾರತ vs ವೆಸ್ಟ್ ಇಂಡೀಸ್ ಸರಣಿ ಯಾವಾಗ? ಇಲ್ಲಿದೆ ವೇಳಾಪಟ್ಟಿ

ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ತಾಯ್ನಾಡಿನಲ್ಲಿ ಟೀಮ್ ಇಂಡಿಯಾವನ್ನು ಎದುರಿಸಲು ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಆಗಮಿಸಿದೆ. 2022ರ ಫೆಬ್ರವರಿಯಲ್ಲಿ ಕೊನೆಯ ಬಾರಿಗೆ ಇಲ್ಲಿ ಸೀಮಿತ ಓವರ್‌ಗಳ ಸರಣಿ ಆಡಿದ್ದ ಕೆರಿಬಿಯನ್ ಪಡೆ, ಇದೀಗ ಎರಡು ಪ್ರತ್ಯೇಕ ಸರಣಿಗಳನ್ನಾಡಲು ಮತ್ತೆ ಭಾರತ ಪ್ರವಾಸ ಕೈಗೊಂಡಿದೆ. ಈ ಸುದೀರ್ಘ ಪ್ರವಾಸದಲ್ಲಿ ಉಭಯ ತಂಡಗಳ ನಡುವೆ 3 ಏಕದಿನ  ಹಾಗೂ 5 ಟಿ20 ಪಂದ್ಯಗಳ ಕಾದಾಟ ನಡೆಯಲಿದೆ.

ಭಾರತ vs ವೆಸ್ಟ್ ಇಂಡೀಸ್ ಸರಣಿ ಯಾವಾಗ? ಇಲ್ಲಿದೆ ವೇಳಾಪಟ್ಟಿ
ಭಾರತ Vs ವೆಸ್ಟ್ ಇಂಡೀಸ್
Image Credit source: x.com

Updated on: Sep 24, 2026 | 10:29 AM

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 8 ಪಂದ್ಯಗಳ ವೈಟ್-ಬಾಲ್ ಕ್ರಿಕೆಟ್ ಸರಣಿಯು ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 17 ರವರೆಗೆ ನಡೆಯಲಿದೆ. ಭಾರತದಲ್ಲೇ ಆಯೋಜನೆಗೊಳ್ಳಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಿದೆ. ವೇಳಾಪಟ್ಟಿಯ ಪ್ರಕಾರ, ಮೊದಲು ಏಕದಿನ ಪಂದ್ಯಗಳು ನಡೆಯಲಿದ್ದು, ಅದಾದ ಬಳಿಕ ಟಿ20 ಸರಣಿ ಆರಂಭವಾಗಲಿದೆ.

ಕಣದಲ್ಲಿ ರೋಹಿತ್-ಕೊಹ್ಲಿ:

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಬಳಿಕ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈ ಸರಣಿಯ ಮೂಲಕ ಮತ್ತೆ ಅಖಾಡಕ್ಕೆ ಮರಳಲಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್ ದೃಷ್ಟಿಯಿಂದ ಈ ಸರಣಿಯು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದಾಗಿದೆ. ಏಕೆಂದರೆ, 2027ರ ಏಕದಿನ ವಿಶ್ವಕಪ್‌ಗೆ ಬಲಿಷ್ಠ ತಂಡವನ್ನು ರೂಪಿಸಲು ಮತ್ತು ಯುವ ಆಟಗಾರರ ಸಾಮರ್ಥ್ಯವನ್ನು ಪರೀಕ್ಷಿಸಲು ಈ ಸರಣಿಯು ಬಿಸಿಸಿಐಗೆ ಮಹತ್ವದ ವೇದಿಕೆಯಾಗಲಿದೆ. ಹೀಗಾಗಿಯೇ ಭಾರತ ತಂಡದ ಪಾಲಿಗೆ ವಿಂಡೀಸ್ ವಿರುದ್ಧದ ಏಕದಿನ ಸರಣಿ ತುಂಬಾ ಮಹತ್ವದ್ದಾಗಿ ಮಾರ್ಪಟ್ಟಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ಸರಣಿ ವೇಳಾಪಟ್ಟಿ:

ಏಕದಿನ ಸರಣಿಯ ವೇಳಾಪಟ್ಟಿ

ದಿನಾಂಕ ಪಂದ್ಯ ಸಮಯ (IST) ನಡೆಯುವ ಸ್ಥಳ
ಸೆಪ್ಟೆಂಬರ್ 27, 2026 1ನೇ ಏಕದಿನ ಪಂದ್ಯ ಮಧ್ಯಾಹ್ನ 2:00 ತಿರುವನಂತಪುರಂ
ಸೆಪ್ಟೆಂಬರ್ 30, 2026 2ನೇ ಏಕದಿನ ಪಂದ್ಯ ಮಧ್ಯಾಹ್ನ 2:00 ಗುವಾಹಟಿ
ಅಕ್ಟೋಬರ್ 3, 2026 3ನೇ ಏಕದಿನ ಪಂದ್ಯ ಮಧ್ಯಾಹ್ನ 2:00 ಚಂಡೀಗಢ (ಮುಲ್ಲನ್‌ಪುರ)
ಟಿ20 ಸರಣಿಯ ವೇಳಾಪಟ್ಟಿ

ದಿನಾಂಕ ಪಂದ್ಯ ಸಮಯ (IST) ನಡೆಯುವ ಸ್ಥಳ
ಅಕ್ಟೋಬರ್ 6, 2026 1ನೇ ಟಿ20 ಪಂದ್ಯ ಸಂಜೆ 7:00 ಲಕ್ನೋ
ಅಕ್ಟೋಬರ್ 9, 2026 2ನೇ ಟಿ20 ಪಂದ್ಯ ಸಂಜೆ 7:00 ರಾಂಚಿ
ಅಕ್ಟೋಬರ್ 11, 2026 3ನೇ ಟಿ20 ಪಂದ್ಯ ಸಂಜೆ 7:00 ಇಂದೋರ್
ಅಕ್ಟೋಬರ್ 14, 2026 4ನೇ ಟಿ20 ಪಂದ್ಯ ಸಂಜೆ 7:00 ಹೈದರಾಬಾದ್
ಅಕ್ಟೋಬರ್ 17, 2026 5ನೇ ಟಿ20 ಪಂದ್ಯ ಸಂಜೆ 7:00 ಬೆಂಗಳೂರು

ಇದನ್ನೂ ಓದಿ: ನಿದ್ದೆಗೆಡಿಸಿದ ಆ ಒಂದು ರಾತ್ರಿ! ಗಂಭೀರ್ ತೆಗೆದುಕೊಂಡ ಕಠಿಣ ನಿರ್ಧಾರ!

ಈ ಎರಡು ಸರಣಿಗಳ ಬಳಿಕ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧದ ಸರಣಿಗಾಗಿ ಸಜ್ಜಾಗಲಿದೆ. ಕಿವೀಸ್ ನಾಡಿನಲ್ಲಿ ನಡೆಯಲಿರುವ ಈ ಸುದೀರ್ಘ ಸರಣಿಯಲ್ಲಿ ಭಾರತ ತಂಡವು  2 ಟೆಸ್ಟ್, 5 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದೆ. ಈ ಪೈಕಿ ನಡೆಯಲಿರುವ 2 ಟೆಸ್ಟ್ ಪಂದ್ಯಗಳು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ದೃಷ್ಟಿಯಿಂದ ಭಾರತಕ್ಕೆ ಅತ್ಯಂತ ಪ್ರಮುಖವಾಗಿವೆ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us