IND vs ZIM 3rd T20 Highlights: ಮೂರನೇ ಟಿ20 ಪಂದ್ಯದಲ್ಲಿ ಭಾರತಕ್ಕೆ ಸುಲಭ ಜಯ

ಪೃಥ್ವಿಶಂಕರ
|

Updated on:Jul 10, 2024 | 7:54 PM

India vs Zimbabwe 3rd T20I Highlights in Kannada: ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತ ಬಳಿಕ ಇದೀಗ ಗೆಲುವಿನ ಲಯಕ್ಕೆ ಮರಳಿರುವ ಟೀಂ ಇಂಡಿಯಾ ಹರಾರೆಯಲ್ಲಿ ಸತತ ಎರಡನೇ ಗೆಲುವನ್ನು ದಾಖಲಿಸಿದೆ. ಎರಡನೇ ಟಿ20ಯಲ್ಲಿ 100 ರನ್‌ಗಳ ಜಯ ಸಾಧಿಸಿದ್ದ ಟೀಂ ಇಂಡಿಯಾ ಇದೀಗ ಮೂರನೇ ಟಿ20ಯಲ್ಲೂ ಜಿಂಬಾಬ್ವೆಯನ್ನು ಮಣಿಸಿದೆ.

IND vs ZIM 3rd T20 Highlights: ಮೂರನೇ ಟಿ20 ಪಂದ್ಯದಲ್ಲಿ ಭಾರತಕ್ಕೆ ಸುಲಭ ಜಯ
ಭಾರತ- ಜಿಂಬಾಬ್ವೆ

ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತ ಬಳಿಕ ಇದೀಗ ಗೆಲುವಿನ ಲಯಕ್ಕೆ ಮರಳಿರುವ ಟೀಂ ಇಂಡಿಯಾ ಹರಾರೆಯಲ್ಲಿ ಸತತ ಎರಡನೇ ಗೆಲುವನ್ನು ದಾಖಲಿಸಿದೆ. ಎರಡನೇ ಟಿ20ಯಲ್ಲಿ 100 ರನ್‌ಗಳ ಜಯ ಸಾಧಿಸಿದ್ದ ಟೀಂ ಇಂಡಿಯಾ ಇದೀಗ ಮೂರನೇ ಟಿ20ಯಲ್ಲೂ ಜಿಂಬಾಬ್ವೆಯನ್ನು ಮಣಿಸಿದೆ. ಹರಾರೆಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 182 ರನ್ ಗಳಿಸಿತು, ಉತ್ತರವಾಗಿ ಜಿಂಬಾಬ್ವೆ ತಂಡ ಉತ್ತಮ ಹೋರಾಟ ನೀಡಿದರೂ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಟಿ20 ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಟಿ20 ಸರಣಿಯ ಮುಂದಿನ ಪಂದ್ಯ ಶನಿವಾರ ನಡೆಯಲಿದೆ.

LIVE NEWS & UPDATES

The liveblog has ended.
  • 10 Jul 2024 07:49 PM (IST)

    IND vs ZIM Live Score: ಭಾರತಕ್ಕೆ ಜಯ

    ಮೂರನೇ ಪಂದ್ಯವನ್ನು ಟೀಂ ಇಂಡಿಯಾ 23 ರನ್‌ಗಳಿಂದ ಗೆದ್ದುಕೊಂಡಿದೆ. ಕೊನೆಯ ಓವರ್‌ನಲ್ಲಿ ಅವೇಶ್ ಖಾನ್ 2 ಬೌಂಡರಿ, 1 ಸಿಕ್ಸರ್ ಸಹಿತ 18 ರನ್ ನೀಡಿದರೂ ಜಿಂಬಾಬ್ವೆ ತಂಡ ಸತತ 2ನೇ ಪಂದ್ಯದಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್ ಗಳಿಸಲಷ್ಟೇ ಶಕ್ತವಾಯಿತು.

  • 10 Jul 2024 07:43 PM (IST)

    IND vs ZIM Live Score: ಮೈಯರ್ಸ್ ಅರ್ಧಶತಕ

    ಡಿಯೋನ್ ಮೈಯರ್ಸ್ 19ನೇ ಓವರ್‌ನಲ್ಲಿ ರವಿ ಬಿಷ್ಣೋಯ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಮೊದಲ ಟಿ20 ಅಂತರಾಷ್ಟ್ರೀಯ ಅರ್ಧಶತಕವನ್ನು ಪೂರ್ಣಗೊಳಿಸಿದರು. ಮೈಯರ್ಸ್ 45 ಎಸೆತಗಳಲ್ಲಿ ಈ ಅರ್ಧಶತಕ ಪೂರೈಸಿದರು.

  • 10 Jul 2024 07:33 PM (IST)

    IND vs ZIM Live Score: ಆರನೇ ವಿಕೆಟ್ ಪತನ

    ಕ್ಲೈವ್ ಮದಾಂಡೆ ಮತ್ತು ಮೈಯರ್ಸ್ ನಡುವಿನ 77 ರನ್‌ಗಳ ಅತ್ಯುತ್ತಮ ಜೊತೆಯಾಟವು ಅಂತ್ಯಗೊಂಡಿದೆ. 17ನೇ ಓವರ್ ನಲ್ಲಿ ಬಂದ ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿ ಮದಂಡೆ (37) ಕ್ಯಾಚ್ ನೀಡಿದರು. ಇದು ಸುಂದರ್ ಅವರ ಮೂರನೇ ವಿಕೆಟ್.

  • 10 Jul 2024 07:20 PM (IST)

    IND vs ZIM Live Score: ಅರ್ಧಶತಕದ ಪಾಲುದಾರಿಕೆ

    ಕ್ಲೈವ್ ಮದಾಂಡೆ ಮತ್ತು ಡಿಯೋನ್ ಮೈಯರ್ಸ್ ಜಿಂಬಾಬ್ವೆ ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು. ಇವರಿಬ್ಬರು ಕೊನೆಯ 3-4 ಓವರ್‌ಗಳಲ್ಲಿ ಬೌಂಡರಿ ಬಾರಿಸುವ ಮೂಲಕ ಅರ್ಧಶತಕದ ಜೊತೆಯಾಟವಾಡಿದರು.

  • 10 Jul 2024 07:19 PM (IST)

    IND vs ZIM Live Score: 10 ಓವರ್‌ ಪೂರ್ಣ

    ಜಿಂಬಾಬ್ವೆ ಇನ್ನಿಂಗ್ಸ್‌ನ 10 ಓವರ್‌ಗಳು ಪೂರ್ಣಗೊಂಡಿದ್ದು, ತಂಡವು ಕೇವಲ 60 ರನ್ ಗಳಿಸಲು ಶಕ್ತವಾಗಿದೆ, ಆದರೆ 5 ವಿಕೆಟ್‌ಗಳು ಬಿದ್ದಿವೆ. ಜಿಂಬಾಬ್ವೆಯ ಭರವಸೆಯು ಈಗ ಕ್ಲೈವ್ ಮದಾಂಡೆ ಮತ್ತು ಡಿಯೋನ್ ಮೈಯರ್ಸ್ ಮೇಲೆ ನಿಂತಿದೆ, ಅವರು 23 ರನ್‌ಗಳ ಜೊತೆಯಾಟವನ್ನು ಮಾಡಿದ್ದಾರೆ.

  • 10 Jul 2024 07:00 PM (IST)

    IND vs ZIM Live Score: ಸುಂದರ್​ಗೆ 2 ವಿಕೆಟ್

    ಸುಂದರ್ ಈಗಾಗಲೇ ತನ್ನ ಮೊದಲ ಓವರ್‌ನಲ್ಲಿ 2 ವಿಕೆಟ್ ಪಡೆಯುವ ಮೂಲಕ ಜಿಂಬಾಬ್ವೆಯನ್ನು ಸೋಲಿನತ್ತ ತಳ್ಳಿದ್ದಾರೆ. ಸುಂದರ್ ಅವರ ಓವರ್​ನ ಕೊನೆಯ ಎಸೆತದಲ್ಲಿ ಸ್ಲಿಪ್​ನಲ್ಲಿ ಜೊನಾಥನ್ ಕ್ಯಾಂಪ್ ಬೆಲ್ (1) ಕ್ಯಾಚಿತ್ತು ನಿರ್ಗಮಿಸಿದರು.

  • 10 Jul 2024 06:55 PM (IST)

    IND vs ZIM Live Score: ಸಿಕಂದರ್ ರಾಝಾ ಕೂಡ ಔಟ್

    ಜಿಂಬಾಬ್ವೆ ನಾಯಕ ಸಿಕಂದರ್ ರಾಝಾ (15) ಕೂಡ ಔಟಾಗಿದ್ದು, ವಾಷಿಂಗ್ಟನ್ ಸುಂದರ್ ಅವರ ವಿಕೆಟ್ ಉರುಳಿಸಿದರು. ಏಳನೇ ಓವರ್‌ನಲ್ಲಿ ಮೊದಲ ಬಾರಿಗೆ ಬೌಲ್ ಮಾಡಲು ಬಂದ ಸುಂದರ್ ಅವರ ಎರಡನೇ ಎಸೆತದಲ್ಲಿ ರಾಝಾ ಸ್ಲಾಗ್ ಸ್ವೀಪ್ ಆಡಿ ಔಟಾದರು.

  • 10 Jul 2024 06:44 PM (IST)

    IND vs ZIM Live Score: ಮೂರನೇ ವಿಕೆಟ್ ಪತನ

    ಜಿಂಬಾಬ್ವೆಯ ಮೂರನೇ ವಿಕೆಟ್ ಪತನವಾಗಿದೆ. ಬ್ರಿಯಾನ್ ಬೆನೆಟ್ ಅವೇಶ್ ಖಾನ್ ಎಸೆತದಲ್ಲಿ ಕಟ್ ಶಾಟ್ ಆಡಿದರು ಆದರೆ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ರವಿ ಬಿಷ್ಣೋಯ್ ಗಾಳಿಯಲ್ಲಿ ಎತ್ತರಕ್ಕೆ ಜಿಗಿದು ಅತ್ಯುತ್ತಮ ಕ್ಯಾಚ್ ಪಡೆದರು.

  • 10 Jul 2024 06:42 PM (IST)

    IND vs ZIM Live Score: ಎರಡನೇ ವಿಕೆಟ್ ಪತನ

    ಜಿಂಬಾಬ್ವೆ ಎರಡನೇ ವಿಕೆಟ್ ಕಳೆದುಕೊಂಡಿದ್ದು, ಮಾರುಮಣಿ 13 ರನ್ ಬಾರಿಸಿ ಖಲೀಲ್ ಅಹ್ಮದ್ ಬೌಲಿಂಗ್​ನಲ್ಲಿ ಔಟಾದರು.

  • 10 Jul 2024 06:28 PM (IST)

    IND vs ZIM Live Score: ಜಿಂಬಾಬ್ವೆ ಮೊದಲ ವಿಕೆಟ್ ಪತನ

    ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಜಿಂಬಾಬ್ವೆ ವಿಕೆಟ್ ಕಳೆದುಕೊಂಡಿತು. ಅವೇಶ್ ಖಾನ್ ಎಸೆತದಲ್ಲಿ ವೆಸ್ಲಿ ಮಾಧೆವೆರೆ ಕ್ಯಾಚಿತ್ತು ಔಟಾದರು.

  • 10 Jul 2024 06:04 PM (IST)

    IND vs ZIM Live Score: 182 ರನ್ ಟಾರ್ಗೆಟ್

    ಭಾರತ ಮತ್ತು ಜಿಂಬಾಬ್ವೆ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಭಾರತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 182 ರನ್ ಗಳಿಸಿದೆ. ಜಿಂಬಾಬ್ವೆ ಪರ ಬ್ಲೆಸಿಂಗ್ ಮುಜರಬಾನಿ 4 ಓವರ್‌ಗಳಲ್ಲಿ ಕೇವಲ 25 ರನ್ ನೀಡಿ 2 ವಿಕೆಟ್ ಪಡೆದರು.

  • 10 Jul 2024 06:01 PM (IST)

    IND vs ZIM Live Score: ನಾಲ್ಕನೇ ವಿಕೆಟ್ ಪತನ

    ರುತುರಾಜ್ ಗಾಯಕ್ವಾಡ್ ಅವರ ಅದ್ಭುತ ಇನ್ನಿಂಗ್ಸ್ ಅಂತ್ಯಗೊಂಡಿದೆ. ಕೊನೆಯ ಓವರ್‌ನಲ್ಲಿ ಮುಜರಬಾನಿ ಎಸೆತದಲ್ಲಿ ಕ್ಯಾಚ್ ನೀಡಿದ ಗಾಯಕ್ವಾಡ್ 28 ಎಸೆತಗಳಲ್ಲಿ 49 ರನ್ ಗಳಿಸಿದರು.

  • 10 Jul 2024 05:50 PM (IST)

    IND vs ZIM Live Score: ಗಿಲ್ ಔಟ್

    ನಾಯಕ ಶುಭಮನ್ ಗಿಲ್ ರೂಪದಲ್ಲಿ ಭಾರತಕ್ಕೆ ಮೂರನೇ ಹೊಡೆತ ಬಿದ್ದಿದೆ. 49 ಎಸೆತಗಳಲ್ಲಿ 66 ರನ್‌ಗಳ ಇನ್ನಿಂಗ್ಸ್‌ ಆಡಿದ ಬಳಿಕ ಗಿಲ್ ಔಟಾದರು. ಈ ಅದ್ಭುತ ಇನ್ನಿಂಗ್ಸ್‌ನಲ್ಲಿ ಗಿಲ್ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಸಂಜು ಸ್ಯಾಮ್ಸನ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.

  • 10 Jul 2024 05:40 PM (IST)

    IND vs ZIM Live Score: 16 ಓವರ್‌ ಪೂರ್ಣ

    16 ಓವರ್‌ಗಳಲ್ಲಿ ಭಾರತದ ಸ್ಕೋರ್ 130/2. ಶುಭ್‌ಮನ್ ಗಿಲ್ ಮತ್ತು ರುತುರಾಜ್ ಗಾಯಕ್‌ವಾಡ್ ನಡುವೆ ಉತ್ತಮ ಜೊತೆಯಾಟವಿದೆ.

  • 10 Jul 2024 05:39 PM (IST)

    IND vs ZIM Live Score: ಗಿಲ್ ಅರ್ಧಶತಕ

    ಈ ಪಂದ್ಯದಲ್ಲಿ ಭಾರತದ ನಾಯಕ ಶುಭಮನ್ ಗಿಲ್ 36 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಗಾಯಕ್ವಾಡ್ ಕೂಡ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. 14 ಓವರ್‌ಗಳ ನಂತರ ಭಾರತದ ಸ್ಕೋರ್ 118/2.

  • 10 Jul 2024 05:30 PM (IST)

    IND vs ZIM Live Score: ಶತಕ ಪೂರ್ಣ

    13ನೇ ಓವರ್‌ನಲ್ಲಿ ಟೀಂ ಇಂಡಿಯಾ 100 ರನ್ ಪೂರೈಸಿತು. ಈ ಓವರ್‌ನಲ್ಲಿ ಶುಭಮನ್ ಗಿಲ್ ಮತ್ತು ರುತುರಾಜ್ ಗಾಯಕ್ವಾಡ್ ತಲಾ ಒಂದು ಸಿಕ್ಸರ್ ಬಾರಿಸಿದರೆ, ಗಾಯಕ್ವಾಡ್ ಮತ್ತೊಂದು ಬೌಂಡರಿ ಬಾರಿಸಿದರು.

  • 10 Jul 2024 05:29 PM (IST)

    IND vs ZIM Live Score: ಎರಡನೇ ವಿಕೆಟ್ ಪತನ

    ಭಾರತ ಎರಡನೇ ವಿಕೆಟ್ ಕಳೆದುಕೊಂಡಿದ್ದು, ಅಭಿಷೇಕ್ ಶರ್ಮಾ (10) ಇಂದು ಬೇಗನೇ ಔಟಾದರು. ಸಿಕಂದರ್ ರಾಝಾ, ಅಭಿಷೇಕ್ ವಿಕೆಟ್ ಪಡೆದಿದ್ದಾರೆ.

  • 10 Jul 2024 05:08 PM (IST)

    IND vs ZIM Live Score: ಜೈಸ್ವಾಲ್ ಔಟ್

    9ನೇ ಓವರ್​ನಲ್ಲಿ ಟೀಂ ಇಂಡಿಯಾ ಮೊದಲ ವಿಕೆಟ್ ಕಳೆದಯಕೊಂಡಿದೆ. ಆರಂಭಿಕ ಜೈಸ್ವಾಲ್ ಸ್ವಿಚ್ ಹಿಟ್ ಆಡಲು ಯತ್ನಿಸಿ ಕ್ಯಾಚ್ ನೀಡಿ ಔಟಾದರು.

    ಭಾರತ 67/1

  • 10 Jul 2024 05:06 PM (IST)

    IND vs ZIM Live Score: ಪವರ್‌ಪ್ಲೇ ಅಂತ್ಯ, ಭಾರತದ ಸ್ಕೋರ್ 55/0

    ಪವರ್‌ಪ್ಲೇ ಮುಗಿದಿದೆ. ಆರಂಭಿಕ ಜೋಡಿಯ ನಡುವೆ 55 ರನ್‌ಗಳ ಜೊತೆಯಾಟವಿದೆ. ಶುಭ್‌ಮನ್ ಗಿಲ್ 19 ಮತ್ತು ಯಶಸ್ವಿ ಜೈಸ್ವಾಲ್ 27 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.

  • 10 Jul 2024 04:50 PM (IST)

    IND vs ZIM Live Score: ಭಾರತದ ಅರ್ಧಶತಕ ಪೂರ್ಣ

    ಭಾರತ 5ನೇ ಓವರ್​ನಲ್ಲಿ ಅರ್ಧಶತಕದ ಗಡಿ ದಾಟಿದೆ. ಇಬ್ಬರು ಆರಂಭಿಕರು ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ.

  • 10 Jul 2024 04:34 PM (IST)

    IND vs ZIM Live Score: ಭಾರತದ ಇನ್ನಿಂಗ್ಸ್ ಆರಂಭ

    ಭಾರತದ ಇನ್ನಿಂಗ್ಸ್ ಆರಂಭವಾಗಿದೆ. ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಕ್ರೀಸ್‌ನಲ್ಲಿದ್ದಾರೆ. ಮೊದಲ ಓವರ್​ನಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 15 ರನ್ ಬಂದವು.

  • 10 Jul 2024 04:22 PM (IST)

    IND vs ZIM Live Score: ಜಿಂಬಾಬ್ವೆ ತಂಡ

    ತಡಿವಾನಾಶೆ ಮಾರುಮಣಿ, ವೆಸ್ಲಿ ಮಾಧೆವೆರೆ, ಬ್ರಿಯಾನ್ ಬೆನೆಟ್, ಡಿಯೋನ್ ಮೈಯರ್ಸ್, ಸಿಕಂದರ್ ರಾಝಾ (ನಾಯಕ), ಜೊನಾಥನ್ ಕ್ಯಾಂಪ್‌ಬೆಲ್, ಕ್ಲೈವ್ ಮದಂಡೆ (ವಿಕೆಟ್ ಕೀಪರ್), ವೆಲ್ಲಿಂಗ್ಟನ್ ಮಸಕಡ್ಜಾ, ರಿಚರ್ಡ್ ನಗರ್ವಾ, ಬ್ಲೆಸ್ಸಿಂಗ್ ಮುಜರಾಬಾನಿ, ಟೆಂಡೈ ಚಟಾರಾ.

  • 10 Jul 2024 04:22 PM (IST)

    IND vs ZIM Live Score: ಭಾರತ ತಂಡ

    ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್ (ನಾಯಕ), ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್.

  • 10 Jul 2024 04:06 PM (IST)

    IND vs ZIM Live Score: ಟಾಸ್ ಗೆದ್ದ ಭಾರತ

    ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  • Published On - Jul 10,2024 4:05 PM

    Follow us
    ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
    ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
    ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
    ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
    ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
    ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
    ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
    ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
    ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
    ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
    ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
    ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
    ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
    ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
    ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
    ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
    ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
    ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ