AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ಕ್ರಿಕೆಟ್ ಮಂಡಳಿಯಿಂದ ಮತ್ತಿಬ್ಬರು ಅನುಭವಿಗಳಿಗೆ ಗೇಟ್​ಪಾಸ್

PCB: 2023ರ ಏಕದಿನ ವಿಶ್ವಕಪ್‌ನಿಂದ ಪಾಕಿಸ್ತಾನ ತಂಡ ಮತ್ತು ಮಂಡಳಿಯ ನಡುವೆ ಗಲಾಟೆ ನಡೆಯುತ್ತಿದೆ. ಈ ಪಂದ್ಯಾವಳಿಯ ನಂತರ, ತಂಡದ ಕೋಚ್, ನಾಯಕ ಮತ್ತು ಆಯ್ಕೆಗಾರರನ್ನೂ ಸಹ ಬದಲಾಯಿಸಲಾಯಿತು. ಇದಲ್ಲದೇ ಕಳೆದ 4 ವರ್ಷಗಳಲ್ಲಿ 6 ಮಂದಿ ಆಯ್ಕೆಗಾರರನ್ನು ಬದಲಾಯಿಸಲಾಗಿದೆ.

ಪಾಕ್ ಕ್ರಿಕೆಟ್ ಮಂಡಳಿಯಿಂದ ಮತ್ತಿಬ್ಬರು ಅನುಭವಿಗಳಿಗೆ ಗೇಟ್​ಪಾಸ್
ಪಾಕಿಸ್ತಾನ ಕ್ರಿಕೆಟ್ ಮಂಡಳಿ
ಪೃಥ್ವಿಶಂಕರ
|

Updated on:Jul 10, 2024 | 7:21 PM

Share

ಕಳಪೆ ಪ್ರದರ್ಶನ ನೀಡಿದಾಗಲೆಲ್ಲ ಪಾಕ್ ಕ್ರಿಕೆಟ್ ಮಂಡಳಿಯಲ್ಲಿ ಶುರುವಾಗ ಬದಲಾವಣೆಯ ಪರ್ವ ಇದೀಗ ಟಿ20 ವಿಶ್ವಕಪ್ ಮುಗಿದ ಬಳಿಕವೂ ಮುಂದುವರೆದಿದೆ. 2024 ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಬಾಬರ್ ಆಝಂ ನಾಯಕತ್ವದಲ್ಲಿ ತಂಡಕ್ಕೆ ಸೂಪರ್-8 ತಲುಪಲು ಸಾಧ್ಯವಾಗಲಿಲ್ಲ. ಇದಲ್ಲದೇ ಅಮೆರಿಕದಂತಹ ದುರ್ಬಲ ತಂಡದ ವಿರುದ್ಧ ಪಾಕ್ ತಂಡ ಸೋತ ರೀತಿ ತಂಡವನ್ನು ನಗೆಪಾಟಲಿಗೀಡುಮಾಡಿದೆ. ಹೀಗಾಗಿ ಇದೀಗ ಮತ್ತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ವಿಶ್ವಕಪ್‌ನಲ್ಲಿ ತಂಡದ ಕಳಪೆ ಪ್ರದರ್ಶನದ ನಂತರ ಮಂಡಳಿಯಲ್ಲಿ ಇಬ್ಬರು ಅನುಭವಿಗಳಿಗೆ ತಲೆದಂಡವಾಗಿದೆ.

ಇಬ್ಬರು ಅನುಭವಿಗಳಿಗೆ ಕೋಕ್

ಟಿ20 ವಿಶ್ವಕಪ್‌ನಲ್ಲಿ ತಂಡದ ನಿರಾಶಾದಾಯಕ ಪ್ರದರ್ಶನದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪ್ರಮುಖ ಬದಲಾವಣೆಯನ್ನು ಮಾಡಿದೆ. ಪಾಕಿಸ್ತಾನ ತಂಡದ ಆಯ್ಕೆಗಾರರ ​​ಹುದ್ದೆಯಿಂದ ವಹಾಬ್ ರಿಯಾಜ್ ಮತ್ತು ಅಬ್ದುಲ್ ರಜಾಕ್ ಅವರನ್ನು ಪಿಸಿಬಿ ವಜಾಗೊಳಿಸಿದೆ. ಇಲ್ಲಿಯವರೆಗೆ ಪುರುಷರ ತಂಡ ಹಾಗೂ ಮಹಿಳಾ ತಂಡಗಳ ಆಯ್ಕೆಗಾರರಾಗಿದ್ದ ಅಬ್ದುಲ್ ರಜಾಕ್ ಇದೀಗ ಉಭಯ ತಂಡಗಳ ಈ ಜವಾಬ್ದಾರಿಯಿಂದ ವಿಮುಕ್ತರಾಗಿದ್ದಾರೆ.

ವಹಾಬ್ ಪಯಣ ಅಂತ್ಯ

ಇಎಸ್‌ಪಿಎನ್ ವರದಿಯ ಪ್ರಕಾರ, 2024 ರ ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನದಿಂದಾಗಿ ಬಾಬರ್ ಸೇನೆಯು ಪಂದ್ಯಾವಳಿಯಿಂದ ಹೊರಗುಳಿದ ತಕ್ಷಣ, ವಹಾಬ್ ರಿಯಾಜ್ ಸ್ಥಾನಕ್ಕೆ ಕುತ್ತು ಎದುರಾಗಿತ್ತು. 2024ರಲ್ಲಿಯೇ ದೊಡ್ಡ ಜವಾಬ್ದಾರಿ ಪಡೆದುಕೊಂಡಿದ್ದ ವಹಾಬ್‌ ಇದೀಗ ಬಹುಬೇಗನೇ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು 7 ಸದಸ್ಯರ ಆಯ್ಕೆಗಾರರ ​​ತಂಡದಲ್ಲಿ ಬದಲಾವಣೆಗಳನ್ನು ಮಾಡಲಿದೆ.

ನಿರಂತರ ಸಂಘರ್ಷ

2023ರ ಏಕದಿನ ವಿಶ್ವಕಪ್‌ನಿಂದ ಪಾಕಿಸ್ತಾನ ತಂಡ ಮತ್ತು ಮಂಡಳಿಯ ನಡುವೆ ಗಲಾಟೆ ನಡೆಯುತ್ತಿದೆ. ಈ ಪಂದ್ಯಾವಳಿಯ ನಂತರ, ತಂಡದ ಕೋಚ್, ನಾಯಕ ಮತ್ತು ಆಯ್ಕೆಗಾರರನ್ನೂ ಸಹ ಬದಲಾಯಿಸಲಾಯಿತು. ಇದಲ್ಲದೇ ಕಳೆದ 4 ವರ್ಷಗಳಲ್ಲಿ 6 ಮಂದಿ ಆಯ್ಕೆಗಾರರನ್ನು ಬದಲಾಯಿಸಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:53 pm, Wed, 10 July 24