ಟೀಮ್ ಇಂಡಿಯಾದ ಮುಂದಿನ ಸರಣಿ ವೇಳಾಪಟ್ಟಿ ಇಲ್ಲಿದೆ

India vs Zimbabwe: ಭಾರತ ಮತ್ತು ಇಂಗ್ಲೆಂಡ್ 8 ಮ್ಯಾಚ್​​ಗಳ ಸರಣಿ ಪೂರ್ಣಗೊಂಡಿದೆ. ಈ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿರುವ ಟೀಮ್ ಇಂಡಿಯಾ ಶೀಘ್ರದಲ್ಲೇ ಝಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಅಲ್ಲದೆ ಇಲ್ಲಿ ಮೂರು ಮ್ಯಾಚ್​​ಗಳ ಸರಣಿ ಆಡಲಿದೆ. ಈ ಸರಣಿ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

ಟೀಮ್ ಇಂಡಿಯಾದ ಮುಂದಿನ ಸರಣಿ ವೇಳಾಪಟ್ಟಿ ಇಲ್ಲಿದೆ
Team India
Image Credit source: BCCI

Updated on: Jul 20, 2026 | 11:00 AM

ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಹಾಗೂ ಏಕದಿನ ಸರಣಿ ಮುಗಿದಿದೆ. ಟಿ20 ಸರಣಿಯನ್ನು 4-0 ಅಂತರದಿಂದ ಸೋತಿದ್ದ ಟೀಮ್ ಇಂಡಿಯಾ ಏಕದಿನ ಸರಣಿಯನ್ನು 2-1 ಅಂತರದಿಂದ ಕಳೆದುಕೊಂಡಿದೆ. ಈ ಎರಡು ಸರಣಿ ಸೋಲುಗಳ ಬೆನ್ನಲ್ಲೇ ಟೀಮ್ ಇಂಡಿಯಾ ಮತ್ತೊಂದು ಸರಣಿಗಾಗಿ ಸಜ್ಜಾಗಬೇಕಿದೆ. ಅಂದರೆ ಜುಲೈ 23 ರಿಂದ ಭಾರತ ಮತ್ತು ಝಿಂಬಾಬ್ವೆ ನಡುವಣ ಟಿ20 ಸರಣಿ ಶುರುವಾಗಲಿದ್ದು, ಈ ಸಿರೀಸ್​ನಲ್ಲಿ ಉಭಯ ತಂಡಗಳು 3 ಪಂದ್ಯಗಳನ್ನಾಡಲಿದೆ. ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ಭಾರತ ಮತ್ತು ಝಿಂಬಾಬ್ವೆ ಟಿ20 ಸರಣಿ ವೇಳಾಪಟ್ಟಿ (2026):

  • ಜುಲೈ 23, 2026 (ಗುರುವಾರ): 1ನೇ ಟಿ20 ಪಂದ್ಯ – ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜುಲೈ 25, 2026 (ಶನಿವಾರ): 2ನೇ ಟಿ20 ಪಂದ್ಯ – ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜುಲೈ 26, 2026 (ಭಾನುವಾರ): 3ನೇ ಟಿ20 ಪಂದ್ಯ – ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ

ಈ ಎಲ್ಲಾ ಮೂರು ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 4:30 ಕ್ಕೆ (ಸ್ಥಳೀಯ ಸಮಯ ಮಧ್ಯಾಹ್ನ 1:00 ಗಂಟೆಗೆ) ಆರಂಭವಾಗಲಿವೆ.

ಟೀಮ್ ಇಂಡಿಯಾದ ಮುಂಬರುವ ಸರಣಿ ಮತ್ತು ಟೂರ್ನಿ:

ಝಿಂಬಾಬ್ವೆ ಪ್ರವಾಸ (ಜುಲೈ 23 – ಜುಲೈ 26, 2026): ಟೀಮ್ ಇಂಡಿಯಾ ಜುಲೈ ಕೊನೆಯ ವಾರದಲ್ಲಿ ಜಿಂಬಾಬ್ವೆ ವಿರುದ್ಧ ಚುಟುಕು ಟಿ20 ಸರಣಿಯನ್ನು ಆಡಲಿದೆ.

ಶ್ರೀಲಂಕಾ ಪ್ರವಾಸ (ಆಗಸ್ಟ್ 14 – ಆಗಸ್ಟ್ 27, 2026): ಭಾರತ ತಂಡವು ಲಂಕಾ ನೆಲದಲ್ಲಿ 2 ಪಂದ್ಯಗಳ ಪ್ರಮುಖ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ.

ವೆಸ್ಟ್ ಇಂಡೀಸ್ ಭಾರತ ಪ್ರವಾಸ (ಸೆಪ್ಟೆಂಬರ್ 26 – ಅಕ್ಟೋಬರ್ 17, 2026): ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಬರಲಿದ್ದು, 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸುದೀರ್ಘ ಸರಣಿ ನಡೆಯಲಿದೆ.

ಏಷ್ಯನ್ ಗೇಮ್ಸ್ (ಸೆಪ್ಟೆಂಬರ್ 19 – ಅಕ್ಟೋಬರ್ 4, 2026): ಜಪಾನ್ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲೂ ಭಾರತ ತಂಡ ಸ್ಪರ್ಧಿಸಲಿದೆ.

ನ್ಯೂಝಿಲೆಂಡ್ ಪ್ರವಾಸ (ಅಕ್ಟೋಬರ್ 22 – ಡಿಸೆಂಬರ್ 1, 2026): ಕಿವೀಸ್ ನಾಡಿನಲ್ಲಿ ಭಾರತ 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ.

ಇದನ್ನೂ ಓದಿ: ಮ್ಯಾಚ್ ಫಿಕ್ಸಿಂಗ್​ಗೆ ಯತ್ನ: ಟೀಮ್ ಇಂಡಿಯಾದ ಮಾಜಿ ಆಟಗಾರ ಬಂಧನ!

ಶ್ರೀಲಂಕಾ ಭಾರತ ಪ್ರವಾಸ (ಡಿಸೆಂಬರ್ 13 – ಡಿಸೆಂಬರ್ 27, 2026): ವರ್ಷದ ಕೊನೆಯಲ್ಲಿ ಶ್ರೀಲಂಕಾ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ.

 

Follow Us