AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ- ವಿಂಡೀಸ್ 5ನೇ ಟಿ20 ಪಂದ್ಯ ರದ್ದಾದರೆ ಯಾರಿಗೆ ಸರಣಿ ವಿಜೇತ ಪಟ್ಟ?

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 5ನೇ ಟಿ20 ಪಂದ್ಯ ಬೆಂಗಳೂರಿನಲ್ಲಿ ಮಳೆಯಿಂದ ರದ್ದಾಗುವ ಸಾಧ್ಯತೆ ಇದೆ. ಸರಣಿ 2-2ರಿಂದ ಸಮಬಲಗೊಂಡಿರುವುದರಿಂದ ಪಂದ್ಯ ನಡೆಯದಿದ್ದರೆ, ಉಭಯ ತಂಡಗಳನ್ನು ಸರಣಿ ವಿಜೇತರೆಂದು ಘೋಷಿಸಲಾಗುತ್ತದೆ. ಟಿ20ಯಲ್ಲಿ ಡಿಎಲ್ ವಿಧಾನಕ್ಕೆ ಕನಿಷ್ಠ 5 ಓವರ್‌ಗಳು ಬೇಕು. ಈ ಹಿಂದೆ ಕೂಡ ಭಾರತ ಜಂಟಿ ವಿಜೇತ ತಂಡವಾಗಿ ಟ್ರೋಫಿ ಹಂಚಿಕೊಂಡಿದೆ.

ಭಾರತ- ವಿಂಡೀಸ್ 5ನೇ ಟಿ20 ಪಂದ್ಯ ರದ್ದಾದರೆ ಯಾರಿಗೆ ಸರಣಿ ವಿಜೇತ ಪಟ್ಟ?
ಭಾರತ Vs ವೆಸ್ಟ್ ಇಂಡೀಸ್Image Credit source: PTI
ಪೃಥ್ವಿಶಂಕರ
|

Updated on:Oct 17, 2026 | 5:53 PM

Share

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಐದನೇ ಟಿ20 ಪಂದ್ಯ ಇಂದು ಅಂದರೆ ಅಕ್ಟೋಬರ್ 17 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಬೆಂಗಳೂರಿನ ಹವಾಮಾನ ಪಂದ್ಯ ನಡೆಯುವುದು ಅನುಮಾನ ಎಂಬ ಭವಿಷ್ಯ ನುಡಿಯುತ್ತಿದೆ. ಏಕೆಂದರೆ ಪಂದ್ಯ ಆರಂಭಕ್ಕೆ ಎರಡು ಗಂಟೆಗಳು ಬಾಕಿ ಇರುವಾಗ ಬೆಂಗಳೂರಿನಲ್ಲಿ ಧಾರಕಾರವಾಗಿ ಮಳೆ ಸುರಿಯಲಾರಂಭಿಸಿದೆ. ಹವಾಮಾನ ವರದಿಯಲ್ಲೂ ಬೆಂಗಳೂರಿನಲ್ಲಿ ಭಾರಿ ಮಳೆಯಾಗಲಿದೆ ಎಂಬುದು ಖಚಿತವಾಗಿತ್ತು. ಇದರಿಂದ ಪಂದ್ಯ ರದ್ದಾಗುವ ಸಾಧ್ಯತೆಗಳಿವೆ. ಹೀಗಾಗಿ ಕೊನೆಯ ಟಿ20 ಪಂದ್ಯ ನಡೆಯದೆ ರದ್ದಾದರೆ ಯಾರಿಗೆ ಸರಣಿ ವಿಜೇತ ಪಟ್ಟ ಸಿಗಲಿದೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಏಕೆಂದರೆ ಸರಣಿಯಲ್ಲಿ ಉಭಯ ತಂಡಗಳು ತಲಾ 2 ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿವೆ.

ಜಂಟಿ ವಿಜೇತರೆಂದು ಘೋಷಣೆ

ಸರಣಿ 2-2 ರಿಂದ ಸಮಬಲಗೊಂಡಿರುವುದರಿಂದ ಇಂದಿನ ಪಂದ್ಯ ನಡೆದರೆ ಮಾತ್ರ ಸರಣಿ ವಿಜೇತರು ಯಾರೆಂಬುದು ಖಚಿತವಾಗಲಿದೆ. ಒಂದು ವೇಳೆ ಈ ಪಂದ್ಯ ನಡೆಯದೆ ಹೋದರೆ, ಆಗ ಸರಣಿ ವಿಜೇತರ ನಿರ್ಧಾರ ಹೇಗೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಅದಕ್ಕೆ ಉತ್ತರವೆಂದರೆ, ಉಭಯ ತಂಡಗಳನ್ನು ಸರಣಿ ವಿಜೇತರೆಂದು ಘೋಷಿಸಲಾಗುತ್ತದೆ. ಇದರರ್ಥ ಎರಡು ತಂಡಗಳು ಸರಣಿ ಟ್ರೋಫಿಯನ್ನು ಹಂಚಿಕೊಳ್ಳಲಿವೆ.

ಕನಿಷ್ಠ 5 ಓವರ್​ಗಳ ಪಂದ್ಯ

ಟಿ20 ಕ್ರಿಕೆಟ್​ನಲ್ಲಿ ಡಕ್‌ವರ್ತ್-ಲೂಯಿಸ್ ವಿಧಾನವನ್ನು ಬಳಸಿ ಫಲಿತಾಂಶವನ್ನು ನಿರ್ಧರಿಸಲು, ಪ್ರತಿ ತಂಡಕ್ಕೂವೂ ಕನಿಷ್ಠ 5 ಓವರ್‌ಗಳ ಆಟ ಆಡಬೇಕಾಗುತ್ತದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ, ಆಗ ಆ ಪಂದ್ಯವನ್ನು ‘ಫಲಿತಾಂಶವಿಲ್ಲ’ (no result) ಎಂದು ಘೋಷಿಸಿ ಕೈಬಿಡಲಾಗುತ್ತದೆ. ಆ ಬಳಿಕ ಉಭಯ ತಂಡಗಳನ್ನು ಸರಣಿ ವಿಜೇತರೆಂದು ಘೋಷಿಸಲಾಗುತ್ತದೆ.

ಈ ಹಿಂದೆಯೂ ಜಂಟಿ ವಿಜೇತರ ಘೋಷಣೆ

ಈ ಹಿಂದೆಯೂ ಸಹ ಸರಣಿಯ ನಿರ್ಣಾಯಕ ಪಂದ್ಯ ನಡೆಯದೆ ರದ್ದಾದಾಗ ಜಂಟಿ ವಿಜೇತರೆಂದು ಘೋಷಿಸಲಾಗಿದೆ. ಜೂನ್ 2022ರಲ್ಲಿ ಇದೇ ಮೈದಾನದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಐದನೇ ಟಿ20 ಪಂದ್ಯ ರದ್ದಾಗಿತ್ತು. ಆ ಪಂದ್ಯಕ್ಕೂ ಮುನ್ನ ಉಭಯ ತಂಡಗಳು ತಲಾ 2 ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿದ್ದವು. ಕೊನೆಯ ಪಂದ್ಯ ನಡೆಯದ ಕಾರಣ ಉಭಯ ತಂಡಗಳು ಟ್ರೋಫಿಯನ್ನು ಹಂಚಿಕೊಂಡಿದ್ದವು. ಈ ಸರಣಿ ಮಾತ್ರವಲ್ಲದೆ ಇನ್ನು 5 ಸರಣಿಗಳಲ್ಲಿ ಟೀಂ ಇಂಡಿಯಾ ಜಂಟಿ ವಿಜೇತ ತಂಡವಾಗಿ ಟ್ರೋಫಿಯನ್ನು ಹಂಚಿಕೊಂಡಿದೆ.

ಬೆಂಗಳೂರಿನಲ್ಲಿ ಧಾರಾಕಾರ ಮಳೆ; ಭಾರತ- ವಿಂಡೀಸ್ ಪಂದ್ಯಕ್ಕೆ ಅಡ್ಡಿ

ಅತ್ಯುತ್ತಮ ಒಳಚರಂಡಿ ವ್ಯವಸ್ಥೆ

ಆದಾಗ್ಯೂ ಬೆಂಗಳೂರಿನಲ್ಲಿ ಎಷ್ಟೇ ಮಳೆ ಬಂದರೂ ಮಳೆ ನಿಂತ ಕೇವಲ ಕೆಲವೇ ನಿಮಿಷಗಳಲ್ಲಿ ಪಂದ್ಯವನ್ನು ಆರಂಭಿಸಬಹುದು. ಇದಕ್ಕೆ ಕಾರಣ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಅತ್ಯುತ್ತಮ ಒಳಚರಂಡಿ ವ್ಯವಸ್ಥೆ. ಗಂಟೆಗಟ್ಟಲೆ ಮಳೆ ಸುರಿದರೂ, ಅರ್ಧ ಗಂಟೆಯೊಳಗೆ ಪಂದ್ಯವನ್ನು ಪುನರಾರಂಭಗೊಳಿಸಬಹುದು. ಇದು ಅಭಿಮಾನಿಗಳು ಮತ್ತು ತಂಡಗಳಿಗೆ ಸಮಾಧಾನಕರ ಸಂಗತಿಯಾಗಿದೆ. ಆದರೆ ಪಂದ್ಯ ಆರಂಭಕ್ಕೆ ಮಳೆ ಬ್ರೇಕ್ ತೆಗೆದುಕೊಳ್ಳಲೇಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:46 pm, Sat, 17 October 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಸ್ಟಿಂಗ್ ಆಪರೇಷನ್​: ಡಿಜಿ ಕಚೇರಿಗೆ ಹೊರಟಿದ್ದ ಹೆಡಿಕೆಯನ್ನ ತಡೆದ ಪೊಲೀಸ್​​
ಸ್ಟಿಂಗ್ ಆಪರೇಷನ್​: ಡಿಜಿ ಕಚೇರಿಗೆ ಹೊರಟಿದ್ದ ಹೆಡಿಕೆಯನ್ನ ತಡೆದ ಪೊಲೀಸ್​​
2 ನಿಮಿಷದಲ್ಲಿ 12 ಇಡ್ಲಿ ತಿಂದು ಕಮಾಲ್ ಮಾಡಿದ ಸಂಚಾರಿ ಪೊಲೀಸ್ ಪ್ರವೀಣ್
2 ನಿಮಿಷದಲ್ಲಿ 12 ಇಡ್ಲಿ ತಿಂದು ಕಮಾಲ್ ಮಾಡಿದ ಸಂಚಾರಿ ಪೊಲೀಸ್ ಪ್ರವೀಣ್
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತರಕಾರಿ ಮೂಟೆಗಳ ಕಾರಬಾರು
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತರಕಾರಿ ಮೂಟೆಗಳ ಕಾರಬಾರು
ಬೆಂಗಳೂರಿನಲ್ಲಿ ಎಐ ಕ್ಯಾಮರಾಗಳ ಸರಣಿ ಎಡವಟ್ಟು
ಬೆಂಗಳೂರಿನಲ್ಲಿ ಎಐ ಕ್ಯಾಮರಾಗಳ ಸರಣಿ ಎಡವಟ್ಟು
ಮೂರು ಆಯಾಮಗಳಲ್ಲಿ ಸಿದ್ದರಾಮಯ್ಯ ದೂರಿನ ತನಿಖೆ ಶುರು
ಮೂರು ಆಯಾಮಗಳಲ್ಲಿ ಸಿದ್ದರಾಮಯ್ಯ ದೂರಿನ ತನಿಖೆ ಶುರು
ರಾಯಚೂರಿನಲ್ಲಿ ಈರುಳ್ಳಿ ತುಂಬಿದ ಲಾರಿ ಪಲ್ಟಿ: ಈರುಳ್ಳಿ ಹೊತ್ತೊಯ್ದ ಜನರು
ರಾಯಚೂರಿನಲ್ಲಿ ಈರುಳ್ಳಿ ತುಂಬಿದ ಲಾರಿ ಪಲ್ಟಿ: ಈರುಳ್ಳಿ ಹೊತ್ತೊಯ್ದ ಜನರು
ಕೊಡಗಿನಲ್ಲಿ ತೀರ್ಥೋದ್ಭವ ಸಂಭ್ರಮ: ಜಿಲ್ಲಾಡಳಿತದಿಂದ ವ್ಯಾಪಕ ಸಿದ್ಧತೆ
ಕೊಡಗಿನಲ್ಲಿ ತೀರ್ಥೋದ್ಭವ ಸಂಭ್ರಮ: ಜಿಲ್ಲಾಡಳಿತದಿಂದ ವ್ಯಾಪಕ ಸಿದ್ಧತೆ
ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಪ್ರಶಾಂತ್ ಹಾಗೂ ಗಾನವಿಗೆ ತರಾಟೆ
ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಪ್ರಶಾಂತ್ ಹಾಗೂ ಗಾನವಿಗೆ ತರಾಟೆ
ವಿಡಿಯೋ ಇಟ್ಟುಕೊಂಡು ಎಲ್ಲರನ್ನೂ ಕೈಗೊಂಬೆ ಮಾಡಿಕೊಂಡಿರಬೇಕು: ಹೆಚ್​ಡಿಕೆ
ವಿಡಿಯೋ ಇಟ್ಟುಕೊಂಡು ಎಲ್ಲರನ್ನೂ ಕೈಗೊಂಬೆ ಮಾಡಿಕೊಂಡಿರಬೇಕು: ಹೆಚ್​ಡಿಕೆ
ಕಬ್ಬು ಬೆಳೆಗೆ ಎಂಎಸ್​ಪಿ ನಿಗದಿ ಬಗ್ಗೆ ರೈತರಿಗೆ ಗುಡ್​ನ್ಯೂಸ್ ಕೊಟ್ಟ ಜೋಶಿ
ಕಬ್ಬು ಬೆಳೆಗೆ ಎಂಎಸ್​ಪಿ ನಿಗದಿ ಬಗ್ಗೆ ರೈತರಿಗೆ ಗುಡ್​ನ್ಯೂಸ್ ಕೊಟ್ಟ ಜೋಶಿ