
ಏಷ್ಯನ್ ಗೇಮ್ಸ್ 2026ರ ಮಹಿಳಾ ಟಿ20 ಟೂರ್ನಿಯ ಫೈನಲ್ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ. ಜಪಾನ್‌ನ ನಿಶ್ಶಿನ್‌ನಲ್ಲಿರುವ ಐಚಿ ಪ್ರಿಫೆಕ್ಚರಲ್ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.
ಇನ್ನು ಈ ಹಣಾಹಣಿಯಲ್ಲಿ ಗೆಲ್ಲುವ ತಂಡ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರೆ, ಸೋಲುವ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಗುತ್ತದೆ. ಅಂದರೆ ಉಭಯ ತಂಡಗಳಿಗೂ ಏಷ್ಯನ್ ಗೇಮ್ಸ್ ಪದಕ ಖಚಿತವಾದಂತಾಗಿದೆ. ಆದಾಗ್ಯೂ, ಎರಡೂ ತಂಡಗಳ ಆಟಗಾರ್ತಿಯರು ಜಿದ್ದಾಜಿದ್ದಿನ ಹೋರಾಟ ನಡೆಸಿ ಬಂಗಾರದ ಪದಕಕ್ಕೆ ಕೊರಳೊಡ್ಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಪಂದ್ಯಕ್ಕಾಗಿ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…
ಭಾರತ ಪ್ಲೇಯಿಂಗ್ XI: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಗುಣಲನ್ ಕಮಲಿನಿ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ಶ್ರೇಯಾಂಕಾ ಪಾಟೀಲ್, ಶ್ರೀ ಚರಣಿ, ನಂದನಿ ಶರ್ಮಾ, ಕ್ರಾಂತಿ ಗೌಡ್.
ಶ್ರೀಲಂಕಾ ಪ್ಲೇಯಿಂಗ್ XI: ಇಮೇಶಾ ದುಲಾನಿ, ಚಾಮರಿ ಅಥಾಪತ್ತು (ನಾಯಕಿ), ಹಾಸಿನಿ ಪೆರೇರಾ, ಹರ್ಷಿತಾ ಸಮರವಿಕ್ರಮ, ಕವಿಶಾ ದಿಲ್ಹಾರಿ, ಹನ್ಸಿಮಾ ಕರುಣಾರತ್ನೆ, ಕೌಶಾನಿ ನುತ್ಯಂಗನಾ(ಪ), ಮಿಥಾಲಿ ಅಯೋಧ್ಯಾ, ಕಾವ್ಯಾ ಕವಿಂದಿ, ಚಾಮುಡಿ ಪ್ರಬೋದಾ, ಸುಗಂದಿಕಾ ಕುಮಾರಿ.
ಭಾರತ ಮತ್ತು ಶ್ರೀಲಂಕಾ ನಡುವಣ ಫೈನಲ್ ಪಂದ್ಯವು ಭಾರತೀಯ ಕಾಲಮಾನ ಬೆಳಗ್ಗೆ 10:30ಕ್ಕೆ ಪಂದ್ಯ ಆರಂಭವಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯದ ನೇರ ಪ್ರಸಾರವನ್ನು ‘ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್’ ವಾಹಿನಿಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ‘ಸೋನಿ ಲಿವ್’ ಆ್ಯಪ್ನಲ್ಲೂ ಲೈವ್ ಸ್ಟ್ರೀಮಿಂಗ್ ಇರಲಿದೆ.
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕ) , ರಿಚಾ ಘೋಷ್ (ವಿಕೆಟ್ ಕೀಪರ್), ಸ್ಮೃತಿ ಮಂಧಾನ , ಶಫಾಲಿ ವರ್ಮಾ ,
ಗುಣಲನ್ ಕಮಲಿನಿ , ಭಾರತಿ ಫುಲ್ಮಾಲಿ , ದೀಪ್ತಿ ಶರ್ಮಾ , ಶ್ರೇಯಾಂಕಾ ಪಾಟೀಲ್ , ಶ್ರೀ ಚರಣಿ , ನಂದನಿ ಶರ್ಮಾ , ಕ್ರಾಂತಿ ಗೌಡ್ , ರೇಣುಕಾ ಸಿಂಗ್ ಠಾಕೂರ್ , ಅರುಂಧತಿ ರೆಡ್ಡಿ , ರಾಧಾ ಯಾದವ್.
ಇದನ್ನೂ ಓದಿ: ಲಕ್ಷ್ಮಣ್-ಅಗರ್ಕರ್ ನಡುವೆ ಭಿನ್ನಾಭಿಪ್ರಾಯ: ತಪ್ಪಿದ ವಾಗ್ವಾದ!
ಶ್ರೀಲಂಕಾ ತಂಡ: ಚಾಮರಿ ಅಥಾಪತ್ತು (ನಾಯಕ) , ಕೌಶಾನಿ ನುತ್ಯಂಗನ (ವಿಕೆಟ್ ಕೀಪರ್), ಇಮೇಶಾ ದುಲಾನಿ , ಹಸಿನಿ ಪೆರೆರಾ , ಹರ್ಷಿತಾ ಸಮರವಿಕ್ರಮ , ಕವಿಶಾ ದಿಲ್ಹಾರಿ , ಹನ್ಸಿಮಾ ಕರುಣರತ್ನೆ , ಮಿಥಾಲಿ ಅಯೋಧ್ಯೆ , ಕಾವ್ಯ ಕವಿಂದಿ , ಚಾಮುಡಿ ಪ್ರಬೋದ , ಸುಗಂಧಿಕಾ ಕುಮಾರಿ , ರಶ್ಮಿಕಾ ಸೆವ್ವಾಂಡಿ, ನಿಮಾಶಾ ಮೀಪಗೆ , ಸಂಜನಾ ಕವಿಂದಿ , ಅನುಷ್ಕಾ ಸಂಜೀವಿನಿ.