AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Team India: ಈ ವರ್ಷದ ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಹೀಗಿದೆ

Team India Schedule 2023: ಐಪಿಎಲ್ ಬಳಿಕ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಭಾರತ ತಂಡವು ಎರಡು ಟೆಸ್ಟ್‌ಗಳು, ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಈ ಸರಣಿಯ ವೇಳಾಪಟ್ಟಿ ಇನ್ನಷ್ಟೇ ನಿಗದಿಯಾಗಬೇಕಿದೆ.

Team India: ಈ ವರ್ಷದ ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಹೀಗಿದೆ
Team India
TV9 Web
| Edited By: |

Updated on: Jan 01, 2023 | 10:31 PM

Share

ಹೊಸ ವರ್ಷದಲ್ಲಿ ಟೀಮ್ ಇಂಡಿಯಾ (Team India) ಮೊದಲ ವಾರದಲ್ಲೇ ಅಭಿಯಾನ ಆರಂಭಿಸಲಿದೆ. ಜನವರಿ 3 ರಿಂದ ಭಾರತ ತಂಡದ ಕ್ರಿಕೆಟ್ ವೇಳಾಪಟ್ಟಿ ಶುರುವಾಗಲಿದೆ. ಅದರಂತೆ ಈ ವರ್ಷ ಟೀಮ್ ಇಂಡಿಯಾ ಹಲವು ಸರಣಿಗಳನ್ನು ಹಾಗೂ ಪ್ರತಿಷ್ಠಿತ ಟೂರ್ನಿಗಳನ್ನು ಆಡಲಿದೆ. ಅದರಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಹಾಗೂ ಏಕದಿನ ವಿಶ್ವಕಪ್​ ಪ್ರಮುಖವಾದವು. ಅಂದರೆ ಈ ವರ್ಷ ಐಸಿಸಿ ಟ್ರೋಫಿ ಗೆಲ್ಲಲು ಟೀಮ್ ಇಂಡಿಯಾ ಮುಂದೆ ಎರಡು ಅವಕಾಶಗಳಿವೆ. ಈ ಮೂಲಕ ಭಾರತ ತಂಡವು 9 ವರ್ಷಗಳ ಕಾಯುವಿಕೆಗೆ ಇತಿಶ್ರೀ ಹಾಡಲಿದೆಯಾ ಕಾದು ನೋಡಬೇಕಿದೆ.

ಈ ವರ್ಷದ ಭಾರತ ತಂಡದ ಸಂಪೂರ್ಣ ವೇಳಾಪಟ್ಟಿ ಹೀಗಿದೆ:

ಭಾರತ vs ಶ್ರೀಲಂಕಾ ಸರಣಿ: ಭಾರತದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ. ಈ ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ.

ಇದನ್ನೂ ಓದಿ
Image
IPL 2023: 2 ದೇಶಗಳಿಂದ ಐಪಿಎಲ್​ಗೆ ಆಯ್ಕೆಯಾದ ಏಕೈಕ ಕ್ರಿಕೆಟಿಗ
Image
IPL 2023: RCB ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…
Image
IPL 2023: ಐಪಿಎಲ್​ಗೆ ನಮೀಬಿಯಾ, ಐರ್ಲೆಂಡ್, ಜಿಂಬಾಬ್ವೆ ಆಟಗಾರರು ಎಂಟ್ರಿ
Image
IPL 2023 RCB Team: RCB ಹೊಸ ತಂಡ ಹೀಗಿದೆ
  • 1ನೇ ಟಿ20 ಪಂದ್ಯ (ಜನವರಿ 3) – ಮುಂಬೈ
  • 2ನೇ ಟಿ20 ಪಂದ್ಯ (ಜನವರಿ 5) – ಪುಣೆ
  • 3ನೇ ಟಿ20 (ಜನವರಿ 7) – ರಾಜ್‌ಕೋಟ್
  • 1ನೇ ಏಕದಿನ ಪಂದ್ಯ (ಜನವರಿ 10) – ಗುವಾಹಟಿ
  • 2ನೇ ಏಕದಿನ ಪಂದ್ಯ (ಜನವರಿ 12) – ಕೋಲ್ಕತ್ತಾ
  • 3ನೇ ಏಕದಿನ ಪಂದ್ಯ (ಜನವರಿ 15) – ತಿರುವನಂತಪುರ

ಭಾರತ vs ನ್ಯೂಜಿಲೆಂಡ್ ಸರಣಿ: ಭಾರತದಲ್ಲೇ ನಡೆಯಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಒಟ್ಟು 6 ಪಂದ್ಯಗಳನ್ನು ಆಡಲಿದೆ. ಈ ಸರಣಿಯ ವೇಳಾಪಟ್ಟಿ ಹೀಗಿದೆ.

  • 1ನೇ ಏಕದಿನ ಪಂದ್ಯ (ಹೈದರಾಬಾದ್) – ಜನವರಿ 18
  • 2ನೇ ಏಕದಿನ ಪಂದ್ಯ (ರಾಯಪುರ) – ಜನವರಿ 21
  • 3ನೇ ಏಕದಿನ ಪಂದ್ಯ (ಇಂಧೋರ್) – ಜನವರಿ 24
  • 1ನೇ ಟಿ20 ಪಂದ್ಯ (ರಾಂಚಿ) – ಜನವರಿ 27
  • 2ನೇ ಟಿ20 ಪಂದ್ಯ (ಲಕ್ನೋ) – ಜನವರಿ 29
  • 3ನೇ ಟಿ20 ಪಂದ್ಯ (ಅಹಮದಾಬಾದ್) – ಫೆಬ್ರವರಿ 1

ಭಾರತ vs ಆಸ್ಟ್ರೇಲಿಯಾ: ಫೆಬ್ರವರಿ 2023 ರಲ್ಲಿ ಪ್ರಾರಂಭವಾಗುವ  ಈ ಐತಿಹಾಸಿಕ ಟೆಸ್ಟ್​​ ಸರಣಿಯು ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್​ನ ಭಾರತದ ಅಂತಿಮ ಸರಣಿಯಾಗಿದೆ. ಈ ಸರಣಿಯಲ್ಲಿ ಭಾರತ ನಾಲ್ಕು ಟೆಸ್ಟ್ ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಈ ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ.

  • 1ನೇ ಟೆಸ್ಟ್ ಪಂದ್ಯ (ನಾಗ್ಪುರ) – ಫೆಬ್ರವರಿ 9-13
  • 2ನೇ ಟೆಸ್ಟ್ ಪಂದ್ಯ (ದೆಹಲಿ) – ಫೆಬ್ರವರಿ 17-21
  • 3ನೇ ಟೆಸ್ಟ್ ಪಂದ್ಯ (ಧರ್ಮಶಾಲಾ) – ಮಾರ್ಚ್ 1-5
  • 4ನೇ ಟೆಸ್ಟ್ ಪಂದ್ಯ (ಅಹಮದಾಬಾದ್) – ಮಾರ್ಚ್ 9-13
  • 1ನೇ ಏಕದಿನ ಪಂದ್ಯ (ಮುಂಬೈ) – ಮಾರ್ಚ್ 17
  • 2ನೇ ಏಕದಿನ ಪಂದ್ಯ (ವಿಶಾಖಪಟ್ಟಣಂ) – ಮಾರ್ಚ್ 19
  • 3ನೇ ಏಕದಿನ ಪಂದ್ಯ (ಚೆನ್ನೈ) – ಮಾರ್ಚ್ 22

ಮಾರ್ಚ್ ರಿಂದ ಮೇ ತಿಂಗಳು- ಐಪಿಎಲ್ 2023

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಜೂನ್​ ತಿಂಗಳಲ್ಲಿ ಇಂಗ್ಲೆಂಡ್​ನ ಓವಲ್​ ಮೈದಾನದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಸದ್ಯ ವರ್ಲ್ಡ್​ ಟೆಸ್ಟ್ ಚಾಂಪಿಯನ್​ಶಿಪ್ ಪಾಯಿಂಟ್ ಟೇಬಲ್​ನಲ್ಲಿ 2ನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾ ಫೈನಲ್ ಆಡುವ ವಿಶ್ವಾಸದಲ್ಲಿದೆ.

ವೆಸ್ಟ್ ಇಂಡೀಸ್ vs ಭಾರತ: ಐಪಿಎಲ್ ಬಳಿಕ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಭಾರತ ತಂಡವು ಎರಡು ಟೆಸ್ಟ್‌ಗಳು, ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಈ ಸರಣಿಯ ವೇಳಾಪಟ್ಟಿ ಇನ್ನಷ್ಟೇ ನಿಗದಿಯಾಗಬೇಕಿದೆ.

ಏಷ್ಯಾ ಕಪ್ 2023: ಈ ವರ್ಷ ಸೆಪ್ಟೆಂಬರ್​ನಲ್ಲಿ ಪಾಕಿಸ್ತಾನದಲ್ಲಿ ಏಷ್ಯಾಕಪ್ ಕೂಡ ನಡೆಯಲಿದೆ. ಈ ಬಾರಿ ಪಾಕ್​ನಲ್ಲಿ ಟೂರ್ನಿ ನಡೆದರೆ ಭಾರತ ಭಾಗವಹಿಸುವುದು ಅನುಮಾನ. ಈಗಾಗಲೇ ತಟಸ್ಥ ಸ್ಥಳದಲ್ಲಿ ಏಷ್ಯಾಕಪ್ ಅನ್ನು ಆಯೋಜಿಸುವಂತೆ ಬಿಸಿಸಿಐಗೆ ಪಾಕ್ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದೆ. ಹೀಗಾಗಿ ಏಷ್ಯಾಕಪ್ ಆಯೋಜನೆ ಮತ್ತು ವೇಳಾಪಟ್ಟಿ ಇನ್ನೂ ಕೂಡ ಫೈನಲ್ ಆಗಿಲ್ಲ.

ಭಾರತ vs ಆಸ್ಟ್ರೇಲಿಯಾ: ಅಕ್ಟೋಬರ್ ತಿಂಗಳಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲು ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬರಲಿದೆ.

ಏಕದಿನ ವಿಶ್ವಕಪ್: ಅಕ್ಟೋಬರ್/ನವೆಂಬರ್​ನಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. 2011 ರಲ್ಲಿ ಕೊನೆಯ ಬಾರಿ ಏಕದಿನ ವಿಶ್ವಕಪ್​ಗೆ ಭಾರತ ಆತಿಥ್ಯವಹಿಸಿದ್ದ ವೇಳೆ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಹೀಗಾಗಿ ಈ ಬಾರಿ ಕೂಡ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಈ ಬಿಗ್ ಟೂರ್ನಿಯ ವೇಳಾಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಿದೆ.

ಆಸ್ಟ್ರೇಲಿಯಾ vs ಭಾರತ: ನವೆಂಬರ್/ಡಿಸೆಂಬರ್​ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಚುಟುಕು ಸರಣಿ ಆಡಲಿದೆ. ಈ ಸರಣಿಯಲ್ಲಿ ಐದು ಟಿ20 ಪಂದ್ಯಗಳನ್ನು ಆಡಲಿದೆ. ಈ ಸರಣಿಯ ವೇಳಾಪಟ್ಟಿ ಇನ್ನೂ ಕೂಡ ನಿಗದಿಯಾಗಿಲ್ಲ.

ಭಾರತ vs ದಕ್ಷಿಣ ಆಫ್ರಿಕಾ: ಟೀಮ್ ಇಂಡಿಯಾ 2023ರ ಕೊನೆಯ ಸರಣಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಆಡಲಿದೆ. ಈ ಸರಣಿಯಲ್ಲಿ ಎರಡು ಟೆಸ್ಟ್‌, ಮೂರು ಏಕದಿನ ಮತ್ತು ಎರಡು ಟಿ20 ಪಂದ್ಯಗಳನ್ನು ಆಡಲಿವೆ.

ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ