ಏಷ್ಯಾಕಪ್​ಗೆ 17 ಸದಸ್ಯರ ಸಂಭಾವ್ಯ ಟೀಮ್ ಇಂಡಿಯಾ ಹೀಗಿದೆ

Asia Cup 2023: ಈ ಬಾರಿಯ ಏಷ್ಯಾಕಪ್ ಆಗಸ್ಟ್ 30 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ನೇಪಾಳ ವಿರುದ್ಧ ಕಣಕ್ಕಿಳಿಯಲಿದೆ. ಇನ್ನು ಟೀಮ್ ಇಂಡಿಯಾ ಸೆಪ್ಟೆಂಬರ್ 2 ರಂದು ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.

ಏಷ್ಯಾಕಪ್​ಗೆ 17 ಸದಸ್ಯರ ಸಂಭಾವ್ಯ ಟೀಮ್ ಇಂಡಿಯಾ ಹೀಗಿದೆ
Team India
Edited By:

Updated on: Aug 20, 2023 | 4:03 PM

ಏಷ್ಯಾಕಪ್ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಈ ಟೂರ್ನಿಗಾಗಿ ಈಗಾಗಲೇ ಪಾಕಿಸ್ತಾನ್, ನೇಪಾಳ ಹಾಗೂ ಬಾಂಗ್ಲಾದೇಶ್ ತಂಡಗಳನ್ನು ಘೋಷಿಸಲಾಗಿದೆ. ಇತ್ತ ಭಾರತ ತಂಡವನ್ನು ಸೋಮವಾರ ಮಧ್ಯಾಹ್ನ ಪ್ರಕಟಿಸಲಾಗುತ್ತದೆ ಎಂದು ವರದಿಯಾಗಿದೆ. ಆದರೆ ಈ ತಂಡದಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಗಲಿದೆ ಎಂಬುದೇ ಈಗ ಕುತೂಹಲ.

ಏಕೆಂದರೆ ಈ ಬಾರಿಯ ಏಷ್ಯಾಕಪ್​ಗಾಗಿ 17 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗುತ್ತಿದೆ. ಇವರಲ್ಲಿ 15 ಮಂದಿ ಏಕದಿನ ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳಬಹುದು. ಇತ್ತ ತಂಡದಿಂದ ಹೊರಗುಳಿದಿದ್ದ ಕೆಎಲ್ ರಾಹುಲ್, ಜಸ್​ಪ್ರೀತ್ ಬುಮ್ರಾ ಹಾಗೂ ಶ್ರೇಯಸ್ ಅಯ್ಯರ್ ಕೂಡ ಕಂಬ್ಯಾಕ್​ಗೆ ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ಈ ಮೂವರ ಆಗಮನದೊಂದಿಗೆ ಕೆಲ ಆಟಗಾರರಿಗೆ ಗೇಟ್ ಪಾಸ್ ಸಿಗುವುದು ಖಚಿತ.

ಇಲ್ಲಿ ಯಾರಿಗೆಲ್ಲಾ ಗೇಟ್ ಪಾಸ್ ಸಿಗಲಿದೆ, ಯಾರೆಲ್ಲಾ 17 ಸದಸ್ಯರ ಬಳಗದಲ್ಲಿ ಉಳಿದುಕೊಳ್ಳಲಿದ್ದಾರೆ ಎಂಬುದೇ ಈಗ ಕುತೂಹಲ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ತಂಡ ಹೀಗಿದೆ…

  1. ರೋಹಿತ್ ಶರ್ಮಾ (ನಾಯಕ)
  2. ಶುಭ್​ಮನ್ ಗಿಲ್
  3. ವಿರಾಟ್ ಕೊಹ್ಲಿ
  4. ಕೆಎಲ್ ರಾಹುಲ್ (ವಿಕೆಟ್ ಕೀಪರ್)
  5. ಶ್ರೇಯಸ್ ಅಯ್ಯರ್
  6. ಹಾರ್ದಿಕ್ ಪಾಂಡ್ಯ
  7. ರವೀಂದ್ರ ಜಡೇಜಾ
  8. ಜಸ್​ಪ್ರೀತ್ ಬುಮ್ರಾ
  9. ಮೊಹಮ್ಮದ್ ಶಮಿ
  10. ಕುಲ್ದೀಪ್ ಯಾದವ್
  11. ಮೊಹಮ್ಮದ್ ಸಿರಾಜ್
  12. ಇಶಾನ್ ಕಿಶನ್ (ವಿಕೆಟ್ ಕೀಪರ್)
  13. ಅಕ್ಷರ್ ಪಟೇಲ್
  14. ಶಾರ್ದೂಲ್ ಠಾಕೂರ್
  15. ಸೂರ್ಯಕುಮಾರ್ ಯಾದವ್
  16. ತಿಲಕ್ ವರ್ಮಾ
  17. ರವಿಚಂದ್ರನ್ ಅಶ್ವಿನ್

ಇಲ್ಲಿ ಫಿಟ್​​ನೆಸ್ ಟೆಸ್ಟ್ ಕ್ಲಿಯರೆನ್ಸ್ ಪಡೆದರೆ ಮಾತ್ರ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಆಯ್ಕೆಯಾಗಲಿದ್ದಾರೆ. ಹಾಗೆಯೇ ಅಶ್ವಿನ್ ಅವರನ್ನು ಕೈ ಬಿಟ್ಟರೆ ಯುಜ್ವೇಂದ್ರ ಚಹಲ್​ಗೆ ಚಾನ್ಸ್ ಸಿಗುವ ಸಾಧ್ಯತೆ ಕೂಡ ಇದೆ. ಹಾಗೆಯೇ ಎಡಗೈ ದಾಂಡಿಗರ ಕೊರತೆಯ ಕಾರಣ ಯುವ ಆಟಗಾರ ತಿಲಕ್ ವರ್ಮಾಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ.  ಇನ್ನು ಇಶಾನ್ ಕಿಶನ್ ಅವರನ್ನು ಕೈ ಬಿಟ್ಟರೆ ಮಾತ್ರ ಸಂಜು ಸ್ಯಾಮ್ಸನ್​ಗೆ ಚಾನ್ಸ್ ಸಿಗಬಹುದು. ಈ ಎಲ್ಲಾ ಕಾರಣಗಳಿಂದಾಗಿಯೇ ಅಂತಿಮ 17 ಸದಸ್ಯರ ಬಳಗದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಏರ್ಪಟ್ಟಿದೆ.

ಇದನ್ನೂ ಓದಿ: ಜಸ್​ಪ್ರೀತ್ ಬುಮ್ರಾ ಟಿ20 ತಂಡದ 11ನೇ ನಾಯಕ: ಉಳಿದ 10 ಕ್ಯಾಪ್ಟನ್​ಗಳ ಪಟ್ಟಿ ಇಲ್ಲಿದೆ

ಏಷ್ಯಾಕಪ್ ಯಾವಾಗ ಶುರು?

ಈ ಬಾರಿಯ ಏಷ್ಯಾಕಪ್ ಆಗಸ್ಟ್ 30 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ನೇಪಾಳ ವಿರುದ್ಧ ಕಣಕ್ಕಿಳಿಯಲಿದೆ. ಇನ್ನು ಟೀಮ್ ಇಂಡಿಯಾ ಸೆಪ್ಟೆಂಬರ್ 2 ರಂದು ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಹೀಗಾಗಿ ಭಾರತ ತಂಡದ ಮೊದಲ ಪಂದ್ಯದಲ್ಲೇ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.