IPL 2021 Final: ಮುಗಿಯಿತಾ ಸುರೇಶ್ ರೈನಾ ಯುಗ? ಫೈನಲ್ ಪಂದ್ಯದಲ್ಲೂ ಮಿಸ್ಟರ್ ಐಪಿಎಲ್​ಗೆ ಅವಕಾಶ ಸಿಗಲಿಲ್ಲ!

| Updated By: ಪೃಥ್ವಿಶಂಕರ

Updated on: Oct 15, 2021 | 7:42 PM

CSK vs KKR: ಐಪಿಎಲ್ 2021 ರಲ್ಲಿ ಸುರೇಶ್ ರೈನಾ ಅವರ ಪ್ರದರ್ಶನವು ತುಂಬಾ ಕಳಪೆಯಾಗಿದೆ. ಅವರು 12 ಪಂದ್ಯಗಳಲ್ಲಿ 17.77 ಸರಾಸರಿಯಲ್ಲಿ ಕೇವಲ 160 ರನ್ ಗಳಿಸಿದರು.

IPL 2021 Final: ಮುಗಿಯಿತಾ ಸುರೇಶ್ ರೈನಾ ಯುಗ? ಫೈನಲ್ ಪಂದ್ಯದಲ್ಲೂ ಮಿಸ್ಟರ್ ಐಪಿಎಲ್​ಗೆ ಅವಕಾಶ ಸಿಗಲಿಲ್ಲ!
ಸುರೇಶ್ ರೈನಾ
Follow us on

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಫಾರ್ಮ್​ಗಿಂತ ಅನುಭವವನ್ನು ನಂಬುತ್ತಾರೆ ಎಂದು ಹೇಳಲಾಗಿದೆ. ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಡ್ವೇನ್ ಬ್ರಾವೊ, ಅಂಬಟಿ ರಾಯುಡು ಇದಕ್ಕೆ ಸಾಕ್ಷಿ. ಆದರೆ ಐಪಿಎಲ್ 2021 ರ ಫೈನಲ್‌ನಲ್ಲಿ ಬೇರೆಯದೇ ಘಟನೆ ಸಂಭವಿಸಿದೆ. ಎಂಎಸ್ ಧೋನಿ, ಸುರೇಶ್ ರೈನಾ ಅವರಿಗೆ ಆಡುವ ಇಲೆವೆನ್‌ನಲ್ಲಿ ಅವಕಾಶ ನೀಡಿಲ್ಲ. ಚೆನ್ನೈ ಪರ ಸುರೇಶ್ ರೈನಾ ಐಪಿಎಲ್ ಫೈನಲ್ ಆಡದಿರುವುದು ಇದೇ ಮೊದಲು.

ಸುರೇಶ್ ರೈನಾ 8 ಐಪಿಎಲ್ ಫೈನಲ್ ಆಡಿದ ಅನುಭವ ಹೊಂದಿದ್ದು ಅದ್ಭುತ ಪ್ರದರ್ಶನ ನೀಡಿದ್ದಾರೆ. 8 ಐಪಿಎಲ್ ಫೈನಲ್‌ಗಳಲ್ಲಿ 35.57 ಸರಾಸರಿಯಲ್ಲಿ 249 ರನ್ ಗಳಿಸಿದ್ದಾರೆ. ಇದರಲ್ಲಿ ಅರ್ಧಶತಕಗಳು ಅವರ ಬ್ಯಾಟ್‌ನಿಂದ ಹೊರಬಂದಿವೆ. ಚೆನ್ನೈ ಕಳೆದ ಮೂರು ಪಂದ್ಯಗಳಲ್ಲಿ ಸುರೇಶ್ ರೈನಾರನ್ನು ತಮ್ಮ ಆಡುವ ಇಲೆವೆನ್​ನಿಂದ ಹೊರಗಿಟ್ಟಿದೆ. ಸ್ನಾಯು ಸೆಳೆತದಿಂದ ರೈನಾ ಹೊರಗಿದ್ದಾರೆ ಎಂದು ಧೋನಿ ಹೇಳಿದ್ದರು. ಆದರೆ ಅದರ ನಂತರ ಅವರ ಗಾಯದ ಬಗ್ಗೆ ಯಾವುದೇ ಅಪ್‌ಡೇಟ್ ಇರಲಿಲ್ಲ ಮತ್ತು ಅವರ ಸ್ಥಾನದಲ್ಲಿ ಪ್ಲೇಯಿಂಗ್ ಇಲೆವೆನ್‌ಗೆ ಸೇರಿದ ರಾಬಿನ್ ಉತ್ತಪ್ಪ ಕೂಡ ಉತ್ತಮ ಪ್ರದರ್ಶನ ನೀಡಿದರು.

ಕ್ವಾಲಿಫೈಯರ್ 1 ರಲ್ಲಿ ರಾಬಿನ್ ಉತ್ತಪ್ಪಗೆ ಅವಕಾಶ
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಉತ್ತಪ್ಪ ಅವರು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಅದ್ಭುತ ಅರ್ಧಶತಕದ ಆಟ ಆಡಿದರು. ಅದರ ಆಧಾರದ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್​ಗೆ ಟಿಕೆಟ್ ಪಡೆಯಿತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಬಿನ್ ಉತ್ತಪ್ಪ 44 ಎಸೆತಗಳಲ್ಲಿ 63 ರನ್ ಗಳಿಸಿದರು, ಇದರಲ್ಲಿ ಅವರು 2 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಬಾರಿಸಿದರು.

ರೈನಾ ಪ್ರದರ್ಶನ ತುಂಬಾ ಕಳಪೆಯಾಗಿತ್ತು
ಐಪಿಎಲ್ 2021 ರಲ್ಲಿ ಸುರೇಶ್ ರೈನಾ ಅವರ ಪ್ರದರ್ಶನವು ತುಂಬಾ ಕಳಪೆಯಾಗಿದೆ. ಅವರು 12 ಪಂದ್ಯಗಳಲ್ಲಿ 17.77 ಸರಾಸರಿಯಲ್ಲಿ ಕೇವಲ 160 ರನ್ ಗಳಿಸಿದರು. ರೈನಾ ಕಳೆದ ಋತುವಿನಲ್ಲಿ ಆಡಲಿಲ್ಲ ಮತ್ತು ಈ ಬಾರಿ ಅವರ ಬ್ಯಾಟ್ ಸದ್ದು ಮಾಡಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಋತುವಿನಲ್ಲಿ ಅವರನ್ನು ತಮ್ಮೊಂದಿಗೆ ಇಟ್ಟುಕೊಳ್ಳುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ರೈನಾ ಮೆಗಾ ಹರಾಜಿನಲ್ಲಿ ಭಾಗಿಯಾಗುತ್ತಾರೆ ಎಂದು ಈಗ ಊಹಿಸಲಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್ – ಫಾಫ್ ಡು ಪ್ಲೆಸಿಸ್, ರಿತುರಾಜ್ ಗಾಯಕವಾಡ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಮೊಯೀನ್ ಅಲಿ, ಎಂಎಸ್ ಧೋನಿ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜೋಶ್ ಹಜಲ್ ವುಡ್, ದೀಪಕ್ ಚಹಾರ್ ಮತ್ತು ಡ್ವೇನ್ ಬ್ರಾವೋ.

ಕೊಲ್ಕತ್ತಾ ನೈಟ್ ರೈಡರ್ಸ್ XI – ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮಾರ್ಗನ್, ದಿನೇಶ್ ಕಾರ್ತಿಕ್, ಶಕೀಬ್ ಅಲ್ ಹಸನ್, ಲೋಕಿ ಫರ್ಗುಸನ್, ವರುಣ್ ಚಕ್ರವರ್ತಿ, ಸುನಿಲ್ ನರೈನ್ ಮತ್ತು ಶಿವಂ ಮಾವಿ.