AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021 Orange Cap: 2 ರನ್ ಅಂತರದಲ್ಲಿ ಆರೆಂಜ್ ಕ್ಯಾಪ್ ಗೆದ್ದು ಇತಿಹಾಸ ಬರೆದ ರುತುರಾಜ್ ಗಾಯಕ್ವಾಡ್..!

IPL 2021 Orange Cap: ಆಶ್ಚರ್ಯಕರ ಸಂಗತಿಯೆಂದರೆ ರುತುರಾಜ್ ಕೇವಲ 2 ರನ್​ಗಳ ಅಂತರದಲ್ಲಿ ಆರೆಂಜ್ ಕ್ಯಾಪ್ ಗೆದ್ದರು. ರುತುರಾಜ್ ಗಾಯಕ್ವಾಡ್ 633 ರನ್ ಗಳಿಸಿದ ತಮ್ಮದೇ ತಂಡದ ಸಹ ಆಟಗಾರ ಫಾಫ್ ಡು ಪ್ಲೆಸಿಸ್ ಅವರಿಂದ ಕಠಿಣ ಸ್ಪರ್ಧೆಯನ್ನು ಎದುರಿಸಿದರು.

IPL 2021 Orange Cap: 2 ರನ್ ಅಂತರದಲ್ಲಿ ಆರೆಂಜ್ ಕ್ಯಾಪ್ ಗೆದ್ದು ಇತಿಹಾಸ ಬರೆದ ರುತುರಾಜ್ ಗಾಯಕ್ವಾಡ್..!
ರುತುರಾಜ್, ಧೋನಿ
TV9 Web
| Updated By: Vinay Bhat|

Updated on: Oct 16, 2021 | 6:35 AM

Share

ಆರೆಂಜ್ ಕ್ಯಾಪ್ ವಿಜೇತರನ್ನು ಅಂತಿಮವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ 2021 ರ ಅಂತಿಮ ಪಂದ್ಯದಲ್ಲಿ ನಿರ್ಧರಿಸಲಾಯಿತು. ರುತುರಾಜ್ ಗಾಯಕ್ವಾಡ್ ಅತ್ಯಧಿಕ ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದರು. ಆಶ್ಚರ್ಯಕರ ಸಂಗತಿಯೆಂದರೆ ರುತುರಾಜ್ ಕೇವಲ 2 ರನ್​ಗಳ ಅಂತರದಲ್ಲಿ ಆರೆಂಜ್ ಕ್ಯಾಪ್ ಗೆದ್ದರು. ರುತುರಾಜ್ ಗಾಯಕ್ವಾಡ್ 633 ರನ್ ಗಳಿಸಿದ ತಮ್ಮದೇ ತಂಡದ ಸಹ ಆಟಗಾರ ಫಾಫ್ ಡು ಪ್ಲೆಸಿಸ್ ಅವರಿಂದ ಕಠಿಣ ಸ್ಪರ್ಧೆಯನ್ನು ಎದುರಿಸಿದರು. ರುತುರಾಜ್ ಗಾಯಕ್ವಾಡ್ 635 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಅನ್ನು ವಶಪಡಿಸಿಕೊಂಡರು.

ಅಂತಿಮ ಪಂದ್ಯದಲ್ಲಿ, ಡು ಪ್ಲೆಸಿಸ್ 59 ಎಸೆತಗಳಲ್ಲಿ 86 ರನ್ ಗಳಿಸಿದರು ಮತ್ತು ಅವರು ಕೇವಲ 2 ರನ್ಗಳಿಂದ ಆರೆಂಜ್ ಕ್ಯಾಪ್ ಗೆಲ್ಲುವಲ್ಲಿ ವಿಫಲರಾದರು. ಮತ್ತೊಂದೆಡೆ, ಚೆನ್ನೈ ಇನ್ನಿಂಗ್ಸ್ ಮುಗಿದ ನಂತರ, ರಿತುರಾಜ್ ಗಾಯಕ್ವಾಡ್ ಹೃದಯ ಗೆಲ್ಲುವ ಹೇಳಿಕೆ ನೀಡಿದರು. ಆರೆಂಜ್ ಕ್ಯಾಪ್ ಗೆಲ್ಲಲು ತನಗೆ ಇಷ್ಟವಿಲ್ಲ ಎಂದು ರಿತುರಾಜ್ ಗಾಯಕವಾಡ್ ಹೇಳಿದರು. ಕೊನೆಯ ಚೆಂಡಿನಲ್ಲಿ ಡು ಪ್ಲೆಸಿಸ್ ಸಿಕ್ಸರ್ ಬಾರಿಸಬೇಕೆಂದು ನಾನು ಬಯಸಿದ್ದೆ ಎಂದು ಹೇಳಿದರು. ಡು ಪ್ಲೆಸಿಸ್ ಕೊನೆಯ ಎಸೆತದಲ್ಲಿ ಔಟಾಗದಿದ್ದರೆ ಅವರ ಶಾಟ್ 6 ರನ್​ಗಳಿಗೆ ಹೋಗಿದ್ದರೆ, ಆರೆಂಜ್ ಕ್ಯಾಪ್ ಅವರದಾಗುತ್ತಿತ್ತು.

ಐಪಿಎಲ್​ನಲ್ಲಿ ಇತಿಹಾಸ ಸೃಷ್ಟಿಸಿದ ರುತುರಾಜ್ ಹರ್ಷ ಭೋಗ್ಲೆ ಅವರೊಂದಿಗಿನ ಸಂಭಾಷಣೆಯಲ್ಲಿ ರುತುರಾಜ್, ಡು ಪ್ಲೆಸಿಸ್ ಕೊನೆಯ ಬಾಲ್‌ನಲ್ಲಿ ಸಿಕ್ಸರ್ ಬಾರಿಸಬೇಕೆಂದು ನಾನು ಬಯಸಿದ್ದೆ ಏಕೆಂದರೆ ಅವರು ತಂಡಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದರು ಎಂದರು. ಆದರೆ ಆರೆಂಜ್ ಕ್ಯಾಪ್ ಗೆಲ್ಲುವ ಮೂಲಕ ರಿತುರಾಜ್ ಗಾಯಕ್ವಾಡ್ ಇತಿಹಾಸ ಸೃಷ್ಟಿಸಿದ್ದಾರೆ. ಅವರು ಐಪಿಎಲ್ ಇತಿಹಾಸದಲ್ಲಿ ಆರೆಂಜ್ ಕ್ಯಾಪ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ರಿತುರಾಜ್ ಕೇವಲ 24 ವರ್ಷ, 257 ದಿನಗಳ ವಯಸ್ಸಿನಲ್ಲಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. 24 ವರ್ಷ, 328 ದಿನಗಳ ವಯಸ್ಸಿನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಶಾನ್ ಮಾರ್ಷ್ ಅವರ ದಾಖಲೆಯನ್ನು ಗಾಯಕ್ವಾಡ್ ಮುರಿದರು. ವಿರಾಟ್ ಕೊಹ್ಲಿ 27 ವರ್ಷ, 206 ದಿನಗಳ ವಯಸ್ಸಿನಲ್ಲಿ ಆರೆಂಜ್ ಕ್ಯಾಪ್ ಅನ್ನು ವಶಪಡಿಸಿಕೊಂಡಿದ್ದರು.

ಡು ಪ್ಲೆಸಿಸ್ ಮತ್ತು ಗಾಯಕವಾಡ್ ಅವರ ವೈಭವ ಐಪಿಎಲ್ 2021 ರಲ್ಲಿ ಫಾಫ್ ಡು ಪ್ಲೆಸಿಸ್ ಮತ್ತು ರುತುರಾಜ್ ಗಾಯಕವಾಡ್ ಅದ್ಭುತ ಪ್ರದರ್ಶನ ನೀಡಿದ್ದರು. ಇಬ್ಬರೂ ಓಪನರ್‌ಗಳು ಚೆನ್ನೈ ಬ್ಯಾಟಿಂಗ್‌ನ ಸಂಪೂರ್ಣ ಹೊರೆಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡರು. ಚೆನ್ನೈಗೆ ಮೊದಲ ಬಾರಿಗೆ, ಇಬ್ಬರು ಬ್ಯಾಟ್ಸ್‌ಮನ್‌ಗಳು ಒಂದು ಋತುವಿನಲ್ಲಿ 600 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈ ಸಾಧನೆಯನ್ನು ಆರ್‌ಸಿಬಿ ಎರಡು ಬಾರಿ ಮಾಡಿದೆ. ಕ್ರಿಸ್ ಗೇಲ್ ಮತ್ತು ವಿರಾಟ್ ಕೊಹ್ಲಿ 2013 ರಲ್ಲಿ ಮತ್ತು ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ 2016 ರಲ್ಲಿ ಈ ಸಾಧನೆ ಮಾಡಿದರು.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ