IPL 2021: 4 ಎಸೆತಗಳಲ್ಲಿ ಪಂದ್ಯದ ದಿಕ್ಕನ್ನು ಬದಲಿಸಿದ ಜಡೇಜಾ! ಚೆನ್ನೈ ಎದುರು ಸೋತ ಕೋಲ್ಕತ್ತಾ
IPL 2021: ರವೀಂದ್ರ ಜಡೇಜಾ ಮೂರನೇ ಮತ್ತು ನಾಲ್ಕನೇ ಎಸೆತಗಳಲ್ಲಿ ಸಿಕ್ಸರ್ ಬಾರಿಸಿದರು ಮತ್ತು ನಂತರ ಕೊನೆಯ ಎರಡು ಎಸೆತಗಳಲ್ಲಿ ಬೌಂಡರಿ ಬಾರಿಸಿದರು. ಈ ರೀತಿಯಲ್ಲಿ 19 ನೇ ಓವರ್ ನಿಂದ 22 ರನ್ಗಳು ಬಂದವು.

ಐಪಿಎಲ್ 2021 ರಲ್ಲಿ ರವೀಂದ್ರ ಜಡೇಜಾ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸಿಡಿದೆದ್ದರು. ಚೆನ್ನೈ ಸೂಪರ್ ಕಿಂಗ್ಸ್ನ ಈ ಸ್ಟಾರ್ ಆಲ್ ರೌಂಡರ್ 19ನೇ ಓವರ್‌ನಲ್ಲಿ ಅಬ್ಬರಿಸಿದರು. ಪ್ರಸಿದ್ಧ್ ಕೃಷ್ಣ ಓವರ್‌ನಲ್ಲಿ ರವೀಂದ್ರ ಜಡೇಜಾ ಬರೋಬ್ಬರಿ 21 ರನ್ಗಳನ್ನು ಲೂಟಿ ಮಾಡಿದರು. ಇದರ ಫಲವಾಗಿ ಕೊನೆಯ ಓವರ್‌ನಲ್ಲಿ, CSK ಗೆಲುವಿಗೆ ನಾಲ್ಕು ರನ್ ಅವಶ್ಯಕತೆ ಇತ್ತು. ಆದರೆ 19 ನೇ ಓವರ್‌ನಲ್ಲಿ ಜಡೇಜಾ ಮಾಡಿದ ಅದ್ಭುತ ಕೆಲಸದಿಂದಾಗಿ, ತಂಡವು ಅಂತಿಮವಾಗಿ ಗೆದ್ದಿತು. ಈ ರೀತಿಯಾಗಿ, ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡವು 10 ರಲ್ಲಿ ಎಂಟನೇ ಪಂದ್ಯವನ್ನು ಗೆಲ್ಲುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಅದೇ ಸಮಯದಲ್ಲಿ, ದ್ವಿತೀಯಾರ್ಧದಲ್ಲಿ ಹ್ಯಾಟ್ರಿಕ್ ಗೆಲುವಿನ ಕೆಕೆಆರ್ ಕನಸು ಭಗ್ನಗೊಂಡಿತು. ಮೊದಲು ಆಡಿದ ಕೆಕೆಆರ್ ಆರು ವಿಕೆಟ್ಗೆ 171 ರನ್ ಗಳಿಸಿತ್ತು. ಪಂದ್ಯದ ಕೊನೆಯ ಎಸೆತದಲ್ಲಿ ಎಂಟು ವಿಕೆಟ್ ನಷ್ಟಕ್ಕೆ CSK ಈ ಗುರಿಯನ್ನು ಸಾಧಿಸಿತು.
ಕೊನೆಯ 3 ಓವರ್ ಹೀಗಿದ್ದವು 18 ನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಬಂದರು. ಆ ಸಮಯದಲ್ಲಿ ಚೆನ್ನೈ ಗೆಲುವಿಗೆ 17 ಎಸೆತಗಳಲ್ಲಿ 30 ರನ್ ಬೇಕಿತ್ತು. ಆದರೆ ಎರಡು ಎಸೆತಗಳ ನಂತರ ಮಹೇಂದ್ರ ಸಿಂಗ್ ಧೋನಿ ಬೌಲ್ಡ್ ಆದರು. ಅವರನ್ನು ವರುಣ್ ಚಕ್ರವರ್ತಿ ಔಟ್ ಮಾಡಿದರು. ಚೆನ್ನೈ 18 ನೇ ಓವರ್‌ನಲ್ಲಿ ಐದು ರನ್ ಗಳಿಸಿತು. ಗೆಲುವಿಗೆ 12 ಎಸೆತಗಳಲ್ಲಿ 26 ರನ್ ಬೇಕಿತ್ತು. ಇಂತಹ ಪರಿಸ್ಥಿತಿಯಲ್ಲಿ, ಕೋಲ್ಕತ್ತಾದ ನಾಯಕ ಇಯಾನ್ ಮಾರ್ಗನ್ ಚೆಂಡನ್ನು ಪ್ರಸಿದ್ಧ ಕೃಷ್ಣರಿಗೆ ಹಸ್ತಾಂತರಿಸಿದರು. 19 ನೇ ಓವರ್‌ನ ಮೊದಲ ಎಸೆತದಲ್ಲಿ ಜಡೇಜಾ ರನ್ ಗಳಿಸಿದರು.
ನಂತರ ಸ್ಯಾಮ್ ಕರಣ್ ಕೂಡ ಸಿಂಗಲ್ ತೆಗೆದುಕೊಂಡು ಜಡೇಜಾಗೆ ಸ್ಟ್ರೈಕ್ ನೀಡಿದರು. ಪಂದ್ಯವು ಚೆನ್ನೈ ಕೈಯಿಂದ ಜಾರಿಬೀಳುತ್ತಿತ್ತು. ಅವರಿಗೆ ಗೆಲ್ಲಲು 10 ಎಸೆತಗಳಲ್ಲಿ 24 ರನ್ ಬೇಕಿತ್ತು. ಇಂತಹ ಪರಿಸ್ಥಿತಿಯಲ್ಲಿ, ರವೀಂದ್ರ ಜಡೇಜಾ ಮೂರನೇ ಮತ್ತು ನಾಲ್ಕನೇ ಎಸೆತಗಳಲ್ಲಿ ಸಿಕ್ಸರ್ ಬಾರಿಸಿದರು ಮತ್ತು ನಂತರ ಕೊನೆಯ ಎರಡು ಎಸೆತಗಳಲ್ಲಿ ಬೌಂಡರಿ ಬಾರಿಸಿದರು. ಈ ರೀತಿಯಲ್ಲಿ 19 ನೇ ಓವರ್ ನಿಂದ 22 ರನ್ಗಳು ಬಂದವು. ಈ ಪೈಕಿ ಜಡೇಜಾ ಏಕಾಂಗಿಯಾಗಿ 21 ರನ್ ಗಳಿಸಿ ಪಂದ್ಯವನ್ನು ಚೆನ್ನೈ ಬ್ಯಾಗಿನಲ್ಲಿ ಇಟ್ಟರು.
Published On - 7:50 pm, Sun, 26 September 21
