IPL 2022: CSK ಪಾಲಾಗಲಿದ್ದಾರಾ RCB ಸ್ಪಿನ್ನರ್..?
Yuzvendra Chahal: ಈ ಹಿಂದೆ 2021ರ ಐಪಿಎಲ್ ಸೀಸನ್ಗಾಗಿ ಮೆಗಾ ನಡೆಸುವ ಬಗ್ಗೆ ಬಿಸಿಸಿಐ ಪ್ಲ್ಯಾನ್ ರೂಪಿಸಿತ್ತು. ಇದೇ ವೇಳೆ ಯುಜುವೇಂದ್ರ ಚಹಲ್ ನೀಡಿದ ಸಂದರ್ಶನವೊಂದರಲ್ಲಿ ಮುಂದೆ ಯಾವ ತಂಡದ ಪರ ಆಡಬೇಕೆಂಬ ಆಸೆಯಿದೆ ಎಂಬುದನ್ನು ಬಹಿರಂಗಪಡಿಸಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಗಾಗಿ (IPL 2022 Mega Auction) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಕಳೆದ ಸೀಸನ್ನಲ್ಲಿ 22 ಆಟಗಾರರನ್ನು ಹೊಂದಿದ್ದ ಆರ್ಸಿಬಿಗೆ ಈ ಬಾರಿ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶವಿತ್ತು. ಆದರೆ ಅಂತಿಮವಾಗಿ ಆರ್‌ಸಿಬಿ ವಿರಾಟ್ ಕೊಹ್ಲಿ (Virat Kohli), ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಹಾಗೂ ಮೊಹಮ್ಮದ್ ಸಿರಾಜ್ (Mohammed Siraj) ಅವರನ್ನು ರಿಟೈನ್ ಮಾಡಿಕೊಂಡಿದೆ. ಇನ್ನುಳಿದಂತೆ ತಂಡದಲ್ಲಿದ್ದ ಸ್ಟಾರ್ ಆಟಗಾರರಾದ ಯುಜುವೇಂದ್ರ ಚಹಲ್ (Yuzvendra Chahal), ದೇವದತ್ ಪಡಿಕ್ಕಲ್ (Devdutt Padikkal), ಹರ್ಷಲ್ ಪಟೇಲ್ (Harshal Patel) ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲೂ 2014 ರಿಂದ ಆರ್‌ಸಿಬಿ ಪರ ಆಡುತ್ತಿದ್ದ ಚಹಲ್ ಅವರನ್ನು ಈ ಬಾರಿ ರಿಟೈನ್ ಮಾಡಿಕೊಳ್ಳದಿರುವುದು ಅಚ್ಚರಿಯಾಗಿದೆ. ಅತ್ತ ಆರ್‌ಸಿಬಿ ತಂಡದಿಂದ ಚಹಲ್ ಹೊರಬೀಳುತ್ತಿದ್ದಂತೆ ಲೆಗ್ ಸ್ಪಿನ್ನರ್ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡಲಿದ್ದಾರೆ ಎಂಬ ಗುಮಾನಿಯೊಂದು ಶುರುವಾಗಿದೆ.
ಏಕೆಂದರೆ ಈ ಹಿಂದೆ 2021ರ ಐಪಿಎಲ್ ಸೀಸನ್ಗಾಗಿ ಮೆಗಾ ನಡೆಸುವ ಬಗ್ಗೆ ಬಿಸಿಸಿಐ ಪ್ಲ್ಯಾನ್ ರೂಪಿಸಿತ್ತು. ಇದೇ ವೇಳೆ ಯುಜುವೇಂದ್ರ ಚಹಲ್ ನೀಡಿದ ಸಂದರ್ಶನವೊಂದರಲ್ಲಿ ಮುಂದೆ ಯಾವ ತಂಡದ ಪರ ಆಡಬೇಕೆಂಬ ಆಸೆಯಿದೆ ಎಂಬುದನ್ನು ಬಹಿರಂಗಪಡಿಸಿದ್ದರು. ಈ ಸಂದರ್ಶನದಲ್ಲಿ ಆರ್‌ಸಿಬಿ ಹೊರತಾಗಿ ನೀವು ಮುಂದೆ ಯಾವ ಐಪಿಎಲ್ ತಂಡದ ಪರ ಆಡಲು ಬಯಸುತ್ತೀರಿ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಕುತೂಹಲಕಾರಿ ಪ್ರಶ್ನೆಗೆ ಉತ್ತರಿಸಿದ ಚಹಲ್, ಮುಂದೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು.
ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡದಿದ್ದರೆ, ನಾನು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ಆಡಲು ಬಯಸುತ್ತೇನೆ ಎಂದಿದ್ದರು. ಇದೀಗ ಆರ್‌ಸಿಬಿ ತಂಡದಿಂದ ಚಹಲ್ ಹೊರಬರುತ್ತಿದ್ದಂತೆ ಸಿಎಸ್ಕೆ ಪರ ಆಡುತ್ತೇನೆ ಎಂದಿರುವ ಸಂದರ್ಶನ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಮೆಗಾ ಹರಾಜು ಮೂಲಕ ಯುಜುವೇಂದ್ರ ಚಹಲ್ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಲಿದೆಯಾ ಎಂಬ ಪ್ರಶ್ನೆಯೊಂದು ಕೂಡ ಹುಟ್ಟಿಕೊಂಡಿದೆ.
2011 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಚಹಲ್ 2014 ರಲ್ಲಿ ಆರ್‌ಸಿಬಿ ತಂಡಕ್ಕೆ ಆಯ್ಕೆಯಾಗಿದ್ದರು. ಇದೀಗ 7 ಸೀಸನ್ಗಳ ಬಳಿಕ ಯುಜುವೇಂದ್ರ ಚಹಲ್ ಆರ್‌ಸಿಬಿ ತಂಡದಿಂದ ಹೊರ ನಡೆದಿದ್ದಾರೆ. ಇದರ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಬೇಕೆಂದು ಇಂಗಿತ ವ್ಯಕ್ತಪಡಿಸಿರುವುದು ಕೂಡ ವೈರಲ್ ಆಗಿದೆ. ಒಟ್ಟಿನಲ್ಲಿ ಮುಂದಿನ ತಿಂಗಳು ಮೆಗಾ ಹರಾಜು ನಡೆಯಲಿದ್ದು, ಚಹಲ್ ಆರ್ಸಿಬಿಗೆ ಮತ್ತೆ ಸಿಗಲಿದ್ದಾರಾ ಅಥವಾ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಲಿದ್ದಾರಾ ಕಾದು ನೋಡಬೇಕಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಉಳಿಸಿಕೊಂಡಿರುವ ಆಟಗಾರರು:
1- ವಿರಾಟ್ ಕೊಹ್ಲಿ – 15 ಕೋಟಿ 2- ಗ್ಲೆನ್ ಮ್ಯಾಕ್ಸ್ವೆಲ್- 11 ಕೋಟಿ 3- ಮೊಹಮ್ಮದ್ ಸಿರಾಜ್ – 7 ಕೋಟಿ.
ಆರ್‌ಸಿಬಿ ಬಿಡುಗಡೆ ಮಾಡಿರುವ ಆಟಗಾರರು:
ಯುಜ್ವೇಂದ್ರ ಚಾಹಲ್, ದೇವದತ್ ಪಡಿಕ್ಕಲ್, ಹರ್ಷಲ್ ಪಟೇಲ್, ಡೇನಿಯಲ್ಸ್ ಸ್ಯಾಮ್ಸ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಶಹಬಾಜ್ ಅಹ್ಮದ್, ಜೋಶ್ ಫಿಲಿಪ್, ಪವನ್ ದೇಶಪಾಂಡೆ, ರಜತ್ ಪಟಿದಾರ್, ಮೊಹಮ್ಮದ್ ಅಜರುದ್ದೀನ್, ಕೈಲ್ ಜೇಮಿಸನ್, ಡಾನ್ ಕ್ರಿಶ್ಚಿಯನ್, ಸುಯೇಶ್ ಪ್ರಭುದೇಸಾಯಿ, ಕೆ.ಎಸ್.ಭರತ್
ಇದನ್ನೂ ಓದಿ: 8 ಫ್ರಾಂಚೈಸಿ ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ
ಇದನ್ನೂ ಓದಿ: 27 ಆಟಗಾರರು ರಿಟೈನ್: ಬಿಡುಗಡೆಯಾದ ಆಟಗಾರರ ಪಟ್ಟಿ ಇಲ್ಲಿದೆ
(IPL 2022: Chahal picks CSK as the team he wishes to play for other than RCB)