AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022 Mega Auction: ಐಪಿಎಲ್​ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಪ್ರಮುಖ ಆಟಗಾರರು ಇವರೇ

IPL 2022 Released Players: ಐಪಿಎಲ್ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿರುವ ಈ ಆಟಗಾರರು ಮೆಗಾ ಹರಾಜಿನಲ್ಲಿ ಪ್ರಮುಖ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.

IPL 2022 Mega Auction: ಐಪಿಎಲ್​ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಪ್ರಮುಖ ಆಟಗಾರರು ಇವರೇ
IPL 2022 Mega Auction
TV9 Web
| Edited By: |

Updated on: Dec 01, 2021 | 6:21 PM

Share

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಗೂ (IPL 2022 Mega Auction) ಮುನ್ನ ಹಳೆಯ 8 ಫ್ರಾಂಚೈಸಿಗಳು 27 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಇಲ್ಲಿ ಮುಂಬೈ ಇಂಡಿಯನ್ಸ್ (​Mumbai Indians), ಡೆಲ್ಲಿ ಕ್ಯಾಪಿಟಲ್ಸ್ (Delhi Capitals)​, ಕೊಲ್ಕತ್ತಾ ನೈಟ್ ರೈಡರ್ಸ್ (KKR)​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK)​ ಗರಿಷ್ಠ ರಿಟೈನ್ ಆಯ್ಕೆಯನ್ನು ಬಳಸಿಕೊಂಡಿದ್ದು, ಅದರಂತೆ ತಂಡದಲ್ಲಿ ಪ್ರಮುಖ ನಾಲ್ವರು ಆಟಗಾರರನ್ನು ಉಳಿಸಿಕೊಂಡಿದೆ. ಇದಾಗ್ಯೂ ಪ್ರತಿ ತಂಡದಿಂದಲೂ ಅತ್ಯುತ್ತಮ ಪ್ರದರ್ಶನ ನೀಡಿದ ಅನೇಕ ಆಟಗಾರರು ರಿಲೀಸ್ ಆಗಿದ್ದಾರೆ. ಈಗಾಗಲೇ ಐಪಿಎಲ್ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿರುವ ಈ ಆಟಗಾರರು ಮೆಗಾ ಹರಾಜಿನಲ್ಲಿ ಪ್ರಮುಖ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು. ಹಾಗಿದ್ರೆ ಯಾವ ತಂಡದಿಂದ ಯಾವ ಪ್ರಮುಖ ಆಟಗಾರರು ರಿಲೀಸ್ ಆಗಿದ್ದಾರೆ ನೋಡೋಣ…

ಚೆನ್ನೈ ಸೂಪರ್ ಕಿಂಗ್ಸ್ (CSK) ಉಳಿಸಿಕೊಂಡ ಆಟಗಾರರು​: 1- ರವೀಂದ್ರ ಜಡೇಜಾ 2- ಮಹೇಂದ್ರ ಸಿಂಗ್ ಧೋನಿ 3- ಮೊಯೀನ್ ಅಲಿ 4- ರುತುರಾಜ್ ಗಾಯಕ್ವಾಡ್

ಬಿಡುಗಡೆಯಾದ ಪ್ರಮುಖ ಆಟಗಾರರು: ಫಾಫ್ ಡು ಪ್ಲೆಸಿಸ್, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್ ಮತ್ತು ಸ್ಯಾಮ್ ಕರ್ರನ್.

ಸನ್​ರೈಸರ್ಸ್​ ಹೈದರಾಬಾದ್ (SRH) ಉಳಿಸಿಕೊಂಡ ಆಟಗಾರರು​: 1- ಕೇನ್ ವಿಲಿಯಮ್ಸನ್ 2- ಉಮ್ರಾನ್ ಮಲಿಕ್ 3- ಅಬ್ದುಲ್ ಸಮದ್

ಬಿಡುಗಡೆಯಾದ ಪ್ರಮುಖ ಆಟಗಾರರು: ಜಾನಿ ಬೈರ್‌ಸ್ಟೋವ್, ರಶೀದ್ ಖಾನ್, ಡೇವಿಡ್ ವಾರ್ನರ್ ಮತ್ತು ಭುವನೇಶ್ವರ್ ಕುಮಾರ್.

ರಾಜಸ್ಥಾನ್ ರಾಯಲ್ಸ್ (RR) ಉಳಿಸಿಕೊಂಡ ಆಟಗಾರರು​: 1- ಸಂಜು ಸ್ಯಾಮ್ಸನ್ 2- ಜೋಸ್ ಬಟ್ಲರ್ 3- ಯಶಸ್ವಿ ಜೈಸ್ವಾಲ್

ಬಿಡುಗಡೆಯಾದ ಪ್ರಮುಖ ಆಟಗಾರರು: ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಮತ್ತು ಮುಸ್ತಾಫಿಜುರ್ ರೆಹಮಾನ್.

ಮುಂಬೈ ಇಂಡಿಯನ್ಸ್​ (Mumbai Indians) ಉಳಿಸಿಕೊಂಡ ಆಟಗಾರರು​: 1- ರೋಹಿತ್ ಶರ್ಮಾ 2- ಜಸ್​ಪ್ರೀತ್ ಬುಮ್ರಾ 3- ಸೂರ್ಯಕುಮಾರ್ ಯಾದವ್​ 4- ಕೀರನ್ ಪೊಲಾರ್ಡ್

ಬಿಡುಗಡೆಯಾದ ಪ್ರಮುಖ ಆಟಗಾರರು: ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ ಮತ್ತು ಟ್ರೆಂಟ್ ಬೌಲ್ಟ್.

ಕೊಲ್ಕತ್ತಾ ನೈಟ್​ ರೈಡರ್ಸ್ (KKR)​ ಉಳಿಸಿಕೊಂಡ ಆಟಗಾರರು​: 1- ಆಂಡ್ರೆ ರಸೆಲ್ 2- ವರುಣ್ ಚಕ್ರವರ್ತಿ 3- ವೆಂಕಟೇಶ್ ಅಯ್ಯರ್ 4- ಸುನಿಲ್ ನರೈನ್

ಬಿಡುಗಡೆಯಾದ ಪ್ರಮುಖ ಆಟಗಾರರು: ಇಯಾನ್ ಮೊರ್ಗನ್, ಪ್ಯಾಟ್ ಕಮ್ಮಿನ್ಸ್, ಶುಭ್​ಮನ್ ಗಿಲ್ ಮತ್ತು ದಿನೇಶ್ ಕಾರ್ತಿಕ್.

ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಉಳಿಸಿಕೊಂಡ ಆಟಗಾರರು​​: 1- ರಿಷಭ್ ಪಂತ್ 2- ಪೃಥ್ವಿ ಶಾ 3- ಅಕ್ಷರ್ ಪಟೇಲ್ 4- ಅನ್ರಿಕ್ ನೋಕಿಯಾ

ಬಿಡುಗಡೆಯಾದ ಪ್ರಮುಖ ಆಟಗಾರರು: ಶ್ರೇಯಸ್ ಅಯ್ಯರ್, ಶಿಖರ್ ಧವನ್, ಕಗಿಸೊ ರಬಾಡ ಮತ್ತು ರವಿಚಂದ್ರನ್ ಅಶ್ವಿನ್

ಪಂಜಾಬ್ ಕಿಂಗ್ಸ್ (Punjab Kings)​​ ಉಳಿಸಿಕೊಂಡ ಆಟಗಾರರು​: 1- ಮಯಾಂಕ್ ಅಗರ್ವಾಲ್ 2- ಅರ್ಷದೀಪ್ ಸಿಂಗ್

ಬಿಡುಗಡೆಯಾದ ಪ್ರಮುಖ ಆಟಗಾರರು: ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್ ಮತ್ತು ಶಾರುಖ್ ಖಾನ್

ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ಉಳಿಸಿಕೊಂಡ ಆಟಗಾರರು​: 1- ವಿರಾಟ್ ಕೊಹ್ಲಿ 2- ಗ್ಲೆನ್ ಮ್ಯಾಕ್ಸ್​ವೆಲ್ 3- ಮೊಹಮ್ಮದ್ ಸಿರಾಜ್

ಬಿಡುಗಡೆಯಾದ ಪ್ರಮುಖ ಆಟಗಾರರು: ಹರ್ಷಲ್ ಪಟೇಲ್, ಯುಜ್ವೇಂದ್ರ ಚಹಾಲ್ ಮತ್ತು ದೇವದತ್ ಪಡಿಕ್ಕಲ್.

ಇದನ್ನೂ ಓದಿ: IPL 2022: ದುಡ್ಡಿಗಿಂತ RCB ತಂಡವೇ ಮುಖ್ಯ: ವಿರಾಟ್ ಕೊಹ್ಲಿಗೆ ಅಭಿಮಾನಿಗಳಿಂದ ಬಹುಪರಾಕ್

ಇದನ್ನೂ ಓದಿ: 8 ಫ್ರಾಂಚೈಸಿ ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ

ಇದನ್ನೂ ಓದಿ: 27 ಆಟಗಾರರು ರಿಟೈನ್: ಬಿಡುಗಡೆಯಾದ ಆಟಗಾರರ ಪಟ್ಟಿ ಇಲ್ಲಿದೆ

(Key Players Franchises Released Ahead of IPL 2022 Mega Auction)

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ