IPL 2022: ಕೆಎಲ್ ರಾಹುಲ್ ಹೊರ ನಡೆದ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ಮತ್ತೊಂದು ಆಘಾತ

IPL 2022: ಕೆಎಲ್ ರಾಹುಲ್ ಹೊರ ನಡೆದ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ಮತ್ತೊಂದು ಆಘಾತ
Punjab Kings

Punjab Kings: ಕಳೆದ 2 ವರ್ಷಗಳಿಂದ ಪಂಜಾಬ್ ಕಿಂಗ್ಸ್​ ತಂಡದ ಮುಖ್ಯ ತರಬೇತುದಾರರಾಗಿ ಅನಿಲ್ ಕುಂಬ್ಳೆ ಕಾರ್ಯನಿರ್ವಹಿಸುತ್ತಿದ್ದು, ಬ್ಯಾಟಿಂಗ್ ಕೋಚ್ ಆಗಿ ವಾಸಿಂ ಜಾಫರ್ ಇದ್ದಾರೆ.

TV9kannada Web Team

| Edited By: Zahir PY

Dec 01, 2021 | 8:58 PM

ಪಂಜಾಬ್ ಕಿಂಗ್ಸ್​ ತಂಡವು ಮೆಗಾ ಹರಾಜಿಗೂ ಮುನ್ನ ಇಬ್ಬರು ಆಟಗಾರರನ್ನು ಉಳಿಸಿಕೊಂಡಿದೆ. ಅದರಂತೆ ಮಯಾಂಕ್ ಅಗರ್ವಾಲ್ ಹಾಗೂ ಅರ್ಷದೀಪ್ ಸಿಂಗ್ ಮುಂದಿನ ಸೀಸನ್​ನಲ್ಲೂ ಪಂಜಾಬ್ ಪರ ಕಣಕ್ಕಿಳಿಯಲಿದ್ದಾರೆ. ಆದರೆ ಈ ರಿಟೈನ್ ಪ್ರಕ್ರಿಯೆ ಬೆನ್ನಲ್ಲೇ ಇದೀಗ ತಂಡದ ಸಹಾಯಕ ಕೋಚ್ ಸ್ಥಾನಕ್ಕೆ ಜಿಂಬಾಬ್ವೆ ತಂಡದ ಮಾಜಿ ನಾಯಕ ಆ್ಯಂಡಿ ಫ್ಲವರ್ ರಾಜೀನಾಮೆ ನೀಡಿದ್ದಾರೆ. ಒಂದೆಡೆ ತಂಡದಿಂದ ಕೆಎಲ್ ರಾಹುಲ್ ಹೊರನಡೆದಿದ್ದರೆ ಇದೀಗ ಸಹಾಯಕ ಕೋಚ್ ಕೂಡ ಪಂಜಾಬ್ ಕಿಂಗ್ಸ್ ತಂಡವನ್ನು ತೊರೆದಿದ್ದಾರೆ. 2020 ರ ಸೀಸನ್​ನಿಂದ ಪಂಜಾಬ್ ಕಿಂಗ್ಸ್‌ ತಂಡದ ಸಹಾಯಕ ಕೋಚ್ ಆಗಿರುವ ಆ್ಯಂಡಿ ಫ್ಲವರ್ ಹೊರನಡೆದಿರುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಇದಾಗ್ಯೂ ಅವರು ಹೊಸ ಫ್ರಾಂಚೈಸಿ ಪರ ಕಾರ್ಯ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.

ಏಕೆಂದರೆ ಆ್ಯಂಡಿ ಫ್ಲವರ್ ಈ ಹಿಂದೆ ಇಂಗ್ಲೆಂಡ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇದೀಗ ಐಪಿಎಲ್​ನಲ್ಲಿ ಹೊಸ ಎರಡು ತಂಡಗಳ ಸೇರ್ಪಡೆಯಾಗಿದ್ದು, ಹೀಗಾಗಿ ಅವರು ಲಕ್ನೋ ಅಥವಾ ಅಹಮದಾಬಾದ್‌ನ ಹೊಸ ತಂಡವನ್ನು ಸೇರುವ ಎಲ್ಲಾ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಇನ್ನೊಂದೆಡೆ ಕೆಎಲ್ ರಾಹುಲ್ ಕೂಡ ಹೊಸ ಫ್ರಾಂಚೈಸಿ ಪರ ಆಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಹೀಗಾಗಿ ಆ್ಯಂಡಿ ಫ್ಲವರ್ ಹಾಗೂ ಕೆಎಲ್ ರಾಹುಲ್ ಮತ್ತೆ ಹೊಸ ತಂಡದ ಮೂಲಕ ಜೊತೆಯಾಗಲಿದ್ದಾರಾ ಕಾದು ನೋಡಬೇಕಿದೆ.

ಕಳೆದ 2 ವರ್ಷಗಳಿಂದ ಪಂಜಾಬ್ ಕಿಂಗ್ಸ್​ ತಂಡದ ಮುಖ್ಯ ತರಬೇತುದಾರರಾಗಿ ಅನಿಲ್ ಕುಂಬ್ಳೆ ಕಾರ್ಯನಿರ್ವಹಿಸುತ್ತಿದ್ದು, ಬ್ಯಾಟಿಂಗ್ ಕೋಚ್ ಆಗಿ ವಾಸಿಂ ಜಾಫರ್ ಇದ್ದಾರೆ. ಹಾಗೆಯೇ ಫೀಲ್ಡಿಂಗ್ ಕೋಚ್ ಆಗಿ ಜಾಂಟಿ ರೋಡ್ಸ್​ ಪಂಜಾಬ್ ತಂಡದಲ್ಲಿದ್ದಾರೆ. ಇದೀಗ ಆ್ಯಂಡಿ ಫ್ಲವರ್ ಪಂಜಾಬ್ ಕಿಂಗ್ಸ್​ ತಂಡವನ್ನು ತೊರೆದಿದ್ದು, ಮೆಗಾ ಹರಾಜಿನ ವೇಳೆಗೆ ತಂಡದಲ್ಲಿ ಮತ್ತಷ್ಟು ಬದಲಾವಣೆ ಕಂಡು ಬರುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಸ್ಟಾರ್ ಆಟಗಾರರ ಅಲಭ್ಯತೆಯ ನಡುವೆ ಪಂಜಾಬ್ ಕಿಂಗ್ಸ್​ ಮೆಗಾ ಹರಾಜಿಗಾಗಿ 72 ಕೋಟಿ ಹೊಂದಿದ್ದು, ಹೀಗಾಗಿ ಬಲಿಷ್ಠ ತಂಡ ಕಟ್ಟುವ ಅವಕಾಶ ಪಂಜಾಬ್ ಮುಂದಿದೆ.

ಇದನ್ನೂ ಓದಿ: IPL 2022: ದುಡ್ಡಿಗಿಂತ RCB ತಂಡವೇ ಮುಖ್ಯ: ವಿರಾಟ್ ಕೊಹ್ಲಿಗೆ ಅಭಿಮಾನಿಗಳಿಂದ ಬಹುಪರಾಕ್

ಇದನ್ನೂ ಓದಿ: 8 ಫ್ರಾಂಚೈಸಿ ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ

ಇದನ್ನೂ ಓದಿ: 27 ಆಟಗಾರರು ರಿಟೈನ್: ಬಿಡುಗಡೆಯಾದ ಆಟಗಾರರ ಪಟ್ಟಿ ಇಲ್ಲಿದೆ

(IPL 2022: Andy Flower steps down from coaching role at Punjab Kings)

Follow us on

Related Stories

Most Read Stories

Click on your DTH Provider to Add TV9 Kannada