AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL Commentators Earning: ಐಪಿಎಲ್​ನಲ್ಲಿ ಆಟಗಾರರಿಗಷ್ಟೇ ಅಲ್ಲ, ಕಾಮೆಂಟೇಟರ್​ಗಳಿಗೂ ಕೋಟಿ ಕೋಟಿ ಸಂಬಳ..!

IPL Commentators Earning: 80 ಕಾಮೆಂಟೆಟರ್​ಗಳು ತಂಡವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ 24 ಚಾನೆಲ್‌ಗಳಲ್ಲಿ 8 ಭಾಷೆಗಳಲ್ಲಿ ಕಾಮೆಂಟರಿ ಮಾಡಲಿದೆ. ಐಪಿಎಲ್‌ನಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕಾಮೆಂಟರಿಯ ಜೊತೆಗೆ, ವೀಕ್ಷಕರು ಮರಾಠಿ, ತೆಲುಗು, ಕನ್ನಡ, ಬೆಂಗಾಲಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಕಾಮೆಂಟರಿಗಳನ್ನು ಕೇಳಲು ಸಾಧ್ಯವಾಗುತ್ತದೆ.

IPL Commentators Earning: ಐಪಿಎಲ್​ನಲ್ಲಿ ಆಟಗಾರರಿಗಷ್ಟೇ ಅಲ್ಲ, ಕಾಮೆಂಟೇಟರ್​ಗಳಿಗೂ ಕೋಟಿ ಕೋಟಿ ಸಂಬಳ..!
ಗವಾಸ್ಕರ್, ರೈನಾ, ರವಿಶಾಸ್ತ್ರಿ
TV9 Web
| Updated By: ಪೃಥ್ವಿಶಂಕರ|

Updated on:Mar 26, 2022 | 3:00 PM

Share

IPL 2022 ಮಾರ್ಚ್ 26 ರಂದು ಅಂದರೆ ಇಂದಿನಿಂದ, ದೇಶದಲ್ಲಿ ಕ್ರಿಕೆಟ್ ಮಹಾ ಕುಂಭ ಪ್ರಾರಂಭವಾಗಲಿದೆ. IPL ನ ಮೊದಲ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರಾತ್ರಿ 7:30 ರಿಂದ ನಡೆಯಲಿದೆ. ಈ ಪಂದ್ಯ ‘ಚೆನ್ನೈ ಸೂಪರ್ ಕಿಂಗ್ಸ್’ ಮತ್ತು ‘ಕೋಲ್ಕತ್ತಾ ನೈಟ್ ರೈಡರ್ಸ್’ ನಡುವೆ ನಡೆಯಲಿದೆ. ಮಾರ್ಚ್ 26ರಿಂದ ಆರಂಭವಾಗುವ ಐಪಿಎಲ್ ಮೇ 29ರವರೆಗೆ ನಡೆಯಲಿದೆ. ವರದಿಗಳ ಪ್ರಕಾರ ಈ ಅವಧಿಯಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳಿಗೆ ಎಲ್ಲಾ ತಂಡಗಳು ಸಜ್ಜಾಗಿವೆ. ಈ ಆವೃತ್ತಿಯ ಐಪಿಎಲ್ ಪಂದ್ಯಗಳನ್ನು ‘ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್’ ಪ್ರಸಾರ ಮಾಡುತ್ತಿದ್ದು, ನಮ್ಮಂತಹ ಲಕ್ಷಾಂತರ ಕ್ರೀಡಾ ಅಭಿಮಾನಿಗಳು ವಿವಿಧ ವೇದಿಕೆಗಳಲ್ಲಿ ಪಂದ್ಯವನ್ನು ಆನಂದಿಸಲು ಸಾಧ್ಯವಾಗುತ್ತದೆ.

ಐಪಿಎಲ್ ಆಡುವ ಆಟಗಾರರಿಗೆ ಕೋಟಿಗಟ್ಟಲೆ ಸಂಬಳ ನೀಡಲಾಗುತ್ತದೆ. ಪ್ರತಿ ಬಾರಿಯಂತೆ ಈ ಬಾರಿಯೂ ಹಲವು ಆಟಗಾರರು ಐಪಿಎಲ್ ಆಡಿ ಕೋಟ್ಯಂತರ ರೂಪಾಯಿ ಪಡೆದಿದ್ದಾರೆ. ಆಟಗಾರರ ಬಿಡ್‌ಗಳು ಸಹ ಕೋಟಿಯಲ್ಲಿ ಹೋಗುತ್ತವೆ, ಆದರೆ ಐಪಿಎಲ್‌ನಲ್ಲಿ ಕಾಮೆಂಟರಿ ಮಾಡುವ ಕಾಮೆಂಟೆಟರ್​ಗಳು ಸಹ ಕೋಟ್ಯಂತರ ರೂಪಾಯಿ ಪಡೆಯಲಿದ್ದಾರೆ ಎಂದು ನಿಮಗೆ ತಿಳಿದಿದೆಯೇ? ಹೌದು, ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ಕಾಮೆಂಟರಿ ಮಾಡುವ ಕಾಮೆಂಟೆಟರ್​ಗಳಿಗೆ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಗಣನೀಯ ಮೊತ್ತವನ್ನು ನೀಡುತ್ತದೆ.

80 ಕಾಮೆಂಟೆಟರ್​ಗಳ ತಂಡ ಐಪಿಎಲ್ ಪಂದ್ಯಗಳನ್ನು ಪ್ರಸಾರ ಮಾಡುವ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಮಾಜಿ ಭಾರತೀಯ ಕ್ರಿಕೆಟಿಗ ರವಿಶಾಸ್ತ್ರಿ, ಸುನಿಲ್ ಗವಾಸ್ಕರ್, ಅಂಜುಮ್ ಚೋಪ್ರಾ, ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ಸೇರಿದಂತೆ ಅನೇಕ ಅನುಭವಿಗಳನ್ನು ಒಳಗೊಂಡಿದೆ. ಪ್ರಸಾರಕರು 80 ಕಾಮೆಂಟೇಟರ್‌ಗಳ ಬೃಹತ್ ತಂಡವನ್ನು ಒಟ್ಟುಗೂಡಿಸಿದ್ದಾರೆ. 80 ಕಾಮೆಂಟೆಟರ್​ಗಳು ತಂಡವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ 24 ಚಾನೆಲ್‌ಗಳಲ್ಲಿ 8 ಭಾಷೆಗಳಲ್ಲಿ ಕಾಮೆಂಟರಿ ಮಾಡಲಿದೆ. ಐಪಿಎಲ್‌ನಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕಾಮೆಂಟರಿಯ ಜೊತೆಗೆ, ವೀಕ್ಷಕರು ಮರಾಠಿ, ತೆಲುಗು, ಕನ್ನಡ, ಬೆಂಗಾಲಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಕಾಮೆಂಟರಿಗಳನ್ನು ಕೇಳಲು ಸಾಧ್ಯವಾಗುತ್ತದೆ.

ಹಿಂದಿ ಕಾಮೆಂಟರಿ ತಂಡದಲ್ಲಿ ಯಾರಿದ್ದಾರೆ? ಸ್ಟಾರ್ ಸ್ಪೋರ್ಟ್ಸ್ ಪ್ರಕಾರ, ಐಪಿಎಲ್‌ನ ಹಿಂದಿ ಕಾಮೆಂಟರಿ ತಂಡದಲ್ಲಿ ರವಿಶಾಸ್ತ್ರಿ, ಆಕಾಶ್ ಚೋಪ್ರಾ, ಹರ್ಭಜನ್ ಸಿಂಗ್, ಮೊಹಮ್ಮದ್ ಕೈಫ್, ಸುರೇಶ್ ರೈನಾ, ಕಿರಣ್ ಮೋರೆ, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್, ಪಿಯೂಷ್ ಚಾವ್ಲಾ, ನಿಖಿಲ್ ಚೋಪ್ರಾ, ಮಾಯಾಂತಿ ಲ್ಯಾಂಗರ್, ಜತಿನ್ ಸಪ್ರು ಮತ್ತು ಸುರೇನ್ ಸುಂದರಂ ಇದ್ದಾರೆ. ಇವರೊಂದಿಗೆ ಏಕೈಕ ಮಹಿಳಾ ಕಾಮೆಂಟೇಟರ್ ತಾನ್ಯಾ ಪುರೋಹಿತ್ ಕೂಡ ಈ ತಂಡವನ್ನು ಸೇರಿಕೊಳ್ಳಲಿದ್ದಾರೆ. ಸ್ಪೋರ್ಟ್‌ಸನ್‌ಫೋಲ್ಡ್‌ನ ವರದಿಯ ಪ್ರಕಾರ, ಹಿಂದಿ ಕಾಮೆಂಟರಿ ಮಾಡುವ ಈ ಕಾಮೆಂಟೇಟರ್‌ಗಳು ಐಪಿಎಲ್‌ನ ಈ ಸೀಸನ್‌ಗೆ 80 ಸಾವಿರದಿಂದ 3.5 ಲಕ್ಷ ಡಾಲರ್‌ಗಳನ್ನು ಅಂದರೆ ಸುಮಾರು 61 ಲಕ್ಷದಿಂದ 2.67 ಕೋಟಿ ರೂಪಾಯಿಗಳನ್ನು ಪಡೆಯಲಿದ್ದಾರೆ.

ಯಾರ್ಯಾರಿಗೆ ಎಷ್ಟೇಷ್ಟು ಸಂಬಳ ಆಕಾಶ್ ಚೋಪ್ರಾ – 2.6 ಕೋಟಿ ರೂ ಸುರೇಶ್ ರೈನಾ – 1.5 ಕೋಟಿ ರೂ ಕಿರಣ್ ಮೋರೆ – 1.5 ಕೋಟಿ ರೂ ಹರ್ಭಜನ್ ಸಿಂಗ್ – 1.5 ಕೋಟಿ ರೂ ಇರ್ಫಾನ್ ಪಠಾಣ್ – 1.5 ಕೋಟಿ ರೂ

ಇಂಗ್ಲಿಷ್ ಕಾಮೆಂಟರಿ ತಂಡದಲ್ಲಿ ಯಾರಿದ್ದಾರೆ? ವರದಿಗಳ ಪ್ರಕಾರ, ಇಂಗ್ಲಿಷ್ ವ್ಯಾಖ್ಯಾನಕಾರರ ತಂಡದಲ್ಲಿ ಸುನಿಲ್ ಗವಾಸ್ಕರ್, ಹರ್ಷ ಭೋಗ್ಲೆ, ಲಕ್ಷ್ಮಣ್ ಶಿವರಾಮಕೃಷ್ಣನ್, ಅಂಜುಮ್ ಚೋಪ್ರಾ, ಮುರಳಿ ಕಾರ್ತಿಕ್, ದೀಪ್ ದಾಸ್‌ಗುಪ್ತ, ಇಯಾನ್ ಬಿಷಪ್, ಅಲನ್ ವಿಲ್ಕಿನ್ಸ್, ಮಾರ್ಕ್ ನಿಕೋಲ್ಸ್, ಪೊಮ್ಮಿ ಎಂಬಂಗ್ವಾ, ಮೈಕೆಲ್ ಸ್ಲೇಟರ್, ನಿಕ್ ನೈಟ್, ಡ್ಯಾನಿ ಮಾರಿಸನ್, ಮ್ಯಾಥ್ಯೂ ಹೇಡನ್, ಕೆವಿನ್ ಪೀಟರ್ಸನ್, ಮೋರ್ನೆ ಮೊರ್ಕೆಲ್, ಗ್ರೇಮ್ ಸ್ಮಿತ್, ಗ್ರೇಮ್ ಸ್ವಾನ್, WV ರಾಮನ್ ಮತ್ತು ಡ್ಯಾರೆನ್ ಗಂಗಾ. ಈ ಕಾಮೆಂಟೇಟರ್‌ಗಳು ಐಪಿಎಲ್‌ನ ಸಂಪೂರ್ಣ ಸೀಸನ್‌ಗೆ 2.5 ಲಕ್ಷದಿಂದ 5 ಲಕ್ಷ ಡಾಲರ್‌ಗಳನ್ನು ಅಂದರೆ ಸುಮಾರು 1.9 ಕೋಟಿಯಿಂದ 3.8 ಕೋಟಿ ರೂಪಾಯಿಗಳನ್ನು ಪಡೆಯಲಿದ್ದಾರೆ.

ಈ ಅನುಭವಿಗಳಿಗೆ 3.8 ಕೋಟಿ ರೂ ಸುನಿಲ್ ಗವಾಸ್ಕರ್, ಹರ್ಷ ಭೋಗ್ಲೆ, ಲಕ್ಷ್ಮಣ್ ಶಿವರಾಮಕೃಷ್ಣನ್, ಕೆವಿನ್ ಪೀಟರ್ಸನ್, ಇಯಾನ್ ಬಿಷಪ್, ಮಾರ್ಕ್ ನಿಕೋಲ್ಸ್ ಮತ್ತು ಮೈಕಲ್ ಸ್ಲೇಟರ್ 3.8 ಕೋಟಿ ರೂ. ಸಂಭಾವನೆ ಪಡೆದರೆ ಮತ್ತೊಂದೆಡೆ, ದೀಪ್ ದಾಸ್‌ಗುಪ್ತಾ 2.6 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ. ಮುರಳಿ ಕಾರ್ತಿಕ್ ಮತ್ತು ಅಂಜುಮ್ ಚೋಪ್ರಾ ಈ ಆವೃತ್ತಿಯ ಕಾಮೆಂಟರಿಗಾಗಿ 1.9 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ.

ಬೇರೆ ಭಾಷೆಗಳ ಕಾಮೆಂಟೇಟರ್‌ಗಳು

ಬಂಗಾಳಿ ಕಾಮೆಂಟರಿ: ಸಂಜಿಬ್ ಮುಖರ್ಜಿ, ದೇಬಶಿಶ್ ದತ್ತಾ, ಜಾಯ್‌ದೀಪ್ ಮುಖರ್ಜಿ, ಗೌತಮ್ ಭಟ್ಟಾಚಾರ್ಯ, ಸರದಿಂದು ಮುಖರ್ಜಿ ಮತ್ತು ಸೌರಾಶಿಶ್ ಲಾಹಿರಿ.

ಗುಜರಾತಿ ಕಾಮೆಂಟರಿ: ನಯನ್ ಮೊಂಗಿಯಾ, ಮನನ್ ದೇಸಾಯಿ, ಮನ್‌ಪ್ರೀತ್ ಜುನೇಜಾ, ಕರಣ್ ಮೆಹ್ತಾ, ಧ್ವನಿತ್ ಥಾಕರ್ ಮತ್ತು ಆಕಾಶ್ ತ್ರಿವೇದಿ.

ಮರಾಠಿ ಕಾಮೆಂಟರಿ: ಸಂದೀಪ್ ಪಾಟೀಲ್, ಪ್ರಸನ್ನ ಸಂತ, ವಿನೋದ್ ಕಾಂಬ್ಳಿ, ಅಮೋಲ್ ಮುಜುಂದಾರ್, ಕುನಾಲ್ ಡೇಟ್, ಚೈತನ್ಯ ಸಂತ ಮತ್ತು ಸ್ನೇಹಲ್ ಪ್ರಧಾನ್.

ತಮಿಳು ಕಾಮೆಂಟರಿ: ಕೆ ಶ್ರೀಕಾಂತ್, ಎಸ್ ಬದ್ರಿನಾಥ್, ರಸೆಲ್ ಅರ್ನಾಲ್ಡ್, ರಾಧಾಕೃಷ್ಣನ್ ಶ್ರೀನಿವಾಸನ್, ಕೆವಿ ಸತ್ಯನಾರಾಯಣನ್, ಅಭಿನವ್ ಮುಕುಂದ್, ಭಾವನಾ ಬಾಲಕೃಷ್ಣನ್, ಮುತ್ತುರಾಮನ್ ಆರ್, ಆರ್ ಜೆ ಬಾಲಾಜಿ, ವಿಷ್ಣು ಹರಿಹರನ್, ಯೋಮಹೇಶ್ ವಿಜಯಕುಮಾರ್ ಮತ್ತು ಆರ್ ಸತೀಶ್.

ತೆಲುಗು ಕಾಮೆಂಟರಿ: ಎಂಎಸ್‌ಕೆ ಪ್ರಸಾದ್, ವೇಣುಗೋಪಾಲ್ ರಾವ್, ಕೆಎನ್ ಚಕ್ರವರ್ತಿ, ಎಸ್ ಅವುಲೈಪಲ್ಲಿ, ಟಿ ಸುಮನ್, ಕೃಷ್ಣ, ವಿವಿ ಮೇಡಪತಿ, ಎ ರೆಡ್ಡಿ ಮತ್ತು ಕಲ್ಯಾಣ್ ಕೃಷ್ಣ ಡಿ.

ಕನ್ನಡ ಕಾಮೆಂಟರಿ: ವೆಂಕಟೇಶ್ ಪ್ರಸಾದ್, ವಿಜಯ್ ಭಾರದ್ವಾಜ್, ಕಿರಣ್ ಶ್ರೀನಿವಾಸ್, ಜಿ ಕೆ ಅನಿಲ್ ಕುಮಾರ್, ಸುಮೇಶ್ ಗೋಣಿ, ರೀನಾ ಡಿಸೋಜಾ, ಪವನ್ ದೇಶಪಾಂಡೆ, ಆರ್ ವಿನಯ್ ಕುಮಾರ್, ವೇದಾ ಕೃಷ್ಣಮೂರ್ತಿ, ಭರತ್ ಚಿಪ್ಲಿ, ಮಧು ಮಲಂಕೋಡಿ, ಶ್ರೀನಿವಾಸ ಮೂರ್ತಿ ಪಿ, ಅಖಿಲ್ ಬಾಲಚಂದ್ರ.

ಮಲಯಾಳಂ ಕಾಮೆಂಟರಿ: ಟಿನು ಯೋಹನ್ನನ್, ವಿಷ್ಣು ಹರಿಹರನ್, ಶಿಯಾಸ್ ಮೊಹಮ್ಮದ್, ರಾಪಿ ಗೋಮೆಜ್ ಮತ್ತು ಸಿಎಂ ದೀಪಕ್.

ಇದನ್ನೂ ಓದಿ:IPL 2022: ಐಪಿಎಲ್​ನಲ್ಲಿ 100 ಕೋಟಿಗೂ ಅಧಿಕ ಹಣ ಸಂಪಾಧಿಸಿದ ಆಟಗಾರರ ಬಗ್ಗೆ ನಿಮಗೆಷ್ಟು ಗೊತ್ತು?

Published On - 3:00 pm, Sat, 26 March 22