IPL 2022: ಆರ್​ಸಿಬಿಗೆ ಕಹಿ ಸುದ್ದಿ; ಐಪಿಎಲ್​ ನಿಯಮ ಉಲ್ಲಂಘಿಸಿದ ಕಾರ್ತಿಕ್​ಗೆ ಆಡಳಿತ ಮಂಡಳಿಯಿಂದ ವಾಗ್ದಂಡನೆ!

| Updated By: ಪೃಥ್ವಿಶಂಕರ

Updated on: May 27, 2022 | 3:37 PM

IPL 2022: ದಿನೇಶ್ ಕಾರ್ತಿಕ್ ತಮ್ಮ ಎದುರಾಳಿ ತಂಡವಾದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ವಾಗ್ದಂಡನೆಗೆ ಗುರಿಯಾಗಿದ್ದಾರೆ.

IPL 2022: ಆರ್​ಸಿಬಿಗೆ ಕಹಿ ಸುದ್ದಿ; ಐಪಿಎಲ್​ ನಿಯಮ ಉಲ್ಲಂಘಿಸಿದ ಕಾರ್ತಿಕ್​ಗೆ ಆಡಳಿತ ಮಂಡಳಿಯಿಂದ ವಾಗ್ದಂಡನೆ!
Follow us on

ಇಂಡಿಯನ್ ಪ್ರೀಮಿಯರ್ ಲೀಗ್ (IPL) 15 ನೇ ಸೀಸನ್‌ನ ಎರಡನೇ ಕ್ವಾಲಿಫೈಯರ್ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಶುಕ್ರವಾರ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ ಆಡಬೇಕಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಅಶುಭ ಸುದ್ದಿಯೊಂದು ಎದುರಾಗಿದೆ. ತಂಡದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ (Dinesh Karthik) ವಾಗ್ದಂಡನೆಗೆ ಗುರಿಯಾಗಿದ್ದಾರೆ.ಕಾರ್ತಿಕ್, ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಲಕ್ನೋ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ, ಕಾರ್ತಿಕ್ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಹೊತ್ತಿದ್ದಾರೆ. ಮೇ 25 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಬೆಂಗಳೂರು ಮತ್ತು ಲಕ್ನೋ ನಡುವೆ ಈ ಪಂದ್ಯ ನಡೆದಿತ್ತು. ಈ ಬಗ್ಗೆ ಐಪಿಎಲ್ ಹೇಳಿಕೆ ನೀಡಿ ಮಾಹಿತಿ ನೀಡಿದೆ.

ಐಪಿಎಲ್ ತನ್ನ ಹೇಳಿಕೆಯಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರು ತಮ್ಮ ಎದುರಾಳಿ ತಂಡವಾದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ವಾಗ್ದಂಡನೆಗೆ ಗುರಿಯಾಗಿದ್ದಾರೆ. ಕಾರ್ತಿಕ್ ಆರ್ಟಿಕಲ್ 2.3 ರ ಹಂತ 1 ಅನ್ನು ಉಲ್ಲಂಘಿಸಿದ್ದು, ಕಾರ್ತಿಕ್​ ಕೂಡ ಈ ಶಿಕ್ಷೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಲೆವೆಲ್-1 ಅಪರಾಧಗಳಲ್ಲಿ ಮ್ಯಾಚ್ ರೆಫರಿಯ ತೀರ್ಮಾನವೇ ಅಂತಿಮವಾಗಿದ್ದು, ಅವರ ತೀರ್ಮಾನದ ಮೇಲೆ ಕಾರ್ತಿಕ್​ಗೆ ವಾಗ್ದಂಡನೆ ಶಿಕ್ಷೆ ನೀಡಲಾಗಿದೆ.

ಇದನ್ನೂ ಓದಿ:RCB: ಪಂದ್ಯ ಆರಂಭಕ್ಕೂ ಮುನ್ನವೇ ಸಖತ್ ಟ್ರೆಂಡ್ ಆದ ಆರ್​ಸಿಬಿ: ಕಪ್ ನಮ್ದೆ ಎನ್ನುತ್ತಿರುವ ಫ್ಯಾನ್ಸ್

ಇದನ್ನೂ ಓದಿ
RCB: ಪಂದ್ಯ ಆರಂಭಕ್ಕೂ ಮುನ್ನವೇ ಸಖತ್ ಟ್ರೆಂಡ್ ಆದ ಆರ್​ಸಿಬಿ: ಕಪ್ ನಮ್ದೆ ಎನ್ನುತ್ತಿರುವ ಫ್ಯಾನ್ಸ್
RR vs RCB Predicted Playing XI: ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
Lucknow Super Giants Report Card: ಕಳಪೆ ಮಧ್ಯಮ ಕ್ರಮಾಂಕ, ಬಲಿಷ್ಠ ಬೌಲಿಂಗ್; ಇದು ಲಕ್ನೋ ತಂಡದ ರಿಪೋರ್ಟ್​ ಕಾರ್ಡ್

ಬಲಿಷ್ಠ ಇನ್ನಿಂಗ್ಸ್ ಆಡಿದ ಕಾರ್ತಿಕ್

ಕಾರ್ತಿಕ್ ಈ ಪಂದ್ಯದಲ್ಲಿ ಬಲಿಷ್ಠ ಇನ್ನಿಂಗ್ಸ್ ಆಡಿದ್ದು, ಕೊನೆಯಲ್ಲಿ ವೇಗದ ರನ್ ಗಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಪಂದ್ಯದಲ್ಲಿ ಕಾರ್ತಿಕ್ 23 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 37 ರನ್ ಗಳಿಸಿದರು. ಜೊತೆಗೆ ಈ ಪಂದ್ಯದಲ್ಲಿ ಶತಕ ಬಾರಿಸಿದ ರಜತ್ ಪಾಟಿದಾರ್ ಅವರೊಂದಿಗೆ 92 ರನ್ ಜೊತೆಯಾಟವನ್ನು ಹಂಚಿಕೊಂಡರು. ಈ ಪಂದ್ಯದಲ್ಲಿ ಪಾಟಿದಾರ್ ಅಜೇಯ 112 ರನ್ ಗಳಿಸಿದರು.

ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ

ಮೊದಲು ಬ್ಯಾಟ್ ಮಾಡಿದ ಬೆಂಗಳೂರು ರಜತ್ ಮತ್ತು ಕಾರ್ತಿಕ್ ಅವರ ಅದ್ಭುತ ಇನ್ನಿಂಗ್ಸ್‌ ನೆರವಿನಿಂದ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ 207 ರನ್ ಗಳಿಸಿತು. ಈ ಗುರಿಯ ಮುಂದೆ ಲಕ್ನೋ ತಂಡ ಆರು ವಿಕೆಟ್ ನಷ್ಟಕ್ಕೆ 193 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಗೆಲುವಿಗಾಗಿ ನಾಯಕ ಕೆಎಲ್ ರಾಹುಲ್ 79 ರನ್​ಗಳ ಇನಿಂಗ್ಸ್ ಆಡಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ರಾಹುಲ್​ರನ್ನು 19ನೇ ಓವರ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಔಟ್ ಮಾಡಿದರು. ಇದೀಗ ಬೆಂಗಳೂರು ಫೈನಲ್ ತಲುಪಲು ಕ್ವಾಲಿಫೈಯರ್ 2 ರಲ್ಲಿ ಇದೇ ರೀತಿಯ ಪ್ರದರ್ಶನ ನೀಡಲು ಬಯಸಿದೆ. ಒಂದು ವೇಳೆ ಬೆಂಗಳೂರು ಫೈನಲ್‌ಗೆ ತಲುಪಿದರೆ, 2016ರ ನಂತರ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಲಿದೆ.

Published On - 3:37 pm, Fri, 27 May 22