RCB vs MI: ಐಪಿಎಲ್​​ನಲ್ಲಿಂದು ಎರಡು ಪಂದ್ಯ: ಬೆಂಗಳೂರು-ಮಂಬೈ ಕಾದಾಟಕ್ಕೆ ಕಾತುರ

CSK vs SRH: ಐಪಿಎಲ್​ನಲ್ಲಿಂದು ಎರಡು ಪಂದ್ಯಗಳನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 3.30ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೇನ್ ಸನ್​ರೈಸರ್ಸ್​ ಹೈದರಾಬಾದ್ ತಂಡ ಮುಖಾಮುಖಿ ಆಗಲಿದೆ. ಸಂಜೆ 7.30ಕ್ಕೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹ್ಯಾಟ್ರಿಕ್ ಸೋಲು ಅನುಭವಿಸಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

RCB vs MI: ಐಪಿಎಲ್​​ನಲ್ಲಿಂದು ಎರಡು ಪಂದ್ಯ: ಬೆಂಗಳೂರು-ಮಂಬೈ ಕಾದಾಟಕ್ಕೆ ಕಾತುರ
RCB vs MI
Follow us
TV9 Web
| Updated By: Vinay Bhat

Updated on: Apr 09, 2022 | 8:43 AM

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯಲ್ಲಿಂದು (IPL 2022) ಎರಡು ಪಂದ್ಯಗಳನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 3.30ಕ್ಕೆ ಡಾ. ಡಿವೈ ಪಾಟೀಮ್ ಸ್ಪೋರ್ಟ್ಸ್​ ಅಕಾಡೆಮಿಯಲ್ಲಿ ಆರಂಭವಾಗಲಿರುವ ಮೊದಲ ಪಂದ್ಯದಲ್ಲಿ ಇದುವರೆಗೆ ಗೆಲುವಿನ ಮುಖ ನೋಡದ ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೇನ್ ವಿಲಿಯಮ್ಸನ್ ಅವರ ಸನ್​ರೈಸರ್ಸ್​ ಹೈದರಾಬಾದ್ (CSK vs SRH) ತಂಡ ಮುಖಾಮುಖಿ ಆಗಲಿದೆ. ಸಂಜೆ 7.30ಕ್ಕೆ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶುರುವಾಗಲಿರುವ ದ್ವಿತೀಯ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹ್ಯಾಟ್ರಿಕ್ ಸೋಲು ಅನುಭವಿಸಿರುವ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ (RCB vs MI) ತಂಡವನ್ನು ಎದುರಿಸಲಿದೆ. ಪಾಯಿಂಟ್ ಪಟ್ಟಿಯಲ್ಲಿ ಮೇಲಕ್ಕೇರಲು ಎಲ್ಲ ನಾಲ್ಕು ತಂಡಗಳಿಗೆ ಇದು ಬಹುಮುಖ್ಯವಾದ ಪಂದ್ಯವಾಗಿದೆ. ಚೆನ್ನೈ ಹಾಗೂ ಮುಂಬೈ ಸತತ ಮೂರು ಪಂದ್ಯಗಳನ್ನು ಸೋತಿದ್ದು ಗೆಲುವಿನ ಲಯಕ್ಕೆ ಮರಳುವ ಒತ್ತಡದಲ್ಲಿರುವ ಕಾರಣ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

ಸಿಎಸ್​​ಕೆ vs ಎಸ್​ಆರ್​​ಹೆಚ್:

ಚೆನ್ನೈಗೆ ನಾಯಕತ್ವದ ಬದಲಾವಣೆ ಕೂಡ ಅದೃಷ್ಟ ಕೈಕೊಟ್ಟಿದೆ ಎನ್ನಲಾಗುತ್ತಿದೆ. ರವೀಂದ್ರ ಜಡೇಜಾ ಸಂಪೂರ್ಣ ಫಾರ್ಮ್​ ಕಳೆದುಕೊಂಡಿದ್ದಾರೆ. ಹಾಗೆಯೇ ಕಳೆದ ಋತುವಿನಲ್ಲಿ 635 ರನ್‌ ಪೇರಿಸಿ ಚೆನ್ನೈ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ಋತುರಾಜ್‌ ಗಾಯಕ್ವಾಡ್‌ ಅವರ ವೈಫ‌ಲ್ಯವೂ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಮೊಯಿನ್‌ ಅಲಿ, ಅಂಬಾಟಿ ರಾಯುಡು ಇನ್ನಿಂಗ್ಸ್‌ ವಿಸ್ತರಿಸಲು ವಿಫ‌ಲರಾಗಿದ್ದಾರೆ. ದೀಪಕ್‌ ಚಹರ್‌ ಗಾಯಾಳಾಗಿರುವುದು ತಂಡಕ್ಕೆ ಎದುರಾಗಿರುವ ಮತ್ತೊಂದು ಹಿನ್ನಡೆ. ಎಂಎಸ್ ಧೋನಿ ಏಕಾಂಗಿ ಹೋರಾಟಕ್ಕೆ ಇತರರು ಸಾಥ್ ನೀಡುತ್ತಿಲ್ಲ ಎಂಬುದು ಬೇಸರದ ಸಂಗತಿ. ಇಂದಿನ ಪಂದ್ಯಕ್ಕೆ ಸಿಎಸ್​ಕೆಯಲ್ಲಿ ಪ್ರಮುಖ ಬದಲಾವಣೆ ಕೂಡ ನಿರೀಕ್ಷಿಸಲಾಗಿದೆ.

ಇತ್ತ ಸನ್‌ರೈಸರ್ಸ್‌ ತಂಡದ ಸ್ಥಿತಿಕೂಡ ಚೆನ್ನೈ ರೀತಿಯಲ್ಲೇ ಇದೆ. ಬೌಲರ್‌ಗಳು ಗಮನಸೆಳೆಯುತ್ತಿದ್ದರೂ ಬ್ಯಾಟರ್‌ಗಳಿಂದ ನಿರೀಕ್ಷಿತ ನಿರ್ವಹಣೆ ಕಂಡುಬರುತ್ತಿಲ್ಲ. ಆಡಿರುವ ಎರಡೂ ಪಂದ್ಯಗಳಲ್ಲಿ ಸೋತಿರುವ ಕೇನ್ ವಿಲಿಯಮ್ಸನ್ ಬಳಗಕ್ಕೂ ಗೆಲುವಿನ ಅವಶ್ಯಕತೆಯಿದೆ. ನಿರೀಕ್ಷಿತ ನಿರ್ವಹಣೆ ತೋರಲು ವಿಫಲರಾಗಿರುವ ವೇಗಿ ಉಮರ್ ಮಲಿಕ್ ಬದಲಿಗೆ ಕನ್ನಡಿಗ ಶ್ರೇಯಸ್ ಗೋಪಾಲ್‌ಗೆ ಅವಕಾಶ ಒಲಿಯುವ ಸಾಧ್ಯತೆಗಳಿವೆ. ಮಾರ್ಕೋ ಜಾನ್ಸೆನ್, ಕಾರ್ತಿಕ್ ತ್ಯಾಗಿ, ಪ್ರಿಯಂ ಗಾರ್ಗ್ ಕೂಡ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ವಿಲಿಯಮ್ಸನ್ ಇನಿಂಗ್ಸ್ ಆರಂಭಿಸುವ ಹೊಣೆಯನ್ನು ರಾಹುಲ್ ತ್ರಿಪಾಠಿಗೆ ಬಿಟ್ಟುಕೊಡಬಹುದು.

ಉಭಯ ತಂಡಗಳು ಇದುವರೆಗೆ 16 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಸಿಎಸ್‌ಕೆ 12 ಪಂದ್ಯ ಮತ್ತು ಸನ್‌ರೈಸರ್ಸ್‌ 4 ಪಂದ್ಯ ಗೆದ್ದ ಇತಿಹಾಸವಿದೆ.

ಆರ್​ಸಿಬಿ vs ಮುಂಬೈ:

ಆರ್‌ಸಿಬಿಯು ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಜಯಿಸಲು ದಿನೇಶ್ ಕಾರ್ತಿಕ್ ಆಟವೇ ಕಾರಣವಾಗಿತ್ತು. ಆದರೆ, ಕಳೆದೆರಡೂ ಪಂದ್ಯಗಳಲ್ಲಿ ಅಗ್ರಕ್ರಮಾಂಕದ ಬ್ಯಾಟರ್‌ಗಳು ನಿರೀಕ್ಷೆ ಹುಸಿಗೊಳಿಸಿದ್ದರು. ರಾಜಸ್ಥಾನ್ ರಾಯಲ್ಸ್ ಎದುರಿನ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಶಹ್ಬಾಜ್ ನದೀಂ ಕೂಡ ಮಿಂಚಿದ್ದರು. ಆರಂಭಿಕ ಜೋಡಿ ಫಫ್ ಡುಪ್ಲೆಸಿ, ಅನುಜ್ ರಾವತ್ ಮತ್ತು ವಿರಾಟ್ ಕೊಹ್ಲಿಯವರು ತಮ್ಮ ಎಂದಿನ ಲಯಕ್ಕೆ ಮರಳಿದರೆ ಮುಂಬೈ ತಂಡದ ಮೇಲಿನ ಒತ್ತಡ ಹೆಚ್ಚುವುದರಲ್ಲಿ ಸಂದೇಹವಿಲ್ಲ. ಇದರ ನಡುವೆ ಆರ್​ಸಿಬಿ ತಂಡಕ್ಕೆ ಗ್ಲೆನ್​​ ಮ್ಯಾಕ್ಸ್​​ವೆಲ್​​ ಆಟದ ಲಭ್ಯತೆ ಇದೆ. ಹೀಗಾಗಿ ತಂಡದಲ್ಲಿ ಬದಲಾವಣೆ ಗ್ಯಾರೆಂಟಿ. ಶರ್ಫೇನ್​ ರುದರ್​​ಫೋರ್ಡ್​ ನೇರವಾಗಿ ಗ್ಲೆನ್​​ ಮ್ಯಾಕ್ಸ್​​ವೆಲ್​​ಗೆ ಕಾಗ ಮಾಡಿಕೊಡುತ್ತಾರೆ.ಜೋಶ್​ ಹ್ಯಾಜಲ್​​ವುಡ್​​​ ತಂಡ ಕೂಡಿಕೊಂಡಿದ್ದರೂ ಈ ಪಂದ್ಯದಲ್ಲಿ ಆಡುವುದು ಡೌಟ್​​.

ಸತತ ಮೂರು ಪಂದ್ಯಗಳಲ್ಲಿ ಸೋತಿರುವ ರೋಹಿತ್ ಶರ್ಮಾ ಬಳಗವು ಟೂರ್ನಿಯಲ್ಲಿ ಮೊದಲ ಗೆಲುವಿಗಾಗಿ ಪರಿತಪಿಸುತ್ತಿದೆ. ಇಶಾನ್ ನಿರಂತರವಾಗಿ ಉತ್ತಮ ಸಾಧನೆ ಮಾಡುತ್ತಿದ್ದರೂ ಮುಂಬೈ ತಂಡವು ಒಂದೂ ಪಂದ್ಯದಲ್ಲಿ ಜಯಿಸಿಲ್ಲ. ರೋಹಿತ್, ಸೂರ್ಯಕುಮಾರ್ ಯಾದವ್, ಪೊವೆಲ್, ತಿಲಕ್ ವರ್ಮಾ ಅವರಿರುವ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಜಸ್‌ಪ್ರೀತ್ ಬೂಮ್ರಾ, ಬಾಸಿಲ್ ಥಂಪಿ, ಸ್ಪಿನ್ನರ್ ಮುರುಗನ್ ಅಶ್ವಿನ್ ಅವರಿರುವ ಬೌಲಿಂಗ್ ವಿಭಾಗವೂ ಸಮರ್ಥವಾಗಿದೆ. ಆದರೂ ತಂಡವು ಸತತ ಸೋಲಿನ ಸುಳಿಯಲ್ಲಿ ಸಿಲುಕಿದೆ. ನಾಯಕ ರೋಹಿತ್ ತಂತ್ರಗಾರಿಕೆಗೆ ತಕ್ಕ ಫಲ ಸಿಗುತ್ತಿಲ್ಲ.

ಉಭಯ ತಂಡಗಳು ಇದುವರೆಗೂ ಒಟ್ಟು 29 ಪಂದ್ಯಗಳಲ್ಲಿ ಮುಖಾಮುಖಿ ಆಗಿದೆ. ಈ ಪಂದ್ಯಗಳ ಪೈಕಿ ಮುಂಬೈ ಇಂಡಿಯನ್ಸ್ 17 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಆರ್​ಸಿಬಿ 12 ಪಂದ್ಯಗಳಲ್ಲಿ ಸೋತಿದೆ.

Rahul Tewatia: 2 ಬಾಲ್, 12 ರನ್, 2 ಸಿಕ್ಸ್: ರಾಹುಲ್ ತೆವಾಟಿಯ ಸಿಡಿಸಿದ ಆ ರೋಚಕ ಸಿಕ್ಸ್ ವಿಡಿಯೋ ನೋಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ