AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CSK vs LSG: ಸೂಪರ್ ಜೈಂಟ್ಸ್​ಗೆ ಸೂಪರ್ ಕಿಂಗ್ಸ್ ಸವಾಲು: ಯಾರು ಬಲಿಷ್ಠ?

IPL 2022: ಮೊದಲ ಪಂದ್ಯದಲ್ಲಿ ಕೇವಲ 131 ರನ್ ಗಳಿಸಲಷ್ಟೇ ಶಕ್ತವಾಗಿರುವ ಚೆನ್ನೈ ಸೂಪರ್ ಕಿಂಗ್ಸ್​ ಈ ಬಾರಿ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ. ಮೊಯಿನ್ ಅಲಿ ಮರಳಿರುವುದು ತಂಡವನ್ನು ಬಲಪಡಿಸಿದೆ.

CSK vs LSG: ಸೂಪರ್ ಜೈಂಟ್ಸ್​ಗೆ ಸೂಪರ್ ಕಿಂಗ್ಸ್ ಸವಾಲು: ಯಾರು ಬಲಿಷ್ಠ?
LSG VS CSK MATCH PREVIEW
TV9 Web
| Updated By: ಝಾಹಿರ್ ಯೂಸುಫ್|

Updated on: Mar 30, 2022 | 9:51 PM

Share

ಮೊದಲ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದಾಗಿ ಸೋತಿರುವ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹೊಸ ತಂಡ ಲಕ್ನೋ ಸೂಪರ್ ಜೈಂಟ್ಸ್ (CSK v LSG) ಐಪಿಎಲ್​ನ 7ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಗುರುವಾರ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಉಭಯ ತಂಡಗಳು ಗೆಲುವಿನ ಖಾತೆ ತೆರೆಯುವ ಇರಾದೆಯಲ್ಲಿದೆ. ಆದರೆ ಈ ಪಂದ್ಯದಲ್ಲೂ ಟಾಸ್ ನಿರ್ಣಾಯಕ ಪಾತ್ರವಹಿಸುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ವಾಂಖೆಡೆ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಮತ್ತು ಲಕ್ನೋ ತಂಡ ಸೋತಿದ್ದವು. ಬ್ರಬೋರ್ನ್ ಸ್ಟೇಡಿಯಂನಲ್ಲೂ ಪರಿಸ್ಥಿತಿಗಳು ಭಿನ್ನವಾಗಿಲ್ಲ. ಇಲ್ಲೂ ಕೂಡ ಇಬ್ಬನಿಯು ಎರಡನೇ ಇನ್ನಿಂಗ್ಸ್ನಲ್ಲಿ ಗಮನಾರ್ಹ ಪ್ರಭಾವವನ್ನು ಬೀರಬಹುದು.

ಲಕ್ನೋ ನಾಯಕ ಕೆಎಲ್ ರಾಹುಲ್ ಮತ್ತು ಸ್ಟಾರ್ ಓಪನರ್ ಕ್ವಿಂಟನ್ ಡಿ ಕಾಕ್ ಮೊದಲ ಪಂದ್ಯದಲ್ಲಿ ವಿಫಲರಾಗಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಆ ತಪ್ಪನ್ನು ಸರಿಪಡಿಸಬಹುದು. ಹಾಗೆಯೇ ಮನೀಷ್ ಪಾಂಡೆ ಮತ್ತು ಎವಿನ್ ಲೂಯಿಸ್ ಕೂಡ ಮಿಂಚಲೇಬೇಕಾದ ಅನಿವಾರ್ಯತೆಯಿದೆ. ಇನ್ನು ಕಳೆದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡಾ, ಆಯುಷ್ ಬಡೋನಿ ಮತ್ತು ಕೃನಾಲ್ ಪಾಂಡ್ಯ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿದ್ದರು.

ಇನ್ನು ವೇಗದ ಬೌಲರ್ ದುಸ್ಮಂತ ಚಮೀರಾ ಮೊದಲ ಪಂದ್ಯದಲ್ಲೇ ಗಮನ ಸೆಳೆದಿದ್ದರು. ಆದರೆ ಅವೇಶ್ ಖಾನ್ ಎಡವಿರುವುದು ಚಿಂತೆಗೆ ಕಾರಣವಾಗಿದೆ. ಇದಲ್ಲದೇ ರವಿ ಬಿಷ್ಣೋಯ್, ಹೂಡಾ ಮತ್ತು ಕೃನಾಲ್ ಸ್ಪಿನ್ ತ್ರಿವಳಿಗಳ ಪಾತ್ರವೂ ಪಂದ್ಯದ ಫಲಿತಾಂಶ ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ.

ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಕೇವಲ 131 ರನ್ ಗಳಿಸಲಷ್ಟೇ ಶಕ್ತವಾಗಿರುವ ಚೆನ್ನೈ ಸೂಪರ್ ಕಿಂಗ್ಸ್​ ಈ ಬಾರಿ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ. ಮೊಯಿನ್ ಅಲಿ ಮರಳಿರುವುದು ತಂಡವನ್ನು ಬಲಪಡಿಸಿದೆ. ಇವರಲ್ಲದೆ ಡ್ವೇನ್ ಪ್ರಿಟೋರಿಯಸ್ ಕೂಡ ಆಯ್ಕೆಗೆ ಲಭ್ಯರಾಗಲಿದ್ದಾರೆ. ಮೊದಲ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ತಮ್ಮ ಹಳೆಯ ಆಟವನ್ನು ತೋರಿಸಿದ್ದರು. ಆದರೆ ರುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಡೆವೊನ್ ಕಾನ್ವೆ ಮತ್ತು ಅಂಬಟಿ ರಾಯುಡು ವಿಫಲರಾಗಿದ್ದರು. ಹೀಗಾಗಿ ಲಕ್ನೋ ವಿರುದ್ದ ಈ ಆಟಗಾರರು ಉತ್ತಮ ಪ್ರದರ್ಶನ ನೀಡಬೇಕಾಗಿದೆ.

ಉಭಯ ತಂಡಗಳು ಐಪಿಎಲ್​ನಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿರುವ ಕಾರಣ ಹಳೆಯ ಅಂಕಿ ಅಂಶಗಳಿಲ್ಲ. ಇದಾಗ್ಯೂ ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು, ಹೀಗಾಗಿ ಎರಡೂ ತಂಡಗಳಿಂದ ಕಠಿಣ ಪೈಪೋಟಿ ಕಂಡು ಬರಬಹುದು.

ಉಭಯ ತಂಡಗಳು ಈ ಕೆಳಗಿನಂತಿವೆ: ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ, ರವೀಂದ್ರ ಜಡೇಜಾ (ನಾಯಕ), ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ಡ್ವೇನ್ ಬ್ರಾವೋ, ದೀಪಕ್ ಚಹರ್, ಅಂಬಾಟಿ ರಾಯುಡು, ರಾಬಿನ್ ಉತ್ತಪ್ಪ, ಮಿಚೆಲ್ ಸ್ಯಾಂಟ್ನರ್, ಕ್ರಿಸ್ ಜೋರ್ಡಾನ್, ಆಡಮ್ ಮಿಲ್ನೆ, ಡೆವೊನ್ ಕಾನ್ವೇ, ಶಿವಂ ದುಬೆ, ಡ್ವೇನ್ ಪ್ರಿಟೋರಿಯಸ್, ರಾಜವರ್ಧನ್ ಹೆಂಗರ್ಗೆಕರ್, ತುಷಾರ್ ದೇಶಪಾಂಡೆ, ಕೆ.ಎಂ.ಆಸಿಫ್, ಸಿ.ಹರಿ ನಿಶಾಂತ್, ಎನ್.ಜಗದೀಸನ್, ಸುಭಾಂಶು ಸೇನಾಪತಿ, ಕೆ.ಭಗತ್ ವರ್ಮಾ, ಪ್ರಶಾಂತ್ ಸೋಲಂಕಿ, ಸಿಮರ್ಜಿತ್ ಸಿಂಗ್, ಮುಖೇಶ್ ಚೌಧರಿ.

ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಮನನ್ ವೋಹ್ರಾ, ಎವಿನ್ ಲೂಯಿಸ್, ಮನೀಶ್ ಪಾಂಡೆ, ಕ್ವಿಂಟನ್ ಡಿ ಕಾಕ್, ರವಿ ಬಿಷ್ಣೋಯ್, ದುಷ್ಮಂತ ಚಮೀರಾ, ಶಹಬಾಜ್ ನದೀಮ್, ಮೊಹ್ಸಿನ್ ಖಾನ್, ಮಯಾಂಕ್ ಯಾದವ್, ಅಂಕಿತ್ ರಜಪೂತ್, ಅವೇಶ್ ಖಾನ್, ಆಂಡ್ರ್ಯೂ ಟೈ, ಮಾರ್ಕಸ್ ಸ್ಟೋನಿಸ್, ಕೈಲ್ ಮೇಯರ್ಸ್, ಕರಣ್ ಶರ್ಮಾ, ಕೃಷ್ಣಪ್ಪ ಗೌತಮ್, ಆಯುಷ್ ಬಡೋನಿ, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು