IPL 2022: ಆಟಗಾರರು ಈ ಕೆಲಸ ಮಾಡಿದರೆ ಪಂಜಾಬ್ ಕಿಂಗ್ಸ್ ಚಾಂಪಿಯನ್ ಆಗಲಿದೆ; ನಾಯಕ ಮಯಾಂಕ್
IPL 2022: ಕಳೆದ 14 ಸೀಸನ್‌ಗಳಲ್ಲಿ ಹಲವು ಬಾರಿ ಶ್ರೇಷ್ಠ ಆಟಗಾರರು ಇದ್ದರೂ ಪಂಜಾಬ್ ಕಿಂಗ್ಸ್ ತಂಡಕ್ಕೆ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ತಂಡ ಕೂಡ ಒಮ್ಮೆ ಮಾತ್ರ ಫೈನಲ್ ತಲುಪಿದ್ದು, ಕಳೆದ ಕೆಲವು ವರ್ಷಗಳಿಂದ ಪ್ಲೇಆಫ್ ತಲುಪಲು ಸಾಧ್ಯವಾಗಿರಲಿಲ್ಲ.
ಇಂಡಿಯನ್ ಪ್ರೀಮಿಯರ್ ಲೀಗ್ 2022 ರ ಋತುವಿನಲ್ಲಿ (IPL 2022) ಕೆಲವು ತಂಡಗಳಲ್ಲಿ ಹೊಸ ನಾಯಕರು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಪೈಕಿ ಪಂಜಾಬ್ ಕಿಂಗ್ಸ್ (Punjab Kings) ಕೂಡ ಒಂದಾಗಿದ್ದು, ಭಾರತ ತಂಡದ ಸ್ಟಾರ್ ಓಪನರ್ ಮಯಾಂಕ್ ಅಗರ್ವಾಲ್ (Mayank Agarwal) ಅವರನ್ನು ತಂಡದ ನಾಯಕರನ್ನಾಗಿ ಮಾಡಲಾಗಿದೆ. ಮಯಾಂಕ್ ಕಳೆದ ಋತುವಿನವರೆಗೆ ತಂಡದ ಉಪನಾಯಕರಾಗಿದ್ದರು ಮತ್ತು ಕೆಎಲ್ ರಾಹುಲ್ ನಿರ್ಗಮನದ ನಂತರ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಫೆಬ್ರವರಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಹೊಸ ನಾಯಕ ಮಾತ್ರವಲ್ಲದೆ ಫ್ರಾಂಚೈಸಿ ಹೊಸ ತಂಡವನ್ನು ಸಿದ್ಧಪಡಿಸಿದೆ. ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಪಂಜಾಬ್ ಕಿಂಗ್ಸ್ ಬಲಿಷ್ಠ ಮತ್ತು ಸಮರ್ಥ ತಂಡವನ್ನು ಹೊಂದಿದೆ ಎಂದು ಹೊಸ ನಾಯಕ ಮಯಾಂಕ್ ಹೇಳಿದ್ದಾರೆ.
ಕಳೆದ 14 ಸೀಸನ್‌ಗಳಲ್ಲಿ ಹಲವು ಬಾರಿ ಶ್ರೇಷ್ಠ ಆಟಗಾರರು ಇದ್ದರೂ ಪಂಜಾಬ್ ಕಿಂಗ್ಸ್ ತಂಡಕ್ಕೆ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ತಂಡ ಕೂಡ ಒಮ್ಮೆ ಮಾತ್ರ ಫೈನಲ್ ತಲುಪಿದ್ದು, ಕಳೆದ ಕೆಲವು ವರ್ಷಗಳಿಂದ ಪ್ಲೇಆಫ್ ತಲುಪಲು ಸಾಧ್ಯವಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಹೊಸ ನಾಯಕ, ಹೊಸ ಆಟಗಾರರು ಮತ್ತು ಹೊಸ ಭರವಸೆಯೊಂದಿಗೆ, ಪಂಜಾಬ್ ಕಿಂಗ್ಸ್ ಹೆಚ್ಚು ಶಕ್ತಿಯುತವಾಗಿ ಪಂದ್ಯಾವಳಿಯನ್ನು ಪ್ರವೇಶಿಸಲಿದೆ.
ಒತ್ತಡದಲ್ಲಿ ಚೆನ್ನಾಗಿ ಆಡಿ ಮಯಾಂಕ್ ಅಗರ್ವಾಲ್ ಐಪಿಎಲ್‌ನಲ್ಲಿ ಮೊದಲ ಬಾರಿಗೆ ತಂಡದ ನಾಯಕತ್ವ ವಹಿಸಲಿದ್ದಾರೆ. ಜೊತೆಗೆ ಮೊದಲ ಸೀಸನ್‌ನಲ್ಲಿ ಉತ್ತಮ ತಂಡವನ್ನು ಹೊಂದಿದ್ದಾರೆ. ಇದರೊಂದಿಗೆ ಮಯಾಂಕ್ ಕೂಡ ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ಕಾಣುತ್ತಿದ್ದಾರೆ. ನಮ್ಮಲ್ಲಿ ಪ್ರಶಸ್ತಿ ಗೆಲ್ಲಲು ಯೋಗ್ಯವಾದ ತಂಡವಿದೆ. ಈಗ ಆಟಗಾರರು ಒತ್ತಡದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಬೇಕಾಗಿದೆ. ತಂಡವಾಗಿ ನಾವು ಹರಾಜಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಮುಂಬೈನಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ತಿಳಿದಿದ್ದರಿಂದ ಅದರ ಆಧಾರದ ಮೇಲೆ ತಂಡವನ್ನು ಆಯ್ಕೆ ಮಾಡಲಾಗಿದೆ. ನಾವು ಸಮತೋಲಿತ ತಂಡವನ್ನು ಹೊಂದಿದ್ದೇವೆ ಎಂದು ಮಯಾಂಕ್ ಹೇಳಿದ್ದಾರೆ.
ತಂಡದಲ್ಲಿ ಅನೇಕ ನಾಯಕರು, ಕೆಲಸ ಸುಲಭ ಮಯಾಂಕ್ ಮೊದಲ ಬಾರಿಗೆ ನಾಯಕನಾಗಿರಬಹುದು, ಆದರೆ ಅವರು ಆರಂಭಿಕರಾಗಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಕಳೆದ ಎರಡು ಸತತ ಸೀಸನ್‌ಗಳಲ್ಲಿ ಅವರು 400ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ನಾನು ಬ್ಯಾಟಿಂಗ್ ಮಾಡುವಾಗ, ನಾನು ಕೇವಲ ಬ್ಯಾಟ್ಸ್‌ಮನ್. ನಾವು ಅನೇಕ ನಾಯಕರು ಮತ್ತು ಅನುಭವಿ ಆಟಗಾರರನ್ನು ಹೊಂದಿದ್ದೇವೆ, ಇದು ನನ್ನ ಕೆಲಸವನ್ನು ಸುಲಭಗೊಳಿಸಿದೆ. ನಾನು ಬ್ಯಾಟ್ಸ್‌ಮನ್ ಆಗಿ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ. ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಈಗಲೇ ಏನನ್ನೂ ಹೇಳಲಾರೆ ಆದರೆ ಶಿಖರ್ ಧವನ್ ತಂಡಕ್ಕೆ ಸೇರಿರುವುದು ತಂಡಕ್ಕೆ ಶಕ್ತಿ ತುಂಬಿದೆ ಎಂದು ಮಯಾಂಕ್ ಹೇಳಿದ್ದಾರೆ.
ಹರಾಜಿನಲ್ಲಿ ಪಂಜಾಬ್ ಅದ್ಭುತ ಆಯ್ಕೆ ಪಂಜಾಬ್ ಕಿಂಗ್ಸ್ ಕಳೆದ ತಿಂಗಳು ನಡೆದ ಹರಾಜಿನಲ್ಲಿ ಶಿಖರ್ ಧವನ್ ರೂಪದಲ್ಲಿ ಶ್ರೇಷ್ಠ ಮತ್ತು ಅನುಭವಿ ಆರಂಭಿಕ ಆಟಗಾರನನ್ನು ಖರೀದಿಸಿತು. ಅದೇ ಸಮಯದಲ್ಲಿ, ಲಿಯಾಮ್ ಲಿವಿಂಗ್ಸ್ಟನ್, ಜಾನಿ ಬೈರ್‌ಸ್ಟೋವ್, ಶಾರುಖ್ ಖಾನ್, ಓಡಿನ್ ಸ್ಮಿತ್ ಅವರಂತಹ ಕೆಲವು ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಖರೀದಿಸಿದರು. ಅದೇ ಸಮಯದಲ್ಲಿ, ತಂಡವು ದಕ್ಷಿಣ ಆಫ್ರಿಕಾದ ಅನುಭವಿ ವೇಗದ ಬೌಲರ್ ಕಗಿಸೊ ರಬಾಡ ಅವರನ್ನು ಹೊಂದಿದೆ. ಜೊತೆಗೆ ಯುವ ಭಾರತೀಯ ಲೆಗ್ ಸ್ಪಿನ್ನರ್ ರಾಹುಲ್ ಚಹಾರ್ ಕೂಡ ಪಂಜಾಬ್ ಪರ ಆಡಲಿದ್ದಾರೆ.
ಇದನ್ನೂ ಓದಿ:IPL 2022: ಕೆಎಲ್ ರಾಹುಲ್ ಹೊರ ನಡೆದ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ಮತ್ತೊಂದು ಆಘಾತ