MS Dhoni: ಧೋನಿ ವಿಕೆಟ್ ಉರುಳಿದ ನಂತರ ವಿರಾಟ್ ಸಂಭ್ರಮ ಹೇಗಿತ್ತು? ವಿಡಿಯೋ ವೈರಲ್

Virat Kohli | CSK vs RCB | IPL 2022: ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಿನ ಪಂದ್ಯದಲ್ಲಿ ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ವಿಕೆಟ್ ಉರುಳಿದಾಗ ಕೊಹ್ಲಿ ಸಂಭ್ರಮಾಚರಣೆಯ ದೃಶ್ಯಗಳು ಈಗ ವೈರಲ್ ಆಗಿವೆ.

MS Dhoni: ಧೋನಿ ವಿಕೆಟ್ ಉರುಳಿದ ನಂತರ ವಿರಾಟ್ ಸಂಭ್ರಮ ಹೇಗಿತ್ತು? ವಿಡಿಯೋ ವೈರಲ್
ಎಂಎಸ್ ಧೋನಿ, ವಿರಾಟ್ ಕೊಹ್ಲಿ
Updated By: shivaprasad.hs

Updated on: May 05, 2022 | 12:38 PM

ವಿರಾಟ್ ಕೊಹ್ಲಿ (Virat Kohli) ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ನಡವಳಿಕೆಯಿಂದ ಗುರುತಿಸಿಕೊಂಡವರು. ಮೈದಾನದ ಹೊರಗೆ ಸ್ನೇಹಭಾವದಿಂದ ಹೆಸರಾದ ಅವರು, ಪಂದ್ಯದ ವೇಳೆ ಸಂಪೂರ್ಣವಾಗಿ ಆಟದತ್ತ ಮಾತ್ರ ಗಮನ ನೆಟ್ಟಿರುತ್ತಾರೆ. ಸ್ನೇಹ, ಹಿರಿತನ ಇದ್ಯಾವುದನ್ನೂ ಅವರು ಲೆಕ್ಕಿಸುವುದಿಲ್ಲ. ಭಾರತ ಹಾಗೂ ಆರ್​ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾಗಲೂ ಅವರು ಇದೇ ಕಾರಣಕ್ಕೆ ಸಖತ್ ಸುದ್ದಿಯಾಗುತ್ತಿದ್ದರು. ಅವರ ವ್ಯಕ್ತಿತ್ವ ತಂಡದ ಇತರ ಆಟಗಾರರಿಗೆ ಮತ್ತಷ್ಟು ಹುರುಪು ನೀಡುತ್ತಿತ್ತು. ಎದುರಾಳಿ ತಂಡದ ವಿಕೆಟ್ ಬಿದ್ದಾಗ ಕೊಹ್ಲಿಯ ಸಂಭ್ರಮಾಚರಣೆ ಅವರ ಟ್ರೇಡ್​ಮಾರ್ಕ್​ಗಳಲ್ಲೊಂದು. ವಿರಾಟ್ ನಾಯಕತ್ವದಿಂದ ಇಳಿದಿದ್ದರೂ ಅವರ ಸಂಭ್ರಮಾಚರಣೆಯಲ್ಲಿ ತುಸುವೂ ಬದಲಾಗಿಲ್ಲ. ಇದಕ್ಕೆ ಇತ್ತೀಚಿನ ದೃಷ್ಟಾಂತವೇ ಸಾಕ್ಷಿ. ಆರ್​ಸಿಬಿ (RCB) ಹಾಗೂ ಸಿಎಸ್​ಕೆ (CSK) ನಡುವಿನ ಪಂದ್ಯದಲ್ಲಿ ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ವಿಕೆಟ್ ಉರುಳಿದಾಗ ಕೊಹ್ಲಿ ಸಂಭ್ರಮಾಚರಣೆಯ ದೃಶ್ಯಗಳು ವೈರಲ್ ಆಗಿವೆ.

ವಿರಾಟ್ ಈ ಹಿಂದೆ ಮಾತನಾಡುತ್ತಾ ಧೋನಿ ಯಾವತ್ತಿಗೂ ತಮ್ಮ ಕ್ಯಾಪ್ಟನ್ ಎಂದು ಹೇಳಿಕೊಂಡಿದ್ದರು. ಆದರೆ ಕೊಹ್ಲಿ ಮೈದಾನದಲ್ಲಿ ಈ ಎಲ್ಲಾ ಭಾವನೆಗಳನ್ನು ಬದಿಗಿಡುತ್ತಾರೆ. ಇದಕ್ಕೆ ಧೋನಿ ವಿಕೆಟ್ ಪಡೆದಾಗ ಕೊಹ್ಲಿಯವರ ಆಕ್ರಮಣಕಾರಿ ಸಂಭ್ರಮವೇ ಸಾಕ್ಷಿ.

ಇದನ್ನೂ ಓದಿ
Rashid Khan: ರಶೀದ್ ಖಾನ್ ಫ್ಲೈಯಿಂಗ್ ಕಿಸ್ ಕೊಟ್ಟಿದ್ದು ಯಾರಿಗೆ? ವೈರಲ್ ಆಯ್ತು ವಿಡಿಯೋ
IPL 2022: ಆರೆಂಜ್ ಕ್ಯಾಪ್ ಬಟ್ಲರ್ ಬಳಿ ಭದ್ರ; ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಇರೋರು ಯಾರೆಲ್ಲಾ?
ಬೆಂಗಳೂರು- ಚೆನ್ನೈ ಪಂದ್ಯದ ವೇಳೆ ವಿಶೇಷ ಕ್ಷಣ; ಆರ್​ಸಿಬಿ ಜೆರ್ಸಿ ತೊಟ್ಟ ಗೆಳೆಯನಿಗೆ ಪ್ರೇಮ ನಿವೇದನೆ ಮಾಡಿದ ಯುವತಿ- ವಿಡಿಯೋ ಇಲ್ಲಿದೆ

ಬುಧವಾರ ನಡೆದ ಸಿಎಸ್​ಕೆ ಹಾಗೂ ಆರ್​ಸಿಬಿ ನಡುವಿನ ಪಂದ್ಯದಲ್ಲಿ ಧೋನಿ ಬೆಂಗಳೂರು ತಂಡದ ಗೆಲುವಿಗೆ ಅಡ್ಡಗಾಲಾಗುವ ಸಾಧ್ಯತೆ ಇತ್ತು. ಹೀಗಾಗಿ ಅವರ ವಿಕೆಟ್ ಬಹಳ ಮುಖ್ಯವಾಗಿತ್ತು. ಜೋಶ್ ಹೇಜಲ್​ವುಡ್ ಎಸೆತದಲ್ಲಿ ಧೋನಿ ವಿಕೆಟ್ ಒಪ್ಪಿಸಿದರು. ಆಗ ಅವರು 3 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿದ್ದರು. ಇದರಿಂದ ಆರ್​ಸಿಬಿ ಗೆಲುವು ಬಹುತೇಕ ಖಚಿತವಾಯಿತು. ಧೋನಿ ವಿಕೆಟ್ ಮಹತ್ವದ ಅರಿವಿದ್ದ ಕೊಹ್ಲಿ ಖುಷಿಯಿಂದ ತಮ್ಮ ಟ್ರೇಡ್​ಮಾರ್ಕ್ ಸಂಭ್ರಮಾಚರಣೆ ನಡೆಸಿದರು.

ವಿರಾಟ್ ಸಂಭ್ರಮಾಚರಣೆ; ನೆಟ್ಟಿಗರಿಂದ ಚರ್ಚೆ:

ವಿರಾಟ್ ಸಂಭ್ರಮಾಚರಣೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಧೋನಿ ಅಭಿಮಾನಿಗಳು ಈ ಸಂಭ್ರಮಾಚರಣೆ ಅತಿಯಾಯಿತು ಎಂದೂ ಅಭಿಪ್ರಾಯಪಟ್ಟಿದ್ದಾರೆ. ಆದರೆ ಆರ್​ಸಿಬಿ ಹಾಗೂ ಕೊಹ್ಲಿ ಫ್ಯಾನ್ಸ್ ಅದನ್ನು ಸಮರ್ಥನೆ ಮಾಡಿದ್ದಾರೆ. ಜತೆಗೆ ಅದು ವಿರಾಟ್ ಕೊಹ್ಲಿ ಎಂದಿನಂತೆ ಮಾಡುವ ಸೆಲೆಬ್ರೇಷನ್ ಅಷ್ಟೆ, ಅದು ಮೈದಾನದಲ್ಲಿ ಮಾತ್ರ ಎಂದು ಹೇಳಿದ್ದಾರೆ.

ವಿರಾಟ್ ಸಂಭ್ರಮಾಚರಣೆಯ ವಿಡಿಯೋ ಇಲ್ಲಿದೆ:

ಕೊಹ್ಲಿ ಸಂಭ್ರಮಾಚರಣೆ ಬಗ್ಗೆ ನೆಟ್ಟಿಗರ ಕೆಲವು ಅಭಿಪ್ರಾಯಗಳು:

ಚೆನ್ನೈ ವಿರುದ್ಧದ ಗೆಲುವಿನಿಂದ ಆರ್​ಸಿಬಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಲಗ್ಗೆಇಟ್ಟಿದೆ. ಅದಾಗ್ಯೂ ಪ್ಲೇ ಆಫ್ ಖಚಿತಗೊಳ್ಳಲು ಮುಂದಿನ ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಲೇಬೇಕಾದ ಒತ್ತಡದಲ್ಲಿದೆ ಫಾಫ್ ಬಳಗ. ಧೋನಿ ನಾಯಕತ್ವದ ಸಿಎಸ್​ಕೆ ಕೂಡ ಮುಂದಿನ ಎಲ್ಲಾ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕಿದೆ. ಅದಾಗ್ಯೂ ಉಳಿದ ತಂಡಗಳ ಫಲಿತಾಂಶದಿಂದ ಸಿಎಸ್​ಕೆ ಭವಿಷ್ಯ ನಿರ್ಧಾರವಾಗಲಿದೆ.

ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ