IPL 2022: RCB ಪರ ಮಿಂಚಿದ್ದು ಯಾರು? ಮುಗ್ಗರಿಸಿದ್ದು ಯಾರು?

| Updated By: ಝಾಹಿರ್ ಯೂಸುಫ್

Updated on: May 28, 2022 | 12:03 PM

IPL 2022 RCB top performers: ಆರ್​ಸಿಬಿ ಈ ಬಾರಿ 16 ಪಂದ್ಯಗಳನ್ನು ಆಡಿದರೂ ಪ್ರಮುಖ ಆಟಗಾರರಿಂದ ನಿರೀಕ್ಷಿತ ಆಟ ಮೂಡಿಬಂದಿಲ್ಲ ಎಂಬುದೇ ಸತ್ಯ. ಏಕೆಂದರೆ ತಂಡದಲ್ಲಿ ಕೆ.ಜಿ.ಎಫ್ ಎಂದೇ ಖ್ಯಾತರಾಗಿದ್ದ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ವಿರಾಟ್ ಕೊಹ್ಲಿ ನಿರ್ಣಾಯಕ ಪಂದ್ಯಗಳಲ್ಲಿ ಕೈಕೊಡುವ ಮೂಲಕ ನಿರಾಸೆ ಮೂಡಿಸಿದರು.

IPL 2022: RCB ಪರ ಮಿಂಚಿದ್ದು ಯಾರು? ಮುಗ್ಗರಿಸಿದ್ದು ಯಾರು?
IPL 2022 RCB
Follow us on

IPL 2022: ಐಪಿಎಲ್​ ಸೀಸನ್​ 15 ಗೆ ತೆರೆಬೀಳಲು ಇನ್ನು ಒಂದು ಪಂದ್ಯ ಮಾತ್ರ ಬಾಕಿ ಇದೆ. ಆದರೆ ಆ ಫೈನಲ್​ ಪಂದ್ಯವನ್ನು ಆಡುವ ಅವಕಾಶವನ್ನು ಆರ್​ಸಿಬಿ (RCB) ತಂಡ ಕೈತಪ್ಪಿಸಿಕೊಂಡಿದೆ. ಈ ಬಾರಿ ಆಡಿದ ಲೀಗ್ ಹಂತದ 14 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದುಕೊಂಡಿದ್ದ ಆರ್​ಸಿಬಿ ಪಾಯಿಂಟ್ಸ್​ ಟೇಬಲ್​ನಲ್ಲಿ 4ನೇ ಸ್ಥಾನ ಪಡೆದುಕೊಂಡಿತ್ತು. ಈ ಮೂಲಕ ಪ್ಲೇಆಫ್ ಆಡುವ ಅವಕಾಶವನ್ನು ಗಿಟ್ಟಿಸಿಕೊಂಡಿತು. ಅದರಂತೆ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೋಲುಣಿಸಿದ ಆರ್​ಸಿಬಿ 2ನೇ ಕ್ವಾಲಿಫೈಯರ್​ಗೇರಿತು. ಆದರೆ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಮುಗ್ಗರಿಸುವ ಮೂಲಕ ಆರ್​ಸಿಬಿ ಐಪಿಎಲ್​ ಜರ್ನಿಯನ್ನು ಅಂತ್ಯಗೊಳಿಸಿದೆ. ಇದರೊಂದಿಗೆ ಆರ್​ಸಿಬಿ ತಂಡದ ಕಪ್ ಗೆಲ್ಲುವ ಕನಸು 16ನೇ ಸೀಸನ್​ಗೆ ಮುಂದುವರೆದಿದೆ.

ಇತ್ತ ಆರ್​ಸಿಬಿ ಈ ಬಾರಿ 16 ಪಂದ್ಯಗಳನ್ನು ಆಡಿದರೂ ಪ್ರಮುಖ ಆಟಗಾರರಿಂದ ನಿರೀಕ್ಷಿತ ಆಟ ಮೂಡಿಬಂದಿಲ್ಲ ಎಂಬುದೇ ಸತ್ಯ. ಏಕೆಂದರೆ ತಂಡದಲ್ಲಿ ಕೆ.ಜಿ.ಎಫ್ ಎಂದೇ ಖ್ಯಾತರಾಗಿದ್ದ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ವಿರಾಟ್ ಕೊಹ್ಲಿ ನಿರ್ಣಾಯಕ ಪಂದ್ಯಗಳಲ್ಲಿ ಕೈಕೊಡುವ ಮೂಲಕ ನಿರಾಸೆ ಮೂಡಿಸಿದರು. ಇನ್ನು ಬೌಲಿಂಗ್​ನಲ್ಲೂ ಆರ್​ಸಿಬಿ ತಂಡದ ಪ್ರದರ್ಶನ ಸಾಧಾರಣ ಮಟ್ಟದಲ್ಲಿತ್ತು. ಹಾಗಿದ್ರೆ ಈ ಬಾರಿ ಆರ್​ಸಿಬಿ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ ಯಾರು, ವಿಫಲರಾದ ಆಟಗಾರರು ಯಾರೆಲ್ಲಾ ನೋಡೋಣ…

ಅತೀ ಹೆಚ್ಚು ರನ್​ಗಳಿಸಿದ ಟಾಪ್ 5 ಬ್ಯಾಟ್ಸ್​ಮನ್​ಗಳು:

ಇದನ್ನೂ ಓದಿ
Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್
IPL 2022: ಕೊನೆಯ ಓವರ್​ನಲ್ಲಿ ಚೇಸ್ ಮಾಡಿಯೇ ದಾಖಲೆ ಬರೆದ ಗುಜರಾತ್ ಟೈಟಾನ್ಸ್
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು
  1. ಫಾಫ್ ಡುಪ್ಲೆಸಿಸ್​: 468 ರನ್ (16 ಇನಿಂಗ್ಸ್​)
  2. ವಿರಾಟ್ ಕೊಹ್ಲಿ: 341 ರನ್​ (16 ಇನಿಂಗ್ಸ್​)
  3. ರಜತ್ ಪಾಟಿದಾರ್: 333 ರನ್ (7 ಇನಿಂಗ್ಸ್​)
  4. ದಿನೇಶ್ ಕಾರ್ತಿಕ್: 330 ರನ್ (16 ಇನಿಂಗ್ಸ್​)
  5. ಗ್ಲೆನ್ ಮ್ಯಾಕ್ಸ್​ವೆಲ್: 301 ರನ್​ (13 ಇನಿಂಗ್ಸ್​)

ವಿಫಲರಾದ ಬ್ಯಾಟ್ಸ್​ಮನ್​​ಗಳು:

  1. ಅನೂಜ್ ರಾವತ್: 129 ರನ್​ (8 ಇನಿಂಗ್ಸ್​)
  2. ಸುಯಶ್ ಪ್ರಭುದೇಸಾಯಿ: 67 ರನ್​ (5 ಇನಿಂಗ್ಸ್​)
  3. ಮಹಿಪಾಲ್ ಲೋಮ್ರರ್: 86 ರನ್​ ( 5 ಇನಿಂಗ್ಸ್​)

ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳು:

  1. ವನಿಂದು ಹಸರಂಗ: 26 ವಿಕೆಟ್ (16 ಪಂದ್ಯಗಳು)
  2. ಜೋಶ್ ಹ್ಯಾಝಲ್​ವುಡ್​: 20 ವಿಕೆಟ್ (12 ಪಂದ್ಯಗಳು)
  3. ಹರ್ಷಲ್ ಪಟೇಲ್: 19 ವಿಕೆಟ್ (15 ಪಂದ್ಯಗಳು)

ವಿಫಲರಾದ ಬೌಲರ್​ಗಳು:

  1. ಮೊಹಮ್ಮದ್ ಸಿರಾಜ್: 9 ವಿಕೆಟ್ (15 ಪಂದ್ಯಗಳು)
  2. ಆಕಾಶ್ ದೀಪ್: 5 ವಿಕೆಟ್​ (5 ಪಂದ್ಯಗಳು)
  3. ಶಹಬಾಜ್ ಅಹ್ಮದ್: 4 ವಿಕೆಟ್ (16 ಪಂದ್ಯಗಳು)

ಇಲ್ಲಿ ಆರ್​ಸಿಬಿ ಪರ ಡುಪ್ಲೆಸಿಸ್ ಹೊರತುಪಡಿಸಿ ಯಾವುದೇ ಬ್ಯಾಟ್ಸ್​ಮನ್ 400 ರನ್​ಗಳ ಗಡಿದಾಟಿಲ್ಲ. ಹಾಗೆಯೇ ಹಸರಂಗ, ಹ್ಯಾಝಲ್​ವುಡ್ ಹಾಗೂ ಹರ್ಷಲ್ ಪಟೇಲ್ ಹೊರತುಪಡಿಸಿ ಆರ್​ಸಿಬಿ ತಂಡದ ಯಾವುದೇ ಬೌಲರ್ 10 ವಿಕೆಟ್ ಪಡೆದಿಲ್ಲ ಎಂಬುದನ್ನು ಗಮನಿಸಬೇಕು. ಅಂದರೆ ಆರ್​ಸಿಬಿ ಒಂದೆಡೆ ಬೌಲಿಂಗ್​ನಲ್ಲಿ ತುಸು ಉತ್ತಮ ಪ್ರದರ್ಶನ ನೀಡಿದರೂ, ಬ್ಯಾಟ್ಸ್​ಮನ್​ಗಳು ಸಂಪೂರ್ಣ ಕೈಕೊಟ್ಟಿರುವುದು ಸ್ಪಷ್ಟ. ಏಕೆಂದರೆ ಈ ಬಾರಿ ಆರ್​ಸಿಬಿ ಪರ ಯಾವುದೇ ಆಟಗಾರ 500 ರನ್ ಬಾರಿಸಿಲ್ಲ. ಅದರಲ್ಲೂ 400 ರನ್​ಗಳ ಗಡಿದಾಟಿದ್ದು ಏಕೈಕ ಆಟಗಾರ. ಇದರಲ್ಲೇ ಆರ್​ಸಿಬಿ ತಂಡದ ಬ್ಯಾಟಿಂಗ್ ವೈಫಲ್ಯವನ್ನು ಊಹಿಸಬಹುದು. ಇನ್ನು ಈ ಬಾರಿ ಆರ್​ಸಿಬಿ ರಿಟೈನ್ ಮಾಡಿಕೊಂಡಿದ್ದ ಬೌಲರ್ ಮೊಹಮ್ಮದ್ ಸಿರಾಜ್ ಕೇವಲ 9 ವಿಕೆಟ್ ಪಡೆದರೆ ನೀಡಿದ್ದು 514 ರನ್​ಗಳು ಎಂದರೆ ನಂಬಲೇಬೇಕು.

ಇಲ್ಲಿ ಆರ್​ಸಿಬಿ ತಂಡವು ಸಾಂಘಿಕ ಪ್ರದರ್ಶನ ನೀಡುವಲ್ಲಿ ಎಡವಿರುವುದು ಮೇಲ್ನೋಟಕ್ಕೆ ಸ್ಪಷ್ಟ. ಇದಾಗ್ಯೂ ಹಸರಂಗ, ಹ್ಯಾಝಲ್​ವುಡ್​, ಹರ್ಷಲ್ ಪಟೇಲ್ ಅವರ ಬೌಲಿಂಗ್ ಪ್ರದರ್ಶನ ಹಾಗೂ ರಜತ್ ಪಾಟಿದಾರ್ ಹಾಗೂ ಫಿನಿಶರ್ ಆಗಿ ದಿನೇಶ್ ಕಾರ್ತಿಕ್ ಅವರ ಅದ್ಭುತ ಬ್ಯಾಟಿಂಗ್ ಈ ಬಾರಿ ಆರ್​ಸಿಬಿ ತಂಡದಲ್ಲಿ ಕಂಡು ಬಂದ ಸಕರಾತ್ಮಕ ವಿಷಯಗಳು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಅನೇಶ್ವರ್ ಗೌತಮ್ , ಶೆರ್ಫೇನ್ ರುದರ್‌ಫೋರ್ಡ್, ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ, ಚಾಮ ಮಿಲಿಂದ್, ಜೇಸನ್ ಬೆಹ್ರೆಂಡಾರ್ಫ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಫಿನ್ ಅಲೆನ್, ಸಿದ್ದಾರ್ಥ್ ಕೌಲ್.

 

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Published On - 12:03 pm, Sat, 28 May 22