IPL 2022: RCB ತಂಡದಲ್ಲಿ ಪ್ರಮುಖ ಬದಲಾವಣೆ ಸಾಧ್ಯತೆ
IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್
IPL 2022: ಐಪಿಎಲ್ ಸೀಸನ್ 15 ನಲ್ಲಿ ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆರ್ಸಿಬಿ (RCB) 7 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿತ್ತು. ಆದರೆ ದ್ವಿತಿಯಾರ್ಧದ ಮೊದಲ ಪಂದ್ಯದಲ್ಲೇ ಕೇವಲ 68 ರನ್ಗಳಿಗೆ ಆಲೌಟ್ ಆಗುವ ಮೂಲಕ ಅಚ್ಚರಿ ಮೂಡಿಸಿತು. ಎಸ್ಆರ್ಹೆಚ್ ವಿರುದ್ದದ ಹೀನಾಯ ಸೋಲಿಗೆ ಪ್ರಮುಖ ಕಾರಣ ಬ್ಯಾಟ್ಸ್ಮನ್ಗಳು. ಅದರಲ್ಲೂ ಆರಂಭಿಕರು ವಿಫಲರಾಗುತ್ತಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಹೀಗಾಗಿ ಮುಂದಿನ ಪಂದ್ಯದಿಂದ ಅನೂಜ್ ರಾವತ್ ರನ್ನು ಕೈ ಬಿಡುವ ಸಾಧ್ಯತೆಯಿದೆ. ಏಕೆಂದರೆ ಅನೂಜ್ ರಾವತ್ ಕಳೆದ 8 ಪಂದ್ಯಗಳಲ್ಲಿ ಕಲೆಹಾಕಿದ್ದು ಕೇವಲ 129 ರನ್ ಮಾತ್ರ. ಇನ್ನು ಈ 129 ರನ್ ಬಾರಿಸಲು ತೆಗೆದುಕೊಂಡಿದ್ದು 118 ಎಸೆತಗಳನ್ನು. ಅಂದರೆ ಪವರ್ಪ್ಲೇನಲ್ಲಿ ಅನೂಜ್ ರಾವತ್ ಸಂಪೂರ್ಣ ವಿಫಲರಾಗಿರುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ. ಅದರಲ್ಲೂ 2 ಬಾರಿ ಝೀರೋಗೆ ಔಟಾಗಿದ್ದಾರೆ.
ಹೀಗಾಗಿ ಆರ್ಸಿಬಿ ಮುಂದಿನ ಪಂದ್ಯದಲ್ಲಿ ಗೆಲ್ಲಬೇಕಿದ್ರೆ ಮೊದಲಿಗೆ ಆರಂಭಿಕನನ್ನು ಬದಲಿಸಬೇಕು. ಅದರಂತೆ ಆರ್ಸಿಬಿ ಅನೂಜ್ ರಾತವ್ ರನ್ನು ಕೈ ಬಿಡಲಿದೆ. ಇನ್ನು ಬದಲಿ ಆರಂಭಿಕ ಆಟಗಾರರಾಗಿ ಆರ್ಸಿಬಿ ತಂಡದಲ್ಲಿ ಅನೇಕ ಆಯ್ಕೆಗಳಿವೆ. ಮುಖ್ಯವಾಗಿ ಫಿನ್ ಅಲೆನ್ ತಂಡದಲ್ಲಿದ್ದಾರೆ. ಜೊತೆಗೆ ಮಹಿಪಾಲ್ ಲೋಮ್ರರ್ ಕೂಡ ಆರಂಭಿಕನಾಗಿ ಆಡಬಲ್ಲ ಬ್ಯಾಟ್ಸ್ಮನ್. ಇವರಲ್ಲದೆ ಶಹಬಾಜ್ ಅಹ್ಮದ್ ಕೂಡ ಈ ಹಿಂದೆ ರಣಜಿಯಲ್ಲಿ ಆರಂಭಿಕನಾಗಿ ಆಡಿದ ಅನುಭವ ಹೊಂದಿದ್ದಾರೆ. ಅಂದರೆ ಆರ್ಸಿಬಿ ಮುಂದೆ 3 ಆಯ್ಕೆಗಳಿವೆ. ಹೀಗಾಗಿ ಅನೂಜ್ ರಾವತ್ ಸ್ಥಾನವನ್ನು ಬೇರೆ ಆಟಗಾರರು ತುಂಬುದು ಬಹುತೇಕ ಖಚಿತ.
ಅನೂಜ್ ರಾವತ್ ಬದಲಾವಣೆ ಅನಿವಾರ್ಯ: ಆರ್ಸಿಬಿ ತಂಡವು ಅನೂಜ್ ರಾವತ್ಗೆ 8 ಪಂದ್ಯಗಳಲ್ಲಿ ಅವಕಾಶ ನೀಡಿದರೂ ನಿರೀಕ್ಷಿತ ಆಟ ಮೂಡಿಬಂದಿಲ್ಲ. ಮತ್ತೊಂದೆಡೆ ಮೂರನೇ ಕ್ರಮಾಂಕದಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ ಕೂಡ ಸತತವಾಗಿ ವಿಫಲರಾಗಿದ್ದಾರೆ. ಆಡಿದ 8 ಪಂದ್ಯಗಳಲ್ಲಿ 2 ಬಾರಿ ರನೌಟ್ ಆಗಿದ್ದರೆ, 2 ಬಾರಿ ಗೋಲ್ಡನ್ ಡಕ್ಗೆ ಔಟಾಗಿದ್ದಾರೆ. ಒಂದೆಡೆ ಅನೂಜ್ ರಾವತ್ ಔಟ್ ಆದ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ವಿಕೆಟ್ ಒಪಿಸುತ್ತಿದ್ದಾರೆ. ಅಂದರೆ ಆರ್ಸಿಬಿ ತಂಡದ ಎರಡು ವಿಕೆಟ್ಗಳು ಬ್ಯಾಕ್ ಟು ಬ್ಯಾಕ್ ಬೀಳುತ್ತಿರುವ ಕಾರಣ ಎದುರಾಳಿಗಳು ಮೇಲುಗೈ ಸಾಧಿಸುತ್ತಿದ್ದಾರೆ.
ಹೀಗಾಗಿ ಆರ್ಸಿಬಿ ತಂಡವು ಆರಂಭಿಕ ಆಟಗಾರನನ್ನು ಬದಲಿಸುವ ಮೂಲಕ, ಪವರ್ಪ್ಲೇನಲ್ಲಿ ವಿಕೆಟ್ ಬೀಳದಂತೆ ನೋಡಿಕೊಳ್ಳಬೇಕಾಗಿದೆ. ಏಕೆಂದರೆ ಆರ್ಸಿಬಿ ತಂಡವು ಪವರ್ಪ್ಲೇನಲ್ಲಿ ಉತ್ತಮವಾಗಿ ಆಡಿದ್ರೆ ಆ ಬಳಿಕ ಬರುವ ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ ತಂಡದ ಸ್ಕೋರ್ ಅನ್ನು ದೊಡ್ಡ ಮೊತ್ತದತ್ತ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಆರ್ಸಿಬಿ ತಂಡವು ಆರಂಭಿಕ ಸಮಸ್ಯೆಯನ್ನು ಸರಿದೂಗಿಸುವ ಮೂಲಕ ಗೆಲುವಿನ ಲಯಕ್ಕೆ ಮರಳಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ