AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022 Retention: ಇಂದು ಐಪಿಎಲ್ ರಿಟೆನ್ಶನ್: 5 ಗಂಟೆಗೆ ಲೈವ್ ಅಲ್ಲ: ಸಮಯದಲ್ಲಿ ದಿಢೀರ್ ಬದಲಾವಣೆ

IPL 2022 Retention Updates: ಐಪಿಎಲ್ 2022 ಆಟಗಾರರನ್ನು ರಿಟೈನ್ ಪ್ರಕಿಯೆಯು​ ನವೆಂಬರ್ 30 ರಂದು, ಸಂಜೆ 5 ಗಂಟೆಯಿಂದ ಶುರುವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಈ ಸಮಯದಲ್ಲಿ ಬದಲಾವಣೆ ಆಗಿದೆ. ರಿಟೈನ್ ಪ್ರಕಿಯೆ ಇಂದು ರಾತ್ರಿ 9:30ಕ್ಕೆ ಶುರುವಾಗಲಿದೆ.

IPL 2022 Retention: ಇಂದು ಐಪಿಎಲ್ ರಿಟೆನ್ಶನ್: 5 ಗಂಟೆಗೆ ಲೈವ್ ಅಲ್ಲ: ಸಮಯದಲ್ಲಿ ದಿಢೀರ್ ಬದಲಾವಣೆ
IPL 2022 Retention
TV9 Web
| Edited By: |

Updated on: Nov 30, 2021 | 8:21 AM

Share

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ (IPL 2022) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭರ್ಜರಿ ಸಿದ್ಧತೆ ನಡೆಸುತ್ತಿದೆ. ಇದರ ಮೊದಲ ಭಾಗವಾಗಿ ಯಾವ್ಯಾವ ಆಟಗಾರರನ್ನು ಉಳಿಸಿ ಕೊಳ್ಳಲಾಗುತ್ತದೆ ಎಂದು ತಿಳಿಸಲು ಫ್ರಾಂಚೈಸಿಗಳಿಗೆ ಇಂದು ಕೊನೇ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಫ್ರಾಂಚೈಸಿಗಳು ಈಗಾಗಲೇ ಅಂತಿಮ ಪಟ್ಟಿಯನ್ನು ನೀಡಿವೆ. ಪ್ರತಿ ತಂಡ ಗರಿಷ್ಠ ಇಬ್ಬರು ವಿದೇಶಿ ಮತ್ತು ಮೂವರು ಭಾರತೀಯರ ಸಹಿತ ಗರಿಷ್ಠ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದೆ. ಇಂದು ಆಯೋಜಿಸಿರುವ ಐಪಿಎಲ್ ರಿಟೆನ್ಶನ್ (IPL 2022 Retention) ಪ್ರಕ್ರಿಯೆ ನೇರಪ್ರಸಾರ ಕೂಡ ಕಾಣಲಿದೆ. ಆದರೆ, ಈ ಹಿಂದೆ ನಿಗದಿ ಮಾಡಿದ ಸಮಯಕ್ಕಲ್ಲ. ಬಿಸಿಸಿಐ ರಿಟೆನ್ಶನ್ ಸಮಯದಲ್ಲಿ ಬದಲಾವಣೆ ಮಾಡಿದೆ. ಹಾಗಾದ್ರೆ ಐಪಿಎಲ್ ರಿಟೆನ್ಶನ್ ಪ್ರಕ್ರಿಯೆ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?, ಯಾವುದರಲ್ಲಿ ನೇರಪ್ರಸಾರ (IPL 2022 Retention Live) ನೋಡಬಹುದು?.

ಈ ಹಿಂದೆ ಐಪಿಎಲ್ 2022 ಆಟಗಾರರನ್ನು ರಿಟೈನ್ ಪ್ರಕಿಯೆಯು​ ನವೆಂಬರ್ 30 ರಂದು, ಸಂಜೆ 5 ಗಂಟೆಯಿಂದ ಶುರುವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಈ ಸಮಯದಲ್ಲಿ ಬದಲಾವಣೆ ಆಗಿದೆ. ರಿಟೈನ್ ಪ್ರಕಿಯೆ ಇಂದು ರಾತ್ರಿ 9:30ಕ್ಕೆ ಶುರುವಾಗಲಿದೆ. ಈ ರಿಟೈನ್ ಪಟ್ಟಿ ಸಲ್ಲಿಕೆ ಕಾರ್ಯಕ್ರಮವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು. ಜೊತೆಗೆ ಡಿಸ್ನಿ+ ಹಾಟ್​ಸ್ಟಾರ್​ನಲ್ಲೂ​ ಲೈವ್ ಸ್ಟ್ರೀಮಿಂಗ್ ನೋಡಬಹುದು.

ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟ ಗಾರರನ್ನು ನೋಡಿಕೊಂಡು ಹೊಸತಾಗಿ ಸೇರ್ಪಡೆಯಾಗಿರುವ ಅಹ್ಮದಾಬಾದ್‌ ಮತ್ತು ಲಕ್ನೋ ತಂಡಗಳು ತಲಾ ಮೂರು ಆಟಗಾರರನ್ನು ಕೊಳ್ಳುವ ನಿರ್ಧಾರ ಮಾಡಲಿವೆ. ಇದಕ್ಕೆ ಡಿಸೆಂಬರ್ 1ರಿಂದ 25ರವರೆಗೆ ಕಾಲಾವಕಾಶವಿದೆ. ಈ ಬಾರಿ ತಂಡಗಳು ಆಟಗಾರರ ಖರೀದಿಗೆ ಗರಿಷ್ಠ 90 ಕೋಟಿ ರೂ. ಬಜೆಟ್ ಹೊಂದಿದ್ದು, ಗರಿಷ್ಠ ನಾಲ್ವರನ್ನು ರಿಟೇನ್ ಮಾಡಿಕೊಂಡರೆ 42 ಕೋಟಿ ರೂ. (16, 12, 8, 6) ಕಡಿತವಾಗಲಿದೆ. ಮೂವರನ್ನು ರಿಟೇನ್ ಮಾಡಿದರೆ 33 ಕೋಟಿ ರೂ. (15, 11, 7) ಕಡಿತವಾಗಲಿದೆ. ಇಬ್ಬರನ್ನು ರಿಟೇನ್ ಮಾಡಿದರೆ 24 ಕೋಟಿ ರೂ. (14, 10) ಕಡಿತವಾಗಲಿದೆ. ಒಬ್ಬ ಆಟಗಾರನನ್ನು ರಿಟೇನ್ ಮಾಡಿದರೆ 14 ಕೋಟಿ ರೂ. ಕಡಿತವಾಗಲಿದೆ.

ತಂಡಗಳ ಸಂಭಾವ್ಯ ರಿಟೇನ್:

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ರಿಷಭ್‌ ಪಂತ್‌, ಪೃಥ್ವಿ ಶಾ, ಅಕ್ಷರ್‌ ಪಟೇಲ್‌, ಅನ್ರಿಚ್‌ ನೋರ್ಜೆ ಅವರನ್ನು ಉಳಿಸಿಕೊಳ್ಳುವುದು ಖಚಿತ. ಹೀಗಾಗಿ ಆರ್‌. ಅಶ್ವಿ‌ನ್‌, ಶ್ರೇಯಸ್‌ ಅಯ್ಯರ್‌, ಕಗಿಸೊ ರಬಾಡ ಅವರಂತಹ ಖ್ಯಾತ ಆಟಗಾರರನ್ನು ಕೈಬಿಡಬೇಕಾಗುತ್ತದೆ.

ಇತ್ತ ಕೆಕೆಆರ್‌ ತನ್ನ ನಾಯಕ ಇಯಾನ್‌ ಮಾರ್ಗನ್‌, ಶುಭ್ಮನ್ ಗಿಲ್‌ ಅವರನ್ನು ಬಿಟ್ಟುಕೊಡುವ ಸಾಧ್ಯತೆಯಿದೆ. ಪಂಜಾಬ್‌ ಕಿಂಗ್ಸ್‌ ನಾಯಕ ಕೆಎಲ್‌. ರಾಹುಲ್‌ ತಾವೇ ಹರಾಜಿಗೆ ಸಿದ್ಧರಾಗಿದ್ದಾರೆ. ಯುವ ಆಟಗಾರರಾದ ಆರ್ಷದೀಪ್‌ ಸಿಂಗ್‌, ರವಿ ಬಿಷ್ಣೋಯಿ ಅವರನ್ನು ಉಳಿಸಿಕೊಳ್ಳಬಹುದು. ಮಾಯಾಂಕ್‌ ಅಗರ್ವಾಲ್‌, ಮೊಹಮ್ಮದ್‌ ಶಮಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇನ್ನು ಆರ್‌ಸಿಬಿ ಪರ ವಿರಾಟ್ ಕೊಹ್ಲಿ, ಯುಜ್ವೇಂದ್ರ ಚಾಹಲ್, ಗ್ಲೆನ್ ಮ್ಯಾಕ್ಸ್‌ವೆಲ್. ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮ, ಜಸ್‌ಪ್ರೀತ್ ಬುಮ್ರಾ, ಪೊಲ್ಲಾರ್ಡ್, ಇಶಾನ್ ಕಿಶನ್. ಚೆನ್ನೈ ಸೂಪರ್‌ಕಿಂಗ್ಸ್​ನಲ್ಲಿ ಎಂಎಸ್ ಧೋನಿ, ರವೀಂದ್ರ ಜಡೇಜಾ, ಋತುರಾಜ್ ಗಾಯಕ್ವಾಡ್, ಡುಪ್ಲೆಸಿಸ್ ಇರುವ ಸಾಧ್ಯತೆ ಇದೆ.

Shane Warne Bike Accident: ಬೈಕ್ ಅಪಘಾತದಲ್ಲಿ ಗಾಯಗೊಂಡ ಆಸ್ಟ್ರೇಲಿಯಾದ ಲೆಜೆಂಡರಿ ಸ್ಪಿನ್ನರ್ ಶೇನ್ ವಾರ್ನ್

(ipl 2022 retention live updates When and what time will the IPL 2022 retention ceremony begin)

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್