IPL 2022 Retention: ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ: ಕೆಎಲ್ ರಾಹುಲ್ಗೆ ಲಖನೌ ಫ್ರಾಂಚೈಸಿ ನೀಡಿರುವ ಆಫರ್ ಎಷ್ಟು ಗೊತ್ತೇ?
KL Rahul Lucknow Franchise, IPL 2022: ಅದೆಷ್ಟೇ ಮೊತ್ತವಾದರೂ ಪರವಾಗಿಲ್ಲ ಕೆಎಲ್ ರಾಹುಲ್ ನಮಗೆ ಬೇಕು ಎಂದು ಲಖನೌ ಫ್ರಾಂಚೈಸಿ ಪಟ್ಟುಹಿಡಿದು ನಿಂತಿದೆ. ವರದಿಯ ಪ್ರಕಾರ ಕೆಎಲ್ ರಾಹುಲ್ಗೆ ಲಖನೌ ಬರೋಬ್ಬರಿ 20 ಕೋಟಿ ರೂಪಾಯಿಯ ಆಫರ್ ನೀಡಿದೆಯಂತೆ.

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ (Indian Premier League) ಹೊಸ ದಾಖಲೆಯೊಂದು ಆಗುವುದರಲ್ಲಿದೆ. ಐಪಿಎಲ್ 2022ರ ಮೆಗಾ ಹರಾಜಿಗೂ (IPL 2022 Mega Auction) ಮುನ್ನ ಯಾವ್ಯಾವ ಆಟಗಾರರನ್ನು ಉಳಿಸಿ ಕೊಳ್ಳಲಾಗುತ್ತದೆ ಎಂದು ತಿಳಿಸಲು ಫ್ರಾಂಚೈಸಿಗಳಿಗೆ ಇಂದು ಕೊನೇ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಫ್ರಾಂಚೈಸಿಗಳು ಈಗಾಗಲೇ ಅಂತಿಮ ಪಟ್ಟಿಯನ್ನು ನೀಡಿವೆ. ಬಿಸಿಸಿಐ (BCCI) ನಿಯಮದ ಪ್ರಕಾರ ಪ್ರತಿ ತಂಡ ಗರಿಷ್ಠ ಇಬ್ಬರು ವಿದೇಶಿ ಮತ್ತು ಮೂವರು ಭಾರತೀಯರ ಸಹಿತ ಗರಿಷ್ಠ ನಾಲ್ವರು ಪ್ಲೇಯರ್ಸ್ ಅನ್ನು ಉಳಿಸಿಕೊಳ್ಳಲು ಅವಕಾಶವಿದೆ. ಹೊಸತಾಗಿ ಸೇರ್ಪಡೆಯಾಗಿರುವ ಅಹ್ಮದಾಬಾದ್ ಮತ್ತು ಲಕ್ನೋ (Ahmedabad and Lucknow IPL) ಫ್ರಾಂಚೈಸಿಗೆ ತಲಾ ಮೂರು ಆಟಗಾರರನ್ನು ಕೊಳ್ಳಲು ಡಿಸೆಂಬರ್ 1ರಿಂದ 25ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ಪೈಕಿ ಲಖನೌ ಫ್ರಾಂಚೈಸಿ ದೊಡ್ಡ ಪ್ಲಾನ್ ಮಾಡಿದೆ. ಹೌದು, ಲಖನೌ ಫ್ರಾಂಚೈಸಿ ಕಣ್ಣು ಈಗ ಕೆಎಲ್ ರಾಹುಲ್ (KL Rahul) ಮೇಲೆ ಬಿದ್ದಿದೆ.
ಅದೆಷ್ಟೇ ಮೊತ್ತವಾದರೂ ಪರವಾಗಿಲ್ಲ ಕೆಎಲ್ ರಾಹುಲ್ ನಮಗೆ ಬೇಕು ಎಂದು ಲಖನೌ ಫ್ರಾಂಚೈಸಿ ಪಟ್ಟುಹಿಡಿದು ನಿಂತಿದೆ. ವರದಿಯ ಪ್ರಕಾರ ಕೆಎಲ್ ರಾಹುಲ್ಗೆ ಲಖನೌ ಬರೋಬ್ಬರಿ 20 ಕೋಟಿ ರೂಪಾಯಿಯ ಆಫರ್ ನೀಡಿದೆಯಂತೆ. ಹೀಗಾದಲ್ಲಿ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಮೊತ್ತ ಇದಾಗಲಿದ್ದು ನೂತನ ದಾಖಲೆ ಆಗಲಿದೆ. ಸದ್ಯ ಆರ್‌ಸಿಬಿಯಿಂದ 17 ಕೋಟಿ ಪಡೆಯುತ್ತಿರುವ ವಿರಾಟ್ ಕೊಹ್ಲಿ ದಾಖಲೆಯನ್ನೂ ರಾಹುಲ್ ಹಿಂದಿಕ್ಕಲಿದ್ದಾರೆ.
ಇದರ ನಡುವೆ ಲಖನೌ ತಂಡ ಸೇರಲು ಕೆಎಲ್ ರಾಹುಲ್ ಕೂಡ ಸಮ್ಮತಿಸಿದ್ದಾರೆ ಎಂದು ವರದಿಯಾಗಿದೆ. ರಾಹುಲ್ ಲಖನೌ ಜೊತೆಗಿನ ಒಪ್ಪಂದವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಮೊದಲು ರಾಹುಲ್ ಆರ್‌ಸಿಬಿ ತಂಡ ಸೇರಲಿದ್ದಾರೆ ಎಂದು ವರದಿಯಾಗಿತ್ತು. ಆದರೀಗ ಇವರು ಹೊಸ ಫ್ರಾಂಚೈಸಿ ಕಡೆ ಒಲವು ತೋರಿದ್ದಾರಂತೆ. ಕಳೆದ ಆವೃತ್ತಿಯಲ್ಲಿ ರಾಹುಲ್ 13 ಪಂದ್ಯಗಳಿಂದ 626 ರನ್ ಪೇರಿಸಿದ್ದು, ಟೂರ್ನಿಯಲ್ಲಿ ಅತಿಹೆಚ್ಚು ರನ್ ಪೇರಿಸಿದ 3ನೇ ಆಟಗಾರ ಎನಿಸಿಕೊಂಡಿದ್ದರು. ಇದುವರೆಗೂ 94 ಐಪಿಎಲ್ ಪಂದ್ಯಗಳಿಂದ 3273 ರನ್ ಪೇರಿಸಿದ್ದಾರೆ. ಯಾವುದೇ ಸಂದರ್ಭದಲ್ಲಿ ಬ್ಯಾಟ್ ಬೀಸುವ ಸಾಮರ್ಥ್ಯ ಹೊಂದಿರುವ ಇವರು ಏಕಾಂಗಿಯಾಗಿ ನಿಂತು ಪಂದ್ಯವನ್ನು ಗೆಲ್ಲಿಸಿಕೊಡುವ ಆಟಗಾರನಾಗಿದ್ದಾರೆ. ಇದಕ್ಕಾಗಿಯೇ ರಾಹುಲ್ಗೆ ಒಷ್ಟೊಂದು ಬೇಡಿಕೆ.
ಇಂದು ಐಪಿಎಲ್ ರಿಟೆನ್ಶನ್:
ಐಪಿಎಲ್ 2022ಕ್ಕೆ ಯಾವ್ಯಾವ ಆಟಗಾರರನ್ನು ಉಳಿಸಿ ಕೊಳ್ಳಲಾಗುತ್ತದೆ ಎಂದು ತಿಳಿಸಲು ಫ್ರಾಂಚೈಸಿಗಳಿಗೆ ಇಂದು ಕೊನೇ ದಿನವಾಗಿದೆ. ರಿಟೈನ್ ಪ್ರಕಿಯೆ ಇಂದು ರಾತ್ರಿ 9:30ಕ್ಕೆ ಶುರುವಾಗಲಿದೆ. ಈ ರಿಟೈನ್ ಪಟ್ಟಿ ಸಲ್ಲಿಕೆ ಕಾರ್ಯಕ್ರಮವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು. ಜೊತೆಗೆ ಡಿಸ್ನಿ+ ಹಾಟ್ಸ್ಟಾರ್ನಲ್ಲೂ ಲೈವ್ ಸ್ಟ್ರೀಮಿಂಗ್ ನೋಡಬಹುದು.
ಈ ಬಾರಿ ತಂಡಗಳು ಆಟಗಾರರ ಖರೀದಿಗೆ ಗರಿಷ್ಠ 90 ಕೋಟಿ ರೂ. ಬಜೆಟ್ ಹೊಂದಿದ್ದು, ಗರಿಷ್ಠ ನಾಲ್ವರನ್ನು ರಿಟೇನ್ ಮಾಡಿಕೊಂಡರೆ 42 ಕೋಟಿ ರೂ. (16, 12, 8, 6) ಕಡಿತವಾಗಲಿದೆ. ಮೂವರನ್ನು ರಿಟೇನ್ ಮಾಡಿದರೆ 33 ಕೋಟಿ ರೂ. (15, 11, 7) ಕಡಿತವಾಗಲಿದೆ. ಇಬ್ಬರನ್ನು ರಿಟೇನ್ ಮಾಡಿದರೆ 24 ಕೋಟಿ ರೂ. (14, 10) ಕಡಿತವಾಗಲಿದೆ. ಒಬ್ಬ ಆಟಗಾರನನ್ನು ರಿಟೇನ್ ಮಾಡಿದರೆ 14 ಕೋಟಿ ರೂ. ಕಡಿತವಾಗಲಿದೆ.
Ajinkya Rahane: 2ನೇ ಟೆಸ್ಟ್ನ ಪ್ಲೇಯಿಂಗ್ XI ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಅಜಿಂಕ್ಯಾ ರಹಾನೆ: ಏನದು?
IPL 2022 Retention: ಇಂದು ಐಪಿಎಲ್ ರಿಟೆನ್ಶನ್: 5 ಗಂಟೆಗೆ ಲೈವ್ ಅಲ್ಲ: ಸಮಯದಲ್ಲಿ ದಿಢೀರ್ ಬದಲಾವಣೆ
(IPL 2022 Retention Here is the record highest 20cr rs offer for KL Rahul from Lucknow Franchise know details)
