Ajinkya Rahane: 2ನೇ ಟೆಸ್ಟ್ನ ಪ್ಲೇಯಿಂಗ್ XI ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಅಜಿಂಕ್ಯಾ ರಹಾನೆ: ಏನದು?
India vs New Zealand 1st Test: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಶ್ರೇಯಸ್ ಅಯ್ಯರ್ ಸ್ಥಾನ ಪಡೆದುಕೊಂಡಿದ್ದು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ. ಸದ್ಯ 2ನೇ ಟೆಸ್ಟ್ಗೆ ಕೊಹ್ಲಿ ಕಮ್ಬ್ಯಾಕ್ ಮಾಡಲಿದ್ದಾರೆ. ಹೀಗಾದಾಗ ಅಯ್ಯರ್ ಮುಂದಿನ ಟೆಸ್ಟ್ನಲ್ಲಿ ಸ್ಥಾನ ಪಡೆಯುತ್ತಾರಾ? - ಈ ಬಗ್ಗೆ ಅಜಿಂಕ್ಯಾ ರಹಾನೆ ಏನಂದ್ರು ಕೇಳಿ.

ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ (Green Park, Kanpur) ಸೋಮವಾರ ಮುಕ್ತಾಯಗೊಂಡ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand 1st Test) ನಡುವಣ ಮೊದಲ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಕಂಡಿತು. ಟೀಮ್ ಇಂಡಿಯಾ (Team India) ಅಂತಿಮ ಕ್ಷಣದವರೆಗೂ ಗೆಲುವಿಗಾಗಿ ಪ್ರಬಲ ಪೈಪೋಟಿ ತೋರಿದರೂ ಕೇನ್ ಪಡೆಯ ಬಾಲಂಗೋಚಿ ಬ್ಯಾಟರ್‌ಗಳ ದಿಟ್ಟ ಹೋರಾಟದಿಂದ ಪಂದ್ಯ ಡ್ರಾ ಆಯಿತು. ಚೊಚ್ಚಲ ಪಂದ್ಯವನ್ನಾಡಿದ ರಚಿನ್ ರವೀಂದ್ರ (Rachin Ravindra) 2ನೇ ಇನಿಂಗ್ಸ್‌ನಲ್ಲಿ 91 ಎಸೆತಗಳಲ್ಲಿ ಅಜೇಯ 18 ರನ್ ಗಳಿಸುವ ಮೂಲಕ ಭಾರತದ ಗೆಲುವಿಗೆ ತಡೆಗೋಡೆಯಾದರು. ಪಂದ್ಯಮುಗಿದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಅಜಿಂಕ್ಯಾ ರಹಾನೆ (Ajinkya Rahane) ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಎರಡನೇ ಟೆಸ್ಟ್ಗೆ ವಿರಾಟ್ ಕೊಹ್ಲಿ (Virat Kohli) ಲಭ್ಯರಿರುವ ಕಾರಣ ಪ್ಲೇಯಿಂಗ್ ಇಲೆವೆನ್ (India Playing XI For 2nd Test) ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.
“ನಾವು ಕಾನ್ಪುರ ಪಂದ್ಯವನ್ನು ಗೆಲ್ಲಬೇಕೆಂದು ಸಾಕಷ್ಟು ಪರಿಶ್ರಮ ಪಟ್ಟೆವು. ಆಟಗಾರರು ಕೂಡ ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನು ಮಾಡಿದ್ದಾರೆ. ಇದಕ್ಕಿಂತ ಹೆಚ್ಚಿನದನ್ನು ಏನೂ ಮಾಡಲು ಸಾಧ್ಯವಿರಲಿಲ್ಲ. ಇದು ಕ್ರಿಕೆಟ್‌ನ ಅತ್ಯುತ್ತಮವಾದ ಪಂದ್ಯವಾಗಿತ್ತು, ನ್ಯೂಜಿಲೆಂಡ್ನವರು ಅದ್ಭುತವಾದ ಪ್ರದರ್ಶನ ನೀಡಿದರು. ಮೊದಲ ಸೆಷನ್ ಅವರ ಕಡೆ ವಾಲಿದ್ದರೆ, ನಂತರದ ಎರಡನೇ ಸೆಷನ್ನಲ್ಲಿ ನಾವು ಕೂಡ ಅದ್ಭುತವಾಗಿ ಪಂದ್ಯವನ್ನು ಹಿಡಿತಕ್ಕೆ ಪಡೆದುಕೊಂಡಿದ್ದೆವು” ಎಂದು ರಹಾನೆ ಹೇಳಿದ್ದಾರೆ.
ಇನ್ನು ಪದಾರ್ಪಣೆ ಪಂದ್ಯದಲ್ಲೇ ಮಿಂಚಿನ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದುಕೊಂಡ ಶ್ರೇಯಸ್ ಅಯ್ಯರ್ ಆಟದ ಬಗ್ಗೆ ಮಾತನಾಡಿರುವ ರಹಾನೆ, “ಶ್ರೇಯಸ್ ಅಯ್ಯರ್ ನೀಡಿದ ಪ್ರದರ್ಶನಕ್ಕೆ ನಾನು ನಿಜಕ್ಕೂ ಸಂತೋಷಗೊಂಡಿದ್ದೇನೆ. ಆತ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಲು ಅನೇಕ ಸಮಯದಿಂದ ಕಾಯುತ್ತಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನೀಡಿದ ಅದ್ಭುತವಾದ ಪ್ರದರ್ಶನದಂತೆಯೇ ಅಯ್ಯರ್ ಇಲ್ಲಿಯೂ ತಮ್ಮ ಆಟವನ್ನು ಮುಂದುವರಿಸಿದ್ದಾರೆ” ಎಂದು ಹೇಳಿದರು.
ಮೊದಲ ಟೆಸ್ಟ್ ಪಂದ್ಯದಲ್ಲಿ ಅಯ್ಯರ್ ಅವರು ಸ್ಥಾನ ಪಡೆದುಕೊಂಡಿದ್ದು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ. ಸದ್ಯ ಎರಡನೇ ಟೆಸ್ಟ್ಗೆ ಕೊಹ್ಲಿ ತಂಡಕ್ಕೆ ಕಮ್ಬ್ಯಾಕ್ ಮಾಡಲಿದ್ದಾರೆ. ಹೀಗಾದಾಗ ಅಯ್ಯರ್ ಮುಂದಿನ ಟೆಸ್ಟ್ನಲ್ಲಿ ಸ್ಥಾನ ಪಡೆಯುತ್ತಾರಾ?, ಪಡೆದರೆ ಯಾರ ಜಾಗ ತುಂಬಲಿದ್ದಾರೆ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ. ಆದರೆ, ಇದರ ಬಗ್ಗೆ ರಹಾನೆ ಮಾತನಾಡಲು ನಿರಾಕರಿಸಿದ್ದಾರೆ. “ಮುಂದಿನ ಪಂದ್ಯಕ್ಕೆ ವಿರಾಟ್ ಕೊಹ್ಲಿ ಮರಳಲಿದ್ದಾರೆ. ಈ ಸಂದರ್ಭದಲ್ಲಿ ತಂಡದ ಮ್ಯಾನೇಜ್‌ಮೆಂಟ್ ಆಡುವ ಬಳಗದ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಿದೆ” ಎಂದು ಹೇಳಿದದ್ದಾರೆ.
ಈ ಪಂದ್ಯದಲ್ಲಿ ಭಾರತ ನೀಡಿದ 284 ರನ್ ಸವಾಲಿಗೆ ಪ್ರತಿಯಾಗಿ 1 ವಿಕೆಟ್‌ಗೆ 4 ರನ್‌ನಿಂದ ಅಂತಿಮ ದಿನದಾಟ ಆರಂಭಿಸಿದ ಪ್ರವಾಸಿ ತಂಡ ಮಂದಗತಿ ಬ್ಯಾಟಿಂಗ್ ಫಲವಾಗಿ ದಿಟ್ಟ ಪ್ರತಿರೋಧ ಒಡ್ಡಿತು. ಅಂತಿಮವಾಗಿ 9 ವಿಕೆಟ್‌ಗೆ 165 ರನ್‌ಗಳಿಸಿ ಡ್ರಾ ಸಾಧಿಸಿತು. ಟೆಸ್ಟ್ ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ತಂಡದ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಭಾರತದ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ (40ಕ್ಕೆ 4) ಹಾಗೂ ಆರ್.ಅಶ್ವಿನ್ (35ಕ್ಕೆ 3) ಅಲ್ಪಮಟ್ಟಿಗೆ ಯಶಸ್ವಿಯಾದರೂ ತಂಡಕ್ಕೆ ಗೆಲುವು ತಂದುಕೊಡಲು ಶಕ್ತರಾಗಲಿಲ್ಲ.
IPL 2022 Retention: ಇಂದು ಐಪಿಎಲ್ ರಿಟೆನ್ಶನ್: 5 ಗಂಟೆಗೆ ಲೈವ್ ಅಲ್ಲ: ಸಮಯದಲ್ಲಿ ದಿಢೀರ್ ಬದಲಾವಣೆ
(Ajinkya Rahane talking India Playing XI for 2nd Test in post-match presentation after India vs New Zealand 1st Test)
