RR vs RCB: ಆರ್​ಸಿಬಿ-ರಾಜಸ್ಥಾನ್ ರಾಯಲ್ಸ್​ ಪಂದ್ಯದಲ್ಲಿ ನಿರ್ಮಾಣವಾಗಲಿದೆ ಹಲವು ದಾಖಲೆ

IPL 2022, RR vs RCB: ಐಪಿಎಲ್‌ನಲ್ಲಿ 150 ವಿಕೆಟ್‌ಗಳನ್ನು ಪಡೆದ ಐದನೇ ಆಟಗಾರನಾಗಲು ಆರ್ ಅಶ್ವಿನ್‌ಗೆ ಇನ್ನೂ ನಾಲ್ಕು ವಿಕೆಟ್‌ಗಳ ಅಗತ್ಯವಿದೆ.

RR vs RCB: ಆರ್​ಸಿಬಿ-ರಾಜಸ್ಥಾನ್ ರಾಯಲ್ಸ್​ ಪಂದ್ಯದಲ್ಲಿ ನಿರ್ಮಾಣವಾಗಲಿದೆ  ಹಲವು ದಾಖಲೆ
RR vs RCB
Follow us
TV9 Web
| Updated By: ಝಾಹಿರ್ ಯೂಸುಫ್

Updated on:Apr 05, 2022 | 5:50 PM

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ 13ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿವೆ . ರಾಜಸ್ಥಾನ್ ರಾಯಲ್ಸ್ ಎರಡು ಪಂದ್ಯಗಳನ್ನು ಗೆದ್ದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಹೀಗಾಗಿ ಎರಡೂ ತಂಡಗಳು ಗೆಲುವಿನ ಲಯವನ್ನು ಮುಂದುವರೆಸುವ ಇರಾದೆಯಲ್ಲಿದೆ. ಹಾಗಾಗಿ ಈ ಪಂದ್ಯದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಇನ್ನು ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರಿಂದ ಹಲವು ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆಯಿದೆ. ಆ ದಾಖಲೆಗಳು ಯಾವುವು ಎಂದು ನೋಡುವುದಾದರೆ…

– ರಾಜಸ್ಥಾನ್ ರಾಯಲ್ಸ್ ಪರ 2500 ಐಪಿಎಲ್ ರನ್‌ಗಳನ್ನು ತಲುಪಲು ಸಂಜು ಸ್ಯಾಮ್ಸನ್ ಇನ್ನೂ 24 ರನ್ ಗಳಿಸಬೇಕಾಗಿದೆ. ಈ ಮೂಲಕ ಅಜಿಂಕ್ಯ ರಹಾನೆ ನಂತರ ಆರ್​ಆರ್​ ಪರ ಅತೀ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

– ಎಂಎಸ್ ಧೋನಿ ನಂತರ ಐಪಿಎಲ್‌ನಲ್ಲಿ 150 ವಿಕೆಟ್ ಕೀಪಿಂಗ್ ಡಿಸ್​ಮಿಸೆಲ್ ಮಾಡಿದ ಎರಡನೇ ವಿಕೆಟ್‌ಕೀಪರ್ ಎನಿಸಿಕೊಳ್ಳಲು ದಿನೇಶ್ ಕಾರ್ತಿಕ್‌ಗೆ ಇನ್ನೂ ಎರಡು ಔಟ್​ಗಳ ಅಗತ್ಯವಿದೆ.

– T20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳನ್ನು ತಲುಪಲು ದಿನೇಶ್ ಕಾರ್ತಿಕ್‌ಗೆ ಇನ್ನೂ ಮೂರು ಸಿಕ್ಸರ್‌ಗಳ ಅಗತ್ಯವಿದೆ.

– ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳನ್ನು ತಲುಪಲು ಜೋಸ್ ಬಟ್ಲರ್‌ಗೆ ಇನ್ನೂ ಎರಡು ಸಿಕ್ಸರ್‌ಗಳ ಅಗತ್ಯವಿದೆ.

– ಹರ್ಷಲ್ ಪಟೇಲ್ ವಿನಯ್ ಕುಮಾರ್ ಅವರನ್ನು ಹಿಂದಿಕ್ಕಲು ಮತ್ತು RCB ಯ ಅತ್ಯಂತ ಯಶಸ್ವಿ ವೇಗಿಯಾಗಲು ಇನ್ನೂ ನಾಲ್ಕು ವಿಕೆಟ್‌ಗಳ ಅಗತ್ಯವಿದೆ.

– ಐಪಿಎಲ್‌ನಲ್ಲಿ 150 ವಿಕೆಟ್‌ಗಳನ್ನು ಪಡೆದ ಐದನೇ ಆಟಗಾರನಾಗಲು ಆರ್ ಅಶ್ವಿನ್‌ಗೆ ಇನ್ನೂ ನಾಲ್ಕು ವಿಕೆಟ್‌ಗಳ ಅಗತ್ಯವಿದೆ.

– ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳನ್ನು ತಲುಪಲು ಸಿದ್ದಾರ್ಥ್ ಕೌಲ್‌ಗೆ ಇನ್ನೂ ಮೂರು ವಿಕೆಟ್‌ಗಳ ಅಗತ್ಯವಿದೆ.

– ದೇವದತ್ ಪಡಿಕ್ಕಲ್ (932) ಐಪಿಎಲ್‌ನಲ್ಲಿ 1000 ರನ್ ಪೂರೈಸಲು 68 ರನ್‌ಗಳ ಅಗತ್ಯವಿದೆ.

– ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ (549) 550 ಬೌಂಡರಿಗಳನ್ನು ಗಳಿಸಲು ಒಂದು ಬೌಂಡರಿ ಅಗತ್ಯವಿದೆ.

– ಸಂಜು ಸ್ಯಾಮ್ಸನ್ (240) ಐಪಿಎಲ್‌ನಲ್ಲಿ 250 ಬೌಂಡರಿಗಳನ್ನು ಗಳಿಸಲು ಹತ್ತು ಬೌಂಡರಿಗಳ ಅಗತ್ಯವಿದೆ.

– ಸಂಜು ಸ್ಯಾಮ್ಸನ್ (4919) T20 ಪಂದ್ಯಗಳಲ್ಲಿ 5000 ರನ್‌ಗಳನ್ನು ಪೂರೈಸಲು 81 ರನ್‌ಗಳ ದೂರದಲ್ಲಿದ್ದಾರೆ.

– ಜೋಸ್ ಬಟ್ಲರ್ (7470) T20 ಪಂದ್ಯಗಳಲ್ಲಿ 7500 ರನ್ ಪೂರ್ಣಗೊಳಿಸಲು 30 ರನ್ ಅಗತ್ಯವಿದೆ.

– ಪಡಿಕ್ಕಲ್ (197) T20 ಕ್ರಿಕೆಟ್‌ನಲ್ಲಿ 200 ಬೌಂಡರಿಗಳನ್ನು ತಲುಪಲು ಮೂರು ಬೌಂಡರಿಗಳ ಅಗತ್ಯವಿದೆ.

ಇದನ್ನೂ ಓದಿ: KL Rahul: ಟಿ20 ಕ್ರಿಕೆಟ್​ನಲ್ಲಿ ಮತ್ತೊಂದು ಸಾಧನೆ ಮಾಡಿದ ಕೆಎಲ್ ರಾಹುಲ್

Published On - 5:47 pm, Tue, 5 April 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ