Virat Kohli: ಹೀಗೂ ಆಡ್ತಾರಾ?..ವಿರಾಟ್ ಕೊಹ್ಲಿ ವಿರುದ್ದ ಸೆಹ್ವಾಗ್ ಟೀಕಾ ಪ್ರಹಾರ

| Updated By: ಝಾಹಿರ್ ಯೂಸುಫ್

Updated on: May 28, 2022 | 2:54 PM

IPL 2022: ಈ ಬಾರಿಯ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ 16 ಪಂದ್ಯಗಳಲ್ಲಿ 22.73 ಸರಾಸರಿಯಲ್ಲಿ 341 ರನ್ ಗಳಿಸಿದ್ದಾರೆ. ಈ ವೇಳೆ 2 ಅರ್ಧ ಶತಕಗಳನ್ನು ಬಾರಿಸಿದ್ದರು.

Virat Kohli: ಹೀಗೂ ಆಡ್ತಾರಾ?..ವಿರಾಟ್ ಕೊಹ್ಲಿ ವಿರುದ್ದ ಸೆಹ್ವಾಗ್ ಟೀಕಾ ಪ್ರಹಾರ
Sehwag-Virat Kohli
Follow us on

IPL 2022: ಐಪಿಎಲ್​ ಸೀಸನ್​ 15 ರಿಂದ ಆರ್​ಸಿಬಿ (RCB) ತಂಡವು ಹೊರಬಿದ್ದಿದೆ. ಈ ಸೋಲಿನೊಂದಿಗೆ ಚೊಚ್ಚಲ ಟ್ರೋಫಿ ಗೆಲ್ಲುವ ಆರ್​ಸಿಬಿ ಕನಸು ಕೂಡ ಮುಂದುವರೆದಿದೆ. ಅದರಲ್ಲೂ ಕಳೆದ 15 ವರ್ಷಗಳಿಂದ ಆರ್​ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿ (Virat Kohli) ಅವರ ಕನಸು ಈ ಬಾರಿ ಕೂಡ ಕಮರಿದೆ. ಇತ್ತ ಆರ್​ಸಿಬಿ ಸೋಲಿನ ಬೆನ್ನಲ್ಲೇ ತಂಡದ ಪ್ರಮುಖ ಆಟಗಾರರ ಪ್ರದರ್ಶನದ ಬಗ್ಗೆ ವಿಮರ್ಶೆಗಳು ಕೇಳಿ ಬರುತ್ತಿದೆ. ಇದೀಗ ಟೀಮ್ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕೊಹ್ಲಿಯ ಬ್ಯಾಟಿಂಗ್ ಬಗ್ಗೆ ಟೀಕಾ ಪ್ರಹಾರ ನಡೆಸಿದ್ದಾರೆ. ಈ ಬಾರಿ ವಿರಾಟ್ ಕೊಹ್ಲಿ ಅತ್ಯಂತ ಕಳಪೆ ಮಟ್ಟದಲ್ಲಿ ಬ್ಯಾಟಿಂಗ್ ಮಾಡಿದ್ದರು. ಈ ಮೂಲಕ ಎಲ್ಲರನ್ನೂ ನಿರಾಶೆಗೊಳಿಸಿದ್ದಾರೆ ಎಂದು ಸೆಹ್ವಾಗ್ ಹೇಳಿದ್ದಾರೆ.

ಈ ಬಾರಿಯ ಐಪಿಎಲ್​ ಸೀಸನ್​ವೊಂದರಲ್ಲೇ ವಿರಾಟ್ ಕೊಹ್ಲಿ 14 ವರ್ಷಗಳ ಕಾಲ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಮಾಡಿದಷ್ಟು ತಪ್ಪುಗಳನ್ನು ಮಾಡಿದ್ದರು ಎಂದು ಸೆಹ್ವಾಗ್ ಟೀಕಿಸಿದ್ದಾರೆ. ಸುಮಾರು 3 ವರ್ಷಗಳಿಂದ ಶತಕ ಗಳಿಸಲು ಸಾಧ್ಯವಾಗದ ವಿರಾಟ್ ಕೊಹ್ಲಿ ತಮ್ಮ ಕೆಟ್ಟ ಹಂತವನ್ನು ಎದುರಿಸುತ್ತಿದ್ದಾರೆ. ಅವರು ಐಪಿಎಲ್‌ನಲ್ಲಿ 16 ಪಂದ್ಯಗಳಲ್ಲಿ 22.73 ಸರಾಸರಿಯಲ್ಲಿ 341 ರನ್ ಗಳಿಸಿದರು, ಇದರಲ್ಲಿ 2 ಅರ್ಧ ಶತಕಗಳು ಸೇರಿವೆ. ಇದರೊಂದಿಗೆ, ಅವರ ಐಪಿಎಲ್ 2022 ಅಭಿಯಾನವೂ ಕೊನೆಗೊಂಡಿತು. ಕ್ವಾಲಿಫೈಯರ್-2 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ವಿಕೆಟ್‌ಗಳಿಂದ ಜಯಗಳಿಸಿತು.

ಈ ಟೂರ್ನಿಯಲ್ಲಿನ ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ವಿಮರ್ಶಿಸಿರುವ ಸೆಹ್ವಾಗ್ ‘ಇದು ನಮಗೆ ತಿಳಿದಿರುವಕೊಹ್ಲಿ ಅಲ್ಲ. ಈ ಸೀಸನ್​ನಲ್ಲಿ ಬೇರೆ ವಿರಾಟ್ ಆಡಿದ್ದಾರೆ. ಇಲ್ಲದಿದ್ದರೆ, ಅವರು ತಮ್ಮ ಇಡೀ ವೃತ್ತಿಜೀವನದಲ್ಲಿ ಮಾಡದಿರುವಷ್ಟು ತಪ್ಪುಗಳನ್ನು ಒಂದು ಸೀಸನ್​ನಲ್ಲಿ ಹೇಗೆ ಮಾಡಬಲ್ಲರು. ಭಾರತದ ಈ ನಂಬರ್-1 ಬ್ಯಾಟ್ಸ್‌ಮನ್ ವಿಭಿನ್ನ ತಂತ್ರಗಳನ್ನು ಅನುಸರಿಸಿದ್ದರಿಂದ ಬೇಗನೆ ಔಟಾದರು. ರನ್ ಗಳಿಸದಿದ್ದಾಗ ಇದು ಸಂಭವಿಸುತ್ತದೆ. ನೀವು ರನ್ ಗಳಿಸಲು ಹಲವು ಮಾರ್ಗಗಳನ್ನು ಹುಡುಕಲು ಪ್ರಾರಂಭಿಸುತ್ತೀರಿ. ಇದರಿಂದ ನೀವು ವಿಕೆಟ್‌ಗಳನ್ನು ಬೇಗನೆ ಕಳೆದುಕೊಳ್ಳುತ್ತೀರಿ. ಈ ಸೀಸನ್​ನಲ್ಲಿ ವಿರಾಟ್ ಕೊಹ್ಲಿಯ ವಿಚಾರದಲ್ಲೂ ಅದೇ ಸಂಭವಿಸಿದೆ ಎಂದು ಸೆಹ್ವಾಗ್ ಹೇಳಿದ್ದಾರೆ.

ಇದನ್ನೂ ಓದಿ
Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್
IPL 2022: ಕೊನೆಯ ಓವರ್​ನಲ್ಲಿ ಚೇಸ್ ಮಾಡಿಯೇ ದಾಖಲೆ ಬರೆದ ಗುಜರಾತ್ ಟೈಟಾನ್ಸ್
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ, ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಅವರು ಆಫ್ ಸ್ಟಂಪ್ ಹೊರಗೆ ಎಸೆದ ಚೆಂಡನ್ನು ಮುಟ್ಟಿ ವಿರಾಟ್ ಕೊಹ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ್ದರು. ನಿಮ್ಮ ಫಾರ್ಮ್ ಕೆಟ್ಟಿರುವಾಗ, ನೀವು ಪ್ರತಿ ಚೆಂಡನ್ನು ಹೊಡೆಯಲು ಪ್ರಯತ್ನಿಸುತ್ತೀರಿ. ಆಫ್ ಸ್ಟಂಪ್‌ನ ಹೊರಗೆ ಹೋಗುವ ಚೆಂಡುಗಳನ್ನು ಸಹ ನೀವು ಬಿಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅದೃಷ್ಟ ಕೈ ಹಿಡಿಯದಿದ್ದರೆ ಔಟಾಗುವ ಸಾಧ್ಯತೆಗಳೇ ಹೆಚ್ಚು ಎಂದು ಸೆಹ್ವಾಗ್ ಹೇಳಿದರು.

ವಿರಾಟ್ ಕೊಹ್ಲಿ ಈ ಒಂದು ಸೀಸನ್​ ಮೂಲಕ ತಮ್ಮ ಲಕ್ಷಾಂತರ ಅಭಿಮಾನಿಗಳನ್ನು ನಿರಾಶೆಗೊಳಿಸಿದ್ದಾರೆ. ದೊಡ್ಡ ಪಂದ್ಯವೊಂದರಲ್ಲಿ ದೊಡ್ಡ ಆಟಗಾರ ಆಡಬೇಕೆಂದು ನಾವು ನಿರೀಕ್ಷಿಸುತ್ತೇವೆ. ಎರಡೂ ನಾಕೌಟ್ ಪಂದ್ಯಗಳಲ್ಲಿ ಕೊಹ್ಲಿ ಉತ್ತಮವಾಗಿ ಆಡಿಲ್ಲ. ಇದುವೇ ಅವರ ಕಳಪೆ ಬ್ಯಾಟಿಂಗ್​ಗೆ ಸಾಕ್ಷಿ ಎಂದು ವೀರೇಂದ್ರ ಸೆಹ್ವಾಗ್ ಹೇಳಿದರು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.