AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023 Auction: ಕೋಟಿ ಒಡೆಯರ ಹಣೆ ಬರಹ ಬದಲಿಸಿದ ಮಿನಿ ಹರಾಜು; ಕೋಟಿ ಕೋಟಿ ನಷ್ಟ..!

IPL 2023 Auction: ಪ್ರತಿ ಬಾರಿಯಂತೆ ಈ ಬಾರಿಯೂ ಕೆಲವು ಆಟಗಾರರು ರಾತ್ರೋ ರಾತ್ರಿ ಕೋಟಿಗಳ ಒಡೆಯರಾದರೆ ಇನ್ನು ಕೆಲವರು ಕೋಟಿ ಕೋಟಿ ನಷ್ಟ ಅನುಭವಿಸಿದ್ದಾರೆ.

IPL 2023 Auction: ಕೋಟಿ ಒಡೆಯರ ಹಣೆ ಬರಹ ಬದಲಿಸಿದ ಮಿನಿ ಹರಾಜು; ಕೋಟಿ ಕೋಟಿ ನಷ್ಟ..!
ಮಿನಿ ಹರಾಜಿನಲ್ಲಿ ಕಡಿಮೆ ಬೆಲೆ ಪಡೆದ ಆಟಗಾರರು
TV9 Web
| Edited By: |

Updated on:Dec 24, 2022 | 10:16 AM

Share

16ನೇ ಆವೃತ್ತಿಯ ಐಪಿಎಲ್​ಗಾಗಿ ಕೊಚ್ಚಿಯಲ್ಲಿ ನಡೆದ ಮಿನಿ ಹರಾಜಿನಲ್ಲಿ (IPL 2023 mini auction) ಹಲವು​ ಆಟಗಾರರ ಮೇಲೆ ಸಾಕಷ್ಟು ಹಣದ ಸುರಿಮಳೆಯಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಕೆಲವು ಆಟಗಾರರು ರಾತ್ರೋ ರಾತ್ರಿ ಕೋಟಿಗಳ ಒಡೆಯರಾದರೆ ಇನ್ನು ಕೆಲವರು ಕೋಟಿ ಕೋಟಿ ನಷ್ಟ ಅನುಭವಿಸಿದ್ದಾರೆ. ಐಪಿಎಲ್ 2023 ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ಆಲ್ ರೌಂಡರ್ ಸ್ಯಾಮ್ ಕರನ್ (sam curran) 18.5 ಕೋಟಿ ರೂ.ಗೆ ಮಾರಾಟವಾಗುವುದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಅವರ ನಂತರದ ಸ್ಥಾನವನ್ನು ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ (Cameron Green) ಪಡೆದಿದ್ದು, ಅವರು 17.50 ಕೋಟಿ ರೂ.ಗೆ ಬಿಕರಿಯಾದರು. ನಿರೀಕ್ಷೆಯಂತೆ ಬೆನ್ ಸ್ಟೋಕ್ಸ್ 16.25 ಕೋಟಿ ಪಡೆದರೆ, ನಿಕೋಲಸ್ ಪೂರನ್ ಕೂಡ 16 ಕೋಟಿ ಪಡೆದಿದ್ದಾರೆ. ಆದರೆ ಕಳೆದ ಬಾರಿ ನಡೆದಿದ್ದ ಮೆಗಾ ಹರಾಜಿನಲ್ಲಿ ಕೋಟಿ ಕೋಟಿ ಪಡೆದು ತಮ್ಮ ಜೇಬು ಭರ್ತಿ ಮಾಡಿಕೊಂಡಿದ್ದ ಕೆಲವು ಆಟಗಾರರ ಬೆಲೆ ಈ ಬಾರಿ ಪಾತಳಕ್ಕೆ ಕುಸಿದಿದೆ. ಅಂತಹವರ ವಿವರ ಇಲ್ಲಿದೆ.

ವಿಲಿಯಮ್ಸನ್​ಗೆ 12 ಕೋಟಿ ನಷ್ಟ

ಕಳೆದ ಸೀಸನ್​ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದ ಕೇನ್ ವಿಲಿಯಮ್ಸನ್ ಈ ಭಾರಿ ಮಿನಿ ಹರಾಜಿನಲ್ಲಿ ಸಾಕಷ್ಟ ನಷ್ಟ ಅನುಭವಿಸಿದ್ದಾರೆ. ಮುಂದಿನ ಆವೃತ್ತಿಯಿಂದ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯಲ್ಲಿರುವ ವಿಲಿಯಮ್ಸನ್​ಗೆ ಕಳೆದ ಆವೃತ್ತಿಯವರೆಗೆ ಹೈದರಾಬಾದ್ ಫ್ರಾಂಚೈಸಿ ಬರೋಬ್ಬರಿ 14 ಕೋಟಿ ರೂ. ಸಂಭಾವನೆ ನೀಡಿತ್ತು. ಆದರೆ ಈ ಬಾರಿ ಅವರು ಕೇವಲ 2 ಕೋಟಿ ರೂ.ಗೆ ಗುಜರಾತ್​ ಪಾಲಾಗಿದ್ದಾರೆ. ಅಂದರೆ ವಿಲಿಯಮ್ಸನ್ 12 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.

IPL 2023 Mini Auction Live: ಇಂದು ಐಪಿಎಲ್ ಮಿನಿ ಹರಾಜು: ಎಷ್ಟು ಗಂಟೆಗೆ?, ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಜಾಮಿಸನ್​ ಜೇಬಿಗೂ ಕತ್ತರಿ

ನ್ಯೂಜಿಲೆಂಡ್ ಆಲ್‌ರೌಂಡರ್ ಕೈಲ್ ಜಾಮಿಸನ್ ಕಳೆದ ಐಪಿಎಲ್ ಸೀಸನ್‌ನಲ್ಲಿ ಆಡಲಿಲ್ಲ. ಆದರೆ ಅದಕ್ಕೂ ಮೊದಲು ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ರೂ 15 ಕೋಟಿಗೆ ಖರೀದಿಸಿತ್ತು. ಆದರೆ, ಈ ಬಾರಿ ಜಾಮಿಸನ್ ಅವರನ್ನು ಕೇವಲ ಒಂದು ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದೆ. ಅಂದರೆ ಜಾಮಿಸನ್ ಸಂಪೂರ್ಣ 14 ಕೋಟಿ ನಷ್ಟ ಅನುಭವಿಸಿದ್ದಾರೆ.

12.5 ಕೋಟಿ ಕಳೆದುಕೊಂಡ ರಿಚರ್ಡ್ಸನ್

ಐಪಿಎಲ್ 2021 ರಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಝೈ ರಿಚರ್ಡ್‌ಸನ್ 14 ಕೋಟಿಗೆ ಮಾರಾಟವಾಗಿದ್ದರು. ಆದರೆ ಗಾಯದ ಕಾರಣ ಅವರು ಐಪಿಎಲ್ ಆಡಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ಈ ಆಟಗಾರ ಕೇವಲ 1.5 ಕೋಟಿಗೆ ಮಾರಾಟವಾಗಿದ್ದಾರೆ. ಈ ಬಾರಿಯಿಂದ ಮುಂಬೈ ಪರ ಆಡಲಿರುವ ರಿಚರ್ಡ್ಸನ್ ಬರೋಬ್ಬರಿ 12.5 ಕೋಟಿ ರೂ ನಷ್ಟವನ್ನು ಅನುಭವಿಸಿದ್ದಾರೆ.

ರೊಮಾರಿಯೋ ಶೆಫರ್ಡ್‌ಗೆ 7 ಕೋಟಿ ನಷ್ಟ

ರೊಮಾರಿಯೊ ಶೆಫರ್ಡ್ ಕಳೆದ ಐಪಿಎಲ್ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಭಾಗವಾಗಿದ್ದರು. ಈ ಆಟಗಾರನನ್ನು ಹೈದರಾಬಾದ್ 7.5 ಕೋಟಿ ನೀಡಿ ಖರೀದಿಸಿತ್ತು. ಆದರೆ ಈ ಬಾರಿ ಈ ಆಟಗಾರನಿಗೆ ಲಕ್ನೋ ಸೂಪರ್‌ಜೈಂಟ್ಸ್‌ ಕೇವಲ 50 ಲಕ್ಷ ನೀಡಿ ಖರೀದಿಸಿದೆ. ಅಂದರೆ ಇವರ ಜೇಬಿಗೂ 7 ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆ.

ಮಯಾಂಕ್ ಅಗರ್ವಾಲ್‌ಗೆ 5.75 ಕೋಟಿ ನಷ್ಟ

ಕಳೆದ ಬಾರಿ ಪಂಜಾಬ್ ತಂಡದ ನಾಯಕನಾಗಿದ್ದ ಮಯಾಂಕ್ ಅಗರ್ವಾಲ್ ಈ ಬಾರಿ ಸನ್‌ರೈಸರ್ಸ್ ಹೈದರಾಬಾದ್‌ಗೆ ಸೇರ್ಪಡೆಗೊಂಡಿದ್ದಾರೆ. ಅವರನ್ನು 8.25 ಕೋಟಿಗಳಷ್ಟು ದೊಡ್ಡ ಮೊತ್ತವನ್ನು ನೀಡಿ ಖರೀದಿಸಲಾಗಿದೆ. ಆದರೆ ಇದರ ಹೊರತಾಗಿಯೂ, ಮಯಾಂಕ್ 5.75 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದ್ದಾರೆ. ಕಳೆದ ವರ್ಷದವರೆಗೆ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ಅಗರ್ವಾಲ್ ಅವರ ಸಂಭಾವನೆ 14 ಕೋಟಿ ರೂ. ಆಗಿತ್ತು

ಓಡಿಯನ್ ಸ್ಮಿತ್‌ನ 5.50 ಕೋಟಿ ನಷ್ಟ

ವೆಸ್ಟ್ ಇಂಡೀಸ್ ಆಲ್ ರೌಂಡರ್ ಓಡಿಯನ್ ಸ್ಮಿತ್ ಕೂಡ ಮಿನಿ ಹರಾಜಿನಲ್ಲಿ 5.50 ಕೋಟಿ ನಷ್ಟ ಅನುಭವಿಸಿದ್ದಾರೆ. ಸ್ಮಿತ್ ಕಳೆದ ಬಾರಿ 6 ಕೋಟಿಗೆ ಪಂಜಾಬ್ ತಂಡವನ್ನು ಸೇರಿಕೊಂಡಿದ್ದರು ಆದರೆ ಈ ಬಾರಿ ಓಡಿನ್ ಕೇವಲ 50 ಲಕ್ಷಕ್ಕೆ ಗುಜರಾತ್ ಟೈಟಾನ್ಸ್‌ ಪಾಲಾಗಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:13 am, Sat, 24 December 22

ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ