IPL 2023 Mini Auction Live: ಇಂದು ಐಪಿಎಲ್ ಮಿನಿ ಹರಾಜು: ಎಷ್ಟು ಗಂಟೆಗೆ?, ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

IPL Auction 2023 Live Updates: ಮಧ್ಯಾಹ್ನ 02:30 ಕ್ಕೆ ಮಿನಿ ಹರಾಜು ಪ್ರಾರಂಭವಾಗುತ್ತದೆ. ಐಪಿಎಲ್ ಮಿನಿ ಹರಾಜಿನ ಲೈವ್ ಸ್ಟ್ರೀಮಿಂಗ್ Viacom 18 ನ ಅಪ್ಲಿಕೇಶನ್ Voot ಹಾಗೂ ಜಿಯೋ ಸಿನಿಮಾದಲ್ಲಿ ಇರುತ್ತದೆ.

IPL 2023 Mini Auction Live: ಇಂದು ಐಪಿಎಲ್ ಮಿನಿ ಹರಾಜು: ಎಷ್ಟು ಗಂಟೆಗೆ?, ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?
ಐಪಿಎಲ್ 2023ರ ಮಿನಿ ಹರಾಜಿನ ಕ್ಷಣಗಣನೆ ಆರಂಭವಾಗಿದೆ. ಇದಕ್ಕಾಗಿ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ 10 ಐಪಿಎಲ್ ತಂಡಗಳ ನಡುವೆ ಫೈಪೋಟಿ ನಡೆಯಲಿದ್ದು, 405 ಆಟಗಾರರು ಹರಾಜಿಗೆ ಪ್ರವೇಶಿಸಲಿದ್ದಾರೆ. ಇದರ ಜೊತೆಗೆ ಎಲ್ಲಾ ಫ್ರಾಂಚೈಸಿಗಳು ಈ ಮಿನಿ ಹರಾಜಿನಲ್ಲಿ ಐಪಿಎಲ್ ಮಂಡಳಿ ವಿಧಿಸಿರುವ ಈ 6 ನಿಯಮಗಳನ್ನು ಪಾಲಿಸಲೇಬೇಕಿದೆ.
Follow us
TV9 Web
| Updated By: Vinay Bhat

Updated on:Dec 23, 2022 | 10:41 AM

2023ರ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜು (IPL Auction 2023) ಇಂದು ಕೊಚ್ಚಿಯಲ್ಲಿ ಮಧ್ಯಾಹ್ನ 2.30ರಿಂದ ಆರಂಭವಾಗಲಿದೆ. ಕಳೆದ ವರ್ಷ ಮೆಗಾ ಹರಾಜು (Mega Auction) ನಡೆದಿದ್ದರಿಂದ ಈ ಬಾರಿ ಮಿನಿ ಹರಾಜು ನಡೆಸಲಾಗುತ್ತಿದೆ. ಹೀಗಾಗಿ ಈ ಹರಾಜಿನಲ್ಲಿ 900 ಕ್ಕೂ ಹೆಚ್ಚು ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದರೆ ಅಂತಿಮವಾಗಿ 405 ಹೆಸರುಗಳು ಮಾತ್ರ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈಗ 10 ತಂಡಗಳು ಈ ಆಟಗಾರರ ಭವಿಷ್ಯವನ್ನು ನಿರ್ಧರಿಸಲಿವೆ. ಈ ಬಾರಿಯ ಐಪಿಎಲ್ (IPL) ಹರಾಜು ಒಂದು ದಿನ ಮಾತ್ರ ನಡೆಯಲಿದ್ದು, ಯಾವ ತಂಡಕ್ಕೆ ಯಾವ ಆಟಗಾರ ಸೇರಲಿದ್ದಾನೆ ಎಂಬುದು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.

ಈ ಬಾರಿ ಐಪಿಎಲ್ ಮಿನಿ ಹರಾಜು ಪೂಲ್‌ನಲ್ಲಿ 405 ಆಟಗಾರರಿದ್ದಾರೆ. ಈ 405 ಆಟಗಾರರಲ್ಲಿ 273 ಭಾರತೀಯರು ಮತ್ತು 132 ವಿದೇಶಿ ಆಟಗಾರರು ಸೇರಿದ್ದಾರೆ. ಟೆಸ್ಟ್ ಆಡುವ ದೇಶಗಳ ಹೊರತಾಗಿ, ನಾಲ್ಕು ಸಹವರ್ತಿ ರಾಷ್ಟ್ರಗಳ ಆಟಗಾರರ ಹೆಸರನ್ನು ಸಹ ಸೇರಿಸಲಾಗಿದೆ. ಇದರಲ್ಲಿ 119 ಕ್ಯಾಪ್ಡ್ ಆಟಗಾರರು, 282 ಅನ್‌ಕ್ಯಾಪ್ಡ್ ಆಟಗಾರರು ಮತ್ತು 4 ಅಸೋಸಿಯೇಟ್ ದೇಶಗಳ ಆಟಗಾರರಿದ್ದಾರೆ. ಹರಾಜಿನಲ್ಲಿ ಒಟ್ಟು 87 ಸ್ಥಾನಗಳಿಗೆ ಬಿಡ್ಡಿಂಗ್ ನಡೆಯಲಿದ್ದು, ಈ ಪೈಕಿ 30 ಸ್ಥಾನಗಳು ವಿದೇಶಿ ಆಟಗಾರರಿಗೆ ಮೀಸಲಾಗಿವೆ.

ಯಾವ ತಂಡದಲ್ಲಿ ಎಷ್ಟು ಹಣವಿದೆ?

ಎಲ್ಲಾ ತಂಡಗಳು ಈಗಾಗಲೇ ತಮ್ಮಲ್ಲಿ ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಹಿಂದಿನ ಮೆಗಾ ಹರಾಜಿನಲ್ಲಿ ಎಲ್ಲಾ ತಂಡಗಳು ಒಂದೇ ಪರ್ಸ್‌ನೊಂದಿಗೆ ಹರಾಜಿಗೆ ಎಂಟ್ರಿಕೊಟ್ಟಿದ್ದವು. ಆದರೆ ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ. ಸನ್ ರೈಸರ್ಸ್ ಹೈದರಾಬಾದ್ ಬಳಿ ಅತ್ಯಧಿಕ 42.25 ಕೋಟಿ ರೂ. ಇದ್ದರೆ, 32.2 ಕೋಟಿ ರೂಗಳೊಂದಿಗೆ ಪಂಜಾಬ್ ಕಿಂಗ್ಸ್ ಎರಡನೇ ಸ್ಥಾನದಲ್ಲಿದೆ. ಹಾಗೆಯೇ ಲಕ್ನೋ ಸೂಪರ್‌ಜೈಂಟ್ಸ್ ಬಳಿ 23.35 ಕೋಟಿ ರೂ., ಕೆಕೆಆರ್ ಬಳಿ ರೂ. 7.05 ಕೋಟಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಿ ರೂ. 8.75 ಕೋಟಿ ಹಣ ಮಿಕ್ಕಿದೆ. ಹೀಗಾಘಿ ಇರುವ ಹಣದಲ್ಲೇ ಎಲ್ಲಾ 10 ತಂಡಗಳು ತಮ್ಮಲ್ಲಿ ಖಾಲಿ ಇರುವ ಜಾಗಗಳನ್ನು ಭರ್ತಿ ಮಾಡಿಕೊಳ್ಳಬೇಕಿದೆ.

ಇದನ್ನೂ ಓದಿ
Image
IPL 2023 Auction: ಆರ್​ಸಿಬಿ ಬಳಿ ಎಷ್ಟು ಹಣವಿದೆ?, ಎಷ್ಟು ಆಟಗಾರರನ್ನು ಖರೀದಿಸಬಹುದು?: ಇಲ್ಲಿದೆ ಮಾಹಿತಿ
Image
IPL Auction 2023: ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ
Image
IPL 2023 Auction: 5 ಸುತ್ತಿನ ಹರಾಜಿನಲ್ಲಿರುವ 31 ಆಟಗಾರರು ಇವರೇ..!
Image
IPL 2023 Auction: ಮೊದಲ ಸುತ್ತಿನಲ್ಲಿ ಹರಾಜಾಗಲಿರುವ ಆಟಗಾರರು ಯಾರೆಲ್ಲಾ ಗೊತ್ತಾ?

IPL 2023 Mini Auction: ಮಿನಿ ಹರಾಜಿನಲ್ಲಿ 10 ಕೋಟಿಗೂ ಅಧಿಕ ಬೆಲೆ ಪಡೆಯುವ 10 ಆಟಗಾರರಿವರು..!

2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರರಿವರು

ಕೇನ್ ವಿಲಿಯಮ್ಸನ್, ರೈಲೀ ರುಸ್ಸೋ, ಜೇಸನ್ ಹೋಲ್ಡರ್, ಸ್ಯಾಮ್ ಕರನ್, ಕ್ಯಾಮೆರಾನ್ ಗ್ರೀನ್, ಟಾಮ್ ಬ್ಯಾಂಟನ್, ನಿಕೋಲಸ್ ಪೂರನ್, ಫಿಲ್ ಸಾಲ್ಟ್, ಕ್ರಿಸ್ ಜೋರ್ಡಾನ್, ಆಡಮ್ ಮಿಲ್ನೆ, ಆದಿಲ್ ರಶೀದ್, ಕ್ರಿಸ್ ಜೋರ್ಡಾನ್, ಟ್ರಾವಿಸ್ ಹೆಡ್, ಜಿಮ್ಮಿ ನೀಶಮ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಕ್ರಿಸ್ಸೆನ್, ಜೇಮಿ ಓವರ್ಟನ್, ಕ್ರೇಗ್ ಓವರ್ಟನ್, ಟೈಮಲ್ ಮಿಲ್ಸ್ ಅವರಂತಹ ಆಟಗಾರರ ಹೆಸರುಗಳು ಎರಡು ಕೋಟಿ ಮೂಲ ಬೆಲೆಯಲ್ಲಿ ಹರಾಜಿಗೆ ಎಂಟ್ರಿಕೊಡಲಿವೆ.

ಮಿನಿ ಹರಾಜಿನ ಬಗ್ಗೆ ಪೂರ್ಣ ವಿವರ ಇಲ್ಲಿದೆ.

ಐಪಿಎಲ್ ಮಿನಿ ಹರಾಜು ಯಾವಾಗ ನಡೆಯುತ್ತದೆ?

ಐಪಿಎಲ್ 2023ರ ಮಿನಿ ಹರಾಜು 23 ಡಿಸೆಂಬರ್ 2022 ರಂದು ಶುಕ್ರವಾರ ನಡೆಯಲಿದೆ.

ಮಿನಿ ಹರಾಜು ಎಲ್ಲಿ ನಡೆಯಲಿದೆ?

ಈ ಮಿನಿ ಹರಾಜು ಕೊಚ್ಚಿಯಲ್ಲಿ ನಡೆಯಲಿದೆ.

ಯಾವಾಗ ಪ್ರಾರಂಭವಾಗುತ್ತದೆ?

ಮಧ್ಯಾಹ್ನ 02:30 ಕ್ಕೆ ಮಿನಿ ಹರಾಜು ಪ್ರಾರಂಭವಾಗುತ್ತದೆ.

ಮಿನಿ ಹರಾಜಿನ ನೇರ ಪ್ರಸಾರವನ್ನು ಯಾವ ಚಾನಲ್​ನಲ್ಲಿ ವೀಕ್ಷಿಸಬಹುದು?

ಮಿನಿ ಹರಾಜಿನ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನಲ್‌ನಲ್ಲಿ ಇರಲಿದೆ.

ಮಿನಿ ಹರಾಜಿನ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬಹುದು?

ಐಪಿಎಲ್ ಮಿನಿ ಹರಾಜಿನ ಲೈವ್ ಸ್ಟ್ರೀಮಿಂಗ್ Viacom 18 ನ ಅಪ್ಲಿಕೇಶನ್ Voot ಹಾಗೂ ಜಿಯೋ ಸಿನಿಮಾದಲ್ಲಿ ಇರುತ್ತದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:40 am, Fri, 23 December 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ