Amit Mishra: ವಯಸ್ಸು 40: ಲಕ್ನೋ ಸೂಪರ್ ಜೇಂಟ್ಸ್ ಖರೀದಿಸಿದ ತಕ್ಷಣ ಭಾವುಕಾರಾಗಿ ಟ್ವೀಟ್ ಮಾಡಿದ ಅಮಿತ್ ಮಿಶ್ರಾ
IPL Auction 2023: 40 ವರ್ಷ ವಯಸ್ಸಿನ ಅಮಿತ್ ಮಿಶ್ರಾ (Amit Mishra) ಅವರು ಲಕ್ನೋ ಸೂಪರ್ ಜೇಂಟ್ಸ್ ತಂಡದ ಪಾಲಾದರು. ಲಕ್ನೋ ತಂಡ ಹರಾಜಿನಲ್ಲಿ ಖರೀದಿ ಮಾಡಿದ ಬೆನ್ನಲ್ಲೇ ಮಿಶ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ನಡೆದ ಹರಾಜು ಪ್ರಕ್ರಿಯೆಲ್ಲಿ 40 ವರ್ಷ ವಯಸ್ಸಿನ ಅಮಿತ್ ಮಿಶ್ರಾ (Amit Mishra) ಅವರು ಲಕ್ನೋ ಸೂಪರ್ ಜೇಂಟ್ಸ್ ತಂಡದ ಪಾಲಾದರು. ಐಪಿಎಲ್ (IPL) ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಆಟಗಾರ ಎಂಬ ದಾಖಲೆ ಹೊಂದಿರುವ ಮಿಶ್ರಾ ಅವರನ್ನು ಮೂಲಬೆಲೆ 50 ಲಕ್ಷ ರೂ. ಗೆ ಎಲ್ಎಸ್ಜಿ (LSG) ಫ್ರಾಂಚೈಸಿ ಖರೀದಿ ಮಾಡಿತು. ಈವರೆಗೆ ಡೆಕ್ಕನ್ ಚಾರ್ಜಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಪರ ಕಣಕ್ಕಿಳಿದಿರುವ ಇವರು 154 ಪಂದ್ಯಗಳಲ್ಲಿ 166 ವಿಕೆಟ್ ಕಬಳಿಸಿದ್ದಾರೆ. ಲಕ್ನೋ ತಂಡ ಹರಾಜಿನಲ್ಲಿ ಖರೀದಿ ಮಾಡಿದ ಬೆನ್ನಲ್ಲೇ ಅಮಿತ್ ಮಿಶ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.
”ನನಗೆ ಐಪಿಎಲ್ನಲ್ಲಿ ಆಡಲು ಅವಕಾಶ ಕೊಟ್ಟಿರುವಂತಹ ಲಕ್ನೋ ಸೂಪರ್ ಜೇಂಟ್ಸ್ಗೆ ಧನ್ಯವಾದ. ಐಪಿಎಲ್ ಟೂರ್ನಿಯನ್ನು ಎದುರು ನೋಡುತ್ತಿದ್ದೇನೆ. ನನಗೆ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಅತ್ಯುತ್ತಮ ಪ್ರದರ್ಶನ ತೋರುತ್ತೇನೆ. ದಯವಿಟ್ಟು ನನಗೆ ಬೆಂಬಲ ನೀಡುತ್ತಿರುವುದನ್ನು ಮುಂದುವರೆಸಿ,” ಎಂದು ಅಮಿತ್ ಮಿಶ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Manish Pandey: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಮನೀಶ್ ಪಾಂಡೆ: ಆಸಕ್ತಿ ತೋರದ ಆರ್ಸಿಬಿ
Thank you @LucknowIPL for the opportunity. Looking forward to the tournament. I will do my best as always. Please continue to support me. #ipl2023 #ipl #lucknowsupergiants
— Amit Mishra (@MishiAmit) December 23, 2022
ಇತ್ತೀಚೆಗಷ್ಟೆ ಮಿಶ್ರಾ ಅವರು ಸಂದರ್ಶನವೊಂದರಲ್ಲಿ ಐಪಿಎಲ್ ಆಡುವ ಭಯಕೆ ವ್ಯಕ್ತಪಡಿಸಿದ್ದರು. “ನನ್ನಲ್ಲಿ ಇನ್ನು 2-3 ವರ್ಷಗಳ ಕ್ರಿಕೆಟ್ ಬಾಕಿಯಿದೆ. ಈ ಸಲುವಾಗಿ ನನ್ನ ಫಿಟ್ನೆಸ್ ಕಾಯ್ದುಕೊಂಡಿದ್ದೇನೆ. ಜೊತೆಗೆ ದೇಶಿ ಟೂರ್ನಿಗಳಲ್ಲಿ ಆಡಿ ನನ್ನ ಶ್ರೇಷ್ಠ ಲಯ ಕೂಡ ಕಾಯ್ದುಕೊಂಡಿದ್ದೇನೆ. ದೇಶಿ ಕ್ರಿಕೆಟ್‌ನಲ್ಲಿ ನನ್ನ ಇತ್ತೀಚಿನ ಪ್ರದರ್ಶನ ಕೂಡ ಉತ್ತಮವಾಗಿದೆ. ಹೀಗಾಗಿ ಮುಂಬರುವ ಹರಾಜಿನಲ್ಲಿ ಯಾವುದಾದರು ಫ್ರಾಂಚೈಸಿ ನನ್ನನ್ನು ಖರೀದಿಸುತ್ತದೆ ಎಂಬ ಆಶಯವಿದೆ,” ಎಂದಿದ್ದರು. ಅದರಂತೆ ಮಿಶ್ರಾ ಇದೀಗ ಎಲ್ಎಸ್ಜಿ ತಂಡ ಸೇರಿಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಚೊಚ್ಚಲ ಆವೃತ್ತಿಯಲ್ಲೇ ಪ್ಲೇಆಫ್ ಪ್ರವೇಶಿಸಿದ ಸಾಧನೆ ಮಾಡಿದ್ದ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಐಪಿಎಲ್ 2023 ಮಿನಿ ಹರಾಜಿನಲ್ಲಿ 10 ಹೊಸ ಆಟಗಾರರನ್ನು ಖರೀದಿಸಿದೆ. ವೆಸ್ಟ್ ಇಂಡೀಸ್ ಕೀಪರ್-ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಅವರನ್ನು ದೊಡ್ಡ ಮೊತ್ತ ನೀಡಿ ಪಡೆದುಕೊಂಡಿದೆ. ಬರೋಬ್ಬರಿ 16 ಕೋಟಿ ರೂಪಾಯಿಗೆ ಪೂರನ್ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಇವರ ಜೊತೆಗೆ ಜಯದೇವ್ ಉನಾದ್ಕಟ್, ಯಶ್ ಠಾಕೂರ್. ರೊಮಾರಿಯೊ ಶೆಫರ್ಡ್, ಡೇನಿಯಲ್ ಸ್ಯಾಮ್ಸ್, ಅಮಿತ್ ಮಿಶ್ರಾ, ನವೀನ್-ಉಲ್-ಹಕ್ ಅವರನ್ನು ಖರೀದಿ ಮಾಡಿದೆ.
ಎಲ್ಎಸ್ಜಿ ತಂಡ: ಕೆಎಲ್ ರಾಹುಲ್ (ನಾಯಕ), ಆಯುಷ್ ಬದೋನಿ, ಕರಣ್ ಶರ್ಮಾ, ಮನನ್ ವೋಹ್ರಾ, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯಿನಿಸ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್ ವುಡ್, ಮಯಾಂಕ್ ಯಾದವ್, ರವಿ ಬಿಷ್ಣೋಯ್, ನಿಕೋಲಸ್ ಪೂರನ್, ಜಯದೇವ್ ಉನಾದ್ಕತ್, ನವೀನ್-ಉಲ್-ಹಕ್, ಯುದ್ವೀರ್ ಸಿಂಗ್ ಚರಕ್, ಯಶ್ ಠಾಕೂರ್, ರೊಮಾರಿಯೋ ಶೆಫರ್ಡ್, ಡೇನಿಯಲ್ ಸಾಮ್ಸ್, ಅಮಿತ್ ಮಿಶ್ರಾ, ಪ್ರೇರಕ್ ಮಂಕಡ್, ಸ್ವಪ್ನಿಲ್ ಸಿಂಗ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ